ಕಂಪ್ಯೂಟರ್ ಡೆಡ್ ಆದರೆ ನಾವೇ ಸರಿಪಡಿಸಿಕೊಳ್ಳುವುದು ಹೇಗೆ?

ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ನಾವು ಹೆಚ್ಚು ಬಳಸಿದಂತೆಲ್ಲಾ ಅವುಗಳು ಕೈ ಕೊಡುವ ಸಂಭವವೇ ಹೆಚ್ಚು. ಎಲೆಕ್ಟ್ರಾನಿಕ್ ಉತ್ಪನ್ನಗಳು ಕೆಲವೊಮ್ಮೆ ಬಳಕೆದಾರ ಸ್ನೇಹಿಯಾಗಿದ್ದರೆ ಮತ್ತೆ ಕೆಲವೊಮ್ಮೆ ನಮ್ಮ ತಲೆನೋವಿಗೆ ಕಾರಣವಾಗುತ್ತವೆ.

|

ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ನಾವು ಹೆಚ್ಚು ಬಳಸಿದಂತೆಲ್ಲಾ ಅವುಗಳು ಕೈ ಕೊಡುವ ಸಂಭವವೇ ಹೆಚ್ಚು. ಎಲೆಕ್ಟ್ರಾನಿಕ್ ಉತ್ಪನ್ನಗಳು ಕೆಲವೊಮ್ಮೆ ಬಳಕೆದಾರ ಸ್ನೇಹಿಯಾಗಿದ್ದರೆ ಮತ್ತೆ ಕೆಲವೊಮ್ಮೆ ನಮ್ಮ ತಲೆನೋವಿಗೆ ಕಾರಣವಾಗುತ್ತವೆ. ಹಾಗಾಗಿ, ಇಂದಿನ ಲೇಖನದಲ್ಲಿ ಇಂತಹುದ್ದೇ ಒಂದು ಆಸಕ್ತಿಕರ ವಿಷಯ 'ಕಂಪ್ಯೂಟರ್ ಡೆಡ್" ಬಗ್ಗೆ ನಾವು ತಿಳಿಯೋಣ.!!

ಕಂಪ್ಯೂಟರ್ ಡೆಡ್ ಆದರೆ ನಾವೇ ಸರಿಪಡಿಸಿಕೊಳ್ಳುವುದು ಹೇಗೆ?

ಹೌದು, ಕಂಪ್ಯೂಟರ್ ಡೆಡ್ ಎಂದೊಡನೆ ನಿಮಗೆ ನಿಮ್ಮ ಕಂಪ್ಯೂಟರ್ ಸಂಪೂರ್ಣ ಹಾಳಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಕಂಪ್ಯೂಟರ್ ಕಂಪ್ಯೂಟರ್ ಡೆಡ್ ಆದಾಗಲೂ ನಾವುಗಳೇ ಅದನ್ನು ಸರಿಪಡಿಸುವ ಆಯ್ಕೆ ಸಹ ಇರುತ್ತದೆ. ಹಾಗಾದರೆ, ನಿಮ್ಮ ಕಂಪ್ಯೂಟರ್ ಡೆಡ್ ಆದಾಗ ಏನು ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ಸರಳವಾಗಿ ತಿಳಿಯಿರಿ.!!

ಪವರ್ ಕಾರ್ಡ್ ಮತ್ತು ವೋಲ್ಟ್ ಸ್ವಿಚ್ ಚೆಕ್ ಮಾಡಿ!!

ಪವರ್ ಕಾರ್ಡ್ ಮತ್ತು ವೋಲ್ಟ್ ಸ್ವಿಚ್ ಚೆಕ್ ಮಾಡಿ!!

ಪವರ್ ಕಾರ್ಡ್ ಮೂಲಕ ನಿಮ್ಮ ಕಂಪ್ಯೂಟರ್‌ಗೆ ವಿದ್ಯುತ್ ಪೂರೈಕೆಯಾಗುತ್ತದೆ. ಇದನ್ನು ಪರೀಕ್ಷಿಸುವುದಕ್ಕಾಗಿ ಪವರ್ ಕಾರ್ಡ್ ಅನ್ನು ನೇರವಾಗಿ ಗೋಡೆಯಲ್ಲಿರುವ ಪ್ಲಗ್ ಬೋರ್ಡ್‌ಗೆ ಮತ್ತು ಇನ್ನೊಂದು ಬದಿಗೆ ಬಲ್ಬ್ ಅನ್ನು ಸಂಪರ್ಕಪಡಿಸಿ ಮತ್ತು ಕಂಪ್ಯೂಟರ್‌ನ ಹಿಂಭಾಗದಲ್ಲಿರುವ ವೋಲ್ಟೇಜ್ ಸೆಟ್ಟಿಂಗ್ ಅನ್ನು ಪರಿಶೀಲಿಸಿಕೊಳ್ಳಿ.

ರಾಮ್ ( RAM) !!

ರಾಮ್ ( RAM) !!

ಇಂದಿನ ಕಂಪ್ಯೂಟರ್ ಬಳಕೆದಾರರಿಗೆಲ್ಲ ತಿಳಿದಿರುವ ರಾಂಡಮ್ ಏಕ್ಸಸ್ ಮೆಮೊರಿ ಎಂದು ಕರೆಯಲಾದ RAM ಅನ್ನು ಪರಿಶೀಲಿಸಿ. RAM ಕನೆಕ್ಟರ್ ಅನ್ನು ಚೆನ್ನಾಗಿ ಸ್ವಚ್ಛ ಮಾಡಿದ ನಂತರ RAM ಅನ್ನು ಮರುಫಿಟ್ಟಿಂಗ್ ಮಾಡಿ. RAM ಡ್ರಾಮ್ ಇನ್ನೊಂದು ಸ್ರಾಮ್ ಎಂಬ ಎರಡು ವಿಧಗಳನ್ನು ಹೊಂದಿದ್ದು, ಅದನ್ನು ಕೂಡ ಪರಶೀಲಿಸಿ.!!

ಬಯೋಸ್ ಮತ್ತು ಔಟ್‌ಪುಟ್ ಕನೆಕ್ಟರ್ ರಿಸೆಟ್ಟಿಂಗ್

ಬಯೋಸ್ ಮತ್ತು ಔಟ್‌ಪುಟ್ ಕನೆಕ್ಟರ್ ರಿಸೆಟ್ಟಿಂಗ್

ಸಿಮೋಸ್ ಬ್ಯಾಟರಿನ್ನು ಮರುಜೋಡಿಸುವ ಮೂಲಕ ಬಯೋಸ್ ಅನ್ನು ಮರುಹೊಂದಿಸಬಹುದಾಗಿದೆ. ಮೊದಲಿಗೆ ಬಯೋಸ್ ಬ್ಯಾಟರಿಯನ್ನು ತೆಗೆಯಿರಿ 2 ನಿಮಿಷಗಳ ನಂತರ ಅದನ್ನು ಇನ್‌ಸ್ಟಾಲ್ ಮಾಡಿ. ಇನ್ನು ಆಡಿಯೊ ಸಿಸ್ಟಮ್, ಪ್ರಿಂಟರ್ ಹೀಗೆ ಯುಎಸ್‌ಬಿ ಸಂಪರ್ಕದ ಡಿವೈಸ್ ಔಟ್‌ಪುಟ್ ಕನೆಕ್ಟರ್‌ಗಳನ್ನು ಪರಿಶೀಲಿಸಿ.

ಸ್ವಿಚ್ ಮೋಡ್ ಪವರ್ ಸಪ್ಲೈ ಮತ್ತು ಮಾನಿಟರ್!!

ಸ್ವಿಚ್ ಮೋಡ್ ಪವರ್ ಸಪ್ಲೈ ಮತ್ತು ಮಾನಿಟರ್!!

ಎಸ್‌ಎಮ್‌ಪಿಎಸ್ ಎಂದು ಕರೆಯಲಾಗುವ ಸ್ವಿಚ್ ಮೋಡ್ ಪವರ್ ಸಪ್ಲೈಯು ಪರ್ಯಾಯ ಕರೆಂಟ್ ಅನ್ನು ನೇರ ಕರೆಂಟ್‌ಗೆ ಪರಿವರ್ತಿಸುತ್ತದೆ. ಕಂಪ್ಯೂಟರ್‌ಗೂ ಸಿಪಿಯು ಎಸ್‌ಎಮ್‌ಪಿಎಸ್ ಒಂದೇ ತೆರನಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಿರಿ. ಇನ್ನು ನಿಮ್ಮ ಕಂಪ್ಯೂಟರ್ ಮಾನಿಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸಿ.!!

ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ Truvision TX4075 40' Smart LED TV ಹೇಗಿದೆ..?
ಎಕ್ಸ್‌ಟರ್ನಲ್ ಕಾರ್ಡ್!

ಎಕ್ಸ್‌ಟರ್ನಲ್ ಕಾರ್ಡ್!

ಕಂಪ್ಯೂಟರ್‌ನಲ್ಲಿರುವ ಯಾವುದೇ ಎಕ್ಸ್‌ಟರ್ನಲ್ ಕಾರ್ಡ್, ಗ್ರಾಫಿಕ್ ಕಾರ್ಡ್, ಸೌಂಡ್ ಕಾರ್ಡ್ ಇವುಗಳನ್ನು ಹೊರತೆಗೆಯಿರಿ ಮತ್ತು ಪರಿಶೀಲಿಸಿ. ಹೀಗೆ ಈ ಎಲ್ಲಾ ಕಾರ್ಯಗಳ ಮೂಲಕ ನಿಮ್ಮ ಕಂಪ್ಯೂಟರ್ ಡೆಡ್ ಆಗಿದ್ದರೆ , ಮತ್ತೆ ಕಾರ್ಯಾಚರಣೆ ಮಾಡುವಂತೆ ಮಾಡಬಹುದು. ಮತ್ತು ನಿಮ್ಮ ಹಣ ಕೂಡ ಉಳಿತಾಯವಾಗುತ್ತದೆ.!!

ಯಾವುದೇ ಆಸ್ತಿ ಖರೀದಿಗೂ ಮುನ್ನ ಸರ್ಕಾರಿ ದಾಖಲೆ ಪರಿಶೀಲಿಸಲು ಬಂತು ಆಪ್!!ಯಾವುದೇ ಆಸ್ತಿ ಖರೀದಿಗೂ ಮುನ್ನ ಸರ್ಕಾರಿ ದಾಖಲೆ ಪರಿಶೀಲಿಸಲು ಬಂತು ಆಪ್!!

Best Mobiles in India

English summary
I know it can freak you out when you found your computer remains dead after when you push the power button. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X