Subscribe to Gizbot

ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಖಂಡಿತ ಇದು ನಿಮಗೆ ಗೊತ್ತಿಲ್ಲಾ!!

Written By:

ನಮಗೆ ಮೊಬೈಲ್ ಬ್ಯಾಟರಿ ಬಗ್ಗೆ ಇರುವಷ್ಟು ಗೊಂದಲ ಇನ್ನಾವುದರ ಮೆಲೂ ಇಲ್ಲ ಎನ್ನಬಹುದು. ಸಾವಿರಾರು ರೂಪಾಯಿ ಹಣತೆತ್ತು ಖರೀದಿಸಿದ ಸ್ಮಾರ್ಟ್‌ಫೋನ್ ಬ್ಯಾಟರಿ ಬಹುತೇಕ ನಮ್ಮ ತಪ್ಪಿನಿಂದಲೇ ಹಾಳಾಗುತ್ತದೆ.! ಇನ್ನು ಬ್ಯಾಟರಿ ಹಾಳಾದರೆ ಸ್ಮಾರ್ಟ್‌ಫೋನ್‌ ಬಳಕೆಯ ಕಷ್ಟ ಎಲ್ಲರಿಗೂ ಗೊತ್ತಿದೆ.!!

ಹಾಗಾಗಿ, ಬ್ಯಾಟರಿ ಸುರಕ್ಷತೆಯ ಬಗ್ಗೆ ನಾವು ಎಷ್ಟೆ ಜಾಗರೂಕರಾಗಿದ್ದರೂ ಸಹ ಅದು ಕಮ್ಮಿಯೇ.! ಎಷ್ಟೇ ಜಾಗೃತವಾಗಿದ್ದರೂ ನನ್ನ ಸ್ಮಾರ್ಟ್‌ಪೊನ್ ಬ್ಯಾಟರಿ ಹಾಳಾಗುತ್ತದೆ ಎಂಬುದು ಬಹುತೇಕರ ಸಮಸ್ಯೆಯಾಗಿಹೋಗಿದೆ. ಎಲ್ಲರಲ್ಲಿಯೂ ಮೊಬೈಲ್ ಬ್ಯಾಟರಿಯನ್ನು ಸುರಕ್ಷಿತವಾಗಿಡುವುದು ಹೇಗೆ? ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುತ್ತಿವೆ. !!

ನಿಮ್ಮಲ್ಲಿ ಇಂತಹ ಪ್ರಶ್ನೆಗಳು ಮೂಡುತ್ತಿದ್ದರೆ ಅದಕ್ಕೆಲ್ಲಾ ಉತ್ತರ ಇಲ್ಲಿದೆ.!! ಹೌದು, ಮೊಬೈಲ್ ಬ್ಯಾಟರಿ ಸುರಕ್ಷತೆಗೆ ನಾವು ವಹಿಸಬೇಕಾದ ಮುನ್ನಚ್ಚೆರಿಕೆ ಕ್ರಮಗಳು ಯಾವುವು? ಮೊಬೈಲ್ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡಬೇಕು?ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇವೆ. ಕೆಳಗಿನ ಸ್ಲೈಡರ್‌ಗಲಲ್ಲಿ ಸ್ಮಾರ್ಟ್‌ಫೊನ್ ಬ್ಯಾಟರಿ ಸುರಕ್ಷಿತವಾಗಿಡುವುದು ಹೇಗೆ ಎಂದು ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಮಾರ್ಟ್‌ಫೋನ್ ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!!

ಸ್ಮಾರ್ಟ್‌ಫೋನ್ ಹೆಚ್ಚು ಬಳಸಿ ಕೂಡಲೇ ಚಾರ್ಜ್‌ಗೆ ಹಾಕಬೇಡಿ!!

ಈ ಮಾತನ್ನು ನಾವು ಹೇಳುತ್ತಿಲ್ಲ. ಬದಲಾಗಿ ಗೂಗಲ್ ಹೆಳುತ್ತಿದೆ. ಹೌದು, ಎಲ್ಲರೂ ಹೆಚ್ಚು ಸ್ಮಾರ್ಟ್‌ಫೊನ್ ಬಳಕೆ ಮಾಡಿ ಸ್ಮಾರ್ಟ್‌ಫೊನ್ ಬಿಸಿಯಾಗಿದ್ದಾಗ ಚಾರ್ಜ್‌ಗೆ ಹಾಕುತ್ತಾರೆ. ಇದರಿಂದ ಬ್ಯಾರಿ ಸೆಲ್ಸ್‌ಗಳು ಹಾಳಾಗಿ ಸ್ಮಾರ್ಟ್‌ಫೊನ್ ಬ್ಯಾಟರಿ ಹಾಳಾಗುತ್ತದೆ. ನೆನಪಿರಲಿ ಇದು ಸ್ಪೋಟಕ್ಕೂ ಕಾರಣ!!!

ಅತ್ಯುತ್ತಮ ಚಾರ್ಜರ್!!

ಅತ್ಯುತ್ತಮ ಚಾರ್ಜರ್!!

ಯಾವುದೇ ಕಾರಣಕ್ಕೂ ಗುಣಮಟ್ಟವಲ್ಲದ ಚಾರ್ಜರ್ ಬಳಕೆ ಮಾಡಬೇಡಿ. ಇಂತಹ ಚಾರ್ಜರ್‌ಗಳೆ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಳಾಗಲೂ ಮೊದಲ ಕಾರಣ!! ಹಾಗಾಗಿ, ಸಾಧ್ಯವಾದಷ್ಟು ನಿಮ್ಮ ಸ್ಮಾರ್ಟ್‌ಫೋನ್‌ಗೆ ನೀಡಿರುವ ಚಾರ್ಜರ್ ಬಳಸಿ. ಏಕೆಂದರೆ ಬೇರೆ ಮೊಬೈಲ್‌ನ ಅತ್ಯುತ್ತಮ ಚಾರ್ಜರ್ ಸಹ ಅಪಾಯಕಾರಿ ಎಂಬುದನ್ನು ಮರೆಯದಿರಿ.

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ.!!

ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರಲಿ.!!

ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತೆನೆ ಎಂದು ಬ್ಯಾಟರಿ ಚಾರ್ಜ್ ಮೂಣ್ ಖಾಲಿಯಾಗುವವರೆಗೂ ಬಳಕೆ ಬೇಡ.!! ಹೌದು, ಸ್ಮಾರ್ಟ್‌ಫೊನ್ ಎಷ್ಟೇ ಬಳಸಿದರೂ ಕಡಿಮೆ ಎಂದರೂ ಬ್ಯಾಟರಿಯಲ್ಲಿ 20 ಪರ್ಸೆಂಟ್ ಚಾರ್ಜ್ ಇರುವ ಹಾಗೆ ನೋಡಿಕೊಳ್ಳಿ.!! ಏಕೆಂದರೆ ಖಾಲಿಯಾದ ಬ್ಯಾಟರಿಯನ್ನು ಸೆಲ್ಸ್‌ಗಳನ್ನು ತಳಮಟ್ಟದಿಂದ ಚಾರ್ಜ್ ಮಾಡಿದರೆ ಅವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತವೆ.!!

ಹಾಗಂತ 100%ಚಾರ್ಜ್ ಮಾಡಿದರೆ?

ಹಾಗಂತ 100%ಚಾರ್ಜ್ ಮಾಡಿದರೆ?

ವೈದ್ಯರು ಹೇಳುವಂತೆ ಅತಿಯಾಗಿ ಆಹಾರ ಸೇವನೆ ದೇಹಕ್ಕೆ ಹಾನಿಕರವಾಗಿರುವಂತೆಯೇ ನಿಮ್ಮ ಬ್ಯಾಟರಿಯನ್ನೂ ಅತಿಯಾಗಿ ಚಾರ್ಜ್ ಮಾಡಬೇಡಿ. ಸಂಪೂರ್ಣವಾಗಿ ನೀವು ಫೋನ್ ಚಾರ್ಜ್ ಮಾಡುತ್ತೀರಿ ಎಂದಾದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಡ್ರೈನ್ ಆಗುತ್ತದೆ. ಮೇಲಿನ ಸಲಹೆಗೆ ಇದು ತದ್ವಿರುದ್ದ.!!

ಯುಎಸ್‌ಬಿ 3.0 ಯಲ್ಲಿ ಚಾರ್ಜ್ ಮಾಡಿರಿ.!!

ಯುಎಸ್‌ಬಿ 3.0 ಯಲ್ಲಿ ಚಾರ್ಜ್ ಮಾಡಿರಿ.!!

ಹಲವುಸಾರಿ ನಾವು ಲ್ಯಾಪ್‌ಟಾಪ್‌ನಲ್ಲಿಯೇ ಸ್ಮಾರ್ಟ್‌ಫೊನ್ ಚಾರ್ಜ್‌ಗೆ ಹಾಕುತ್ತೇವೆ. ಇಂತಹ ಸಮಯದಲ್ಲಿ ಯುಎಸ್‌ಬಿ 3.0 ಕೇಬಲ್ ಮೂಲಕ ಚಾರ್ಜ್ ಮಾಡಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ವೇಗವಾಗಿ ಚಾರ್ಜ್ ಆಗುವುದಲ್ಲದೇ. ಸುರಕ್ಷಿತವಾಗಿಯೂ ಇರುತ್ತದೆ.!!

ಸ್ಮಾರ್ಟ್‌ಫೊನ್ ಸ್ವಿಚ್ ಆಫ್ ಮಾಡಿ ಚಾರ್ಜ್‌ಗೆ ಹಾಕಿ.!!

ಸ್ಮಾರ್ಟ್‌ಫೊನ್ ಸ್ವಿಚ್ ಆಫ್ ಮಾಡಿ ಚಾರ್ಜ್‌ಗೆ ಹಾಕಿ.!!

ಕೆಲವೊಮ್ಮೆ ಅನವಶ್ಯಕ ಕಾರ್ಯಗಳು ಉಪಯೋಗಕ್ಕೆ ಬರುತ್ತವೆ.!! ಸ್ಮಾರ್ಟ್‌ಫೊನ್ ಆನ್‌ಮಾಡಿ ಚಾರ್ಜ್ಗೆ ಹಾಕುವುದರಿಂದ ಆಗುವ ತೊಂದರೆ ಅಂತಹದೇನಲ್ಲ. ಆದರೆ, ವೈಬ್ರೇಟ್ ಮೂಡ್‌ನಲ್ಲಿ ಇಟ್ಟು ಚಾರ್ಜ್‌ಗೆ ಹಾಕುವುದರಿಂದ ಸ್ಮಾರ್ಟ್‌ಫೋನ್ ಬ್ಯಾಟರಿ ಸೆಲ್ಸ್‌ಗಳು ಸಂಕುಚಿತಗೊಳ್ಳುತ್ತವೆ.!!

ಚಾರ್ಜರ್ ಬಳಕೆ ಬಗ್ಗೆ ಜಾಗೃತ!!

ಚಾರ್ಜರ್ ಬಳಕೆ ಬಗ್ಗೆ ಜಾಗೃತ!!

ನಿಜವಾಗಿಯೋ ಬಹುತೇಕರ ಸಮಸ್ಯೆ ಇದೇ. ಆದರೆ, ಇದು ಬ್ಯಾಟರಿ ಸಮಸ್ಯೆಯಲ್ಲ. ಚಾರ್ಜರ್ ಪಿನ್‌ ಸಮಸ್ಯೆ.!! ಸೂಕ್ಮವಾಗಿರುವ ವಸ್ತುಗಳ ಮೇಲೆ ಹೆಚ್ಚು ಬಲಪ್ರಯೂಗ ಮಾಡಿದಂತೆ. ಯಾವಾಗಲೂ ಚಾರ್ಜ್ರ್ ತೆಗೆದು ಹಾಕಿ ಮಾಡುವುದರಿಂದ ಸ್ಮಾರ್ಟ್‌ಫೊನ್ ಚಾರ್ಜರ್ ಪಿನ್ ಹಾಳಾಗುತ್ತದೆ.! ಹಾಗಾಗಿ, ಚಾರ್ಜ್‌ರ್ ಪಿನ್ ಬಗ್ಗೆ ಜಾಗರೂಕವಾಗಿರಿ.! ಉಪಯೋಗವಾಗುವ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಮಾಹಿತಿಯುಕ್ತ ಲೇಖನಗಳಿಗಾಗಿ ನಮ್ಮ ಫೆಸ್‌ಬುಕ್ ಪೇಜ್ ಲೈಕ್‌ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We know so much about smartphones. But yet there is one component inside it that remains somewhat mysterious. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot