Subscribe to Gizbot

ಸ್ಮಾರ್ಟ್‌ಫೋನ್ ಹ್ಯಾಂಗ್ ಆಗದಿರಲು ಏನು ಮಾಡಬೇಕು!?..ಇಲ್ಲಿದೆ 100% ಪರಿಹಾರ!!

Written By:

ಸ್ಮಾರ್ಟ್‌ಫೋನ್ ಯಾವಾಗಲೂ ಹ್ಯಾಂಗ್ ಆಗುವ ಸಮಸ್ಯೆ ಬಹುತೇಕ ಯಾರನ್ನೂ ಬಿಟ್ಟಿಲ್ಲ ಎನ್ನಬಹುದು. ಏಕೆಂದರೆ ಸ್ಮಾರ್ಟ್‌ಫೋನ್ ಅನ್ನು ನಾವು ಎಷ್ಟೇ ಜಾಗರೂಕತೆಯಿಂದ ನೋಡಿಕೊಂಡರೂ ಸಾಫ್ಟ್‌ವೇರ್ ವಿಷಯದಲ್ಲಿ ಫೋನ್ ಬಗ್ಗೆ ಕಾಳಜಿವಹಿಸುವುದು ಹೇಗೆ ಎಂಬುದು ಹಲವರಿಗೆ ತಿಳಿದಿರುವುದಿಲ್ಲ.!!

ಹಾಗಾಗಿ, ಇಂದಿನ ಲೇಖನದಲ್ಲಿ ಕೆಲವು ಸುಲಭ ವಿಧಾನಗಳ ಮೂಲಕ ಫೋನ್ ಸಾಫ್ಟ್‌ವೇರ್ ಅನ್ನು ಹೇಗೆ ಕಾಪಾಡಿಕೊಳ್ಳಬೇಕು? ಮತ್ತು ಫೋನ್ ಹ್ಯಾಂಗ್ ಆಗದೆ ಇರಲು ನಾವು ವಹಿಸಬಹುದಾದ ಎಚ್ಚರಿಕೆಗಳು ಯಾವುವು ಎಂಬುದನ್ನು ತಿಳಿಯೋಣ.! ಅವುಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂತರಿಕ ಮೆಮೊರಿ!!

ಆಂತರಿಕ ಮೆಮೊರಿ!!

ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ಪ್ರಮುಖ ಕಾರಣಗಳಲ್ಲಿ ಮೊದಲನೇ ಕಾರಣವೇ ನಿಮ್ಮ ಇಂಟರ್‌ನಲ್‌ ಮೆಮೊರಿ ಹೆಚ್ಚು ಬಳಕೆಯಾಗಿರುವುದು.! ಮೆಮೊರಿ ಬಳಕೆ ಹೆಚ್ಚಾಗಿದ್ದರೆ ನಿಮ್ಮ ಫೋನ್ ಸಾಫ್ಟ್‌ವೇರ್ ಮೇಲೆ ಹೆಚ್ಚು ಒತ್ತಡ ಬೀಳುವುದರಿಂದ ಫೋನ್ ಹ್ಯಾಂಗ್ ಆಗುತ್ತದೆ.! ಹಾಗಾಗಿ, ಆಂತರಿಕ ಮೆಮೊರಿ ಬಳಕೆ ಕಡಿಮೆ ಮಾಡಿ ಎಕ್ಸ್‌ಟರ್‌ನಲ್‌ ಮೆಮೊರಿ ಉಪಯೋಗಿಸಿ.!!

ಆಪ್‌ಗಳ ಬಳಕೆ ತಿಳಿದಿರಿ!!

ಆಪ್‌ಗಳ ಬಳಕೆ ತಿಳಿದಿರಿ!!

ನಿಮ್ಮ ಫೋನ್‌ಲ್ಲಿರುವ ಬೇಡದ ಆಪ್‌ಗಳನ್ನು ಡಿಲೀಟ್ ಮಾಡಿ. ಯಾವುದೇ ಅಪ್ಲಿಕೇಶನ್‌ ಓಪನ್‌ ಮಾಡಿದ ನಂತರ ಅದನ್ನು ಸರಿಯಾಗಿ ಕ್ಲೋಸ್‌ ಮಾಡಿ, ಎಲ್ಲರಕ್ಕಿಂತ ಹೆಚ್ಚಾಗಿ ಒಮ್ಮೆಲೇ ಹಲವು ಆಪ್‌ಗಳನ್ನು ಬಳಸುವುದನ್ನು ಬಿಡಿ.!! ಈ ಎಲ್ಲಾ ಆಪ್‌ ಕಾರ್ಯಗಳು ನಿಮಗೆ ನೆನಪಿದ್ದರೆ ನಿಮ್ಮ ಪೋನ್ ಹ್ಯಾಂಗ್‌ ಆಗುವುದಿಲ್ಲ.!!

ಫೋನ್ ರಿಸ್ಟೋರ್ ಮಾಡುತ್ತಿರಿ.!!

ಫೋನ್ ರಿಸ್ಟೋರ್ ಮಾಡುತ್ತಿರಿ.!!

ನಿಮ್ಮ ಫೋನ್ ಹ್ಯಾಂಗ್ ಆಗುತ್ತಿದೆ ಎಂದಾದಲ್ಲಿ ನಿಮ್ಮ ಫೋನ್ ಡಾಟಾ ಫ್ಯಾಕ್ಟರಿ ಸೆಟ್ಟಿಂಗ್ ರಿಸ್ಟೋರ್ ಮಾಡುತ್ತಿರಿ. ಹೀಗೆ ಮಾಡುವುದರಿಂದ ನಿಮ್ಮ ಫೋನ್‌ನಲ್ಲಿನ ಜಂಕ್‌ ಫೈಲ್‌ಗಳು ಡಿಲೀಟ್ ಆಗಿ ನಿಮ್ಮ ಫೋನ್ ಹ್ಯಾಂಗ್ ಆಗದಂತೆ ನೋಡಿಕೊಳ್ಳುತ್ತವೆ.!!

ಕಳಪೆ ಚಾರ್ಜರ್ ಬಳಕೆ ಬೇಡ.!!

ಕಳಪೆ ಚಾರ್ಜರ್ ಬಳಕೆ ಬೇಡ.!!

ಬಹುತೇಕರಿಗೆ ತಿಳಿಯದಿರದ ಒಂದು ವಿಷಯ ಎಂದರೆ ಒಂದು ಸ್ಮಾರ್ಟ್‌ಫೋನ್ ಆಯಸ್ಸು ಅರ್ಧದಷ್ಟು ಬೇಗ ಹಾಳಾಗಲು ನಾವು ಬಳಕೆ ಮಾಡುವ ಕಳೆ ಚಾರ್ಜ್‌ರ್‌ಗಳು ಕಾರಣ!! ಕಳಪೆ ಚಾರ್ಜರ್ ಕೇವಲ ಮೊಬೈಲ್ ಹಾರ್ಡ್‌ವೇರ್‌ಗೆ ಮಾತ್ರ ಹಾನಿಮಾಡದೆ ಅದರ ಸಾಫ್ಟ್‌ವೇರ್‌ಗೂ ಹಾನಿ ಮಾಡುತ್ತದೆ ಎಂಬುದನ್ನು ನೆನಪಿಡಿ.!!

ಇಂಟರ್‌ನೆಟ್ ಮೇಲೆ ಗಮನವಿಡಿ!!

ಇಂಟರ್‌ನೆಟ್ ಮೇಲೆ ಗಮನವಿಡಿ!!

ಆನ್‌ಲೈನ್‌ನಲ್ಲಿ ನೀವು ಡೌನ್‌ಲೋಡ್ ಮಾಡುವ ಯಾವುದೇ ಫೈಲ್‌ಗಳು, ವಿಡಿಯೋಗಳು ಮತ್ತು ಇನ್ನಿತರ ವಿಷಯಗಳು ನಿಮ್ಮ ಸ್ಮಾರ್ಟ್ಫೋನ್ ಒಳಗೆ ವೈರಸ್‌ ( ಜಂಕ್ ಫೈಲ್‌) ಅಟ್ಯಾಕ್ ಆಗಲು ಕಾರಣವಾಗಿವೆ. ಹಾಗಾಗಿ, ಅಶ್ಲೀಲ ವೆಬ್‌ಸೈಟ್ ಅಥವಾ ನಂಬಿಕೆಗೆ ಅರ್ಹವಲ್ಲದ ವೆಬ್‌ಸೈಟ್‌ಗಳಿಂದ ಏನನ್ನೂ ಡೌನ್‌ಲೋಡ್ ಮಾಡಬೇಡಿ.!!

ಓದಿರಿ:ಜಿಯೋ ಕಥೆ ಬಿಡಿ!..ವಿಶ್ವಕ್ಕೆ ಉಚಿತವಾಗಿ ಇಂಟರ್‌ನೆಟ್ ನೀಡಲು ಆನ್‌ಲೈನ್‌ ದಿಗ್ಗಜರು ರೆಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
One of the common problem we face with Smartphone nowadays is none other than "Hanging".to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot