Budget 2025: ನಾಳೆ ಮೋದಿ ಲೆಕ್ಕ ಬಹಿರಂಗ; ಬಜೆಟ್ ಮಂಡನೆ ಯಾವಾಗ? ಉಚಿತ ಲೈವ್ ವೀಕ್ಷಣೆ ಹೇಗೆ?
Union Budget 2025: ದೇಶದ ಜನರ ಕಾಯುವಿಕೆ ಮುಗಿಯಿತು! ನಾಳೆ (ಫೆಬ್ರವರಿ 1) ಮೋದಿ 3.0 (Narendra Modi) ಸರ್ಕಾರದ ಬಹುನಿರೀಕ್ಷಿತ ಬಜೆಟ್ (Union Budget 2025) ಮಂಡನೆಯಾಗಲಿದೆ. ಎಲ್ಲರ ಚಿತ್ತ ಕೇಂದ್ರ ಬಜೆಟ್‌ನತ್ತ ನೆಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್ತಿನಲ್ಲಿ ತಮ್ಮ ದಾಖಲೆಯ 8ನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ರಾಜ್ಯದ ಜನತೆ ಈ ಬಜೆಟ್ ಬಗ್ಗೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಬಜೆಟ್‌ನಲ್ಲಿ ಮಧ್ಯಮ ವರ್ಗ ಹಾಗೂ ಯುವಜನರಿಗೆ ಸಾಕಷ್ಟು ಕೊಡುಗೆ ಸಿಗುವ ನಿರೀಕ್ಷೆಯಿದೆ. ಬನ್ನಿ, ಬಜೆಟ್ ಯಾವಾಗ? ನೀವು ಹೇಗೆ, ಎಲ್ಲಿ ಉಚಿತವಾಗಿ ಲೈವ್ ವೀಕ್ಷಿಸಬಹುದು ಎನ್ನುವುದನ್ನು ತಿಳಿಯೋಣ ಬನ್ನಿ.
ಹೌದು, ನಾಳೆ (ಫೆ.1ರಂದು) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿ ಮೋದಿ ಸರ್ಕಾರದ 3ನೇ ಅವಧಿಯ ಬಜೆಟ್ ಮಂಡಿಸಲಿದ್ದಾರೆ. ಈ ಮೂಲಕ ನಿರ್ಮಲಾ ಸೀತಾರಾಮನ್ ಸತತ 8ನೇ (7 ಪೂರ್ಣಾವಧಿ, 2024ರ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್) ಬಾರಿ ಬಜೆಟ್ ಮಂಡಿಸಿದ ದಾಖಲೆ ನಿರ್ಮಿಸಲಿದ್ದಾರೆ. ಇನ್ನು 3 ಬಜೆಟ್ ಮಂಡಿಸಿದರೆ ಒಟ್ಟು 11 ಬಜೆಟ್ ಮಂಡಿಸಿದ ಸಾರ್ವಕಾಲಿಕ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ಸೃಷ್ಟಿಸಲಿದ್ದಾರೆ. ವಿಶೇಷವೆಂದರೆ, ಮಾಜಿ ಪ್ರಧಾನಿ ದಿವಂಗತ ಮೊರಾರ್ಜಿ ದೇಸಾಯಿ 10 ಬಾರಿ ಬಜೆಟ್ ಮಂಡಿಸಿದ್ದರು.

ಕೇಂದ್ರ ಬಜೆಟ್ 2025 ನಲ್ಲಿ (Budget 2024) ತಂತ್ರಜ್ಞಾನ ವಲಯಕ್ಕೆ ಹೆಚ್ಚು ಕೊಡುಗೆ ನೀಡುವ ಸಾಧ್ಯತೆಯಿದೆ. ಎಐ ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಇದಲ್ಲದೆ, ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳ ಬೆಲೆ ಇಳಿಕೆಯಾಗುವ ಸಾಧ್ಯೆತೆಯಿದೆ. ಲ್ಯಾಪ್‌ಟಾಪ್, ಎಲ್‌ಇಡಿ ಟಿವಿ, ಕ್ಯಾಮೆರಾ ಲೆನ್ಸ್‌ಗಳ ಮೇಲೆ ಸುಂಕಗಳನ್ನು ಇಳಿಕೆ ಬಗ್ಗೆ ತಜ್ಞರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಎಲ್ಲಾ ಗ್ಯಾಜೆಟ್ ಸಾಧನಗಳ ಸುಂಕದ ದರ ಇಳಿಕೆಯಾದರೆ, ಜನರಿಗೂ ಲಾಭವಾಗಲಿದೆ. ಬಜೆಟ್ ಉಚಿತ ವೀಕ್ಷಣೆ ಬಗ್ಗೆ ತಿಳಿಯಲು ಮುಂದೆ ಓದಿ.
ಬಜೆಟ್ 2025 ದಿನಾಂಕ, ಸಮಯ
ಫೆಬ್ರವರಿ 1, 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಾಳೆ ಬೆಳಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2025 ಮಂಡಿಸಲಿದ್ದಾರೆ.
ಬಜೆಟ್ 2025 ಲೈವ್ ಸ್ಟ್ರೀಮಿಂಗ್: ಉಚಿತ ವೀಕ್ಷಣೆ ಎಲ್ಲಿ?
ಕೇಂದ್ರ ಬಜೆಟ್ 2025 ಅನ್ನು ದೂರದರ್ಶನ (ಡಿಡಿ ನ್ಯೂಸ್), ಹಣಕಾಸು ಸಚಿವಾಲಯದ ಅಧಿಕೃತ ವೆಬ್‌ಸೈಟ್, ಸಂಸದ್ ಟಿವಿ (Sansad TV) ಮತ್ತು ಸರ್ಕಾರದ ಅಧಿಕೃತ ಯೂಟ್ಯೂಬ್ (YouTube) ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಬೇರೆ ದೇಶದ ವೀಕ್ಷಕರಿಗೆ ಲೈವ್ ಸ್ಟ್ರೀಮಿಂಗ್ ಸಹ ಒದಗಿಸಲಾಗುತ್ತದೆ.
ಸೋಶಿಯಲ್ ಮೀಡಿಯಾಗಳಲ್ಲಿ ಕ್ಷಣಕ್ಷಣದ ಮಾಹಿತಿ ಲಭ್ಯ
ಸಾಮಾಜಿಕ ಜಾಲತಾಣಗಳಾದ ಎಕ್ಸ್ (Twitter), ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್
(Instagram) ಸೇರಿದಂತೆ ಕೆಲವು ಪ್ಲಾಟ್‌ಫಾರ್ಮ್‌ಗಳು ಲೈವ್ ಅಪ್ಡೇಟ್ ವೀಕ್ಷಿಸಬಹುದು. ಹಾಗೆಯೇ ತಜ್ಞರ ಅಭಿಪ್ರಾಯಗಳನ್ನು ನೋಡಬಹುದು.
PDFನಲ್ಲಿ ಬಜೆಟ್ 2025 ಸಂಪೂರ್ಣ ಮಾಹಿತಿ ಸಿಗುತ್ತೆ
ಬಜೆಟ್ ಮಂಡನೆಯ ಬಳಿಕ, ಕೇಂದ್ರ ಬಜೆಟ್ 2025 ಸಂಪೂರ್ಣ ವಿವರಗಳ ಪಿಡಿಎಫ್ (PDF) ಫೈಲ್ ಮತ್ತು ಕೇಂದ್ರ ಬಜೆಟ್ 2025 ದಾಖಲೆಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಡಿಜಿಟಲ್ ವೀಕ್ಷಕರು, ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.in ನಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆ ಎರಡರಲ್ಲೂ ಈ ದಾಖಲೆಗಳನ್ನು ನೋಡಬಹುದು.
ಒಟ್ಟಾರೆ, ಕೇಂದ್ರ ಬಜೆಟ್ 2025 ಬಗ್ಗೆ ತಂತ್ರಜ್ಞಾನ ಕ್ಷೇತ್ರ ಕೆಲವು ನಿರೀಕ್ಷೆಗಳನ್ನು ಹೊಂದಿದೆ. ಪ್ರಧಾನಿ ಮೋದಿ ಅವರು ತಂತ್ರಜ್ಞಾನ ವಲಯಕ್ಕೆ ಏನೆಲ್ಲಾ ಕೊಡುಗೆ ನೀಡಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.


Click it and Unblock the Notifications








