Home
ಟೆಕ್ ನೌಕರಿ

Tirupati Darshan Tickets: ಕ್ಷಣಾರ್ಧದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂಬುದು ಎಷ್ಟೋ ಜನರ ಜೀವಮಾನ ಆಸೆಯಾಗಿರುತ್ತದೆ. ವರ್ಷಪೂರ್ತಿ ಭಕ್ತರು ಬೇಟಿ ನೀಡುವ ದೇಶದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ತಿರುಪತಿಯು ಕೂಡ ಒಂದಾಗಿದೆ. ಇನ್ನು ಕೊರೊನಾ ನಂತರ ತಿರುಪತಿ (Tirupati) ತಿಮ್ಮಪ್ಪನ ದರ್ಶನಕ್ಕೆ ಹೋಗಬೇಕಾದರೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡುವುದು ಅವಶ್ಯಕವಾಗಿದೆ.

ಹೌದು, ನೀವು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬೇಕೆಂದು ಕೊಂಡರೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡಿಕೊಂಡು ಹೋಗುವುದು ಸೂಕ್ತ. ಪ್ರಸ್ತುತ ಟಿಕೆಟ್‌ ಬುಕಿಂಗ್‌ ಇಲ್ಲದೆ ದರ್ಮದರ್ಶನದ ಮೂಲಕ ತೆರಳುವುದಕ್ಕೆ ಅವಕಾಶವಿದೆಯಾದರೂ ಅದಕ್ಕಾಗಿ ಸಾಕಷ್ಟು ಸಮಯ ಕಳೆಯಬೇಕಾಗುತ್ತದೆ. ಆದರೆ ನೀವು ಆನ್‌ಲೈನ್‌ನಲ್ಲಿ ದರ್ಶನ ಟಿಕೆಟ್‌ ಪಡೆದುಕೊಂಡರೆ ದರ್ಶನಕ್ಕೆ ಸುಲಭವಾಗಲಿದೆ. ಹಾಗಾದ್ರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಬುಕಿಂಗ್‌ ಮಾಡುವ ಮುಂಚೆ ನೀವು ತಿಳಿದುಕೊಳ್ಳಬೇಕಾದ ವಿಚಾರಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Tirupati Darshan Tickets: ತಿಮ್ಮಪ್ಪನ ದರ್ಶನ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಯಿಂದಲೂ ಭಕ್ತರ ದಂಡು ಆಗಮಿಸುತ್ತಲೇ ಇದೆ. ಪ್ರತಿನಿತ್ಯವೂ ಲಕ್ಷಾಂತರ ಭಕ್ತರು ತಿರುಪತಿಗೆ ಬೇಟಿ ನೀಡುವುದರಿಂದ ದೇವರ ದರ್ಶನಕ್ಕಾಗಿ ದಿನಗಟ್ಟಲೇ ಕಾಯಬೇಕಾದ ಅನಿವಾರ್ಯತೆ ಕೂಡ ಇದೆ. ಇನ್ನು ಭಕ್ತರನ್ನು ನಿಭಾಯಿಸುವ ದೃಷ್ಟಿಯಿಂದ ಟಿಟಿಡಿ ಆನ್‌ಲೈನ್‌ ಟಿಕೆಟ್‌ ಬುಕಿಂಗ್‌ ವ್ಯವಸ್ಥೆ ಮಾಡಿದೆ. ಇದರಿಂದ ನಿಮಗೆ ಯಾವ ದಿನಾಂಕದಂದು ದರ್ಶನಕ್ಕೆ ಟಿಕೆಟ್‌ ಬುಕಿಂಗ್‌ ಆಗಲಿದೆಯೋ ಅಂದು ನೀವು ತಿಮ್ಮಪ್ಪನ ದರ್ಶನ ಪಡೆಯಲು ಸಾಧ್ಯವಾಗಲಿದೆ.

ಆನ್‌ಲೈನ್‌ನಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಟಿಕೆಟ್‌ ಬುಕ್‌ ಮಾಡುವುದು ಹೇಗೆ?
ಹಂತ:1 ಮೊದಲಿಗೆ ತಿರುಮಲ ತಿರುಪತಿ ದೇವಸ್ಥಾನದ (TTD) ಅಧಿಕೃತ ವೆಬ್‌ಸೈಟ್‌ tirupatibalaji.ap.gov.in ತೆರೆಯಿರಿ
ಹಂತ:2 ವೆಬ್‌ಸೈಟ್‌ನ ಹೋಮ್‌ಪೇಜ್‌ನಲ್ಲಿ "ಆನ್‌ಲೈನ್ ಬುಕಿಂಗ್" ಆಯ್ಕೆ ಕಾಣಲಿದೆ ಅದನ್ನು ಟ್ಯಾಪ್‌ ಮಾಡಿ
ಹಂತ:3 ಇದೀಗ TTD ದರ್ಶನ್ ಬುಕಿಂಗ್ ಆನ್‌ಲೈನ್ ಆಯ್ಕೆಯನ್ನು ಟ್ಯಾಪ್‌ ಮಾಡಿರಿ
ಹಂತ:4 ಇದರಲ್ಲಿ ನೀವು ನಿಮ್ಮ ಲಾಗಿನ್‌ ಐಡಿ ಕ್ರಿಯೆಟ್‌ ಮಾಡಬೇಕಾಗುತ್ತದೆ.
ಹಂತ:5 ಇದಕ್ಕಾಗಿ ನೀವು ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವ ಮೂಲಕ ಅಕೌಂಟ್‌ ಕ್ರಿಯೆಟ್‌ ಮಾಡಬೇಕು
ಹಂತ:6 ನಂತರ ಲಾಗಿನ್‌ ಆಗಿ ಟಿಟಿಡಿ ಟಿಕೆಟ್‌ಗಾಗಿ ಆನ್‌ಲೈನ್ ಬುಕಿಂಗ್ ಫಾರ್ಮ್ ನಲ್ಲಿ ಅಗತ್ಯ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ
ಹಂತ:7 ಇಲ್ಲಿ ನಿಮಗೆ ದರ್ಶನಕ್ಕೆ ಟಿಕೆಟ್‌ ಲಭ್ಯವಿರುವ ದಿನಾಂಕದ ವಿವರಗಳನ್ನು ತೋರಿಸಲಾಗುತ್ತದೆ
ಹಂತ:8 ಇದರಲ್ಲಿ ನಿಮಗೆ ಸೂಕ್ತ ಎನಿಸುವ ದಿನಾಂಕವನ್ನು ಆಯ್ಕೆ ಮಾಡುವ ಮೂಲಕ ಟಿಕೆಟ್‌ ಬುಕ್‌ ಮಾಡಬಹುದು
ಹಂತ:9 ನಂತರ ಟಿಕೆಟ್‌ ಶುಲ್ಕವನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ ಮೂಲಕ ಪಾವತಿಸಬಹುದು
ಹಂತ:10 ನೀವು ಟಿಕೆಟ್‌ ಶುಲ್ಕ 300ರೂ. ಅನ್ನು ಪಾವತಿಸಿದ ತಕ್ಷಣವೇ TTD ಟಿಕೆಟ್ ಅನ್ನು ಇಮೇಲ್ ಮೂಲಕ ಅಥವಾ ಟಿಟಿಡಿ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಹುದು.

Tirupati Darshan Tickets: ತಿಮ್ಮಪ್ಪನ ದರ್ಶನ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ಟಿಕೆಟ್‌ ಬುಕ್‌ ಮಾಡುವಾಗ ನಿಮ್ಮ ಬಳಿ ಇರಬೇಕಾದ ದಾಖಲೆಗಳೇನು?
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆನ್‌ಲೈನ್‌ ಟಿಕೆಟ್‌ ಬುಕ್‌ ಮಾಡುವಾಗ ವ್ಯಕ್ತಿಯ ಹೆಸರು, ವಯಸ್ಸು, ಲಿಂಗ, ಐಡಿ ಮತ್ತು ಆಧಾರ್ ಕಾರ್ಡ್ ಸಂಖ್ಯೆ ಇರಬೇಕಾಗಿದೆ. ನಿಮ್ಮ ಐಡಿಯನ್ನು ಅಪ್‌ಲೋಡ್‌ ಮಾಡಬೇಕಾದ ಅವಶ್ಯಕತೆಯಿಲ್ಲ. ಆದರೆ ನೀವು ದೇವಾಲಯ ಪ್ರವೇಶಿಸುವಾಗ ನಿಮ್ಮ ಟಿಕೆಟ್‌ ಜೊತೆಗೆ ಐಡಿಕಾರ್ಡ್‌ ಅನ್ನು ತೋರಿಸಬೇಕಾಗುತ್ತದೆ. ಇದರಲ್ಲಿ ನೀವು ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಅನ್ನು ಕೂಡ ತೋರಿಸಬಹುದಾಗಿದೆ.

Best Mobiles in India

English summary
Tirupati Darshan Tickets: How To Book Tirupati Special Darshan Tickets Online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+