Home
ಟೆಕ್ ನೌಕರಿ

ಆನ್‌ಲೈನ್‌ನಲ್ಲಿ ಮಲ್ಟಿಪ್ಲೇಯರ್ ಗೇಮಿಂಗ್‌ ಅನುಭವ ಹೆಚ್ಚಿಸಿ..! ಹೇಗೆ ಗೊತ್ತಾ..?

ಆನ್ ಲೈನ್ ಗೇಮ್ ಗಳು ಯಾವಾಗಲೂ ಸರಳವಾಗಿರುವುದಿಲ್ಲ ಆದರೆ ಇದು ಯಾವಾಗಲೂ ಉತ್ತಮ ಅಂತರ್ಜಾಲ ಸಂಪರ್ಕವನ್ನು ಬೇಡುತ್ತದೆ. ವೇಗವಾಗಿರುವ ಇಂಟರ್ನೆಟ್ ಕನೆಕ್ಷನ್ ಜೊತೆಗೆ ಇತರೆ ಹಲವು ವಿಚಾರಗಳು ಗೇಮ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಕಾರಣವಾಗಿರುತ್ತದೆ.

ಆನ್‌ಲೈನ್‌ನಲ್ಲಿ  ಮಲ್ಟಿಪ್ಲೇಯರ್ ಗೇಮಿಂಗ್‌ ಅನುಭವ ಹೆಚ್ಚಿಸಿ..! ಹೇಗೆ ಗೊತ್ತಾ..?

ನಿಮ್ಮ ಶತ್ರು ಅಟ್ಯಾಕ್ ಮಾಡುತ್ತಿರುವ ಸಂದರ್ಬದಲ್ಲಿ ನೀವೆಷ್ಟು ವೇಗವಾಗಿರುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಆದರೆ ಯಾವುದೇ ನಿಮ್ಮ ಅಂತರ್ಜಾಲದ ಅಥವಾ ಮೊಬೈಲ್, ಪಿಸಿಯ ಸಮಸ್ಯೆಯಿಂದಾಗಿ, ಹ್ಯಾಂಗ್ ಆಗುವಿಕೆಯಿಂದಾಗಿ ನೀವು ಆಟವನ್ನು ಸೋತುಬಿಡುತ್ತೀರಿ ಎಂದರೆ ಎಷ್ಟು ಬೇಸರವಾಗುತ್ತದೆ ಅಲ್ಲವೇ?

ಒಂದು ವೇಳೆ ನೀವು ಕೂಡ ಇಂತಹ ಕಿರಿಕಿರಿಯನ್ನು ಅನುಭವಿಸುತ್ತಾ ಇದ್ದಲ್ಲಿ ಈ ಸಮಸ್ಯೆನ್ನು ಪರಿಹಾರ ಮಾಡುವುದಕ್ಕೆ ಕೆಲವು ಸರಳ ಪರಿಹಾರಗಳಿವೆ. ಇವುಗಳಿಂದಾಗಿ ನೀವು ನಿಮ್ಮ ಗೇಮಿಂಗ್ ಪ್ರದರ್ಶನವನ್ನು ಹೆಚ್ಚಿಸಿಕೊಳ್ಳಬಹುದು.

ಟಿಪ್ 1:ಆಟ ಆರಂಭಿಸುವಾಗ ಸರಿಯಾದ ಇಂಟರ್ನೆಟ್ ಕನೆಕ್ಷನ್ ಇಟ್ಟುಕೊಳ್ಳಿ

ಟಿಪ್ 1:ಆಟ ಆರಂಭಿಸುವಾಗ ಸರಿಯಾದ ಇಂಟರ್ನೆಟ್ ಕನೆಕ್ಷನ್ ಇಟ್ಟುಕೊಳ್ಳಿ

ಆನ್ ಲೈನ್ ಮಲ್ಟಿಪ್ಲೇಯರ್ ಗೇಮ್ ನ್ನು ಆಡುವಾಗ ಹೆಚ್ಚಿನವರು ಲ್ಯಾಗ್ ಅಥವಾ ಸಮಸ್ಯೆಯನ್ನು ಎದುರಿಸುವುದಕ್ಕೆ ಪ್ರಮುಖ ಕಾರಣ ನಿಯಮಿತವಲ್ಲದ ಅಂತರ್ಜಾಲ ಸಂಪರ್ಕ. ಯಾವಾಗಲೂ ಬ್ರಾಡ್ ಬ್ಯಾಂಡ್ ಸೇವೆಯನ್ನು ಬಳಸಲು ಪ್ರಯತ್ನಿಸಿ. ಮೊಬೈಲ್ ಡಾಟಾ ಬಳಕೆಗಿಂತ ಬ್ರಾಡ್ ಬ್ಯಾಂಡ್ ನಲ್ಲಿ ಅಂತರ್ಜಾಲವು ಹೆಚ್ಚು ವೇಗವಾಗಿರುತ್ತದೆ. ವಯರ್ ಲೆಸ್ ಕನೆಕ್ಷನ್ ಗಿಂತ ವಯರ್ಡ್ ಕನೆಕ್ಷನ್ ನಲ್ಲಿ ಅಂತರ್ಜಾಲದ ವೇಗ ಅಧಿಕವಾಗಿರುತ್ತದೆ.

ಟಿಪ್ 2: ನಿಮ್ಮ ಇಂಟರ್ನೆಟ್ ಕನೆಕ್ಷನ್ ಬಳಸುವ ಆಪ್ ಮತ್ತು ಸೇವೆಗಳನ್ನು ಕ್ಲೋಸ್ ಮಾಡಿಕೊಂಡಿರಿ

ಟಿಪ್ 2: ನಿಮ್ಮ ಇಂಟರ್ನೆಟ್ ಕನೆಕ್ಷನ್ ಬಳಸುವ ಆಪ್ ಮತ್ತು ಸೇವೆಗಳನ್ನು ಕ್ಲೋಸ್ ಮಾಡಿಕೊಂಡಿರಿ

ಆಪ್ ಮತ್ತು ಸೇವೆಗಳು ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುತ್ತಿದ್ದರೆ ಹೆಚ್ಚು ಅಂತರ್ಜಾಲದ ಬ್ಯಾಂಡ್ ವಿಡ್ತ್ ನ್ನು ಬಳಸಿಕೊಳ್ಳುತ್ತಿರುತ್ತದೆ. ಅದ್ರಲ್ಲೂ ಪ್ರಮುಖವಾಗಿ ನಮ್ಮ ಸಾಮಾಜಿಕ ಜಾಲತಾಣದ ಆಪ್ ಗಳು ಈ ಸಮಸ್ಯೆಗೆ ಹೆಚ್ಚು ಕಾರಣವಾಗುತ್ತದೆ. ಬ್ಯಾಕ್ ಗ್ರೌಂಡ್ ನಲ್ಲಿ ರನ್ ಆಗುವ ಆಪ್ ಗಳನ್ನು ಕ್ಲೋಸ್ ಮಾಡಿಕೊಂಡು ಗೇಮ್ ಆರಂಭಿಸಿದರೆ ಹೆಚ್ಚು ಉತ್ತಮ ಪ್ರದರ್ಶನವನ್ನು ಗೇಮಿಂಗ್ ನಲ್ಲಿ ಸಾಧಿಸಲು ಸಾಧ್ಯವಾಗುತ್ತದೆ.

ಟಿಪ್ 3: ಲೇಟೆನ್ಸಿ ಪರೀಕ್ಷಿಸಿ (ಪಿಂಗ್)

ಟಿಪ್ 3: ಲೇಟೆನ್ಸಿ ಪರೀಕ್ಷಿಸಿ (ಪಿಂಗ್)

ಪಿಂಗ್ ಅಥವಾ ಲೇಟೆನ್ಸಿ ಅಂದರೆ ಇದು ನಿಮ್ಮ ಆಕ್ಷನ್ ಅಥವಾ ಪ್ರತಿಯ ವೇಗ ಆಗಿರುತ್ತದೆ ಮತ್ತು ಎಷ್ಟು ವೇಗವಾಗಿ ಇದು ಸರ್ವರ್ ನ್ನು ತಲುಪುತ್ತದೆ ಎಂಬುದಾಗಿದೆ. ಗೇಮಿಂಗ್ ಗಾಗಿ 1ms ನಿಂದ 60ms ಪಿಂಗ್ ಉತ್ತಮ ಪ್ರದರ್ಶನಕ್ಕೆ ಕಾರಣವಾಗಿರುತ್ತದೆ ಎಂದು ಭಾವಿಸಲಾಗುತ್ತದೆ.ಆದರೆ ನಿಮ್ಮ ಪಿಂಗ್ ಕೆಪಾಸಿಟಿ ಎಷ್ಟು ಎಂಬುದನ್ನು ಹಲವಾರು ಸ್ಪೀಡ್ ಟೆಸ್ಟ್ ಆಪ್ ಅಥವಾ ಸೇವೆಗಳನ್ನು ಪರೀಕ್ಷಿಸಿ ತಿಳಿದುಕೊಳ್ಳಬಹುದು.

ಟಿಪ್ 4: ನಿಮ್ಮ ಗೇಮಿನ ಗ್ರಾಫಿಕ್ಸ್ ಸೆಟ್ಟಿಂಗ್ಸ್ ಕಡಿಮೆ ಮಾಡಿ

ಟಿಪ್ 4: ನಿಮ್ಮ ಗೇಮಿನ ಗ್ರಾಫಿಕ್ಸ್ ಸೆಟ್ಟಿಂಗ್ಸ್ ಕಡಿಮೆ ಮಾಡಿ

ಒಂದು ವೇಳೆ ನೀವು ಗೇಮ್ ನ್ನು ಆಫ್ ಲೈನ್ ನಲ್ಲಿ ಆಡುತ್ತಿದ್ದರೆ, ಆಗ ಇದೆಲ್ಲವೂ ನಿಮ್ಮ ಸಿಸ್ಟಮ್ ಸ್ಪೀಡ್ ಮೇಲೆಯೆ ನಿರ್ಧರಿತವಾಗಿರುತ್ತದೆ. ಲ್ಯಾಗ್ ನ್ನು ನಿಮ್ಮ ಸಿಸ್ಟಮ್ ಹಾರ್ಡ್ ವೇರ್ ಮತ್ತು ಸ್ಪೀಡ್ ನ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಕೆಲವರು ರಿಯಲಿಸ್ಟಿಕ್ ಆಗಿರುವ ಗ್ರಾಫಿಕ್ಸ್ ನ್ನು ಬಳಸಲು ಇಚ್ಛಿಸುತ್ತಾರೆ. ಫ್ರೇಮ್ ರೇಟ್ ಸ್ವೀಕರಿಸುವ ಹಂತಕ್ಕಿಂತಲೂ ಅಧಿಕವಾಗಿದ್ದಲೂ ಕೂಡ ಪ್ರಸ್ತುತವಾಗುವುದಿಲ್ಲ.

ಆದರೆ ಆನ್ ಲೈನ್ ಗೇಮಿಂಗ್ ಗಳು ವಿಭಿನ್ನ ಕಥೆಗಳನ್ನು ಪ್ರತಿ ಪಂಧ್ಯದಲ್ಲೂ ಹೇಳುತ್ತವೆ. ಈ ಪ್ರೇಮ್ ಡ್ರಾಪ್ ಅಥವಾ ಲ್ಯಾಗ್ ನಿಮ್ಮನ್ನ ಒಟ್ಟಾರೆ ಕೆಟ್ಟ ಆನ್ ಲೈನ್ ಗೇಮರ್ ಆಗಿಯೂ ಪರಿವರ್ತಿಸಬಹುದು ಅಥವಾ ಅತ್ಯುತ್ತಮ ಗೇಮರ್ ಆಗಿಯೂ ಮಾಡಬಹುದು. ಹಾಗಾಗಿ ಕೆಲವು ಅಂಶಗಳನ್ನು ಜವಾಬ್ದಾರಿಯುತವಾಗಿ ಇಟ್ಟುಕೊಳ್ಳುವುದು ಬಹಳ ಒಳ್ಳೆಯದು. ನಾಚ್ ಅಥವಾ ಇತರೆ ಕೆಲವು ವಿಚಾರಗಳಿಂದ ಗ್ರಾಫಿಕ್ಸ್ ಸೆಟ್ಟಿಂಗ್ಸ್ ಗಳನ್ನು ಟೋನ್ ಮಾಡಿ ಇಟ್ಟುಕೊಳ್ಳುವುದು ಉತ್ತಮವಾದದ್ದು.

Best Mobiles in India

English summary
Tips to improve online multiplayer gaming performance. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+