ಆನ್‌ಲೈನ್ ವಂಚಕರಿಂದ ಪಾರಾಗಲು ಈ ಕೆಲಸಗಳನ್ನು ಮೊದಲು ಮಾಡಿ!!
ಆನ್‌ಲೈನ್ ವಂಚಕರಿಂದ ಬೆಂಗಳೂರು ನಗರದಲ್ಲಿಯೇ ಪ್ರತಿದಿನ 10 ರಿಂದ 20 ಜನರು ಮೋಸಹೋಗುತ್ತಿದ್ದಾರೆ ಎಂದರೆ ಆನ್‌ಲೈನ್ ವಂಚಕರು ಹೇಗೆಲ್ಲಾ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ತಿಳಿಯಬಹುದು.!!
ಇತ್ತೀಚಿಗಂತೂ ಪ್ರತಿದಿನ ಆನ್‌ಲೈನ್ ವಂಚಕರಿಂದ ಹಣ ಕಳೆದುಕೊಂಡಿರುವವರ ಸುದ್ದಿಯೇ ಹೆಚ್ಚಾಗಿ ಕೇಳಿಬರುತ್ತಿದೆ.! ಆನ್‌ಲೈನ್ ವಂಚಕರಿಂದ ಬೆಂಗಳೂರು ನಗರದಲ್ಲಿಯೇ ಪ್ರತಿದಿನ 10 ರಿಂದ 20 ಜನರು ಮೋಸಹೋಗುತ್ತಿದ್ದಾರೆ ಎಂದರೆ ಆನ್‌ಲೈನ್ ವಂಚಕರು ಹೇಗೆಲ್ಲಾ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ತಿಳಿಯಬಹುದು.!!
ಸೈಬರ್ ಕ್ರಿಮಿನಲ್‌ಗಳಿಗೆ ತಂತ್ರಜ್ಞಾನವನ್ನು ಅಷ್ಟು ಬೇಗ ವಂಚಿಸಲು ಸಾದ್ಯವಿಲ್ಲದಿರುವುದರಿಂದ ಅವರು ಇನ್ನಿತರ ದಾರಿಗಳನ್ನು ಹಿಡಿದು ಗ್ರಾಹಕರಿಗೆ ಮೋಸ ಮಾಡುತ್ತಿದ್ದಾರೆ. ಹಣ ನೀಡುವ, ಗಿಫ್ಟ್ ನೀಡುವ ಅಥವಾ ಇನ್ನೇನನ್ನೋ ಆಮಿಷವೊಡ್ಡಿ ಫೋನ್ ಮೂಲಕ ಅಥವಾ ಇಮೇಲ್ ಮೂಲಕ ಜನರನ್ನು ವಂಚಿಸುತ್ತಿದ್ದಾರೆ.!!

ಇನ್ನು ಕೆಲವೊಮ್ಮೆ ಟೆಕ್ನಾಲಜಿ ಲೋಪವನ್ನು ಸಹ ಹುಡುಕಿಕೊಳ್ಳುವ ಆನ್‌ಲೈನ್ ವಂಚಕರು ನಿಮ್ಮ ಕೆಲವು ಮಾಹಿತಿಗಳಿಂದ ಹಣವನ್ನು ಎಗರಿಸುತ್ತಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಸೈಬರ್ ಕ್ರಿಮಿನಲ್‌ಗಳಿಂದ ನಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಹೇಗೆ ಸುರಕ್ಷಿತವಾಗಿ ಕಾಪಾಡುವುದು ಎಂಬುದನ್ನು ತಿಳಿಯಿರಿ.!!

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ!!
ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿವೆ. ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಡಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್‌ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನಿಡಬೇಡಿ. ಯಾವುದೇ ಬ್ಯಾಂಕ್‌ನಲ್ಲಿಯೂ ಸಹ ಫೋನ್ ಮೂಲಕ ವ್ಯವಹರಿಸುವುದಿಲ್ಲ!

ನಕಲಿ ಫೋನ್, ಇ-ಮೇಲ್‌ಗಳ ಬಗ್ಗೆ ಎಚ್ಚರ!!
ನಿಮ್ಮ ಮೊಬೈಲ್ ನಂಬರ್‌ಗೆ ಗಿಫ್ಟ್ ಬಂದಿದೆ. ನಿಮಗೆ ಫಾರಿನ್ ಟ್ರಿಪ್ ಟಿಕೆಟ್ ಉಚಿತವಾಗಿ ಸಿಕ್ಕಿದೆ. ಉತ್ತಮ ಕೆಲಸ ಕೊಡಿಸುತ್ತೇನೆ ಎಂದು ಫೋನ್ ಅಥವಾ ಇಮೇಲ್‌ಗಳ ಮೂಲಕ ಸಂಪರ್ಕಿಸುವವರ ಬಗ್ಗೆ ಎಚ್ಚರವಾಗಿ. ಅವರೆಲ್ಲರೂ ನಿಮ್ಮ ಬಳಿ ಹಣವನ್ನು ದೂಚುವ ಸಲುವಾಗಿಯೇ ನಾಟಕವಾಡುತ್ತಿರುತ್ತಾರೆ.!!

ಪಿನ್‌ಸಂಖ್ಯೆಯನ್ನು ಯಾರಿಗೂ ಹಂಚಿಕೊಳ್ಳಬೇಡಿ
ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ನಿಮ್ಮಲ್ಲಿಯೇ ಇದ್ದರೂ ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಸಿಕ್ಕರೆ ಸಾಕು, ನಿಮ್ಮ ಹಣಕ್ಕೆ ಪಂಗನಾಮ ಹಾಕುತ್ತಾರೆ.!! ನಿಮ್ಮ ಎಟಿಎಂ ಕಾರ್ಡ್ ನಂಬರ್‌ಗಳನ್ನು ಯಾವುದಾದರೂ ಮೂಲದಿಂದ ಸಂಗ್ರಹ ಮಾಡಿಕೊಳ್ಳುವ ಅವರಿಗೆ ನಿಮ್ಮ ಎಟಿಎಂ ಪಿನ್ ಹಣ ದೋಚಲು ಸಾಕಾಗುತ್ತದೆ.!!

ಪಾಸ್‌ವರ್ಡ್ ಬದಲಿಸುತ್ತಿರಿ.!!
ಬ್ಯಾಂಕಿಂಗ್ ಮತ್ತು ಆನ್‌ಲೈನ್ ಪ್ರಪಂಚದಲ್ಲಿ ಪಾಸ್‌ವರ್ಡ್‌ಗಳೇ ಮುಖ್ಯ.!! ಹಾಗಾಗಿ, ಆನ್‌ಲೈನ್ ಬ್ಯಾಂಕಿಂಗ್ ಪಾಸ್‌ವರ್ಡ್ ಹಾಗೂ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ಯಾವಾಗಲೂ ಬದಲಿಸುತ್ತಿರಿ. ಹೀಗೆ ಮಾಡುವುದರಿಂದ ಸೈಬರ್ ಕಳ್ಳರಿಗೆ ನಿಮ್ಮ ಪಾಸ್‌ವರ್ಡ್ ಕದಿಯಲು ಸಾಧ್ಯವಾಗುವುದಿಲ್ಲ.!!


ಆಂಟಿವೈರೆಸ್ ಸಾಫ್ಟವೇರ್ ಬಳಸಿ.!!
ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕವೇ ನೀವು ಹೆಚ್ಚು ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಅವುಗಳ ಸೆಕ್ಯುರಿಟಿ ಬಗ್ಗೆ ಎಚ್ಚರವಾಗಿರಿ. ಮೊಬೈಲ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿದರೆ ಸೈಬರ್ ಫೈಲ್‌ಗಳು ನಿಮ್ಮ ಡಿವೈಸ್ ಅನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ.!!


Click it and Unblock the Notifications








