Subscribe to Gizbot

ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಸುರಕ್ಷತೆಗೆ ಬಂದಿದೆ ಅದ್ಬುತ ತಂತ್ರಜ್ಞಾನ!!..ಏನದು?

Written By:

ಭಾರತದಲ್ಲಿ 2017ರವರೆಗೂ 25 ಸಾವಿರ ಆನ್‌ಲೈನ್‌ ಮೋಸದ ಪ್ರಕರಣಗಳು ದಾಖಲಾಗಿದ್ದು ಒಟ್ಟು 179 ಕೋಟಿ ರೂಪಾಯಿಗಳ ವಂಚನೆ ಎಸಗಲಾಗಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯ ಗ್ರಾಹಕರು ಭದ್ರತಾ ಸಂಬಂಧಿತ ಕಳವಳದಿಂದಾಗಿ ಡಿಜಿಟಲ್ ವ್ಯವಹಾರವನ್ನು ಇಷ್ಟಪಡುವುದಿವಾದರೂ, ಡಿಜಿಟಲ್ ಪಾವತಿಗಳನ್ನು ಮಾತ್ರ ಬಳಕೆ ಮಾಡುತ್ತಿದ್ದಾರೆ.!!

ಹಾಗಾಗಿ, ಆನ್‌ಲೈನ್‌ನಲ್ಲಿ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ದುರ್ಬಳಕೆ ತಪ್ಪಿಸಲು ಅಟೊಂ ಟೆಕ್‌ (Atom Tech) ಕಂಪನಿ ನೂತನ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಮೊಬೈಲ್‌ ಮತ್ತು ಸ್ಮಾರ್ಟ್‌ಫೋನ್‌ ಬಳಕೆದಾರರು ಈ ತಂತ್ರಾಂಶವನ್ನು ಸರಳವಾಗಿ ಬಳಕೆ ಮಾಡಿಕೊಂಡು ತಮ್ಮ ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ರಕ್ಷಣೆ ಮಾಡಿಕೊಳ್ಳಬಹುದಾಗಿದೆ.!!

ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಸುರಕ್ಷತೆಗೆ ಬಂದಿದೆ ಅದ್ಬುತ ತಂತ್ರಜ್ಞಾನ!!

ಡಿಜಿಟಲ್ ಪೇಮೆಂಟ್ ಸಲ್ಯೂಷನ್ ಪ್ರೊವೈಡರ್ ಹಾಗೂ ಪೇಮೆಂಟ್ ಟೆಕ್ ಕಂಪೆನಿಯಾಗಿರುವ ಅಟೊಂ ಟೆಕ್ನಾಲಜಿಸ್ ಕಂಪೆನಿ 'ಟ್ರಾನ್ವಾಲ್' (Tranwall) ಎಂಬ ನೂತನ ತಂತ್ರಜ್ಞಾನವನ್ನು ತಂದಿದೆ. ಈ 'ಟ್ರಾನ್ವಾಲ್' ತಂತ್ರಜ್ಞಾನ ಗ್ರಾಹಕರ ನೈಜ ಅವಧಿಯ ವಹಿವಾಟು ನಿಯಂತ್ರಣ ನಿಭಾಯಿಸುತ್ತದೆ. ಮತ್ತು ಕಾರ್ಡುಗಳನ್ನು 'ಆನ್' ಮತ್ತು 'ಆಫ್' ಮಾಡುವ ಆಯ್ಕೆಯನ್ನು ನೀಡಲಿದೆ.!!

ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಸುರಕ್ಷತೆಗೆ ಬಂದಿದೆ ಅದ್ಬುತ ತಂತ್ರಜ್ಞಾನ!!

ಆನ್‌ಲೈನ್ ಮೂಲಕ ಹ್ಯಾಕ್ ಮಾಡುವವರು ಗ್ರಾಹಕರ ಕಾರ್ಡ್‌ಗಳ ಗುಪ್ತ ಸಂಖ್ಯೆ ಬಳಕೆ ಮಾಡಿಕೊಂಡು ಗ್ರಾಹಕರಿಗೆ ಮೋಸ ಮಾಡುತ್ತಾರೆ. ಹಾಗಾಗಿ, ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಈ ನೂತನ ತಂತ್ರಾಂಶವನ್ನು ಅಳವಡಿಸಿಕೊಳ್ಳವ ಮೂಲಕ ಆನ್‌ಲೈನ್‌ನಲ್ಲಿ ಮೋಸ ಹೋಗುವುದನ್ನು ತಪ್ಪಿಸಬಹುದು ಎಂದು ಅಟೊಂ ಟೆಕ್‌ ತಿಳಿಸಿದೆ.!!

ಡೆಬಿಟ್ ಮತ್ತು ಕ್ರೆಡಿಟ್‌ ಕಾರ್ಡ್‌ ಸುರಕ್ಷತೆಗೆ ಬಂದಿದೆ ಅದ್ಬುತ ತಂತ್ರಜ್ಞಾನ!!

ನೂತನ ತಂತ್ರಜ್ಞಾನದಲ್ಲಿ ಕಾರ್ಡ್‌ಗಳಲ್ಲಿ ಹಣ ಪಡೆಯುವಾಗ ಮತ್ತು ಶಾಪಿಂಗ್‌ ಮಾಡುವಾಗ ಮಾತ್ರ ಕಾರ್ಡ್‌ಗಳು ಚಾಲ್ತಿಯಲ್ಲಿರುವಂತೆ ರೂಪಿಸಲಾಗಿದೆ. ಉಳಿದಂತೆ ಕಾರ್ಡ್‌ಗಳು ಯಾವಾಗಲೂ ಆಫ್‌ಲೈನ್‌ ಮೋಡ್‌ನಲ್ಲೇ ಇರುವುದರಿಂದ ಹ್ಯಾಕರ್‌ಗಳು ಕನ್ನ ಹಾಕಲು ಸಾಧ್ಯವಿಲ್ಲ ಎಂದು ಅಟೊಂ ಟೆಕ್‌ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೆವಾಂಗ್ ನೆರಾಲ್ಲ ಹೇಳಿದ್ದಾರೆ.!!

Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?

ಓದಿರಿ: ಭಾರತದ ಪ್ರಸ್ತುತ ಮೊಬೈಲ್ ಮಾರುಕಟ್ಟೆ ಹೇಗಿದೆ?..ಶಿಯೋಮಿ ಪಾಲು ಎಷ್ಟು ಗೊತ್ತಾ?

English summary
Users can switch ‘on’ and ‘off’ their debit and credit cards with e-shield. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot