ಸಾಫ್ಟ್‌ವೇರ್ (IT) ಉದ್ಯೋಗ ಪಡೆಯಲು ಈ ವಿಷಯಗಳನ್ನು ತಿಳಿದಿರಲೇಬೇಕು!!

Written By:

  ಇಂಜಿನಿಯರಿಂಗ್ ಓದಿದ ನಂತರ ಸಾಫ್ಟ್‌ವೇರ್ ಉದ್ಯೋಗ ಮಾಡುತ್ತೇನೆ ಎನ್ನುವ ಎಷ್ಟೋ ವಿಧ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗದ ಬಗ್ಗೆ ಪ್ಲಾನ್ ಸಹ ಮಾಡಿರುವುದಿಲ್ಲ.!! ಆದರೆ, ಟೆಕ್‌ ಲೋಕ ದೊಡ್ಡ ಸಾಗರ ಇದ್ದಂತೆ. ಇಲ್ಲಿ ದಡ ಸೇರಲು ಕಷ್ಟಪಟ್ಟು ಈಜಲೇಬೇಕು. ಈಜುವ ಮೊದಲು ಈಜುವುದು ಹೇಗೆ ಎಂದು ಮೊದಲೇ ಕಲಿಯಲೇಬೇಕು.!!

  ಪ್ರಸ್ತುತ ಯಾವ ತಂತ್ರಜ್ಞಾನ ಹೆಚ್ಚು ಬೆಲೆ ಹೊಂದಿದೆ? ಯಾವ ಕಂಪನಿ ಮುಂಚೂಣಿಯಲ್ಲಿದೆ? ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು ಮುಂತಾದ ವಿಚಾರಗಳತ್ತ ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಗಮನ ಹರಿಸಿ ಸ್ವಂತ ದೃಷ್ಟಿಕೋನ ಬೆಳೆಸಿಕೊಳ್ಳುವುದು ಮುಖ್ಯ.! ಹಾಗಾಗಿ, ಸಾಫ್ಟ್‌ವೇರ್ ಪ್ರಪಂಚದಲ್ಲಿ ಸದ್ಯ ಟ್ರೆಂಡ್‌ನಲ್ಲಿರುವ ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ವೆಬ್‌ ಡೆವೆಲಪರ್‌

  ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಆನ್‌ಲೈನ್‌ ವ್ಯವಹಾರದಲ್ಲಿಯೇ ಇ-ಕಾಮರ್ಸ್ ಸೇವೆಗಳು ನಡೆಯುತ್ತಿದ್ದು, ಹಾಗಾಗಿ ವೆಬ್‌ ಡೆವೆಲಪರ್‌ಗೆ ಎಲ್ಲಿಲ್ಲದ ಅವಕಾಶಗಳು ಹುಡುಕಿಕೊಂಡು ಬರತೊಡಗಿವೆ. ವೆಬ್‌ ಡೆವೆಲಪರ್ಗಳು ಇಂದು ಲಕ್ಷಗಳಲ್ಲಿ ಸಂಬಳ ಪಡೆಯುತ್ತಿದ್ದಾರೆ.!!

  ಆಂಡ್ರಾಯ್ಡ್ ಡೆವಲಪರ್ಸ್!!

  ಇಂದು ಆಪ್ ಮೂಲಕವೇ ಜೀವನದ ಬಹುತೇಕ ಎಲ್ಲಾ ಕಾರ್ಯಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಸರಿಸುಮಾರು 30 ಲಕ್ಷಕ್ಕೂ ಹೆಚ್ಚು ಆಪ್‌ಗಳಿದ್ದರೂ ಸಹ ಇನ್ನು ಸಹ ಆಪ್‌ಗಳಿಗೆ ಬೇಡಿಕೆ ಹುಟ್ಟುತ್ತಲೇ ಇದೆ.!! ಹಾಗಾಗಿ, ಆಂಡ್ರಾಯ್ಡ ತಂತ್ರಜ್ಞಾನವನ್ನು ಕಲಿತುಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ.!!

  ಇಂಟರ್‌ನೆಟ್‌ ಆಫ್ ಥಿಂಗ್ಸ್!!

  ಯಾವುದೋ ಒಂದು ನಿರ್ದಿಷ್ಟ ಉಪಯೋಗಕ್ಕೆ ಅಥವಾ ಉಪಕರಣಗಳಿಗೆ ಅಪ್ಲಿಕೇಷನ್‌ ಬರೆಯುವುದು ಇಂಟರ್‌ನೆಟ್‌ ಆಫ್ ಥಿಂಗ್ಸ್ ವಿಶೇಷ.!! ಇಂಟರ್‌ನೆಟ್‌ ಆಫ್ ಥಿಂಗ್ಸ್‌ಗಾಗಿ ಉದ್ಯಮಿಗಳು ದೊಡ್ಡ ಮೊತ್ತದ ಬಂಡವಾಳವನ್ನು ಹೂಡುತ್ತಿದ್ದು, ತಂತ್ರಜ್ಞಾನದಲ್ಲಿ ಕ್ರಾಂತಿ ಇಲ್ಲಿಂದ ಆರಂಭವಾಗಲಿದೆ.!!

  ಪೈಥಾನ್‌

  ವಿಡಿಯೋ ಗೇಮ್‌ಗಳನ್ನು ಅಭಿವೃದ್ಧಿಪಡಿಸುವುದರ ಹಿಂದೆ ಇರುವ ಮ್ಯಾಜಿಕ್‌ ಲ್ಯಾಂಗ್ವೇಜ್‌ ಈ ಪೈಥಾನ್‌. ಕೋಡ್‌ ಬರೆಯುವ ಸಾಧಾರಣ ಕ್ರಿಯೆಯೂ ಮನರಂಜನೆ ಒದಗಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಪೈಥಾನ್‌!! ನಿಮಗೆ ಗೊತ್ತಾ?..ಗೂಗಲ್‌, ಯಾಹೂ ಮತ್ತು ಐಬಿಎಂನಲ್ಲಿ ಪೈಥಾನ್‌ ಪ್ರೋಗ್ರಾಮರ್‌ಗಳಿಗೆ ಹೆಚ್ಚಿನ ಬೆಲೆ ಇದೆ.!!

  ಸಿ ಮತ್ತು ಸಿ++ ಪ್ರೋಗ್ರಾಮಿಂಗ್!!

  ದಶಕಗಳೇ ಕಳೆದರೂ ಬೇಡಿಕೆ ಕಳೆದುಕೊಂಡಿಲ್ಲದ ತಂತ್ರಜ್ಞಾನ ಎಂದರೆ ಸಿ ಮತ್ತು ಸಿ++ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌! ಅಂತರಾಷ್ಟ್ರೀಯ ಕಂಪೆನಿಗಳೂ ಸೇರಿದಂತೆ ದೇಶದ ಬಹುತೇಕ ಎಲ್ಲಾ ಕಂಪೆನಿಗಳು, ಸಣ್ಣಪುಟ್ಟ ಉಧ್ಯಮಗಳಲ್ಲಿಯೂ ಉಪಯೋಗವಾಗುತ್ತಿರುವ ಸಿ/ ಸಿ++ ಪ್ರೋಗ್ರಾಮಿಂಗ್ ತಿಳಿದಿದ್ದರೆ ಒಳ್ಳೆಯ ಸಂಬಳಕ್ಕೆ ದಕ್ಕೆ ಇಲ್ಲ.!!

  ಡಿಆಕ್ಟಿವೇಟ್ ಆದ 11.44 ಲಕ್ಷ ಪಾನ್ ಕಾರ್ಡ್‌ನಲ್ಲಿ ನಿಮ್ಮದು ಇದೆಯಾ?!! ಚೆಕ್ ಮಾಡುವುದು ಹೇಗೆ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  The sexiest career of the 21st century.to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more