ಒಂದು ಮೆಸೇಜ್ ಮೂಲಕ ನಿಮ್ಮ ಆಧಾರ್ ಎಷ್ಟು ಸೇಫ್ ಎಂದು ತಿಳಿಯಬಹುದು!!
ಶೀಘ್ರವೇ ಮೊಬೈಲ್ ಗ್ರಾಹಕರು ಇನ್ನು ಮುಂದೆ ತಮ್ಮ ಆಧಾರ್ ಸಂಖ್ಯೆಗೆ ಎಷ್ಟು ಸಿಮ್ ಜೋಡಣೆಯಾಗಿವೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾದ ಸೇವೆಯನ್ನು ತರಲು ಮುಂದಾಗಿದೆ.!!
ಗ್ರಾಹಕರ ಹಿತರಕ್ಷಣೆಗಾಗಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಹೊಸದೊಂದು ಆಲೋಚನೆ ಮಾಡಿದೆ. ಶೀಘ್ರವೇ ಮೊಬೈಲ್ ಗ್ರಾಹಕರು ಇನ್ನು ಮುಂದೆ ತಮ್ಮ ಆಧಾರ್ ಸಂಖ್ಯೆಗೆ ಎಷ್ಟು ಸಿಮ್ ಜೋಡಣೆಯಾಗಿವೆ ಎಂಬುದನ್ನು ಸುಲಭವಾಗಿ ತಿಳಿಯಬಹುದಾದ ಸೇವೆಯನ್ನು ತರಲು ಮುಂದಾಗಿದೆ.!!
ಹೌದು, ಗ್ರಾಹಕರಿಗೆ ಹೊಸ ಸಿಮ್ ವಿತರಣೆಯ ವೇಳೆ ಬೇರೆ ಗ್ರಾಹಕರ ಆಧಾರ್ ಸಂಖ್ಯೆಯನ್ನು ಈ ಸಿಮ್‌ಗಳ ದೃಢೀಕರಣಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಗುರುತರ ಆರೋಪದ ಬಗ್ಗೆ ಕೆಲವು ಕಂಪನಿಗಳ ಪ್ರತಿನಿಧಿಗಳು ಮತ್ತು ಮಾರಾಟಗಾರರ ವಿರುದ್ಧ ದೂರು ಕೇಳಿ ಬಂದ ಕಾರಣ ಆಧಾರ್ ಪ್ರಾಧಿಕಾರ ಈ ನಿರ್ಧಾರ ಮಾಡಿದೆ.!!

ಸಿಮ್ ಪಡೆಯುವಾಗ ಗ್ರಾಹಕರು ದೃಢೀಕರಣಕ್ಕಾಗಿ ನೀಡುವ ಆಧಾರ್ ಸಂಖ್ಯೆಯನ್ನೇ ಇತರ ಗ್ರಾಹಕರಿಗೂ ಬಳಸುವುದನ್ನು ತಡೆಯಲು ಈ ಸೇವೆ ಶೀಘ್ರವೇ ಜಾರಿಗೆ ಬರುತ್ತದೆ. ಆಧಾರ್ ಪ್ರಾಧಿಕಾರ ಇದೇ 15ರ ಒಳಗಾಗಿ ಹೊಸ ಸೇವೆ ಒದಗಿಸುವಂತೆ ಎಲ್ಲ ಸೇವಾದಾತ ಕಂಪನಿಗಳಿಗೆ ಪ್ರಾಧಿಕಾರ ಗಡುವು ನೀಡಿದೆ.
ಪ್ರತಿಯೋರ್ವ ಗ್ರಾಹಕನು ಕೂಡ ತನ್ನ ಆಧಾರ್ ಸಂಖ್ಯೆಯೊಂದಿಗೆ ಯಾವ ಮೊಬೈಲ್ ಸಿಮ್ ಜೋಡಣೆಯಾಗಿದೆ ಎನ್ನುವುದನ್ನು ಒಂದು ಎಸ್‌ಎಂಎಸ್ ಮೂಲಕ ಪರಿಶೀಲಿಸಲು ಸಾಧ್ಯವಾಗುವಂತಹ ವ್ಯವಸ್ಥೆ ಇದಾಗಿದ್ದು, ಇನ್ಮುಂದೆ ಒಂದೇ ಒಂದು ಮೆಸೇಜ್ ಮೂಲಕ ನಿಮ್ಮ ಆಧಾರ್ ಎಷ್ಟು ಸೇಫ್ ಎಂದು ತಿಳಿಯಬಹುದಾಗಿದೆ.!!

ವಿಶ್ವದ ಮೊದಲ 16,000mAh ಬ್ಯಾಟರಿ ಸ್ಮಾರ್ಟ್‌ಫೋನ್ ನೋಡಿ ಬೆಚ್ಚಿತು ಜಗತ್ತು!!
ವಿಶ್ವ ಮೊಬೈಲ್ ಮಾರುಕಟ್ಟೆಯೇ ಬೆಚ್ಚಿಬೀಳುವಂತಹ ಮತ್ತೊಂದು ಸ್ಮಾರ್ಟ್‌ಫೋನ್ ಇನ್ನೇನು ಶೀಘ್ರದಲ್ಲಿಯೇ ಮಾರುಕಟ್ಟೆಗೆ ಕಾಲಿಡಲಿದೆ.!! 'ಎನರ್ಜೈಸರ್' ಎಂಬ ಬ್ರ್ಯಾಂಡ್ ಹೆಸರಿನ ಸ್ಮಾರ್ಟ್‌ಫೋನ್ ಒಂದು 2018ನೇ ವರ್ಷದ ಮೊಬೈಲ್ ಕಾಂಗ್ರಸ್‌ನಲ್ಲಿ ಬಿಡುಗಡೆಯಾಗಿ ಒಂದೇ ದಿನದಲ್ಲಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಲು ಕಾರಣವಾಗಿದೆ.!!
ಅವೆನಿರ್ ಮೊಬೈಲ್ಸ್ ಎಂಬ ಕಂಪೆನಿ ಈ ವರ್ಷದ ಮೊಬೈಲ್ ಮೇಳದಲ್ಲಿ ಮೊಟ್ಟ ಮೊದಲ ಬಾರಿಗೆ ಮೂರು ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಒಂದು ಸ್ಮಾರ್ಟ್‌ಪೋನ್ 16,000mAh ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಪೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.!!
16,000mAh ಬ್ಯಾಟರಿಯನ್ನು ಮಾತ್ರವಲ್ಲದೇ 5.99 ಇಂಚ್ ಹೆಚ್‌ಡಿ ಡಿಸ್‌ಪ್ಲೇ ಪ್ಲಸ್, 6GB RAM ಮತ್ತು ನಾಲ್ಕು ಕ್ಯಾಮೆರಾಗಳನ್ನು ಹೊಂದಿರುವ ಸ್ಮಾರ್ಟ್‌ಪೋನ್ ಇದೀಗ ವಿಶ್ವದೆಲ್ಲೆಡೇ ವೈರಲ್ ಆಗಿದೆ. ಹಾಗಾದರೆ, 16,000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಯಾವುದು? ಇತರೆ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಪವರ್ ಮ್ಯಾಕ್ಸ್ ಪಿ16ಕೆ ಪ್ರೊ!!
16,000mAh ಬ್ಯಾಟರಿಯನ್ನು ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಯನ್ನು ಎನರ್ಜೈಸರ ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಸ್ಮಾರ್ಟ್‌ಪೋನ್ ಪಡೆದುಕೊಂಡಿದೆ. ಈಗಾಗಲೇ ವಿಶ್ವದೆಲ್ಲೆಡೆ ವೈರಲ್ ಆಗಿರುವ ಈ ಫೋನ್ ಕನಿಷ್ಟ 6 ರಿಂದ 7 ದಿನಗಳವರೆಗೆ ಬ್ಯಾಟರಿ ಶಕ್ತಿಯನ್ನು ಒದಗಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ಎನರ್ಜೈಸರ ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಸ್ಮಾರ್ಟ್‌ಪೋನ್ 5.99 ಇಂಚ್ ಹೆಚ್‌ಡಿ ಡಿಸ್‌ಪ್ಲೇ ಪ್ಲಸ್ ಹೊಂದಿದೆ. ಸ್ಮಾರ್ಟ್‌ಫೋನ್ ಸ್ಕ್ರೀನ್ 1080x2160p ರೆಸಲ್ಯೂಶನ್ನ್ಲ್ಲಿರುವವುದರಿಂದ ಮಲ್ಟಿಮೀಡಿಯಾಗೆ ಸ್ಮಾರ್ಟ್‌ಫೋನ್ ಅತ್ಯುತ್ತಮ ರೂಪಿತವಾಗಿರುವ ಈ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್8 ಸ್ಮಾರ್ಟ್‌ಪೋನ್ ವಿನ್ಯಾಸವನ್ನು ಹೊಂದಿದೆ ಎನ್ನಬಹುದು.!!

ಪ್ರೊಸೆಸರ್ ಮತ್ತು RAM!!
2.5GHz ಮೀಡಿಯಾ ಟೆಕ್ ಹೀಲಿಯೊ P25 ಆಕ್ಟಾ-ಕೋರ್ ಪ್ರೊಸೆಸರ್ ಮತ್ತು 6 ಜಿಬಿ RAM ಮೂಲಕ ಎನರ್ಜೈಸರ ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬರುತ್ತಿದೆ. 128 ಜಿಬಿ ಆಂತರಿಕ ಸ್ಟೋರೇಜ್ ಹೊಂದಿರುವ ಈ ಫೋನಿನ ಮೆಮೊರಿಯನ್ನು ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಿಕೊಳ್ಳಬಹುದು.!!


ನಾಲ್ಕು ಕ್ಯಾಮೆರಾಗಳು!!
13 ಮೆಗಾಪಿಕ್ಸೆಲ್ ಮತ್ತು 5 ಮೆಗಾಪಿಕ್ಸೆಲ್ ಇರುವ ಡ್ಯುಯಲ್ ಫ್ರಂಟ್ ಕ್ಯಾಮೆರಾಗಳು ಹಾಗೂ 16 ಮೆಗಾಪಿಕ್ಸೆಲ್ ಮತ್ತು 13 ಮೆಗಾಪಿಕ್ಸೆಲ್ ಡ್ಯೂಯಲ್ ರಿಯರ್ ಕ್ಯಾಮೆರಾಗಳು ಸೇರಿದಂತೆ ನಾಲ್ಕು ಕ್ಯಾಮೆರಾಗಳನ್ನು ಪವರ್ ಮ್ಯಾಕ್ಸ್ ಪಿ16ಕೆ ಪ್ರೊ ಫೋನಿನಲ್ಲಿ ಅಳವಡಿಸಿ ವಿಶ್ವ ಮೊಬೈಲ್ ಮಾರುಕಟ್ಟೆಗೆ ಅವೆನಿರ್ ಮೊಬೈಲ್ಸ್ ಶಾಕ್ ನೀಡಿದೆ.!!

ಇತರೆ ಏನೆಲ್ಲಾ ಫೀಚರ್ಸ್?
5.99-ಇಂಚಿನ FHD + ಐಪಿಎಸ್ ಡಿಸ್ಪ್ಲೇ, 2160 x 1080 ಪಿಕ್ಸೆಲ್ ರೆಸೆಲ್ಯೂಷನ್, 403 ಪಿಪಿ, 164.2 x 79.4 x 12.15mm ಆಯಾಮದಂತಹ ಫೀಚರ್ಸ್ ಹೊಂದಿರುವ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 8.0 ಓರಿಯೊ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಈಗಷ್ಟೇ ಬಿಡುಗಡೆಯಾಗಿರುವ ಈ ಫೋನಿನ ಬೆಲೆ ಇನ್ನು ನಿಗದಿಯಾಗಿಲ್ಲ.!!


Click it and Unblock the Notifications








