Home
ಟೆಕ್ ನೌಕರಿ

ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಬೆಸ್ಟ್ ಸಾಫ್ಟ್‌ವೇರ್‌ಗಳು ಇವು!!

By Bhaskar N J

ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಯೂಟ್ಯೂಬ್ ವಿಡಿಯೋಗಳನ್ನು ವೀಕ್ಷಿಸಬೇಕಾದರೆ ಅವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಯೂಟ್ಯೂಬ್ ವಿಡಿಯೊ ಡೌನ್ ಲೋಡ್ ಮಾಡುವುದು ಸುಲಭವಾಗಿದ್ದು, ಯೂಟ್ಯೂಬ್ ಮೂಲಕ ವಿಡಿಯೊಗಳನ್ನು ಡೌನ್ ಲೋಡ್ ಮಾಡುವುದಕ್ಕೆ ಹಲವಾರು ವಿಧಾನಗರುವುದು ಬಹುತೇಕ ನಿಮಗೆಲ್ಲಾ ತಿಳಿದಿದೆ ಎನ್ನಬಹುದು .

ಅದರಲ್ಲಿ ಒಂದು ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ವಿಡಿಯೊ ಪ್ಲೇ ಮಾಡಿ ಆ ವಿಡಿಯೊದ ಕೆಳಗೆ ಶೇರ್ ಬಟನ್‌ನ ಪಕ್ಕದಲ್ಲಿಯೇ ಡೌನ್ ಲೋಡ್ ಬಟನ್ ಇರುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ವಿಡಿಯೊ ಡೌನ್ ಲೋಡ್ ಆಗುತ್ತದೆ. ಹೀಗೆ ಮೊಬೈಲ್‌ನಲ್ಲಿ ಡೌನ್ ಲೋಡ್ ಮಾಡಿದ ವಿಡಿಯೊಗಳನ್ನು ಕಂಪ್ಯೂಟರ್‌ಗೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ.

ಯೂಟ್ಯೂಬ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡಲು ಬೆಸ್ಟ್ ಸಾಫ್ಟ್‌ವೇರ್‌ಗಳು ಇವು!!

ಇನ್ನು ಇಲ್ಲಿ ಕೆಲವೊಂದು ವಿಡಿಯೊಗಳಲ್ಲಿ ಮಾತ್ರ ಡೌನ್ ಲೋಡ್ ಮಾಡಲು ಅನುಮತಿ ಇರುತ್ತದೆ, ಈ ವಿಡಿಯೊಗಳನ್ನು ಮೊಬೈಲ್ ನಲ್ಲಿ ಮಾತ್ರ ವೀಕ್ಷಿಸಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಎಲ್ಲಾ ಯೂಟ್ಯೂಬ್ ವಿಡಿಯೊಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಆಗುವಂತೆ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿರಿ.

ಸಾಫ್ಟ್‌ವೇರ್‌ ಬಳಸಿ ಡೌನ್‌ಲೋಡ್‌

ಸಾಫ್ಟ್‌ವೇರ್‌ ಬಳಸಿ ಡೌನ್‌ಲೋಡ್‌

ನಿಮ್ಮ ಕಂಪ್ಯೂಟರ್‌ಗೆ ನೇರವಾಗಿ ಯೂಟ್ಯೂಬ್ ವಿಡಿಯೊಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಹಾಗಾಗಿ, ಹೆಚ್ಚು ಅತ್ಯುತ್ತಮವಾದ ಸಾಫ್ಟ್‌ವೇರ್‌ಗಳನ್ನು ಬಳಸಿ ವಿಡಿಯೋಗಳನ್ನು ಡೌನ್‌ಲೋಡ್ ಮಾಡಬೇಕು. ವಿಂಡೋಸ್, ಲಿನೆಕ್ಸ್, ಮ್ಯಾಕ್ ಕಂಪ್ಯೂಟರ್‌ಗಳಲ್ಲಿ ಡೌನ್ ಲೋಡ್ ಮಾಡಲು 4K Video Downloader ಎಂಬ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ.

ಆಯ್ಕೆ ಇಲ್ಲದ ವಿಡಿಯೊಗಳ ಡೌನ್‌ಲೋಡ್!!

ಆಯ್ಕೆ ಇಲ್ಲದ ವಿಡಿಯೊಗಳ ಡೌನ್‌ಲೋಡ್!!

ವಿಂಡೋಸ್, ಲಿನೆಕ್ಸ್, ಮ್ಯಾಕ್ ಕಂಪ್ಯೂಟರ್‌ಗಳಲ್ಲಿಡೌನ್ ಲೋಡ್ ಮಾಡಲು 4K Video Downloader ಎಂಬ ಸಾಫ್ಟ್‌ವೇರ್ ಬಳಸಿದರೆ, ಡೌನ್ ಲೋಡ್ ಮಾಡುವ ಆಯ್ಕೆ ಇಲ್ಲದ ವಿಡಿಯೊಗಳನ್ನು savefrom.net, KeepVid ಮೊದಲಾದ ವೆಬ್ ಸೈಟ್‌ಗಳ ಸಹಾಯದಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಡೌನ್ ಲೋಡ್ ಹೇಗೆ?

ಡೌನ್ ಲೋಡ್ ಹೇಗೆ?

Savefrom.net ವೆಬ್ ಸೈಟ್ ಓಪನ್ ಮಾಡಿ ಅಲ್ಲಿ ಡೌನ್ ಲೋಡ್ ಮಾಡಬೇಕಾದ ಯೂ ಟ್ಯೂಬ್ ವಿಡಿಯೊದ ಲಿಂಕ್ ಪೇಸ್ಟ್ ಮಾಡಿ. ವಿಡಿಯೊ ಡೌನ್ ಲೋಡ್ ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ಆಯ್ಕೆ ಮಾಡಿದ ನಂತರ ಡೌನ್ ಲೋಡ್ ಬಟನ್ ಕ್ಲಿಕ್ ಮಾಡಿ. ವಿಡಿಯೊ ನಿಮ್ಮ ಕಂಪ್ಯೂಟರ್‌ನಲ್ಲಿ ಸೇವ್ ಆಗುತ್ತದೆ.

ರೆಸಲ್ಯೂಷನ್‌ ಆಯ್ಕೆ ಮಾಡಿ.

ರೆಸಲ್ಯೂಷನ್‌ ಆಯ್ಕೆ ಮಾಡಿ.

4K Downloader ಓಪನ್ ಮಾಡಿ, ಡೌನ್ ಲೋಡ್ ಮಾಡಬೇಕಾಗಿರುವ ವಿಡಿಯೊ ಲಿಂಕ್ ಪೇಸ್ಟ್ ಮಾಡಿ ನಿಮ್ಮ ವಿಡಿಯೊ ಯಾವ ರೆಸಲ್ಯೂಷನ್‌ನಲ್ಲಿ ಬೇಕು ಎಂಬುದನ್ನು ಆಯ್ಕೆ ಮಾಡಿ, ಆನಂತರ ವಿಡಿಯೋ ಡೌನ್ ಲೋಡ್ ಮಾಡಿ. ಹೀಗೆ ನೀವು ಹೆಚ್ಚು ರೆಸಲ್ಯೂಷನ್ ಇರುವ ವಿಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.

ಫೇಸ್‌ಬುಕ್ ಅನ್ನು ಸಹ ಬಳಸಬಹುದಾದ ಈ ಫೀಚರ್ ಪೋನ್ ಅತ್ಯುತ್ತಮವಾಗಿದೆ
ಕಾಪಿರೈಟ್ ನಿಯಮಾವಳಿಗಳು!

ಕಾಪಿರೈಟ್ ನಿಯಮಾವಳಿಗಳು!

ಯೂಟ್ಯೂಬ್ ಮೂಲಕ ನೀವು ಡೌನ್‌ಲೋಡ್ ಮಾಡಿದ ವಿಡಿಯೊಗಳನ್ನುಎಲ್ಲೆಂದರಲ್ಲಿ ಅಪ್ ಲೋಡ್ ಮಾಡುವಂತಿಲ್ಲ. ಕಾಪಿರೈಟ್ ನಿಯಮಾವಳಿಗೆ ಬದ್ಧವಾಗಿರುವ ವಿಡಿಯೊಗಳನ್ನು ಈ ರೀತಿ ಡೌನಲೋಡ್ ಮಾಡಿ ಬೇರೆ ವೆಬ್ ಸೈಟ್ ಅಥವಾ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡುವುದು ಅಪರಾಧವಾಗುತ್ತದೆ.

Best Mobiles in India

English summary
best softwares for youtube video download. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+