Subscribe to Gizbot

ಕಂಪ್ಯೂಟರ್ ಸೈಬರ್ ದಾಳಿಗೊಳಗಾಗಿದೆ ಎಂದು ತಿಳಿಯುವುದು ಹೇಗೆ? ದಾಳಿ ಆಗಿದ್ದರೆ?

Written By:

ಸೈಬರ್ ಅಟ್ಯಾಕ್‌ನಿಂದಾಗಿ ಇಡೀ ಪ್ರಪಂಚವೇ ಒಮ್ಮೆ ಅಲ್ಲೋಲ ಕಲ್ಲೋಲವಾಗಿದೆ.! ಕಂಪ್ಯೂಟರ್‌ನಲ್ಲಿನ ಫೈಲ್‌ಗಳು ಮತ್ತು ಮಾಹಿತಿಯನ್ನು ಎನ್‌ಸ್ಕ್ರಿಪ್ಟ್ ಮಾಡಿ ಜನರಿಗೆ ವಂಚಿಸಿ ಹಣ ಕೀಳುವ ಈ ಸೈಬರ್ ಅಟ್ಯಾಕ್ ಪ್ರಪಂಚದ 150 ದೇಶಗಳಲ್ಲಿ ಒಮ್ಮೆಗೆ ನಡೆದಿದೆ.!

ಹಾಗಾಗಿ, ಈ ಬಗ್ಗೆ ಕಂಪ್ಯೂಟರ್ ಬಳಕೆದಾರರು ಸುರಕ್ಷಿತರಾಗರಬೇಕಿದೆ. ಏಕೆಂದರೇ ಈ ಸೈಬರ್ ಅಟ್ಯಾಕ್ ಎಫೆಕ್ಟ್ ನಿಮಗೂ ತಟ್ಟಬಹುದು.!! ಹಾಗಾಗಿ, ಇಂದಿನ ಲೇಖನದಲ್ಲಿ ನಿಮ್ಮ ಕಂಪ್ಯೂಟರ್ ಸೈಬರ್ ದಾಳಿಗೊಳಗಾಗಿದೆ ಎಂಬುದು ತಿಳಿಯುವುದು ಹೇಗೆ? ದಾಳಿಗೊಳಗಾದರೆ ಏನು ಮಾಡಬೇಕು? ಎಂಬುದನ್ನು ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೈಬರ್ ದಾಳಿಗೊಳಗಾಗಿದೆ ಎಂಬುದು ತಿಳಿಯುವುದು ಹೇಗೆ?

ಸೈಬರ್ ದಾಳಿಗೊಳಗಾಗಿದೆ ಎಂಬುದು ತಿಳಿಯುವುದು ಹೇಗೆ?

ನಿಮ್ಮ ಕಂಪ್ಯೂಟರ್‌ನ ಯಾವುದೇ ಅಪ್ಲಿಕೇಷನ್‌ಗಳು doc ಎಂದದು ತೋರಿಸದೇ .wnry ಎಂದು ಬದಲಾಗಿದ್ದರೆ ನಿಮ್ಮ ಕಂಪ್ಯೂಟರ್ ವೈರಸ್ ದಾಳಿಗೆ ತುತ್ತಾಗಿದೆ ಎಂಬುದು ಖಚಿತವಾಗುತ್ತದೆ. ಅಥವಾ ನಿಮ್ಮ ಕಂಪ್ಯೂಟರ್‌ ಅಪ್ಲಿಕೇಷನ್ ತೆರೆದರೆ ಉದಾಹರಣೆಗೆ ನೋಟ್ ಪ್ಯಾಡ್ txt ಮೈಕ್ರೋಸಾಫ್ಟ್ ವರ್ಡ್ ಕಡತಗಳನ್ನು ತೆರೆದರೆ, ಸೈಬರ್ ಕ್ರಿಮಿನಲ್‌ಗಳು ನಿಮಗೆ ಹಣಕ್ಕೆ ಬೇಡಿಕೆ ಇಡುವ ಪೇಜ್ ತೆರೆಯುತ್ತದೆ.!!

ಸೈಬರ್ ತೊಂದರೆಗೆ ಸಿಲುಕಿದರೆ ಹಣ ನೀಡುತ್ತೀರಾ?

ಸೈಬರ್ ತೊಂದರೆಗೆ ಸಿಲುಕಿದರೆ ಹಣ ನೀಡುತ್ತೀರಾ?

ಸೈಬರ್ ದಾಳಿ ನಡೆಸುವ ಹ್ಯಾಕರ್‌ಗಳು ಹಣಕ್ಕಾಗಿ ಬೇಡಿಕೆ ಇಟ್ಟರೆ ಯಾವುದೇ ಕಾರಣಕ್ಕೂ ಹಣ ನಿಡಬೇಡಿ. ಹಣ ಪಾವತಿ ಮಾಡಿದ ನಂತರ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಯಾವುದೇ ಭರವಸೆ ಇಲ್ಲ.!!

ಅಂತರ್ಜಾಲ ಬಳಕೆ ಬೇಡ!!

ಅಂತರ್ಜಾಲ ಬಳಕೆ ಬೇಡ!!

ಪ್ರಪಂಚದ ಬಹುದೊಡ್ಡ ಸೈಬರ್ ದಾಳಿ ಇದಾಗಿದ್ದು, ಸೈಬರ್‌ ದಾಳಿ ನಿಯಂತ್ರಣಕ್ಕೆ ಬರುವವರೆಗೂ ಕಂಪ್ಯೂಟರ್‌ಗಳಲ್ಲಿ ಅಂತರ್ಜಾಲ ಬಳಕೆ ಮಾಡಬೇಡಿ. ಅಂತರ್ಜಾಲ ಬಳಕೆ ಇದ್ದರೆ ಮಾತ್ರ ಸೈಬರ್‌ಗಳು ನಿಮ್ಮ ಕಂಪ್ಯೂಟರ್ ಪ್ರವೇಶಿಸಬಹುದು.!

ವಿಂಡೋಸ್ ಎಕ್ಸ್‌ಪಿ ಪರಿಷ್ಕೃತ ಆವೃತ್ತಿ ಬಳಸಿ.!!

ವಿಂಡೋಸ್ ಎಕ್ಸ್‌ಪಿ ಪರಿಷ್ಕೃತ ಆವೃತ್ತಿ ಬಳಸಿ.!!

ನಿಮ್ಮ ಕಂಪ್ಯೂಟರ್ ವಿಂಡೋಸ್ 7 ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರೆ, ವಿಂಡೋಸ್ ಒಎಸ್ ಅನ್ನು ಮೇಲ್ದರ್ಜಿಗೇರಿಸಿ. ವಿಂಡೋಸ್ ಎಕ್ಸ್‌ಪಿ ಪರಿಷ್ಕೃತ ಆವೃತ್ತಿ ಬಳಸಿದರೆ ಈ ಸೈಬರ್ ಅಟ್ಯಾಕ್‌ನಿಂದ ನೀವು ಬಚಾವಾಗಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Redirected Net searches, unexpected installs can hacked ur system.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot