TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಸುರಕ್ಷಿತವಾಗಿ 'ಪವರ್‌ಬ್ಯಾಂಕ್' ಬಳಕೆ ಮಾಡುವುದು ಹೇಗೆ?..ತಿಳಿದು ಹುಷಾರಾಗಿರಿ!!
ಸ್ಮಾರ್ಟ್‌ಫೋನ್‌ಗಳೂ ಹೆಚ್ಚು ಬ್ಯಾಟರಿಯನ್ನು ಸ್ವಾಹ ಮಾಡುವುದರಿಂದ ಎಲ್ಲರಿಗೂ ಒಂದೊಂದು ಪವರ್‌ಬ್ಯಾಂಕ್ ಅನ್ನು ಖರೀದಿಸುವ ಸೌಭಾಗ್ಯ ಒದಗಿಬಂದಿರುತ್ತದೆ. ಮನೆಯಲ್ಲಿಯೇ ಮೊಬೈಲ್ ಬಳಕೆಯ ವೇಳೆ, ಪ್ರಯಾಣದ ವೇಳೆ, ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅತ್ಯಗತ್ಯ ಎಂಬುದು ಎಲ್ಲರಿಗೂ ಅನಿಸಿರುವುದು ಸಹ ಪವರ್ ಬ್ಯಾಂಕ್ ಅಗತ್ಯತೆಯನ್ನು ತಿಳಿಸುತ್ತದೆ.
ಮೇಲ್ನೋಟಕ್ಕೆ ಪವರ್ ಬ್ಯಾಂಕ್ ಬಳಕೆ ಬಹಳ ಸುಲಭವಾಗಿ ಕಂಡರೂ ಸಹ ನಾವು ಬಳಸುವ ಪವರ್ ಬ್ಯಾಂಕ್ ಸುರಕ್ಷಿತೆ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ. ಅಗ್ಗದ ಪವರ್ ಬ್ಯಾಂಕ್ ಗಳು ಎಲ್ಲೆಂದರಲ್ಲಿ ಲಭ್ಯವಾಗುವುದು ಸೇರಿದಂತೆ, ಪವರ್ ಬ್ಯಾಂಕ್ ಅನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದು ಹೇಗೆ ಎಂಬುದು ಕೂಡ ಬಹಳ ಮುಖ್ಯಾಗಿರುತ್ತದೆ ಎಂಬುದು ನಿಮಗೆ ಗೊತ್ತಿಲ್ಲ.
ಹಾಗಾಗಿ, ಇಂದಿನ ಲೇಖನದಲ್ಲಿ ಪವರ್ ಬ್ಯಾಂಕ್ ಖರೀದಿಸುವಾಗ ಗಮನಿಸಬೇಕಾದ ಸಂಗತಿಗಳು ಯಾವುವು? ಪವರ್ ಬ್ಯಾಂಕ್ ಸುರಕ್ಷಿತೆ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿರುವ ವಿಷಯಗಳು ಯಾವುವು? ಹಾಗೂ ಪವರ್ ಬ್ಯಾಂಕ್ ಸುರಕ್ಷತೆಯಲ್ಲಿ ಎಡವಿದೆರೆ ಆಗಬಹುದಾದ ಸಮಸ್ಯೆಗಳೆಷ್ಟು ಎಂಬುದನ್ನು ಸಂಪೂರ್ಣ ಮಾಹಿತಿಯೊಂದಿಗೆ ತಿಳಿದುಕೊಳ್ಳೋಣ.
ಬ್ಯಾಟರಿ ಗುಣಮಟ್ಟ!
ನೀವು ಒಂದು ಪವರ್‌ಬ್ಯಾಂಕ್ ಖರಿದಿಸುವ ಮುನ್ನ ಅದರಲ್ಲಿನ ಬ್ಯಾಟರಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕಾಗುತ್ತದೆ. ಉತ್ತಮ ಗುಣಮಟ್ಟದ ರೀಚಾರ್ಚ್ ಬ್ಯಾಟರಿಗಳ ಅಗತ್ಯ ಪವರ್ ಬ್ಯಾಂಕ್‌ಗಳಿಗೆ ಇದೆ. ಹಾಗಾಗಿ, Lithium Ion , lithium-polymer ಬ್ಯಾಟರಿಗಳನ್ನು ಬಳಸಿರುವ ಪವರ್‌ಬ್ಯಾಂಕ್‌ಗಳನ್ನು ಮಾತ್ರ ನೀವು ಖರಿದಿಸಿ.
ಅಗ್ಗದ ಪವರ್ ಬ್ಯಾಂಕ್ ಬೇಡವೇ ಬೇಡ!!
ಅಗ್ಗದ ಪವರ್ ಬ್ಯಾಂಕ್ ಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುವುದರಿಂದ ಅಗ್ಗದ ಪವರ್ ಬ್ಯಾಂಕ್ ಅನ್ನು ಖರೀದಿಸಲು ಹೋಗಬೇಡಿ. ಉತ್ತಮ ಗುಣಮಟ್ಟದ ರೀಚಾರ್ಚ್ ಬ್ಯಾಟರಿಗಳ ಅಗತ್ಯ ಪವರ್ ಬ್ಯಾಂಕ್‌ಗಳಿಗೆ ಇದೆ. ಆದರೆ, ಅಗ್ಗದ ಪವರ್ ಬ್ಯಾಂಕ್ ಗಳಲ್ಲಿ ಗುಣಮಟ್ಟದ ಬ್ಯಾಟರಿಗಳನ್ನು ಬಳಸುತ್ತಿದ್ದು, ಇವುಗಳ ಬಳಕೆ ಸುರಕ್ಷಿತವಲ್ಲ.
ಸರ್ಕ್ಯೂಟ್ ವ್ಯವಸ್ಥೆ ಸರಿಯಿರುವುದಿಲ್ಲ!
ಅಗ್ಗದ ಪವರ್ ಬ್ಯಾಂಕ್‌ಗಳಲ್ಲಿ ಸರಿಯಾದ ಸರ್ಕ್ಯೂಟ್ ವ್ಯವಸ್ಥೆ ಇಲ್ಲದೇ ಇದ್ದರೆ ಬ್ಯಾಟರಿ ಮೂಲಕ ವೋಲ್ಟೇಜ್ ಪ್ರವಹಿಸುವಾಗ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇರುತ್ತದೆ.ಹಾಗಾಗಿ, ಅಗ್ಗದ ಪವರ್ ಬ್ಯಾಂಕ್ ಗಳಲ್ಲಿ ಸರ್ಕ್ಯೂಟ್ ಸರಿ ಇಲ್ಲದೇ ಇದ್ದರೆ ಅಪಾಯ ಉಂಟಾಗುವ ಸಾಧ್ಯತೆಯೂ ಇರುರುವುದರಿಂದ ಇವುಗಳ ಖರೀದಿ ಬಹಳ ಅಪಾಯಕಾರಿ.
ಸರಿಯಾದ ಉಷ್ಣತೆ
ಸರಿಯಾದ ಉಷ್ಣತೆಯಲ್ಲಿ ಮಾತ್ರ ಪವರ್ ಬ್ಯಾಂಕ್ ಬಳಕೆ ಮಾಡುವುದು ಒಳಿತು. ಅತಿಯಾದ ಉಷ್ಣತೆ ಪವರ್ ಬ್ಯಾಂಕ್‌ಗಳಿಗೆ ಹಾನಿಯನ್ನುಂಟು ಮಾಡುತ್ತದೆ ಎಂಬುದನ್ನು ತಿಳಿದಿರಿ. ಅಧಿಕ ಉಷ್ಣತೆ ಇರುವ ಪ್ರದೇಶಗಳಲ್ಲಿ ಇವುಗಳನ್ನು ಇಡುವುದು ಒಳ್ಳೆಯದಲ್ಲ. ಇದೆಲ್ಲದಕ್ಕಿಂತ ಒದ್ದೆಯಾಗದಂತಹ ಅಥವಾ ಬಿಸಿಲಿನಲ್ಲಿ ಒಣಗಿಸುವಂತಹ ಕೆಲಸ ಮಾಡಲೇ ಬೇಡಿ.
ಅಧಿಕ ಹೊತ್ತು ಚಾರ್ಜ್ ಮಾಡಬೇಡಿ!
ನೀವು ಬಳಸುವ ಪವರ್ ಬ್ಯಾಂಕ್ ಫುಲ್ ಚಾರ್ಜ್ ಆಗಿದ್ದರೆ ಸ್ವಿಚ್ ಆಫ್ ಮಾಡಿ ಡಿಸ್ ಕನೆಕ್ಟ್ ಮಾಡಿಡಿ. ಪವರ್ ಬ್ಯಾಂಕ್ ಗಳನ್ನು ಅಧಿಕ ಹೊತ್ತು ಚಾರ್ಜ್ ಮಾಡುವ ಅಗತ್ಯವೂ ಸಹ ಇರುವುದಿಲ್ಲ. ಕೆಲವೊಂದು ಕಂಪನಿಗಳು ಕಡಿಮೆ ಗುಣಮಟ್ಟದ Lithium Ion ಬ್ಯಾಟರಿಗಳನ್ನು ಬಳಸಿರುವುದರಿಂದ ಪವರ್ ಬ್ಯಾಂಕ್ ಬೇಗ ಹಾಳಾಗುತ್ತದೆ.
ಪವರ್ ಬ್ಯಾಂಕ್ ಬಾಳಿಕೆಗೆ ಸಲಹೆಗಳು!
ಪವರ್ ಬ್ಯಾಂಕ್ ಚಾರ್ಜ್ ಮಾಡಲು ಸರಿಯಾದ ಚಾರ್ಜರ್ ಮಾತ್ರ ಬಳಸಿ ಮತ್ತು ನಿರ್ದಿಷ್ಟ ಸಮಯ ಮಾತ್ರ ಪವರ್ ಬ್ಯಾಂಕ್ ಚಾರ್ಜ್ ಮಾಡಿಡಿ. ಇನ್ನು ಪವರ್ ಬ್ಯಾಂಕ್‌ನಲ್ಲಿ ಸಮಸ್ಯೆ ಕಂಡುಬಂದರೆ ಅದನ್ನು ಬಳಸದಿರುದೇ ಸೂಕ್ತ. ಪಾಕೆಟ್ ನಲ್ಲಿರಿಸಿ ಚಾರ್ಜ್ ಮಾಡುವ ಹಾಗ ಶಾಖ ಜಾಸ್ತಿ ಇರುವಲ್ಲಿ ಪವರ್ ಬ್ಯಾಂಕ್ ಡುವ ಅಭ್ಯಾಸ ಬಿಟ್ಟುಬಿಡಿ.