Home
ಟೆಕ್ ನೌಕರಿ

ನೆಟ್‌ ಸ್ಲೋ ಇದಿಯಾ? ಈ ಟ್ರಿಕ್ಸ್ ಬಳಸಿ ಸೂಪರ್ ಸ್ಪೀಡ್‌ ಇಂಟರ್‌ನೆಟ್‌ ಆನಂದಿಸಿ..!

By Avinash

ಸದ್ಯದ ಪರಿಸ್ಥಿತಿಯಲ್ಲಿ ನಮ್‌ ಜನ ಊಟ ಬೇಕಾದ್ರೇ ಬಿಟ್ಟಿರ್ತಾರೆ ಇಂಟರ್‌ನೆಟ್‌ ಮತ್ತು ಸ್ಮಾರ್ಟ್‌ಫೋನ್ ಮಾತ್ರ ಬಿಟ್ಟಿರಲ್ಲ. ಮಾನವನ ಮೂಲ ಅಗತ್ಯತೆಗಳಾದ ಆಶ್ರಯ, ಊಟ, ಬಟ್ಟೆ ಜತೆಯಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್‌ ಸೇರಿ ಬಹಳಷ್ಟು ದಿನಗಳಾಗಿವೆ. ನಾವೀಗಾಗ್ಲೆ GPRSನಿಂದ 2Gಗೆ 2Gಯಿಂದ 3Gಗೆ ಬಂದಿದ್ದಾಯ್ತು, ಇಲ್ಲಿಂದ 4G ಬಳಸ್ತಿದಿವಿ ನೆಕ್ಸ್ಟ್ 5G ಸರದಿ.

ನೆಟ್‌ ಸ್ಲೋ ಇದಿಯಾ? ಈ ಟ್ರಿಕ್ಸ್ ಬಳಸಿ ಸೂಪರ್ ಸ್ಪೀಡ್‌ ಇಂಟರ್‌ನೆಟ್‌ ಆನಂದಿಸಿ..!

ಎಲ್ಲಾ ನೆಟ್‌ವರ್ಕ್‌ ಸೇವಾದಾತರು ನಮ್ಮದೇ ಸ್ಪೀಡ್‌ ಇಂಟರ್‌ನೆಟ್‌ ಎಂದು ತರಹೇವಾರಿ ಜಾಹೀರಾತು ನೀಡುತ್ತಿವೆ. ಆದರೆ, ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ಬಾರಿ 2Gಗಿಂತ ಕಡಿಮೆ ವೇಗದಲ್ಲಿ ಇಂಟರ್‌ನೆಟ್‌ ಬಳಸ್ತಿರ್ತಿವಿ. ನೆಟ್‌ ಸ್ಪೀಡ್‌ ಆಗ್ಬೇಕೆಂದರೆ ಏನ್ ಮಾಡ್ಬೇಕು ಅಂತ ಎಲ್ಲರನ್ನೂ ಕೇಳಿರ್ತಿವಿ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್‌ ಸ್ಪೀಡ್ ಹೆಚ್ಚಬೇಕಾದರೆ ನೀವು ಸ್ವಲ್ಪ ಜಾಣ್ಮೆ ಪ್ರದರ್ಶಿಸಬೇಕು. ಕೆಲವೊಂದು ಸ್ಮಾರ್ಟ್‌ ಟ್ರಿಕ್ಸ್‌ ಉಪಯೋಗಿಸಬೇಕು. ಅಂತಹ ಟ್ರಿಕ್ಸ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ. ಈ ಟ್ರಿಕ್ಸ್‌ಗಳನ್ನು ಉಪಯೋಗಿಸಿ ಸೂಪರ್‌ ಸ್ಪೀಡ್‌ನಲ್ಲಿ ಇಂಟರ್‌ನೆಟ್‌ ಬಳಸಿ.

1. ಮೊದಲು ನಿಮ್ಮ ನೆಟ್‌ವರ್ಕ್‌ ಸೆಟ್ಟಿಂಗ್ಸ್‌ ಪರಿಶೀಲಿಸಿ

1. ಮೊದಲು ನಿಮ್ಮ ನೆಟ್‌ವರ್ಕ್‌ ಸೆಟ್ಟಿಂಗ್ಸ್‌ ಪರಿಶೀಲಿಸಿ

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ವರ್ಕ್‌ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದರಿಂದ ನೆಟ್‌ ವೇಗದಲ್ಲಿನ ದೋಷ ಪರಿಹರಿಸಬಹುದು. ಅನೇಕ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ನೆಟ್‌ವರ್ಕ್ ಸೆಟ್ಟಿಂಗ್‌ಗಳು ಜೆನರಲ್‌ ಸೆಟ್ಟಿಂಗ್‌ಗಳಡಿಯಲ್ಲಿರುತ್ತವೆ. ಈ ಸೆಟ್ಟಿಂಗ್‌ಗಳು ಮೊಬೈಲ್‌ ಕಂಪನಿಯ ಆಧಾರದ ಮೇಲೆ ಬದಲಾಗಬಹುದು. ಈ ಸೆಟ್ಟಿಂಗ್‌ನಲ್ಲಿ ನಿಮ್ಮ ನೆಟ್‌ವರ್ಕ್ ವೇಗ ನಿರ್ಬಂಧಿತವಾಗಿದೆಯೇ ಮತ್ತು ಸರಿಯಾದ ನೆಟ್‌ವರ್ಕ್‌ಗೆ ಸಂಪರ್ಕವಾಗಿದೆಯೇ ಎಂದು ಪರಿಶೀಲಿಸಿ. ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಸ್ವಯಂಚಾಲಿತ ನೆಟ್‌ವರ್ಕ್‌ ಆಯ್ಕೆ ಹೊಂದಿರುತ್ತವೆ. ಮ್ಯಾನುಯಲ್ ನೆಟ್‌ವರ್ಕ್ ಆಯ್ಕೆ ಮಾಡಿಕೊಂಡು ನಿಮ್ಮ ನೆಟ್‌ವರ್ಕ್ ಆಪರೇಟರ್‌ನ್ನು ನೀವೇ ಆಯ್ಕೆ ಮಾಡಿ. ಇದನ್ನು ಮಾಡುವ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 4G LTE ಸಕ್ರಿಯವಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.

2. ಕ್ಯಾಷೆ ಡೇಟಾ ಡಿಲೀಟ್‌ ಮಾಡಿ

2. ಕ್ಯಾಷೆ ಡೇಟಾ ಡಿಲೀಟ್‌ ಮಾಡಿ

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಲಾಗಿನ್, ಸ್ಥಳ ಮುಂತಾದ ಮಾಹಿತಿಯನ್ನು ಸಂಗ್ರಹಿಸಿಕೊಂಡು ಕ್ಯಾಷೆ ಮೆಮೊರಿಯಲ್ಲಿ ಇಟ್ಟುಕೊಂಡಿರುತ್ತವೆ. ಈ ರೀತಿ ಸಂಗ್ರಹವಾದ ಕ್ಯಾಷೆ ಮೆಮೊರಿಯಲ್ಲಿ ಅನಗತ್ಯ ಮಾಹಿತಿಯು ಸಂಗ್ರಹವಾಗಿ ಇಂಟರ್‌ನೆಟ್‌ ವೇಗವನ್ನು ಕಡಿಮೆಗೊಳಿಸುತ್ತವೆ. ಈ ರೀತಿ ಸಂಗ್ರಹವಾದ ಕ್ಯಾಷೆ ಮೆಮೊರಿಯನ್ನು ಕಾಲ ಕಾಲಕ್ಕೆ ಸ್ವಚ್ಛಗೊಳಿಸಬೇಕು. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ಕಾರ್ಯಕ್ಷಮತೆ ಹೆಚ್ಚಿಸಬಹುದಾಗಿದ್ದು, ಇನ್-ಟರ್ನ್ ಬ್ರೌಸಿಂಗ್ ವೇಗವನ್ನು ಗಮನಾರ್ಹವಾಗಿ ಸುಧಾರಿಸಬಹುದಾಗಿದೆ.

3. ಆಡ್-ಬ್ಲಾಕರ್ ಬಳಸಿ

3. ಆಡ್-ಬ್ಲಾಕರ್ ಬಳಸಿ

ನೆಟ್‌ ಬ್ರೌಸ್ ಮಾಡುವಾಗ ಬರುವ ಜಾಹೀರಾತುಗಳು ಬ್ರೌಸಿಂಗ್ ಡೇಟಾದ ಹೆಚ್ಚಿನ ಭಾಗವನ್ನು ಬಳಸುತ್ತವೆ. ಇದರಿಂದ ಪೇಜ್‌ ಡೌನ್‌ಲೋಡ್‌ ಆಗುವುದು ತಡವಾಗುತ್ತದೆ. ಇದು ನೆಟ್‌ ಸ್ಲೋ ಆಗುವುದಕ್ಕೆ ಪ್ರಮುಖ ಕಾರಣವಾಗುತ್ತದೆ. ಇದರಿಂದ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ವೇಗವು ಸಹ ಕುಂದುತ್ತದೆ. ಆದ್ದರಿಂದ ಆಡ್‌ ಬ್ಲಾಕರ್‌ಗಳನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಈ ಆಯ್ಕೆಯನ್ನು ಕೆಲವು ಬ್ರೌಸರ್‌ಗಳು ತಮ್ಮ ಸೆಟ್ಟಿಂಗ್‌ನಲ್ಲಿಯೇ ನೀಡಿರುತ್ತವೆ. ಇನ್ನು ಕೆಲವುಗಳಿಗೆ ಪ್ಲೇ ಸ್ಟೋರ್‌ನಿಂದ ಆಡ್ ಬ್ಲಾಕರ್‌ ಆಪ್ ಡೌನ್‌ಲೋಡ್ ಮಾಡಿಕೊಂಡು ಜಾಹೀರಾತುಗಳನ್ನು ನಿರ್ಬಂಧಿಸಬಹುದು. ಇದರಿಂದ ಖಂಡಿತ ನೆಟ್‌ ವೇಗ ಹೆಚ್ಚುತ್ತದೆ.

4.ಉಪಯೋಗಿಸದ ಆಪ್‌ಗಳನ್ನು ಅನ್ಇನ್‌ಸ್ಟಾಲ್ ಮಾಡಿ

4.ಉಪಯೋಗಿಸದ ಆಪ್‌ಗಳನ್ನು ಅನ್ಇನ್‌ಸ್ಟಾಲ್ ಮಾಡಿ

ಕುತೂಹಲದಿಂದ ಹೊಸ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಒಂದೇರಡು ಬಾರಿ ಬಳಸಿ ಆ ಆಪ್‌ಗಳನ್ನೇ ಮರೆತು ಬಿಡುತ್ತೇವೆ. ಇಂತಹ ಉಪಯೋಗಿಸದ ಹಲವು ಆಪ್‌ಗಳಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗ ಕುಸಿಯುತ್ತದೆ. ಈ ಆಪ್‌ಗಳು ಅನಗತ್ಯ ಸಂಗ್ರಹ ಹಾಗೂ ಕಾರ್ಯನಿರ್ವಹಣೆ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯನಿರ್ವಹಣೆ ವೇಗವನ್ನು ಕುಂಠಿತಗೊಳಿಸುತ್ತವೆ. ಇಂತಹ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೋನ್‌ ವೇಗ ಹೆಚ್ಚಿಸುವುದಲ್ಲದೇ ನೆಟ್‌ ಬ್ರೌಸಿಂಗ್ ವೇಗವನ್ನು ಸುಧಾರಿಸಲು ನೆರವು ನೀಡುತ್ತದೆ.

5. ವೇಗ ಮತ್ತು ಲೈಟ್‌ ಬ್ರೌಸರ್ ಬಳಸಿ

5. ವೇಗ ಮತ್ತು ಲೈಟ್‌ ಬ್ರೌಸರ್ ಬಳಸಿ

ಇಂಟರ್‌ನೆಟ್ ಬ್ರೌಸ್ ಮಾಡಲು ಹಲವು ಆಪ್‌ಗಳಿವೆ. ಉತ್ತಮವಾದ ವೇಗದಲ್ಲಿ ಇಂಟರ್‌ನೆಟ್‌ ಬ್ರೌಸ್ ಮಾಡಲು ಉತ್ತಮ ಬ್ರೌಸರ್ ಆಯ್ಕೆ ಮಾಡಬೇಕಾದ ಅಗತ್ಯವಿದೆ. ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಿಗಂತಾನೇ ವಿಶೇಷವಾಗಿ ನಿರ್ಮಿಸಲಾದ ಅನೇಕ ವೆಬ್ ಬ್ರೌಸರ್‌ಗಳು ಲಭ್ಯವಿವೆ. ಇಂತಹವುಗಳಲ್ಲಿ ವೇಗದ ಮತ್ತು ಲೈಟ್‌ ಆಗಿರುವ ಬ್ರೌಸರ್‌ ಬಳಸಿ. ಇದರಿಂದ ಸ್ಮಾರ್ಟ್‌ಫೋನ್‌ಗೆ ಹೆಚ್ಚಿನ ಒತ್ತಡ ಬರದೇ ವೇಗದ ಬ್ರೌಸಿಂಗ್ ಅನುಭವ ಪಡಯಬಹುದು. ಯುಸಿ ಬ್ರೌಸರ್, ಗೂಗಲ್ ಕ್ರೋಮ್, ಮೊಜಿಲ್ಲಾ ಫೈರ್‌ಫಾಕ್ಸ್‌ನಂತಹ ಆಪ್‌ಗಳು ಉತ್ತಮ ಆಯ್ಕೆಯಾಗಬಹುದು.

6. ಗರಿಷ್ಠ ಡೇಟಾ-ಲೋಡಿಂಗ್ ಆಯ್ಕೆ ಸಕ್ರಿಯಗೊಳಿಸಿ

6. ಗರಿಷ್ಠ ಡೇಟಾ-ಲೋಡಿಂಗ್ ಆಯ್ಕೆ ಸಕ್ರಿಯಗೊಳಿಸಿ

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಸೆಟ್ಟಿಂಗ್‌ಗಳಲ್ಲಿ ವೈರ್‌ಲೆಸ್‌ ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳ ಅಡಿಯಲ್ಲಿ ನೀವು ಜಿಪಿಆರ್ಎಸ್ ವರ್ಗಾವಣೆಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಕರೆ ಮಾಡಲು ಮತ್ತು ಡೇಟಾ ಆದ್ಯತೆಯ ಆಯ್ಕೆಯಿದ್ದು, ಡೇಟಾ ಆದ್ಯತೆ ಆಯ್ಕೆಗೆ ಬದಲಾಯಿಸುವುದರಿಂದ ಸುಧಾರಿತ ಇಂಟರ್‌ನೆಟ್ ವೇಗ ಪಡೆಯಬಹುದಾಗಿದೆ.

7. ಸ್ಪೀಡ್‌ ಬೂಸ್ಟರ್‌ಗಳನ್ನು ಬಳಸಿ

7. ಸ್ಪೀಡ್‌ ಬೂಸ್ಟರ್‌ಗಳನ್ನು ಬಳಸಿ

ಎಲ್ಲಾ ಆಪ್‌ಗಳು ಸ್ಮಾರ್ಟ್‌ಫೋನ್‌ಗಳ ವೇಗ ಕಡಿಮೆ ಮಾಡುತ್ತವೆ ಎಂಬ ಸಾಮಾನ್ಯ ಕಲ್ಪನೆ ಅಸಮರ್ಪಕವಾದದ್ದು, ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ ಇಂಟರ್‌ನೆಟ್ ವೇಗ ಹೆಚ್ಚಿಸಲು ಹಲವು ಆಪ್‌ಗಳು ಲಭ್ಯವಿವೆ. ಬೇಕಾದರೆ Google Play Storeನಿಂದ ಡೌನ್‌ಲೋಡ್‌ ಮಾಡಿಕೊಂಡು ವೇಗವಾಗಿ ಇಂಟರ್‌ನೆಟ್ ಬಳಸಬಹುದಾಗಿದೆ.

8.ಮತ್ತೊಂದಿಷ್ಟು

8.ಮತ್ತೊಂದಿಷ್ಟು

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಇಂಟರ್‌ನೆಟ್ ವೇಗ ಹೆಚ್ಚಿಸಲು ಇವು ಕೆಲವು ತಂತ್ರಗಳು ಮತ್ತು ಸಲಹೆಗಳಾಗಿವೆ ಅಷ್ಟೇ, ನಿಮ್ಮ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಣೆ ಮೇಲೆ ಪರಿಣಾಮ ಬೀರುವ ಇತರ ಹಲವಾರು ಕಾರಣಗಳಿವೆ. ದೋಷಪೂರಿತ ಹಾರ್ಡ್‌ವೇರ್ ಅಥವಾ ಹೊಂದಾಣಿಕೆಯಾಗದ ಸಾಫ್ಟ್‌ವೇರ್ ಸಹ ವೇಗ ಕುಂಠಿತಕ್ಕೆ ಕಾರಣವಾಗಬಹುದು. ಆ ಸಾಧ್ಯತೆಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಲ್ಲದಿದ್ದರೆ ಮೇಲೆ ತಿಳಿಸಿದ ಟ್ರಿಕ್ ಬಳಸಿ ಸೂಪರ್ ಸ್ಪೀಡ್ ಇಂಟರ್‌ನೆಟ್‌ ಬಳಸಬಹುದು.

Best Mobiles in India

English summary
TRICKS TO INCREASE INTERNET SPEED IN ANDROID MOBILE. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+