Home
ಟೆಕ್ ನೌಕರಿ

​​Budget 2024: ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಲೈವ್ ವೀಕ್ಷಿಸುವುದು ಹೇಗೆ?

Union Budget 2024: ದಿ ವೇಟ್ ಈಸ್ ಓವರ್..! ನಾಳೆ ಮೋದಿ 3.0 (Narendra Modi) ಸರ್ಕಾರದ ಮೊದಲ ಬಜೆಟ್ (Union Budget 2024) ಮಂಡನೆಯಾಗಲಿದೆ. ಈ ಬಜೆಟ್ ನತ್ತ ಎಲ್ಲರ ಚಿತ್ತ ನೆಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಂಸತ್ತಿನಲ್ಲಿ ತಮ್ಮ ದಾಖಲೆಯ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕರ್ನಾಟಕದ ಜನತೆ ಈ ಬಜೆಟ್ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಬಜೆಟ್‌ನಲ್ಲಿ ಮಧ್ಯಮ ವರ್ಗ ಹಾಗೂ ಯುವಜನರಿಗೆ ಸಾಕಷ್ಟು ಕೊಡುಗೆ ಸಿಗುವ ನಿರೀಕ್ಷೆಯಿದೆ. ಹಾಗಿದ್ರೆ, ಬಜೆಟ್‌ ಅನ್ನು ಯಾವಾಗ, ಹೇಗೆ, ಎಲ್ಲಿ ಲೈವ್ ಆಗಿ ವೀಕ್ಷಿಸಬೇಕು? ಎನ್ನುವುದನ್ನು ತಿಳಿಯೋಣ ಬನ್ನಿ.
​​
ಲೋಕಸಭೆ ಬಜೆಟ್ ಅಧಿವೇಶನ ಈಗಾಗಲೇ (ಜುಲೈ 22) ಆರಂಭವಾಗಿದೆ. ಕೇಂದ್ರ ಬಜೆಟ್ 2024-25 ಅನ್ನು ಜುಲೈ 23ರ ಮಂಗಳವಾರ ಮಂಡನೆ ಮಾಡಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಬೆಳಗ್ಗೆ 11 ಗಂಟೆಗೆ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ. ಇದು 2024ರ ಲೋಕಸಭೆ ಚುನಾವಣೆ ಮುಗಿದು, ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮಂಡನೆಯಾಗುತ್ತಿರುವ ಪೂರ್ಣ ಪ್ರಮಾಣದ ಬಜೆಟ್ ಆಗಿದೆ.

​​Budget 2024: ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಲೈವ್ ವೀಕ್ಷಿಸುವುದು ಹೇಗೆ?

ತಂತ್ರಜ್ಞಾನ ಲೋಕಕ್ಕೆ ಏನೆಲ್ಲಾ ನಿರೀಕ್ಷೆಗಳಿವೆ?

ಇನ್ನೂ, 2024ರ ಕೇಂದ್ರ ಬಜೆಟ್‌ನಲ್ಲಿ (Budget 2024) ತಂತ್ರಜ್ಞಾನ ವಲಯಕ್ಕೆ ಹೆಚ್ಚು ಕೊಡುಗೆ ನೀಡುವ ಸಾಧ್ಯತೆಯಿದೆ. ಎಐ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದಲ್ಲದೆ, ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಇಳಿಕೆಯಾಗುವ ಸಾಧ್ಯೆತೆಯಿದೆ. ಲ್ಯಾಪ್‌ಟಾಪ್‌, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳ ಮೇಲೆ ಸುಂಕಗಳನ್ನು ಇಳಿಕೆ ಬಗ್ಗೆ ತಜ್ಞರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಎಲ್ಲಾ ಗ್ಯಾಜೆಟ್ ಸಾಧನಗಳ ಸುಂಕದ ದರ ಇಳಿಕೆಯಾದರೆ, ಜನರಿಗೂ ಲಾಭವಾಗಲಿದೆ. ಬನ್ನಿ ಬಜೆಟ್ ವೀಕ್ಷಣೆ ಬಗ್ಗೆ ತಿಳಿಯೋಣ.

ಬಜೆಟ್ 2024 ದಿನಾಂಕ

ಜುಲೈ 23, 2024: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಅನ್ನು ಮಂಡಿಸಿದ್ದರು. ನಾಳೆ ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಚೊಚ್ಚಲ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.

ಬಜೆಟ್ ಸಮಯ

ಲೋಕಸಭೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಯಿಂದ ಬಜೆಟ್ ಮಂಡನೆ ಆರಂಭವಾಗಲಿದೆ.

​​Budget 2024: ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಲೈವ್ ವೀಕ್ಷಿಸುವುದು ಹೇಗೆ?

Budget 2024 ಲೈವ್ ಸ್ಟ್ರೀಮಿಂಗ್: ವೀಕ್ಷಿಸುವುದು ಹೇಗೆ?

ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವಾಲಯದ ಅಧಿಕೃತ ವೆಬ್‌ಸೈಟ್, ಸಂಸದ್ ಟಿವಿ (Sansad TV), ದೂರದರ್ಶನ ಮತ್ತು ಸರ್ಕಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ವೀಕ್ಷಣೆ ಮಾಡಬಹುದು.

ಬಜೆಟ್ 2024 ಪೂರ್ಣ ಮಾಹಿತಿ PDFನಲ್ಲಿ ಲಭ್ಯ

ಬಜೆಟ್ 2024ರ ಮಂಡನೆಯ ನಂತರ, ಕೇಂದ್ರ ಬಜೆಟ್ 2024 ಪೂರ್ಣ ವಿವರಗಳ PDF ಫೈಲ್ ಮತ್ತು ಕೇಂದ್ರ ಬಜೆಟ್ 2024 ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಡಿಜಿಟಲ್ ವೀಕ್ಷಕರು, ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.in ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಎರಡರಲ್ಲೂ ಈ ದಾಖಲೆಗಳನ್ನು ನೋಡಬಹುದು.

ಹೊಸ ದಾಖಲೆ ಸೃಷ್ಟಿಸುತ್ತಿರುವ ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ಮೊರಾಜಿ ದೇಸಾಯಿ ಅವರ ದಾಖಲೆಯನ್ನು ವಿತ್ತ ಸಚಿವರು ಮುರಿಯಲಿದ್ದಾರೆ.

ಒಟ್ಟಾರೆ, ಈ ಬಜೆಟ್‌ನಿಂದ ತಂತ್ರಜ್ಞಾನ ಲೋಕ ಮತ್ತು ಕೈಗಾರಿಕೆಗಳು ಕೆಲವು ನಿರೀಕ್ಷೆಗಳನ್ನು ಹೊಂದಿವೆ. ಪ್ರಮಾಣಿತ ಕಡಿತದ ಮೊತ್ತವನ್ನು ಹೆಚ್ಚಿಸುವುದು ಮತ್ತು ವರ್ಧಿತ ಹೋಮ್ ಲೋನ್ ಪರ್ಕ್‌ಗಳಂತಹ ತೆರಿಗೆ ಪ್ರಯೋಜನಗಳನ್ನು ನಿರೀಕ್ಷಿಸಲಾಗಿದೆ. ಇದು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ. ವ್ಯವಹಾರವನ್ನು ಸುಲಭಗೊಳಿಸುವತ್ತ ಗಮನಹರಿಸುವ ನಿರೀಕ್ಷೆಯಿದೆ. ತಂತ್ರಜ್ಞಾನ ವಲಯಕ್ಕೆ ಏನೆಲ್ಲಾ ಕೊಡುಗೆ ಸಿಗಲಿದೆ? ಎನ್ನುವುದನ್ನು ಕಾದುನೋಡಬೇಕಿದೆ.

Best Mobiles in India

English summary
Union Budget 2024: When, how, where to watch Budget Live Streaming?: Check details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+