ಸ್ಯಾಮ್‌ಸಂಗ್ ಎಸ್3 ಯನ್ನು ಅಪ್‌ಡೇಟ್ ಮಾಡುವುದು ಹೇಗೆ ?
ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಜನ ಸ್ಯಾಮ್‌ಸಂಗ್ ಗೆಲಾಕ್ಸಿ ಎಸ್ 3 ಖರೀದಿಸುತ್ತಿದ್ದಾರೆ. ಆದ್ರೆ ಕೆಲ ಗ್ರಾಹಕರು ಈ ಹಿಂದೆಯೇ ಖರೀದಿಸಿದ ಎಸ್ 3 ಫೋನ್‌ನಲ್ಲಿ ಆಡ್ರಾಯ್ಡ್ ಐಸಿಎಸ್ ಸಾಫ್ಟ್‌ವೇರ್ ಇದೆ. ಈ ಸಾಫ್ಟ್‌ವೇರ್‌ನ್ನು ನೀವು ಸುಲಭವಾಗಿ ಜೆಲ್ಲಿಬೀನ್ ಸಾಫ್ಟ್‌ವೇರ್‌ಗೆ ಅಪ್‌ಡೇಟ್ ಮಾಡಬಹುದು. ನಿಮ್ಮ ಹ್ಯಾಂಡ್‌ಸೆಟ್‌ನಿಂದಲೇ ನೀವು ಅಪ್‌ಡೇಟ್ ಮಾಡಬಹುದು. ಆದ್ರೆ ಕೆಲ ಗ್ರಾಹಕರಿಗೆ ಈ ರೀತಿ ಮಾಡಿದ ಮೇಲೆ ಇಂಟರ್‌ನೆಟ್ ನಿಧಾನ, ಬ್ಯಾಟರಿಯಲ್ಲಿ ಚಾರ್ಜ್ ನಿಲ್ಲದಿರುವುದು ಸಮಸ್ಯೆಗಳು ಕಾಡುತಿತ್ತು. ಅದಕ್ಕಾಗಿ ಗಿಜ್ಬಾಟ್ ಈ ಸಮಸ್ಯೆ ನಿವಾರಿಸಲು ಸರಳ ಪರಿಹಾರವನ್ನು ತಂದಿದೆ.ನೀವು ಸ್ಯಾಮ್‌ಸಂಗ್‌ನ ಕೀಸ್(Kies) ಸಾಫ್ಟ್‌ವೇರ್‌ನ್ನು ಡೌನ್‌ಲೋಡ್ ಮಾಡಿಕೊಂಡು ಜೆಲ್ಲಿಬೀನ್‌ಗೆ ಓಎಸ್‌ಗೆ ಅಪ್‌ಡೇಟ್ ಮಾಡಿಕೊಳ್ಳಬಹುದು.

ಗೆಲಾಕ್ಸಿ ಎಸ್3 ಯನ್ನು ಕೀಸ್ ಮುಖಾಂತರ ಅಪಡೇಟ್ ಮಾಡುವುದು ಹೇಗೆ ?
ಮೊದಲು ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ಕೀಸ್(Kies) ಸಾಫ್ಟ್‌ವೇರ್‌ನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ .
ಸಾಫ್ಟ್‌ವೇರ್ ಡೌನ್‌ಲೋಡ್ ಮಾಡಿದ ಬಳಿಕ ಹ್ಯಾಂಡ್‌ಸೆಟ್‌ನ್ನು ಮೈಕ್ರೋ ಯುಎಸ್‌ಬಿ ಕೇಬಲ್ ಮೂಲಕ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಿ.
ಕಂಪ್ಯೂಟರ್‌ನಲ್ಲಿರುವ ಕೀಸ್ ಸಾಫ್ಟ್‌ವೇರ್‌ನ್ನು ಓಪನ್ ಮಾಡಿ.
ಕೀಸ್ ಸಾಫ್ಟ್‌ವೇರ್ ನಿಮ್ಮ ಹ್ಯಂಡ್‌ಸೆಟ್ ಕನೆಕ್ಟ್ ಆದ ಮೇಲೆ ಆಟೋಮ್ಯಾಟಿಕ್ ಆಗಿ ಸದ್ಯ ಲೇಟೆಸ್ಟ್ ಆಗಿರುವ ಆಂಡ್ರಾಯ್ಡ್ ಓಎಸ್‌ನ್ನು ಚೆಕ್ ಮಾಡಿ ಅಪಡೇಟ್ ಮಾಡುತ್ತದೆ.


Click it and Unblock the Notifications








