ಕೇಂದ್ರ ಬಜೆಟ್ ಮಾಹಿತಿಯನ್ನು ಯೂನಿಯನ್ ಬಜೆಟ್ ಆಪ್‌ನಲ್ಲಿ ಪಡೆಯುವುದು ಹೇಗೆ?
ಬಹು ನಿರೀಕ್ಷಿತ ಕೇಂದ್ರ ಬಜೆಟ್ ಇಂದು ಮಂಡನೆಯಾಗುತ್ತಿದೆ. ಆದರೆ ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗುತ್ತಿದೆ. ಕೊರೊನಾ ಸಂಕಷ್ಟದ ನಂತರ ಮಂಡನೆಯಾಗುತ್ತಿರುವ ಮೊದಲ ಕೇಂದ್ರ ಬಜೆಟ್ ಆಗಿರುವುದರಿಂದ ಸಾಕಷ್ಟು ನಿರೀಕ್ಷೆ ಗರಿಗೆದರಿದೆ. ಇನ್ನು ಈ ಬಜೆಟ್‌ನ ದಾಖಲೆಗಳು, ಬಜೆಟ್ ಮಾಹಿತಿಯನ್ನು ಮೇಡ್ ಇನ್ ಇಂಡಿಯಾ ಅಪ್ ಯೂನಿಯನ್ ಬಜೆಟ್ ಅಪ್ಲಿಕೇಶನ್ ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಹೌದು, ಕೇಂದ್ರ ಸರ್ಕಾರ 2021-22 ನೇ ಸಾಲಿನ ಹಣಕಾಸು ಬಜೆಟ್ ಇಂದು ಮಂಡನೆಯಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೂರನೇ ಭಾರಿಗೆ ಹಣಕಾಸು ಬಜೆಟ್ ಮಂಡಿಸುತ್ತಿದ್ದಾರೆ. ಸಾಕಷ್ಟು ಹೊಸತುಗಳಿಗೆ ಕಾರಣವಾಗಿರುವ ಈ ಬಜೆಟ್ ಕಂಪ್ಲೀಟ್ ಪೇಪರ್‌ಲೆಸ್ ಬಜೆಟ್ ಆಗಿದೆ. ಕೊರೊನಾ ಕಾರಣದಿಂದಾಗಿ ಪುಸ್ತಕ ರೂಪದಲ್ಲಿ ಬಜೆಟ್ ಪ್ರತಿಯನ್ನು ನೀಡುತ್ತಿಲ್ಲ. ಬದಲಾಗಿ ಯೂನಿಯನ್ ಬಜೆಟ್ ಅಪ್ಲಿಕೇಶನ್ ಅಲ್ಲಿ ಬಜೆಟ್ ಪರಿಪೂರ್ಣ ಮಾಹಿತಿ ದೊರೆಯಲಿದೆ. ಇನ್ನು ಬಜೆಟ್ ಅಪ್ಲಿಕೇಶನ್ ನಲ್ಲಿ ಬಜೆಟ್ ವಿಶೇಷತೆ ತಿಳಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಕೇಂದ್ರ ಬಜೆಟ್ ಮೊಬೈಲ್ ಅಪ್ಲಿಕೇಶನ್
ಕೇಂದ್ರ ಬಜೆಟ್ 2021-22 ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆಯಾಗುತ್ತಿದೆ. ಬಜೆಟ್ ಸಂಬಂಧಿತ ಮಾಹಿತಿ ಮತ್ತು ದಾಖಲೆಗಳನ್ನು ತಿಳಿದುಕೊಳ್ಳಲು ಯೂನಿಯನ್ ಬಜೆಟ್ ಅನ್ನು ಸರ್ಕಾರ ರೂಪಿಸಿದೆ. ಇನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಸ್ಮಾರ್ಟ್‌ಫೋನ್‌ಗಳನ್ನು ಈ ಅಪ್ಲಿಕೇಶನ್ ಬೆಂಬಲಿಸಲಿದೆ. ಸಂಸತ್ತಿನಲ್ಲಿ ಬಜೆಟ್ ಮಂಡನೆ ಆದ ನಂತರ ಬಜೆಟ್‌ನ ಎಲ್ಲಾ ದಾಖಲೆಗಳು ಮುಕ್ತ ರೀತಿಯಲ್ಲಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.

ಇನ್ನು ಈ ಮೊಬೈಲ್ ಅಪ್ಲಿಕೇಶನ್ 14 ಕೇಂದ್ರ ಬಜೆಟ್ ದಾಖಲೆಗಳಿಗೆ ಕಂಪ್ಲೀಟ್ ಎಂಟ್ರಿ ನೀಡುತ್ತದೆ. ಈ ದಾಖಲೆಗಳು ವಾರ್ಷಿಕ ಹಣಕಾಸು ಹೇಳಿಕೆ , ಹಣಕಾಸು ಮಸೂದೆ, ಧನಸಹಾಯಕ್ಕಾಗಿ ಬೇಡಿಕೆ (ಡಿಜಿ) ಯನ್ನು ಒಳಗೊಂಡಿರುತ್ತದೆ. ಇನ್ನು ಈ ಸರ್ಕಾರಿ ಅಪ್ಲಿಕೇಶನ್ ಅನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಜೊತೆಗೆ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ) ಅಭಿವೃದ್ಧಿಪಡಿಸಿದೆ. ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರ, ಎಲ್ಲಾ ದಾಖಲೆಗಳನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಆಗಲಿದೆ.

ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?
ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿ, NIC E-GOV ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಸರ್ಚ್ ಮಾಡಿರಿ. ನಂತರ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್ ಮಾಡಿರಿ. ಇದಲ್ಲದೆ ಬಳಕೆದಾರರು ಕೇಂದ್ರ ಬಜೆಟ್ ವೆಬ್ ಪೋರ್ಟಲ್ www.indiabudget.gov.in ಗೆ ಭೇಟಿ ನೀಡಬಹುದು. ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಲಿಂಕ್ ಇಲ್ಲಿ ಸಹ ಲಭ್ಯವಾಗಲಿದೆ. ಈ ಲಿಂಕ್ ಬಳಸಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಬಳಕೆದಾರರು ಅಪ್ಲಿಕೇಶನ್ ಪ್ರವೇಶಿಸಲು ಯಾವುದೇ ಲಾಗಿನ್ ಅಥವಾ ನೋಂದಣಿ ಅಗತ್ಯವಿಲ್ಲ. ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್ ಎಂಬೆಡೆಡ್ ಫೀಚರ್ಸ್‌ಗಳೊಂದಿಗೆ ಬಳಕೆದಾರ ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿದೆ. ಇದು ಬಳಕೆದಾರರಿಗೆ ಡೌನ್‌ಲೋಡ್ ಮಾಡಲು, ಹುಡುಕಲು, ಮುದ್ರಿಸಲು, ಬೈ ಡೈರೆಕ್ಷನಲ್ ಸ್ಕ್ರೋಲಿಂಗ್, ಜೂಮ್ ಇನ್ ಅಥವಾ ಡಾಕ್ಯುಮೆಂಟ್‌ಗಳು, ವಿಷಯಗಳ ಪಟ್ಟಿ ಮತ್ತು ಬಾಹ್ಯ ಲಿಂಕ್‌ಗಳನ್ನು ಅನುಮತಿಸುತ್ತದೆ. ಈ ಅಪ್ಲಿಕೇಶನ್ ಹಿಂದಿ ಮತ್ತು ಇಂಗ್ಲಿಷ್ ಎಂಬ ಎರಡು ಭಾಷೆಗಳಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.


Click it and Unblock the Notifications