Subscribe to Gizbot

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

Posted By:

ಮನೆಯಲ್ಲಿ ಕುಳಿತು ಉದ್ಯೋಗ ಮಾಡಬೇಕೆಂದು ಕನಸು ಕಾಣುತ್ತೀರಾ? ಪಾರ್ಟ್‌ ಟೈಮ್‌ ಕೆಲಸ ಮಾಡಬೇಕು ಎಂದು ಯೋಚಿಸಿಸುತ್ತೀರಾ ? ಹಾಗಾದ್ರೆ ಚಿಂತೆ ಬಿಡಿ. ನಿಮ್ಮನ್ನು ನೀವು ಉದ್ಯೋಗದಲ್ಲಿ ತೊಡಗಿಸಿಕೊಂಡು ಹಣ ಸಂಪಾದನೆ ಮಾಡಬಹುದು. ಚೆನ್ನಾಗಿ ಇಂಟರ್‌ನೆಟ್‌, ಸ್ವಲ್ಪ ಇಂಗ್ಲಿಷ್‌ ಭಾಷೆಯ ಹಿಡಿತವಿದ್ದರೇ ನೀವು ತಿಂಗಳಿಗೆ ಎರಡು ಅಂಕೆ ಸಂಬಳವನ್ನು ಆರಾಮವಾಗಿ ಸಂಪಾದಿಸಿಬಹುದು.

ಹೌದು ಕಣ್ರೀ.ಈ ಇಂಟರ್‌ನೆಟ್‌ ಯುಗದಲ್ಲಿ ಹೇಗೆ ಬೇಕಾದ್ರೂ ಹಣ ಸಂಪಾದಿಸಬಹುದು, ಹಣ ಸಂಪಾದಿಸಲು ಸ್ವಲ್ಪ ಟೆಕ್ನಿಕ್‌ ಗೊತ್ತಿದ್ರೆ ಆಯ್ತು ಅಷ್ಟೇ. ನಿಮ್ಮ ಕ್ರಿಯೇಟಿವಿಟಿ ಆಧಾರದ ಮೇಲೆ ಹಣ ಸಂಪಾದನೆ ಮಾಡಬಹುದು. ಜೊತೆಗೆ ನೀವು ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿದ್ರೂ ಹಣ ಸಂಪಾದನೆ ಮಾಡಬಹುದು. ಇಂಟರ್‌ನೆಟ್‌ ಒಂದು ನಿಮ್‌ ಜೊತೆ ಇದ್ರೆ ಯಾವ್ಯಾವ ವ್ಯವಹಾರ ಮಾಡಬಹುದು ಎಂಬುದಕ್ಕೆ ಕೆಲ ಮಾಹಿತಿಗಳಿವೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಕೆಲಸ ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಇ ಬುಕ್

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಚೆನ್ನಾಗಿ ಕಂಪ್ಯೂಟರ್‌ನಲ್ಲಿ ಬರೆಯುವವರಿಗೆ ಹೇಳಿ ಮಾಡಿಸಿದ ಕೆಲಸ. ಆನಲೈನ್‌ನಲ್ಲಿ ಸದ್ಯ ಫೇಮಸ್ಸು ಆಗುತ್ತಿರುವ ಕ್ಷೇತ್ರವಿದು. ಬರೆಯುವ ಮುನ್ನಾ ತನ್ನ ಓದುಗನ ಕ್ಷೇತ್ರ ಯಾವುದು ಎಂದು ತಿಳಿದು ಪುಸ್ತಕ ಬರೆದರಾಯ್ತು. ಭಾರತದಲ್ಲಿ ಈಗಷ್ಟೇ ಪ್ರಚಾರಕ್ಕೆ ಬರುತ್ತಿದೆ.ಭವಿಷ್ಯದಲ್ಲಿ ಭಾರೀ ಹಣಗಳಿಸುವ ಕ್ಷೇತ್ರವಿದು.

ವೆಬ್‌ಸೈಟ್‌ ಕ್ರಿಯೆಟ್ ಮಾಡಿ

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಟಿವಿ.ಮೊಬೈಲ್‌ ಕ್ರಾಂತಿ ಆಯ್ತು ಈಗ ನಡೆಯುತ್ತಿರುವುದು ಇಂಟರ್‌ನೆಟ್‌ ಕ್ರಾಂತಿ. ಹಾಗಾಗಿ ನ್ಯೂಸ್‌,ಪ್ರವಾಸ,ಆನ್‌ಲೈನ್‌ ಶಾಪಿಂಗ್‌....ವೆಬ್‌ಸೈಟ್‌ ಆರಂಭಿಸಿ. ಚೆನ್ನಾಗಿ ಪ್ಲ್ಯಾನ್‌ ಮಾಡಿ ಬಿಸಿನೆಸ್ ಮಾಡಿದ್ರೆ ಸಕ್ಸಸ್‌ ಗ್ಯಾರಂಟಿ.

ಸಮೀಕ್ಷೆ ಮಾಡಿ

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಈ ವ್ಯವಹಾರ ಮಾಡಬೇಕಾದ್ರೆ ನಿಮಗೆ ಬೇಕಾಗಿದ್ದು ಪರಿಚಯಸ್ಥರ ಇಮೇಲ್‌ಗಳು. ಈ ಮೇಲ್ ಮೂಲಕ ಯಾವ ವರ್ಗದ, ಯಾವ ಜನರ ಮೇಲೇಯೂ ಸಮೀಕ್ಷೆ ಮಾಡಬಹುದು. ಈ ರೀತಿ ಹಣ ಸಂಪಾದನೆ ಮಾಡಬೇಕಾದ್ರೆ ಮೊದಲು ಸಂಶೋಧನೆ ಅಂದರೆ ಏನು ? ಅದನ್ನು ಹೇಗೆ ಮಾಡುವುದು ? ಮಾಡಿದ ನಂತರ ಅದನ್ನು ಬರೆಯುವುದು ಹೇಗೆ ? ಇದನ್ನು ಸಂಪೂರ್ಣ ತಿಳಿದು ಆನ್‌ಲೈನ್‌ ಸಮೀಕ್ಷೆಗೆ ಕೆಲಸಕ್ಕೆ ಇಳಿದಿರೆ ಕೈ ತುಂಬಾ ಹಣ ಸಂಪಾದಿಸಬಹುದು.

ಬ್ಲಾಗ್‌ನಲ್ಲಿ ಬರೆಯಿರಿ

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಮೊದಲು ನಿಮ್ಮ ಟಾರ್ಗೆಟ್‌ ಪ್ರೇಕ್ಷಕರನ್ನು ಗುರುತಿಸಿ, ನಂತರ ಒಂದು ಬ್ಲಾಗ್‌ ಬರೆಯಲು ಆರಂಭಿಸಿ. ಬ್ಲಾಗ್‌ ಬರೆದ ನಂತರ ಬ್ಲಾಗ್‌ ಲಿಂಕನ್ನು ಸೋಶಿಯಲ್‌ ನೆಟ್‌ವರ್ಕ್‌ನಲ್ಲಿ ಶೇರ್‌ ಮಾಡಿ. ಒಂದು ವೇಳೆ ನಿಮ್ಮ ಬ್ಲಾಗ್‌ ವೀಕ್ಷಣೆಗೆ ಅನೇಕ ಜನ ಬರುತ್ತಾರೆ ಅಂದ್ರೆ Google AdSense ಮುಖಾಂತರ ಜಾಹೀರಾತು ಪ್ರಕಟಿಸಿ ಹಣಸಂಪಾದನೆ ಮಾಡಬಹುದು.ನಿಮ್ಮ ಲೇಖನವನ್ನು ಯಾರಾದ್ರೂ ಮುದ್ರಕರಿಗೆ ತಿಳಿದು ಅವರು ಓದಿ ಖಷಿಯಾಗಿ ಪುಸ್ತಕ ಪ್ರಕಟಿಸಿದ್ರೆ, ಖರ್ಚಿಲ್ಲದೇ ಒಂದು ಪುಸ್ತಕದ ಲೇಖಕರಾಗುವ ಮೂಲಕ ಹಣ ಸಂಪಾದಿಸಬಹುದು.

ಇಬೇಯಲ್ಲಿ ಸೇಲ್‌ ಮಾಡಿ

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಯಾವುದೇ ಜಾಹೀರಾತು ನೀಡದೇ ನೀವು ಇಂಟರ್‌ನೆಟ್‌ನಲ್ಲಿ ನಿಮ್ಮ ವಸ್ತುಗಳನ್ನು ಸೇಲ್‌ ಮಾಡಬಹುದು. ಇದಕ್ಕೆ ಉತ್ತಮ ಉದಾಹರಣೆ ಇಬೇ.ಜೊತೆಗೆ ಇದೇ ರೀತಿಯ ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಮಾರಾಟ ಮಾಡುವ ವೆಬ್‌ಸೈಟ್‌ ಬೇಕಾದ್ರೂ ಆರಂಭಿಸಬಹುದು.

ಫೋಟೋ ಸೇಲ್‌ ಮಾಡಿ

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಉತ್ತಮ ಗುಣಮಟ್ಟದ ಕ್ಯಾಮೆರಾ, ಫೋಟೋ ಎಡಿಟಿಂಗ್‌ ಮಾಡುವಂತಹ ಕಲೆ ಜೊತೆಗೆ ಉತ್ತಮ ಫೋಟೋ ತೆಗೆಯುವ ಕೌಶಲ್ಯವಿದ್ದವರಿಗೆ ಹೇಳಿ ಮಾಡಿಸಿದ ಕ್ಷೇತ್ರ. ಫೋಟೋ ತೆಗೆದು ಅದನ್ನು ಶೋಶಿಯಲ್‌ ನೆಟ್‌ವರ್ಕ್‌ನಲ್ಲಿ ಶೇರ್‌ ಮಾಡಿ ಪ್ರಚಾರ ಮಾಡಿದ್ರೆ ಅದೃಷ್ಟ ಚೆನ್ನಾಗಿದ್ರೆ ಬೇರೆ ಕಂಪೆನಿಗಳು ಫೋಟೋವನ್ನು ಖರೀದಿಸಬಹುದು. ಫೋಟೋ ಪ್ರಿಂಟ್‌ ಮಾಡಿ ಸೇಲ್‌ ಮಾಡಬಹುದು. ಜೊತೆಗೆ ವಾರ್ಷಿಕವಾಗಿ ಫೋಟೋ ಕಾಂಪಿಟೇಷನ್‌ ಸ್ಪರ್ಧೆಗೆ ಕಳುಹಿಸಿ ಬಹುಮಾನವನ್ನು ಗಳಿಸಬಹುದು.

ಡೇಟಾ ಎಂಟ್ರಿ

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಇಂಗ್ಲಿಷ್‌ನಲ್ಲಿ ಹಿಡಿತವಿದ್ದು ಮನೆಯಲ್ಲಿ ಕುಳಿತು ಸಂಪಾದನೆ ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದವರಿಗೆ ಈ ಕೆಲಸ ಮಾಡಬಹುದು. ಅನೇಕ ಕಂಪೆನಿಗಳು ಈಗಾಗ್ಲೇ ಈ ರೀತಿಯ ಕೆಲಸವನ್ನು ಮಾಡಿಸುತ್ತಿವೆ. ಈ ಕೆಲಸ ತುಂಬ ಸರಳ, ಹೆಚ್ಚಿನ ಒಂದು ಕಡೆಯಿಂದ ಇನ್ನೊಂದು ಕಡೆ ಡೇಟಾ ಎಂಟ್ರಿ ಮಾಡುವುದು, ತಪ್ಪಾದ ಡೇಟಾವನ್ನು ಸರಿಯಾದ ಕಡೆ ಫಿಲ್‌ ಮಾಡವುದು, ಗ್ರಾಮರ್‌ ಚೆಕ್‌ ಮಾಡುವುದೇ ಡೇಟಾ ಎಂಟ್ರಿ ಕೆಲಸವಾಗಿರುತ್ತದೆ.

ಇಂಟರ್‌ನೆಟ್‌ನಲ್ಲಿ ಸರ್ಚ್ ಮಾಡಿ:

ಚಿಂತೆ ಬಿಡಿ ಆನ್‌ಲೈನ್‌ಲ್ಲಿ ಹಣ ಸಂಪಾದನೆ ಮಾಡಿ

ಸರ್ಚ್ ಮಾಡಿ ನೀವು ಹಣ ಸಂಪಾದನೆ ಮಾಡಬಹುದು. ಸತ್ಯ ಕಣ್ರೀ ಗೂಗಲ್‌, ಯಾಹೂ,ಬಿಂಗೂ ಈಗಾಗ್ಲೇ ದೊಡ್ಡ ಸರ್ಚ್ ಇಂಜಿನ್‌ ಎಂಬ ಹೆಸರು ಪಡೆದಿದೆ. ಆದ್ರೆ ಇನ್ನೂ ಕೆಲವು ಸರ್ಚ್ ಇಂಜಿನ್‌ಗಳಿವೆ. ಇವುಗಳು ಅಷ್ಟು ಪ್ರಚಾರ ಪಡಿಲಿಲ್ಲ. ಹಾಗಾಗಿ ಈ ವೆಬ್‌ಸೈಟ್‌ಗಳು ಹಣ ಸಂಪಾದನೆಗಾಗಿ ಈ ತಂತ್ರ ಮಾಡಿದ್ದು, ನೀವು ಇದರಲ್ಲಿ ಸರ್ಚ್ ಮಾಡಿದ್ರೆ ನಿಮಗೆ ಪಾಯಿಂಟ್‌ ನೀಡಿತ್ತಾರೆ, ಇವರು ನಿಗದಿ ಪಡಿಸಿದ ಪಾಯಿಂಟ್‌ಗೆ ನೀವು ಮುಟ್ಟಿದ್ದರೆ ನಿಮಗೆ ಗಿಫ್ಟ್‌ ವೋಚರ್‌ ಸಿಗುತ್ತದೆ. ಆನ್‌ಲೈನ್‌ಲ್ಲಿ ಶಾಪಿಂಗ್‌ ಈ ಗಿಫ್ಟ್‌ ವೋಚರ್‌ನಿಂದ ನಿಮಗೆ ಬೇಕಾದ ವಸ್ತು ಖರೀದಿಸಬಹುದು. ಈ ರೀತಿ ಹಣ ಸಂಪಾದನೆ ಮಾಡಲು Swagbucks ಉತ್ತಮ ವೆಬ್‌ಸೈಟ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot