Home
ಟೆಕ್ ನೌಕರಿ

ಪಬ್ಲಿಕ್ ವೈಫೈ ಬಳಸುತ್ತೀರಾ? ಹಾಗಾದ್ರೆ ನಿಮ್ಮ ಪಾಸ್ ವರ್ಡ್ ಕಥೆ ಗೋವಿಂದ!

By Gizbot Bureau

ಇಂದಿನ ಜಮಾನದ ಪ್ರತಿಯೊಬ್ಬರ ಅಗತ್ಯತೆಯಾಗಿರುವ ವೈಫೈ ತನ್ನ ಕೆಟ್ಟ ಮುಖವನ್ನು ತೋರಿಸಲು ಆರಂಭಿಸಿಯಾಗಿದೆ. ಹೌದು ಒಂದು ಒಳ್ಳೆಯದರ ಹಿಂದೆ ಮತ್ತೊಂದು ಕೆಟ್ಟದ್ದು ಇದ್ದೇ ಇರುತ್ತದೆ ಎಂಬ ಮಾತಿನಂತೆ ವೈಫೈಯಿಂದ ಎಷ್ಟು ಉಪಯೋಗವಾಗುತ್ತಿದೆಯೋ ಅದರಿಂದ ಹ್ಯಾಕಿಂಗ್ ನಂತಹ ಕೆಟ್ಟ ಪರಿಣಾಮವೂ ಕೂಡ ಆರಂಭವಾಗುತ್ತಿದೆ. ಹೌದು ಅದರಲ್ಲೂ ಪಬ್ಲಿಕ್ ವೈಫ್ ಬಳಕೆ ಮಾಡುವುದರಿಂದಾಗಿ ನಿಮ್ಮ ಪಾಸ್ ವರ್ಡ್ ಗಳು ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ.

ಪಬ್ಲಿಕ್ ವೈಫೈ ಬಳಸುತ್ತೀರಾ? ಹಾಗಾದ್ರೆ ನಿಮ್ಮ ಪಾಸ್ ವರ್ಡ್ ಕಥೆ ಗೋವಿಂದ!

ಪಾಸ್ ವರ್ಡ್ ಗಳು ನಮ್ಮ ಅಕೌಂಟ್ ಗಳ ಸುರಕ್ಷತೆಯ ಸೂತ್ರವಾಗಿದ್ದರೂ ಕೂಡ ಅವುಗಳನ್ನು ಕದಿಯುವಂತ ಮಾರ್ಗೋಪಾಯಗಳು ಆರಂಭವಾಗಿದೆ. ಅದರಲ್ಲೂ ನಿಮ್ಮ ಸ್ವಂತ ವೈಫೈ ಸಿಗ್ನಲ್ ನಿಂದಲೇ ಪಾಸ್ ವರ್ಡ್ ಕದಿಯುವಿಕೆ ನಡೆಯುತ್ತದೆ.

ಹಾಗಾದ್ರೆ ಈ ತಾಂತ್ರಿಕ ಸಮಸ್ಯೆಗೆ ಪರಿಹಾರವೇ ಇಲ್ಲವೇ? ನೀವು ತಿಳಿದುಕೊಳ್ಳಬೇಕಾಗಿರುವ ಅಂಶಗಳು ಇಲ್ಲಿವೆ ನೋಡಿ.

ವಿಂಡ್ ಟಾಕರ್ ಮೆಥೆಡ್

ವಿಂಡ್ ಟಾಕರ್ ಮೆಥೆಡ್

ಶಾಂಘೈನ ಜೈಯೋ ಟಾಂಗ್ ಯುನಿವರ್ಸಿಟಿಯ ಅಧ್ಯಯನಕಾರರು , ಬೋಸ್ಟನ್ ನ ಮಸ್ಸಾಚುಸೆಟ್ಸ್ ಯುನಿವರ್ಸಿಟಿ, ಸೌತ್ ಫ್ಲೋರಿಡಾ ಯುನಿವರ್ಸಿಟಿಯ ಅಧ್ಯಯನಕಾರರು ರೇಡಿಯೋ ಸಿಗ್ನಲ್ ನಿಮ್ಮ ಪಾಸ್ ವರ್ಡ್ ಭದ್ರತೆಯನ್ನು ಕಾಂಪ್ರಮೈಜ್ ಮಾಡುತ್ತದೆ ಎಂಬುದನ್ನು ಅಧ್ಯಯನದಿಂದ ತಿಳಿಸಿದ್ದಾರೆ.

ಸಾಮಾನ್ಯ ವೈಫೈ ನಿಂದ ಹೇಗೆ ವೈಫೈ ಪಾಸ್ ವರ್ಡ್ ಗಳನ್ನು ಕದಿಯಬಹುದು ಎಂಬುದನ್ನು ವಿಶ್ವವಿದ್ಯಾಲಯದ ಪ್ರೊಫೆಸರ್ ಗಳು ತಿಳಿಸಿದ್ದಾರೆ. ಬಳಕೆದಾರರು ಮತ್ತು ಹ್ಯಾಕರ್ ಇಬ್ಬರೂ ಒಂದೇ ವೈಫೈ ಗೆ ಕನೆಕ್ಟ್ ಆಗಿರಬೇಕಾಗುತ್ತದೆ ಎಂಬುದನ್ನು ಅವರು ತಿಳಿಸಿದ್ದಾರೆ. ಹೊಸ ಡಿವೈಸ್ ನಲ್ಲೂ ಸೇರಿದಂತೆ ಈ ವಿಧಾನದಿಂದ ಪಾಸ್ ವರ್ಡ್ ಲಭ್ಯವಾಗುವ ಸಾಧ್ಯತೆಯು ಶೇಕಡಾ 81.7 ರಷ್ಟಿರುತ್ತದೆ ಎಂದಿದ್ದಾರೆ.

ಇದನ್ನು ವಿಂಡ್ ಟಾಕರ್ ಮೆಥೆಡ್ ಎಂದು ಹೇಳುತ್ತಾರೆ. ಎರಡು ಡಿವೈಸ್ ಗಳ ನಡುವೆ ಯಾವುದೇ ಮೀಡಿಯಂನ ಅಗತ್ಯತೆ ಈ ವಿಧಾನದಲ್ಲಿ ಇರುವುದಿಲ್ಲ ಅಥವಾ ಯಾವುದೇ ಸಾಫ್ಟ್ ವೇರ್ ಫೋನ್ ನಲ್ಲಿ ಇನ್ಸ್ಟಾಲ್ ಆಗಿರಬೇಕಾಗಿರುವ ಅಗತ್ಯವೂ ಇಲ್ಲ.

ವೈಫೈ ಸಿಗ್ನಲ್ ಗಳು ಪಾಸ್ ವರ್ಡ್ ಗಳನ್ನು ಹೇಗೆ ರಿವೀಲ್ ಮಾಡುತ್ತದೆ?

ವೈಫೈ ಸಿಗ್ನಲ್ ಗಳು ಪಾಸ್ ವರ್ಡ್ ಗಳನ್ನು ಹೇಗೆ ರಿವೀಲ್ ಮಾಡುತ್ತದೆ?

ಮೊದಲಿಗೆ ವಿಕ್ಟಿಮ್ ಡಿವೈಸ್ ನಲ್ಲಿನ ವೈಫೈ ಸಿಗ್ನಲ್ ಗಳ ಪ್ಯಾರಲಲ್ ಸ್ಕ್ಯಾನಿಂಗ್ ನ್ನು ಹ್ಯಾಕರ್ ಗಳು ಮಾಡುತ್ತಾರೆ ಮತ್ತು ಡಿವೈಸ್ ನಲ್ಲಿ ಟೈಪ್ ಆಗಿರುವ ಡಾಟಾವನ್ನು ರಿಟ್ರೀವ್ ಮಾಡಿಕೊಳ್ಳುತಾರೆ. ವಿಕ್ಟಿಮ್ ಡಿವೈಸ್ ನಲ್ಲಿರುವ ವೈಫೈ ಸಿಗ್ನಲ್ ಗಳನ್ನು ಅವರು ಗುರುತಿಸಬೇಕಾಗಿರುತ್ತದೆ.

ಹ್ಯಾಕರ್ಸ್ ಮತ್ತು ವಿಕ್ಟಿಮ್ ಇಬ್ಬರೂ ಕೂಡ ಒಂದೇ ವೈಫೈ ನೆಟ್ ವರ್ಕ್ ಗೆ ಕನೆಕ್ಟ್ ಆಗಿರಬೇಕಾಗುತ್ತದೆ.ಒಂದು ವೇಳೆ ಅಂತಹ ಸಾಧ್ಯತೆ ಇಲ್ಲದೇ ಇದ್ದಲ್ಲಿ ಉಚಿತ ವೈಫೈ ಹೆಸರಿನಲ್ಲಿ ಅವರು ಕದಿಯಲು ಬಳಸಲಾಗುವ ವೈಫೈಯನ್ನು ಬಳಕೆದಾರರಿಗೆ ಆಫರ್ ಮಾಡುತ್ತಾರೆ.

ಒಮ್ಮೆ ಎರಡೂ ಡಿವೈಸ್ ಗಳು ಒಂದೇ ವೈಫೈ ನೆಟ್ ವರ್ಕ್ ಗೆ ಕನೆಕ್ಟ್ ಆದ ಕೂಡಲೇ, ಬಳಕೆದಾರರ ಕೈಬೆರಳುಗಳ ಚಲನೆಯನ್ನು ಹ್ಯಾಕ್ ಮಾಡಲಾಗುತ್ತದೆ. ಬಳಕೆದಾರ ಬಳಸುವ ಕೀಗಳ ಡೈರೆಕ್ಷನ್ ನ್ನು ಹ್ಯಾಕ್ ಮಾಡಿ ಟ್ರೈಸ್ ಮಾಡಲಾಗುತ್ತದೆ. ವಿಕ್ಟಿಮ್ ಟೈಪ್ ಮಾಡಿದ ಎಲ್ಲಾ ಡಾಟಾವನ್ನು ಈ ಮೂಲಕ ಕದಿಯುವುದಕ್ಕೆ ಸಾಧ್ಯವಾಗುತ್ತದೆ.

ನಿಮ್ಮ ಪಾಸ್ ವರ್ಡ್ ರಕ್ಷಣೆಗಾಗಿ ಇದನ್ನು ಮಾಡಿ!

ನಿಮ್ಮ ಪಾಸ್ ವರ್ಡ್ ರಕ್ಷಣೆಗಾಗಿ ಇದನ್ನು ಮಾಡಿ!

ಡಾಟಾ ಪ್ರೈವೆಸಿ ವಿಚಾರದಲ್ಲಿ, ಸೆಕ್ಯುರಿಟಿ ತೊಂದರೆಗಳ ವಿಚಾರದಲ್ಲಿ ನಮ್ಮ ಡಿವೈಸ್ ಯಾವಾಗಲೂ ಅಭದ್ರವಾಗಿಯೇ ಇರುತ್ತದೆ. ನಮ್ಮ ಪ್ರಮುಖ ಮಾಹಿತಿಗಳು ಮತ್ತು ಹಿಂದಿನ ಡಾಟಾವನ್ನು ಸುಲಭದಲ್ಲಿ ನಾವು ಕಳೆದುಕೊಳ್ಳಬೇಕಾಗುತ್ತದೆ. ಸಮಸ್ಯೆ ಆದ ಮೇಲೆ ಚಿಂತಿಸುವುದಕ್ಕಿಂತ ಸಮಸ್ಯೆ ಬರುವ ಮುನ್ನವೇ ಕೆಲವು ಸೂಕ್ತ ಮಾರ್ಗೋಪಾಯವನ್ನು ಅನುಸರಿಸುವುದು ಒಳ್ಳೆಯದು.

ಈ ಭದ್ರತಾ ವಿಚಾರದಲ್ಲಿ ನೀವು ಗಂಭೀರವಾಗಿ ಪರಿಗಣಿಸಲೇಬೇಕು. ಇಲ್ಲದೇ ಇದ್ದರೆ ಖಂಡಿತ ನಿಮ್ಮ ಮೊಬೈಲ್ ನಲ್ಲಿರುವ ಪ್ರಮುಖ ಅಂಶಗಳು ಕಳ್ಳರ ಪಾಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಿಮ್ಮ ಡಿವೈಸ್ ಹ್ಯಾಕ್ ಆಗುವುದನ್ನು ತಡೆಯುವುದು ಹೇಗೆ?

ನಿಮ್ಮ ಡಿವೈಸ್ ಹ್ಯಾಕ್ ಆಗುವುದನ್ನು ತಡೆಯುವುದು ಹೇಗೆ?

1. ಪಬ್ಲಿಕ್ ವೈಫೈ ಗೆ ಯಾವಾಗ ನೀವು ಕನೆಕ್ಟ್ ಆಗುತ್ತೀರೋ ಆಗೆಲ್ಲ VPN ಬಳಕೆ ಮಾಡಿ.

2. ನಿಮ್ಮ ಪಾಸ್ ವರ್ಡ್ ಗಳನ್ನು ಆಗಾಗ ಬದಲಾಯಿಸುತ್ತಾ ಇರಿ ಮತ್ತು ಅದು ಕಠಿಣವಾಗಿರುವ ಪಾಸ್ ವರ್ಡ್ ಗಳಾಗಿರಲಿ. ಯಾರೂ ಕೂಡ ಸುಲಭದಲ್ಲಿ ಗೆಸ್ ಮಾಡುವಂತಿರಬಾರದು.

3. ಅನಗತ್ಯವಾಗಿದ್ದಾಗ ಪಬ್ಲಿಕ್ ವೈಫೈ ಗಳನ್ನು ಬಳಸಬೇಡಿ. ತೀರಾ ಅನಿವಾರ್ಯ ಸಂದರ್ಬದಲ್ಲಿ ಸೆಕ್ಯುರಿಟಿಯ ಮೇಲೆ ಬಳಕೆ ಮಾಡಿ. ಪಬ್ಲಿಕ್ ವೈಫೈಗೆ ಸ್ವಯಂಚಾಲಿತವಾಗಿ ನಿಮ್ಮ ಡಿವೈಸ್ ಕನೆಕ್ಟ್ ಆಗುವ ಆಯ್ಕೆಯನ್ನು ಡಿಸೇಬಲ್ ಮಾಡಿ.

4. ನಿಮ್ಮ ವೈಫೈ ನೆಟ್ ವರ್ಕ್ ನ್ನು ಇತರರು ಬಳಸದಂತೆ ಲಾಕ್ ಮಾಡಿ ಇಡಿ.

5. ಸರಿಯಾದ ಫೈಯರ್ ವಾಲ್ ಗಳನ್ನು ಬಳಕೆ ಮಾಡಿ ಮತ್ತು ನಿಮ್ಮ ಡಿವೈಸ್ ಗೆ ಆಂಟಿ ವೈರಸ್ ಸಾಫ್ಟ ವೇರ್ ನ್ನು ಬಳಸಿ.

Best Mobiles in India

English summary
Using Public WiFi? Your Passwords Can Be Hacked! This Is How You Can Avoid This
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+