ಸ್ಮಾರ್ಟ್‌ಪೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ?..ತಜ್ಞರು ಹೇಳಿದ ಕಾರಣಗಳು ಇವು?!!

ಮನೆಯಿಂದ ಹೊರಡುವಾಗ ಫುಲ್ ಚಾರ್ಜ್ ಆಗಿದ್ದ ಸ್ಮಾರ್ಟ್‌ಫೋನ್ ಕೆಲವೇ ಹೊತ್ತಿನಲ್ಲಿ 50 ಪರ್ಸೆಂಟ್‍ಗೆ ಬಂದಿರುವುದನ್ನು ನೋಡಿದರೆ ಎಲ್ಲರಿಗೂ ಗಾಬರಿಯಾಗಿತ್ತದೆ.!

|

ಮನೆಯಿಂದ ಹೊರಡುವಾಗ ಫುಲ್ ಚಾರ್ಜ್ ಆಗಿದ್ದ ಸ್ಮಾರ್ಟ್‌ಫೋನ್ ಕೆಲವೇ ಹೊತ್ತಿನಲ್ಲಿ 50 ಪರ್ಸೆಂಟ್‍ಗೆ ಬಂದಿರುವುದನ್ನು ನೋಡಿದರೆ ಎಲ್ಲರಿಗೂ ಗಾಬರಿಯಾಗಿತ್ತದೆ.! ಏಕೆಂದರೆ, ನಾವು ಸ್ಮಾರ್ಟ್‌ಫೋನ್ ಅನ್ನು ಹೆಚ್ಚು ಬಳಸದಿದ್ದರೂ ಕೂಡ ಸ್ಮಾರ್ಟ್‌ಪೋನ್ ಬ್ಯಾಟರಿ ಶಕ್ತಿ ಬಹುಬೇಗ ಕಡಿಮೆಯಾಗುವುದು ನಮಗೆ ಆಶ್ಚರ್ಯವನ್ನುಂಟು ಮಾಡುತ್ತದೆ.!!

ಇನ್ನು ಸ್ಮಾರ್ಟ್‌ಫೋನ್‌ ಖರೀದಿಸುವ ಮುನ್ನ ಬ್ಯಾಟರಿ ಬಾಳಿಕೆ ಎಷ್ಟು ಹೊತ್ತು ಇರುತ್ತದೆ ಎಂಬುದನ್ನು ಪರಿಶೀಲಿಸುತ್ತೇವೆ ಹೊರತು ಸ್ಮಾರ್ಟ್‌ಪೋನ್ ಬ್ಯಾಟರಿಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದಿರುವುದಿಲ್ಲ. ಹಾಗಾಗಿ, ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವಂತೆ ಮಾಡಲು, ಚಾರ್ಜ್ ಉಳಿಕೆಗೆ ಕೆಲವು ಉಪಾಯಗಳನ್ನು ತಿಳಿಯಬೇಕಿದೆ.!!

ಸ್ಮಾರ್ಟ್‌ಪೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ?..ತಜ್ಞರು ಹೇಳಿದ ಕಾರಣಗಳು ಇವು?

ಹಾಗಾದರೆ, ಸ್ಮಾರ್ಟ್‌ಫೋನ್ ಬ್ಯಾಟರಿ ಹೆಚ್ಚು ಕಾಲ ಉಳಿಯುವಂತೆ ಮಾಡುವುದು ಹೇಗೆ? ಮೊಬೈಲ್ ಬ್ಯಾಟರಿ ಚಾರ್ಜ್ ಉಳಿಕೆಗೆ ಇರುವ ಉಪಾಯಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಬ್ಯಾಟರಿ ಚಾರ್ಜ್ ಉಳಿಸಲು ಮೊಬೈಲ್ ತಜ್ಞರು ಬ್ಯಾಟರಿ ಏನೆಲ್ಲಾ ಸಲಹೆಗಳನ್ನು ನೀಡಿದ್ದಾರೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ವೈಬ್ರೇಷನ್ ಆಫ್ ಮಾಡಿ!!

ವೈಬ್ರೇಷನ್ ಆಫ್ ಮಾಡಿ!!

ಸ್ಮಾರ್ಟ್‌ಫೋನ್ ವೈಬ್ರೇಟ್ ರಿಂಗ್ ಆಗುವ ರೀತಿ ಸೆಟ್ಟಿಂಗ್ಸ್ ಬೇಡವೇ ಬೇಡ. ಏಕೆಂದರೆ, ವೈಬ್ರೇಷನ್ ಎಷ್ಟು ಜೋರಾಗಿ ಇರುತ್ತದೋ ಅಷ್ಟೇ ಹೆಚ್ಚು ಬ್ಯಾಟರಿ ಬಳಕೆಯಾಗುತ್ತದೆ. ಪೋನಿನಲ್ಲಿ ವೈಬ್ರೇಷನ್ ಹುಟ್ಟಿಹಾಕಲು ಇರುವ ಸಾಧನವೇ ಬೇರೆ ಇರುವುದರಿಂದ ಬ್ಯಾಟರಿ ಬಹಳ ವೇಗವಾಗಿ ವಿನಿಯೋಗವಾಗುತ್ತದೆ.

ಲೊಕೇಷನ್ ಸರ್ವೀಸ್ ಬಳಕೆ ಬೇಡ!!

ಲೊಕೇಷನ್ ಸರ್ವೀಸ್ ಬಳಕೆ ಬೇಡ!!

ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಸಲು ಲೊಕೇಷನ್ ಸರ್ವೀಸ್ ಬಳಕೆ ಮಾಡದಿರುವುದು ಉತ್ತಮ. ಏಕೆಂದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಲೊಕೇಷನ್ ಸರ್ವೀಸ್ ಬಳಕೆ ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡಿಕೊಳ್ಳಲಿದೆ. ಹಾಗಾಗಿ, ಬ್ಯಾಟರಿ ಸೇವಿಂಗ್ ಮೋಡ್‌ನಲ್ಲಿ ಲೊಕೇಷನ್ ಸರ್ವೀಸ್ ಬಳಸಿದರೆ ಒಳ್ಳೆಯದು.

ನೋಟಿಫಿಕೇಷನ್‌ಗಳಿಗೆ ಗುಡ್‌ಬೈ ಹೇಳಿ!!

ನೋಟಿಫಿಕೇಷನ್‌ಗಳಿಗೆ ಗುಡ್‌ಬೈ ಹೇಳಿ!!

ಒಂದು ಅಂದಾಜಿನ ಪ್ರಕಾರ ಪ್ರತಿಯೋರ್ವರ ಸ್ಮಾರ್ಟ್‌ಪೋನಿಗೆ ಪ್ರತಿದಿನ 50 ಕ್ಕೂ ಹೆಚ್ಚು ನೋಟಿಫಿಕೇಷನ್‌ಗಳು ಬರುತ್ತವೆಯಂತೆ. ಮೆಸೇಜ್, ಆಪ್‌ಗಳು ಹೀಗೆ ಹಲವು ನೋಟಿಫಿಕೇಷನ್‌ಗಳು ಬ್ಯಾಟರಿಯನ್ನು ತಿನ್ನುತತ್ತಿವೆ. ಹಾಗಾಗಿ, ಅಗತ್ಯಗತ್ಯವೆನಿಸಿದ ಇಮೇಲ್ ನೋಟಿಫಿಕೇಷನ್ ಮಾತ್ರ ಎನೇಬಲ್ ಮಾಡಿ ಬ್ಯಾಟರಿ ಉಳಿಸಿಕೊಳ್ಳಿ.!!

ಸ್ಕ್ರೀನ್ ಟೈಮ್ ಔಟ್!!

ಸ್ಕ್ರೀನ್ ಟೈಮ್ ಔಟ್!!

ನಿಮಗೆ ಗೊತ್ತಾ? ಮೊಬೈಲ್ ಟಾರ್ಚ್ ಆನ್ ಆದಾಗ ಬಳಕೆಯಾಗುವ ಬ್ಯಾಟರಿ ಶಕ್ತಿಗಿಂತ ಸ್ಕ್ರೀನ್ ಆನ್ ಆಗಿದ್ದಾಗ ಹೆಚ್ಚು ಬ್ಯಾಟರಿ ಶಕ್ತಿ ಖಾಲಿಯಾಗುತ್ತದೆ.!! ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನ್ ಯಾವುದೇ ಆಗಿರಲಿ ಸ್ಕ್ರೀನ್ ಟೈಮ್ ಔಟ್ ಸೆಟ್ ಮಾಡುವಾಗ ಅತೀ ಕಡಿಮೆ ಅವಧಿಯ ಟೈಮ್ ಔಟ್ ಸೆಟ್ ಮಾಡಿ ಬ್ಯಾಟರಿಯನ್ನು ಉಳಿಸಿ.!!

ಬ್ಲೂಟೂತ್ ಮತ್ತು ವೈಫೈ!!

ಬ್ಲೂಟೂತ್ ಮತ್ತು ವೈಫೈ!!

ಬ್ಯಾಟರಿ ಹೆಚ್ಚು ಹೊತ್ತು ಬಾಳಿಕೆ ಬರುವಂತೆ ಮಾಡಲು ಬ್ಲೂಟೂತ್ ಮತ್ತು ವೈಫೈಗಳನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿಕೊಳ್ಳಿ. ಕೆಲವೊಮ್ಮೆ ಈ ಎಲ್ಲಾ ಆಯ್ಕೆಗಳನ್ನು ನಿಮಗೆ ಗೊತ್ತಿಲ್ಲದೇ ನೀವು ಆನ್ ಮಾಡಿರುವುದರಿಂದ ನಿಮ್ಮ ಬ್ಯಾಟರಿ ನಿಮಗೇ ಗೊತ್ತಿಲ್ಲದಂತೆ ಖಾಲಿಯಾಗುತ್ತಿರುತ್ತದೆ.!!

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ವೈರ್‌ಲೆಸ್ ಚಾರ್ಜಿಂಗ್ ಬೇಡ!!

ವೈರ್‌ಲೆಸ್ ಚಾರ್ಜಿಂಗ್ ಬೇಡ!!

ವೈರ್‌ಲೆಸ್ ಚಾರ್ಜರ್ ಬಳಸುವುದು ಸುಲಭ ಆಗಿದ್ದರೂ ಫೋನ್ ಬೇಗನೆ ಬಿಸಿಯಾಗುತ್ತದೆ. ಇನ್ನು ಫಾಸ್ಟ್ ಚಾರ್ಜ್‌ರ್‌ಗಳ ಕಥೆಯೂ ಇದೇ ಆಗಿರುವುದರಿಂದ ವೈರ್‌ಲೆಸ್ ಮತ್ತು ಫಾಸ್ಟ್ ಚಾರ್ಜಿಂಗ್ ಅನ್ನು ದೂರವಿಡಿ. ನೆನಪಿಡಿ ವೈರ್‌ಲೆಸ್ ಮತ್ತು ಫಾಸ್ಟ್ ಚಾರ್ಜಿಂಗ್ ಎರಡೂ ಬ್ಯಾಟರಿಗೆ ಹಾನಿಯುಂಟು ಮಾಡುತ್ತವೆ.!!

Best Mobiles in India

English summary
Dump unnecessary home screen widgets and live wallpaper.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X