Subscribe to Gizbot

ಸ್ಮಾರ್ಟ್‌ಫೋನ್ ಕ್ಯಾಮರಾ ಬಳಸಿಕೊಂಡು ಅದ್ಭುತ ಫೋಟೋ ತೆಗೆಯುವುದು ಹೇಗೆ?

By: Shwetha PS

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ತಂತ್ರಜ್ಞಾನವು ದಿನದಿಂದ ದಿನಕ್ಕೆ ಪ್ರಗತಿಯನ್ನು ಪಡೆದುಕೊಳ್ಳುತ್ತಿದೆ. ಇಂದು ಮಾರುಕಟ್ಟೆಗೆ ಕಾಲಿಡುತ್ತಿರುವ ಹೆಚ್ಚಿನ ಫೋನ್‌ಗಳು ಅತ್ಯುತ್ತಮ ಕ್ಯಾಮರಾ ತಂತ್ರಜ್ಞಾನವನ್ನು ಪಡೆದುಕೊಂಡು ಬರುತ್ತಿದ್ದು, ವೃತ್ತಿಪರ ಕ್ಯಾಮರಾಗಳಿಗೆ ಸಮನಾಗಿ ಇದು ಕೆಲಸ ಮಾಡುತ್ತದೆ. ಹೆಚ್ಚು ರೆಸಲ್ಯೂಶನ್, ಫೋಟೋಗ್ರಫಿ ಗುಣಮಟ್ಟ, ಫೋಟೋಗಳನ್ನು ವಿಧವಿಧವಾಗಿ ತೆಗೆಯುವ ಕೈ ಚಳಕ ಹೀಗೆ ತಂತ್ರಜ್ಞಾನದ ಮಹತ್ತರ ಪ್ರಗತಿಗಳನ್ನು ಪಡೆದುಕೊಂಡು ಈ ಕ್ಯಾಮರಾಗಳು ಬರುತ್ತಿವೆ.

ಸ್ಮಾರ್ಟ್‌ಫೋನ್ ಕ್ಯಾಮರಾ ಬಳಸಿಕೊಂಡು ಅದ್ಭುತ ಫೋಟೋ ತೆಗೆಯುವುದು ಹೇಗೆ?

ಅದಾಗ್ಯೂ ನಿಮ್ಮ ಫೋನ್‌ನಲ್ಲಿರುವ ಕ್ಯಾಮರಾದ ಮೂಲಕ ಅತ್ಯದ್ಭುತ ಫೋಟೋಗಳನ್ನು ತೆಗೆಯುವುದು ಹೇಗೆ ಎಂಬ ಸುಳಿವುಗಳು ಯಾರಿಗೂ ತಿಳಿದಿರುವುದಿಲ್ಲ. ಇಂದಿನ ಲೇಖನದಲ್ಲಿ ಇಂತಹುದೇ ಸಲಹೆಗಳು ಮತ್ತು ಸುಳಿವುಗಳನ್ನು ನಾವು ನಿಮಗಾಗಿ ನೀಡುತ್ತಿದ್ದು ಈ ಮೂಲಕ ಫೋಟೋಗ್ರಫಿಯಲ್ಲಿ ಅತ್ಯದ್ಭುತ ಪ್ರಗತಿಯನ್ನು ನಿಮಗೆ ಗಳಿಸಿಕೊಳ್ಳಬಹುದಾಗಿದೆ.

ಆಂಡ್ರಾಯ್ಡ್ ಫೋನ್‌ನಲ್ಲಿ ಅನುಸರಿಸಬೇಕಾದ ಸಲಹೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಚ್‌ಡಿಆರ್ ಆನ್ ಮಾಡಿ

ಎಚ್‌ಡಿಆರ್ ಆನ್ ಮಾಡಿ

ಎಚ್‌ಡಿಆರ್ ಫೀಚರ್ ಇದು ಸಂಪೂರ್ಣ ಔಟ್‌ಪುಟ್ ಅನ್ನು ನಿಯಂತ್ರಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಕಡಿಮೆ ಬೆಳಕಿನಲ್ಲಿ ಕೂಡ ಉತ್ತಮ ಕ್ಲಿಕ್‌ಗಳನ್ನು ತೆಗೆಯಲು ಇದು ಸಹಕಾರಿಯಾಗಿದೆ.

ಐಎಸ್‌ಒ

ಐಎಸ್‌ಒ

ಹೆಚ್ಚಿನ ಕ್ಯಾಮರಾ ಅಪ್ಲಿಕೇಶನ್‌ಗಳಲ್ಲಿ ಈ ಫೀಚರ್ ಲಭ್ಯವಿದೆ. ಈ ಫೀಚರ್ ಅನ್ನು ಲೆವಲ್ ಅನ್ನು ಹೊಂದಿಸುವ ಮೂಲಕ ಕ್ಯಾಮರಾ ಸೆನ್ಸಾರ್ ಅನ್ನು ಗರಿಷ್ಠ ಮತ್ತು ಕನಿಷ್ಠಗೊಳಿಸಬಹುದಾಗಿದೆ. ಕಡಿಮೆ ಬೆಳಕಿನಲ್ಲಿ ಇದು ಫೋಟೋ ತೆಗೆಯುತ್ತದೆ. ಐಎಸ್‌ಒ ಮೌಲ್ಯವನ್ನು ಹೆಚ್ಚಿಸಿಕೊಂಡು ಫೋಟೋ ತೆಗೆದಲ್ಲಿ ಆ ಫೋಟೋ ಗುಣಮಟ್ಟದ್ದಾಗಿರುತ್ತದೆ.

 ಫ್ಲ್ಯಾಶ್ ಲೈಟ್

ಫ್ಲ್ಯಾಶ್ ಲೈಟ್

ಕಡಿಮೆ ಬೆಳಕಿನ ಪರಿಸ್ಥಿತಿಗಳಲ್ಲಿ ಕ್ಯಾಮರಾವನ್ನು ಬೆಂಬಲಿಸಲು ಇರುವ ಹಾರ್ಡ್‌ವೇರ್ ಫೀಚರ್ ಇದಾಗಿದೆ. ಇದನ್ನು ಆಫ್ ಮಾಡಿಟ್ಟುಕೊಳ್ಳುವುದರಿಂದ ಉತ್ತಮ ಫೋಟೋ ತೆಗೆಯಬಹುದು.

ಕಾಲೇಜು ವಿದ್ಯಾರ್ಥಿಗಳಿಗೆ ಸರಿಹೊಂದುವ ಲ್ಯಾಪ್ ಟಾಪ್ ಗಳ ಪಟ್ಟಿ

ಶಟರ್ ಸ್ಪೀಡ್

ಶಟರ್ ಸ್ಪೀಡ್

ಕ್ಯಾಮರಾ ಎಷ್ಟು ವೇಗದಲ್ಲಿ ಫೋಟೋ ತೆಗೆಯುತ್ತದೆ ಎಂಬ ಅಂಶ ಪ್ರಮುಖವಾಗಿದೆ. ಫೋಟೋ ತೆಗೆಯಲು ಕ್ಯಾಮರಾ ಎಷ್ಟು ಸಮಯವನ್ನು ವಿನಿಯೋಗಿಸುತ್ತದೆಯೋ ಅಷ್ಟು ಪ್ರಖರವಾಗಿ ಚಿತ್ರಗಳು ಗೋಚರಿಸುತ್ತವೆ.

 ಉತ್ತಮ ಕ್ಯಾಮರಾ ಅಪ್ಲಿಕೇಶನ್‌ಗಳು

ಉತ್ತಮ ಕ್ಯಾಮರಾ ಅಪ್ಲಿಕೇಶನ್‌ಗಳು

ಬೇರೆ ಬೇರೆ ಕ್ಯಾಮರಾ ಅಪ್ಲಿಕೇಶನ್‌ಗಳು ಚಿತ್ರಗಳನ್ನು ಬೇರೆ ಬೇರೆ ವಿಧಾನದಲ್ಲಿ ತೆಗೆಯುತ್ತವೆ. ಆದ್ದರಿಂದ ನೀವು ಹೆಚ್ಚು ಗುಣಮಟ್ಟದ ಕ್ಯಾಮರಾ ಅಪ್ಲಿಕೇಶನ್‌ನತ್ತ ಗಮನ ಹರಿಸಿ. ಆದಷ್ಟು ಅಪ್ಲಿಕೇಶನ್‌ಗಳನ್ನು ಬಳಸಿ.

ಹೆಚ್ಚುವರಿ ಗ್ಯಾಜೆಟ್‌ಗಳ ಬಳಕೆ

ಹೆಚ್ಚುವರಿ ಗ್ಯಾಜೆಟ್‌ಗಳ ಬಳಕೆ

ಆಡ್-ಆನ್ ಲೈಟ್ಸ್ ಮತ್ತು ಸಣ್ಣ ಓಟಿಜಿ ಫ್ಲ್ಯಾಶ್‌ಗಳು ಡೀಫಾಲ್ಟ್ ಕ್ಯಾಮರಾದ ಗುಣಮಟ್ಟವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಸ್ಮಾರ್ಟ್‌ಫೋನ್‌ಗಳಿಗಾಗಿ ಬೇರೆ ಬೇರೆ ಗ್ಯಾಜೆಟ್‌ಗಳು ಲಭ್ಯವಿವೆ.

ಇಮೇಜ್ ಎಡಿಟಿಂಗ್

ಇಮೇಜ್ ಎಡಿಟಿಂಗ್

ಇದು ಕೊನೆಯ ಆಯ್ಕೆ ಎಂದೆನಿಸಿದ್ದು ಇದನ್ನು ಬಳಸಿಕೊಂಡು ನಿಮ್ಮ ಫೋನ್ ಕ್ಯಾಮರಾ ತೆಗೆದ ಚಿತ್ರವನ್ನು ನಿಮಗೆ ಬೇಕಾದಂತೆ ಉತ್ತಮಗೊಳಿಸಬಹುದಾಗಿದೆ. ಕಡಿಮೆ ಬೆಳಕಿನ ಪ್ರಖರತೆ ಇದ್ದಲ್ಲಿ ಎಡಿಟಿಂಗ್ ಪರಿಕರಗಳನ್ನು ಬಳಸಿಕೊಂಡು ಅದನ್ನು ಗಾಢಗೊಳಿಸಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Useful Tips to Take Better Photos at Night with an Android Phone that will really help you to click perfect photos in low light. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot