ಟ್ರೂಕಾಲರ್ ನಲ್ಲಿ ಕಾಲ್ ರೀಸನ್ ಫೀಚರ್ ನ್ನು ಬಳಸುವುದು ಹೇಗೆ?

By Gizbot Bureau
|

ಟ್ರೂಕಾಲರ್ ಸಂಸ್ಥೆ ತನ್ನ ಇಮೇಜ್ ನ್ನು ಒಂದು ಮಟ್ಟದ ಎತ್ತರಕ್ಕೆ ಕೊಂಡೊಯ್ಯುತ್ತಿದ್ದು ಭದ್ರತಾ ಕಂಪೆನಿಯಂತೆ ಕೆಲಸ ಮಾಡುವುದಕ್ಕೆ ಮುಂದಾಗುತ್ತಿದೆ. ಟ್ರೂ ಕಾಲರ್ ನ ಡಾಟಾ ಪಡೆಯುವ ಬಗ್ಗೆ ನಾವು ಆಗಾಗ ನಿಮಗೆ ಮಾಹಿತಿಗಳನ್ನು ನೀಡುತ್ತಲೇ ಇರುತ್ತಿದ್ದೆವು. ಬಳಕೆದಾರರ ಸುರಕ್ಷತೆಗೆ ಯಾವ ರೀತಿಯ ಸಹಾಯವನ್ನು ಇದು ಮಾಡುತ್ತದೆ ಎಂಬ ಬಗ್ಗೆ ಹಲವು ಬಾರಿ ತಿಳಿಸಿಕೊಟ್ಟಿದ್ದೇವೆ.

ಟ್ರೂಕಾಲರ್ ನಲ್ಲಿ ಕಾಲ್ ರೀಸನ್ ಫೀಚರ್ ನ್ನು ಬಳಸುವುದು ಹೇಗೆ?

ಇದೀಗ ಟ್ರೂಕಾಲರ್ ಮತ್ತಷ್ಟು ಹೊಸ ಫೀಚರ್ ಗಳನ್ನು ತನ್ನೊಳಗೆ ಸೇರಿಸಿಕೊಳ್ಳುತ್ತಿದ್ದು ಕಾಲಿಂಗ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸಲು ಮುಂದಾಗುತ್ತಿದೆ. ಇತ್ತೀಚೆಗೆ ಪ್ರಕಟಿಸಲಾಗಿರುವ ಟ್ರೂಕಾಲರ್ ನ ಕಾಲ್ ರೀಸನ್ ಫೀಚರ್ ನಿಂದಾಗಿ ಕರೆಗಳನ್ನು ಪಡೆದವರು ಕರೆಗಳನ್ನು ಮಾಡುತ್ತಿರುವವರು ಯಾವ ಕಾರಣಕ್ಕಾಗಿ ಕರೆ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು ಪಿಕ್ಸಲ್ ಹೋಲ್ಡ್ ಫಾರ್ ಮಿ ಫೀಚರ್ ನಷ್ಟು ಸಂಶೋಧನಕಾರಿಯಾಗಿಲ್ಲದೆ ಇದ್ದರೂ ಕೂಡ ಹೆಚ್ಚಿನ ಬಳಕೆದಾರರಿಗೆ ಬಹಳ ಪ್ರಯೋಜನಕಾರಿಯಾಗಿರುವ ವೈಶಿಷ್ಟ್ಯತೆಯಾಗಿದೆ.

ಒಂದು ವೇಳೆ ನೀವೂ ಕೂಡ ಕಾಲ್ ರೀಸನ್ ಫೀಚರ್ ನ್ನು ಟ್ರೂಕಾಲರ್ ನಲ್ಲಿ ಬಳಸುವುದು ಹೇಗೆ ಎಂಬ ಬಗ್ಗೆ ತಿಳಿದುಕೊಳ್ಳುವುದಕ್ಕೆ ಇಚ್ಛಿಸುತ್ತೀರಾದರೆ ಮುಂದಿನ ಭಾಗವನ್ನು ಓದಿ.

ಟ್ರೂ ಕಾಲರ್ ನಲ್ಲಿ ಕಾಲ್ ರೀಸನ್ ಪೀಚರ್ ಬಳಸಿ

ಹಂತಗಳನ್ನು ನಿಮಗೆ ತಿಳಿಸುವ ಮುನ್ನ ಒಂದು ವಿಚಾರವನ್ನು ಮೊದಲೇ ತಿಳಿಸಿಬಿಡುತ್ತೇವೆ. ಸದ್ಯ ಟ್ರೂಕಾಲರ್ ನ ಈ ಕಾಲ್ ರೀಸನ್ ಫೀಚರ್ ವಿಶ್ವದಾದ್ಯಂತ ಕೇವಲ ಆಂಡ್ರಾಯ್ಡ್ ನಲ್ಲಿ ಮಾತ್ರವೇ ಬಿಡುಗಡೆಗೊಳ್ಳುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿ ಐಓಎಸ್ ನಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ನೀವು ವರ್ಷನ್ 11.30 ವನ್ನು ಅಪ್ ಡೇಟ್ ಮಾಡಿಕೊಂಡಿದ್ದರೆ ಮಾತ್ರವೇ ಬಳಸುವುದಕ್ಕೆ ಅವಕಾಶವಿರುತ್ತದೆ. ಹಾಗಾಗಿ ಪ್ಲೇ ಸ್ಟೋರ್ ಮೂಲಕ ಮೊದಲು ನಿಮ್ಮ ಟ್ರೂಕಾಲರ್ ಆಪ್ ನ್ನು ಅಪ್ ಡೇಟ್ ಮಾಡಿಕೊಳ್ಳಿ ಮತ್ತು ಈ ಕೆಳಗಿನ ಹಂತಗಳನ್ನು ನಂತರ ಅನುಸರಿಸಿ.

1. ಮೊದಲನೆಯದಾಗಿ, ಟ್ರೂಕಾಲರ್ ನ ಹ್ಯಾಮ್ ಬರ್ಗರ್ ಮೆನುವನ್ನು ಟ್ಯಾಪ್ ಮಾಡಿ. ಸೆಟ್ಟಿಂಗ್ಸ್ ನ್ನು ತೆರೆಯಿರಿ ಮತ್ತು ಜನರಲ್ ಗೆ ತೆರಳಿ.

2.ನಂತರ ಕಾಲ್ ರೀಸನ್ ಆಯ್ಕೆಯನ್ನು ನೀವು ಅಲ್ಲಿ ಗಮನಿಸಬಹುದು. ಇಲ್ಲಿ ಟಾಗಲ್ ನ್ನು ಅನೇಬಲ್ ಮಾಡಿ ಮತ್ತು ಇದು ನಿಮಗೆ ಸೆಟ್ ಅಪ್ ಪೇಜ್ ಗೆ ಕೊಂಡೊಯ್ಯುತ್ತದೆ.

3. ಪ್ರೀ-ಡಿಫೈನ್ ಮಾಡಲಾಗುವ ಮೆಸೇಜ್ ಗಳನ್ನು ಆಕ್ಟಿವೇಟ್ ಮಾಡುವುದಕ್ಕಾಗಿ ರೀಸನ್ ನ್ನು ಟ್ಯಾಪ್ ಮಾಡಿ. ಒಂದು ವೇಳೆ ಈ ಬಟನ್ ಕೆಲಸ ಮಾಡದೇ ಇದ್ದರೆ ಟಾಗಲ್ ನ್ನು ಇನ್ನೊಮ್ಮೆ ಅನೇಬಲ್ ಮಾಡಿ. ಖಂಡಿತ ಇದೀಗ ಸರಿಯಾಗಿ ಕೆಲಸ ಮಾಡುತ್ತದೆ.

4. ಒಂದು ವೇಳೆ ನೀವು ಪ್ರೀಡಿಫೈನ್ ಮಾಡಲಾಗಿರುವ ಕಾರಣಗಳನ್ನು ಎಡಿಟ್ ಮಾಡಲು ಬಯಸಿದರೆ ನಿಮ್ಮ ನಿರ್ಧಿಷ್ಟ ಕಾರಣವನ್ನು ಬರೆಯಿರಿ ಮತ್ತು ಮೆನುವಿನಲ್ಲಿರುವ ಮೂರು ಡಾಟ್ ನ್ನು ಟ್ಯಾಪ್ ಮಾಡಿ ಮತ್ತು ಅಲ್ಲಿ ನೀವು ಎಡಿಟ್ ಆಯ್ಕೆಯನ್ನು ಗಮನಿಸಬಹುದು. ಅದನ್ನು ಟ್ಯಾಪ್ ಮಾಡಿ ಮತ್ತು ಟ್ರೂ ಕಾಲರ್ ನ ಕಸ್ಟಮ್ ಕಾಲ್ ರೀಸನ್ ನ್ನು ಸೇರಿಸಬಹುದು.

5. ಇದೀಗ ನೀವು ಈ ಫೀಚರ್ ನ್ನು ಆಕ್ಟಿವೇಟ್ ಮಾಡಿದಂತಾಯಿತು ಮತ್ತು ನಂತರ ಗಾಟ್ ಇಟ್ ನ್ನು ಟ್ಯಾಪ್ ಮಾಡಿ ಮತ್ತು ಇಷ್ಟು ಮಾಡಿದರೆ ಮುಗಿಯಿತು.

6. ನಂತರ ಟ್ರೂಕಾಲರ್ ನ್ನುತೆರೆಯಿರಿ ಮತ್ತು ಕರೆಯನ್ನು ಮಾಡಿ.ಕೂಡಲೇ ಕಾಲ್ ರೀಸನ್ ಪಾಪ್ ಅಪ್ ಕಾಣಿಸುತ್ತದೆ. ನೀವು ಸುಲಭವಾಗಿ ಯಾವುದನ್ನು ಬೇಕಿದ್ದರೆ ಆಯ್ಕೆ ಮಾಡಿ ಮತ್ತು ಅಥವಾ ನಿಮಗೆ ಅಗತ್ಯವಿರುವ ಪದಗಳನ್ನು ಬರೆಯಿರಿ.ಒಂದು ವೇಳೆ ನೀವು ಯಾವುದಾದರೂ ನಿಗದಿತ ಕಾಂಟ್ಯಾಕ್ಟ್ ಗೆ ಶಾಶ್ವತವಾಗಿ ಕಾಲ್ ರೀಸನ್ ಪ್ರಾಂಮ್ಟ್ ನ್ನು ತೆಗೆಯಬೇಕು ಎಂದಾದಲ್ಲಿ ನೀವು ಹೈಡ್ ಫಾರ್ ದಿಸ್ ಪರ್ಸನ್ ನ್ನು ಟ್ಯಾಪ್ ಮಾಡಬಹುದು.

7. ನಂತರ ರಿಸೀವ್ ಮಾಡಿದವರು ಕಾಲ್ ಡೈಲಾಗ್ ಬಾಕ್ಸ್ ನಲ್ಲಿ ಕರೆಗಳ ಕಾರಣವನ್ನು ತಿಳಿಯುತ್ತಾರೆ. ಹಾಗಾಗಿ ನಿಮ್ಮ ಕರೆಗಳ ಕಾರಣದಿಂದಾಗಿ ಕರೆ ಪಡೆಯುವವರು ಅದರ ಅಗತ್ಯತೆಯನ್ನು ಅರಿತು ಕೂಡಲೇ ರಿಸೀವ್ ಮಾಡುವುದಕ್ಕೆ ಅನುಕೂಲವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಅಪರಿಚಿತ ಕರೆಗಳಲ್ಲಿ ಇದರ ಬಳಕೆಗೆ ಹೆಚ್ಚು ಪ್ರಾಮುಖ್ಯತೆ ಸಿಗುತ್ತದೆ.

ಸೂಚನೆ: ಆದರೆ ನೆನಪಿರಲಿ ಕರೆಗಳನ್ನು ರಿಸೀವ್ ಮಾಡಿರುವವರು ಟ್ರೂಕಾಲರ್ ಆಪ್ ನ್ನು ಇನ್ಸ್ಟಾಲ್ ಮಾಡಿದ್ದರೆ ಮಾತ್ರವೇ ಇದರ ಉಪಯೋಗ ಸಾಧ್ಯವಾಗುತ್ತದೆ.

ಉತ್ತಮ ಸಂವಹನಕ್ಕಾಗಿ ಬಳಸಿ ಟ್ರೂಕಾಲರ್ ನ ಕಾಲ್ ರೀಸನ್ ಫೀಚರ್

ಇದೇನು ಪಾವತಿ ಮಾಡಿ ಬಳಸಬೇಕಾಗಿರುವ ಫೀಚರ್ ಅಲ್ಲ.ಇ ಕಾಮರ್ಸ್ ಏಜೆಂಟ್ ಗಳಿಂದ ಹಿಡಿದು ಸೇವಾ ನಿರತ ಕಂಪೆನಿಗಳು ಕೂಡ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ನಿಮಗೆ ಈ ಟ್ರೂ ಕಾಲರ್ ರೀಸನ್ ಫೀಚರ್ ಬಗ್ಗೆ ಏನನ್ನಿಸುತ್ತಿದೆ ತಿಳಿಸಿ.

Most Read Articles
Best Mobiles in India

Read more about:
English summary
TrueCaller Call Reason Feature Explained: How To Use This Feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X