ಕಂಪ್ಯೂಟರ್ ಪ್ರೋಗ್ರಾಮಿಂಗ್ ಎಂದರೆ ಏನು ಗೊತ್ತಾ!?..ಕನ್ನಡಲ್ಲಿಯೂ ಪ್ರೋಗ್ರಾಮಿಂಗ್ ಮಾಡಬಹುದು!!

Written By:

ಕಂಪ್ಯೂಟರ್ ಪ್ರೋಗ್ರಾಮಿಂಗ್ ಎಂದರೆ ಏನು ಎಂಬುದನ್ನು ಸಾಮಾನ್ಯರಿಗೆ ಈಗಲೂ ಕೂಡ ಅರ್ಥವಾಗಿಲ್ಲ. ಆದರೆ, c, c++, ಜಾವಾ, php, c# ಎಂದರೆ ಮಾತ್ರ ಇದು ಕಂಪ್ಯೂಟರ್ ಕಲಿಯುವವರಿಗೆ ಬೇಕಾದ ವಿಷಯಗಳು ಎಂದಷ್ಟೇ ಅಂದುಕೊಳ್ಳುತ್ತಾರೆ.! ಹಾಗಾಗಿ, ಇಂದಿನ ಲೇಖನದಲ್ಲಿ ಕಂಪ್ಯೂಟರ್ ಪ್ರೊಗ್ರಾಮಿಂಗ್ ಎಂದರೇನು ಎಂಬುದನ್ನು ತಿಳಿಯೋಣ.!!

ಕಂಪ್ಯೂಟರ್ ಎಂಬುದು ಒಳ್ಳೆಯ ನೆನಪಿನ ಶಕ್ತಿ ಇರುವ ಜಾಣ ಮಗುವಿನಂತೆ. ಎಲ್ಲವನ್ನು ಅರ್ಥಮಾಡಿಕೊಳ್ಳುವ ಅದಕ್ಕೆ ನಾವು ಕಲಿಸಿಕೊಡದ ಹೊರತು ಏನೂ ತಿಳಿಯುವುದಿಲ್ಲ. ಕಂಪ್ಯೂಟರಿಗೆ ನಮಗೆ ಬೇಕಿರುವ ಕೆಲಸವನ್ನು ಮಾಡುವುದನ್ನು ಹೇಳಿಕೊಡಬೇಕಾಗುತ್ತದೆ. ಹೀಗೆ ಹೇಳಿಕೊಡುವುದನ್ನೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಎನ್ನುತ್ತಾರೆ.!!

ಕಂಪ್ಯೂಟರ್ ಪ್ರೋಗ್ರಾಮಿಂಗ್ ಎಂದರೆ ಏನು ಗೊತ್ತಾ!?..ಕನ್ನಡಲ್ಲಿಯೂ ಪ್ರೋಗ್ರಾಮಿಂಗ್?

ಇಲ್ಲಿ ಇರುವ ಕಷ್ಟ ಎಂದರೆ, ಒಂದು ಸಣ್ಣ ಮಗು ನಾವು ಹೇಳಿಕೊಟ್ಟಿದ್ದನ್ನು ಆಲೋಚಿಸಿ ಕಲಿಯುತ್ತದೆ. ಆದರೆ, ಕಂಪ್ಯೂಟರ್‌ಗೆ ನಮ್ಮ ಕೆಲಸದ ಪ್ರತೀ ಹೆಜ್ಜೆಯನ್ನೂ ಹೇಳಿಕೊಡಬೇಕಾಗುತ್ತದೆ.! ಹಾಗಾಗಿ, ಇಂದಿನ ಲೇಖನದಲ್ಲಿ ಕಂಪ್ಯೂಟರ್ ಲೋಕದ ಬಹು ಸಂಕೀರ್ಣ ಅಂಶವಾದ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಗ್ಗೆ ಬಹಳ ಸುಲಭವಾಗಿ ತಿಳಿಯೋಣ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಂಪ್ಯೂಟರಿನ ಭಾಷೆಯಲ್ಲಿ ಎರಡು ಪದಗಳು ಮಾತ್ರ!!

ಕಂಪ್ಯೂಟರಿನ ಭಾಷೆಯಲ್ಲಿ ಎರಡು ಪದಗಳು ಮಾತ್ರ!!

ಕಂಪ್ಯೂಟರಿಗೆ ನಾವು ಮಾತನಾಡುವ ಭಾಷೆ ಅರ್ಥವಾಗುವುದಿಲ್ಲ. ಅದಕ್ಕೆ ಅದರದೇ ಭಾಷೆಯಲ್ಲಿ ಅರ್ಥ ಮಾಡಿಸಬೆಕು. ಆದರೆ, ಕಂಪ್ಯೂಟರಿನ ಭಾಷೆಯಲ್ಲಿ ಕೇವಲ ಎರಡು ಪದಗಳು ಮಾತ್ರ ಇವೆ. ಅವೆಂದರೆ 0 ಮತ್ತು 1. ನಾವು ಏನೇ ಹೇಳುವುದಿದ್ದರೂ ಇವೆರಡೇ ಪದಗಳಲ್ಲಿ ಹೇಳಬೇಕು ಮತ್ತು ಅರ್ಥ ಮಾಡಿಸಬೇಕು.!!

0 ಮತ್ತು 1 ಬಿಟ್ಟು ಇಂಗ್ಲೀಷ್ ಪದ ಬಳಕೆ ಏಕೆ?

0 ಮತ್ತು 1 ಬಿಟ್ಟು ಇಂಗ್ಲೀಷ್ ಪದ ಬಳಕೆ ಏಕೆ?

ಕಂಪ್ಯೂಟರಿನ ಭಾಷೆಯಲ್ಲಿ ಕೇವಲ ಎರಡು ಪದಗಳು ಮಾತ್ರ ಇವೆ ಎಂದು ಹೇಳಿದೆ ಎಲ್ಲವೇ?.ಈ ಭಾಷೆಗೆ Machine Level Language ಅಂತ ಕರೆಯುತ್ತಾರೆ. ಈ ಭಾಷೆಯಲ್ಲಿ ನಾವು ಕಂಪ್ಯೂಟರಿನ ಜೊತೆಗೆ ಮಾತನಾಡುವುದ ಕಷ್ಟ. ಅದಕ್ಕೆ ಸರಳವಾದ ಇಂಗ್ಲೀಷ್ ಪದಗಳಿರುವ ಪದಗಳನ್ನು ಬಳಕೆ ಮಾಡಿದ್ದಾರೆ.!!

ಇಂಗ್ಲೀಷ್ ಪದಗಳ ಭಾಷೆ ಅಭಿವೃದ್ಧಿ!!!

ಇಂಗ್ಲೀಷ್ ಪದಗಳ ಭಾಷೆ ಅಭಿವೃದ್ಧಿ!!!

ಸರಳವಾದ ಇಂಗ್ಲೀಷ್ ಪದಗಳನ್ನು ಬಳಕೆ ಮಾಡಿ ಕಂಪ್ಯೂಟರ್ ಜೊತೆ ಮಾತನಾಡುವುದು ಎಂದರೆ ಅರ್ಥವಾಗದೇ ಇರಬಹುದು. ಆದರೆ ಇದನ್ನೇ c, c++, ಜಾವಾ, php, c# ಎನ್ನುತ್ತಾರೆ.!! High Level Language ಎಂದು ಕರೆಯುವ ಇವುಗಳು ಸರಳವಾಗಿ ಕಂಪ್ಯೂಟರ್ ಜೊತೆ ಮಾತನಾಡಲು ಅಭಿವೃದ್ಧಿ ಪಡಿಸಿರುವ ಭಾಷೆಗಳು!!

ಕಂಪ್ಯೂಟರ್ ಇಂಗ್ಲೀಷ್ ಭಾಷೆ!!

ಕಂಪ್ಯೂಟರ್ ಇಂಗ್ಲೀಷ್ ಭಾಷೆ!!

c, c++, ಜಾವಾ, php, c# ಎಂಬ High Level Language ಭಾಷೆಯನ್ನು ಬಳಸಿ ಕಂಪ್ಯೂಟರಿನ ಜೊತೆಗೆ ಮಾತನಾಡಿದರೆ ಕಂಪ್ಯೂಟರ್ ಅದನ್ನು ತನ್ನ ಭಾಷೆಗೆ ಒಂದು ಸಲಕರಣೆಯನ್ನು ಬಳಸಿ ಅನುವಾದಿಸಿಕೊಳ್ಳುತ್ತದೆ. ಈ ರೂಪುರೇಷೆಯನ್ನು ಅಲ್ಗಾರಿದಂ ಎಂದು ಕರೆಯಲಾಗುತ್ತದೆ.!!

ಸ್ವ ಅನುವಾದ ಮಾಡಿಕೊಳ್ಳುತ್ತದೆ ಕಂಪ್ಯೂಟರ್!

ಸ್ವ ಅನುವಾದ ಮಾಡಿಕೊಳ್ಳುತ್ತದೆ ಕಂಪ್ಯೂಟರ್!

ನಾವು ಈ ಭಾಷೆಯನ್ನು ಬಳಸಿ ಕಂಪ್ಯೂಟರಿನ ಜೊತೆಗೆ ಮಾತನಾಡಿದರೆ ಕಂಪ್ಯೂಟರ್ ಅದನ್ನು ತನ್ನ ಭಾಷೆಗೆ ಒಂದು ಸಲಕರಣೆಯನ್ನು ಬಳಸಿ ಅನುವಾದಿಸಿಕೊಳ್ಳುತ್ತದೆ. ಇದರಲ್ಲಿ ಎರಡು ವಿಭಾಗಗಳಿದ್ದು, ಈ ಸಲಕರಣೆಗಳನ್ನು ಕಂಪೈಲರ್ ಅಥವಾ ಇಂಟರ್ ಪ್ರಿಟರ್ ಎಂದು ಕರೆಯುತ್ತಾರೆ.!!

ಏನಿದು ಕಂಪೈಲರ್ ಮತ್ತು ಇಂಟರ್ ಪ್ರಿಟರ್ ?

ಏನಿದು ಕಂಪೈಲರ್ ಮತ್ತು ಇಂಟರ್ ಪ್ರಿಟರ್ ?

ಕಂಪೈಲರ್ ಮತ್ತು ಇಂಟರ್ ಪ್ರಿಟರ್ ಗಳ ನಡುವಿನ ವ್ಯತ್ಯಾಸವೇನೆಂದರೆ ಕಂಪೈಲರ್ ನಾವು ಹೇಳಿದ್ದ ಎಲ್ಲಾ ವಾಕ್ಯಗಳನ್ನೂ ಒಟ್ಟಿಗೆ ಅನುವಾದಿಸಿ ಕಂಪ್ಯೂಟರ್ ಗೆ ಹೇಳುತ್ತದೆ. ಆದರೆ ಇಂಟರ್ ಪ್ರಿಟರ್ ಒಂದೊಂದೇ ವಾಕ್ಯವನ್ನು ಕಂಪ್ಯೂಟರ್ ಗೆ ಅನುವಾದಿಸಿ ಹೇಳುತ್ತದೆ ಅಷ್ಟೆ.!!

ಕನ್ನಡದಲ್ಲಿಯೂ ಪ್ರೋಗ್ರಾಮಿಂಗ್ ಮಾಡಬಹುದು!!

ಕನ್ನಡದಲ್ಲಿಯೂ ಪ್ರೋಗ್ರಾಮಿಂಗ್ ಮಾಡಬಹುದು!!

ಕನ್ನಡವನ್ನೇ ಬಳಸಿ ಪ್ರೋಗ್ರಾಮ್ ಮಾಡಲು ಕೆಲವು ಪ್ರಯತ್ನಗಳು ಈಗಾಗಲೇ ನಡೆದಿವೆ. 'ಕರ್ಪೂರ' ತಂತ್ರಾಂಶದಿಂದ ಮೊದಲಾಗಿ, ಚಿಕ್ಕ ಮಕ್ಕಳಿಗೆ ಪ್ರೋಗ್ರಾಮಿಂಗ್ ಕಲಿಸಲು ರೂಪಿಸಲಾದ ಡಾ. ಯು. ಬಿ. ಪವನಜ ಅವರ 'ಲೋಗೋ'. ಹಾಗೂ ತಂತ್ರಜ್ಞ ಶ್ರೀಹರ್ಷ ಸಾಲಿಮಠ ಅವರ ವಿನೂತನ ಪ್ರಯತ್ನ 'ನಾಡೋಜ' ಇದಕ್ಕೆ ಉದಾಹರಣೆ.!! Nadoja.com ನಲ್ಲಿ ಕನ್ನಡದಲ್ಲಿ ಪ್ರೋಗ್ರಾಮಿಂಗ್ ಕಲಿಯಲು ನಿಮಗೆ ಹೇರಳ ಅವಕಾಶ ಕೂಡ ಇದೆ.!!

ಮುಂದೆ ಓದಿರಿ: ಕಂಪ್ಯೂಟರ್ ವೈರಸ್ ಎಂದರೆ ಏನು? ಸಮಸ್ಯೆ ಹೇಗೆ ಕಂಡುಹಿಡಿಯುವುದು?

ಮುಂದೆ ಓದಿರಿ: ಕಂಪ್ಯೂಟರ್ ವೈರಸ್ ಎಂದರೆ ಏನು? ಸಮಸ್ಯೆ ಹೇಗೆ ಕಂಡುಹಿಡಿಯುವುದು?

ವೈರಸ್ ಎಂದರೆ ಏನು? ಇದು ಏಕೆ ಬೆಳವಣಿಗೆಯಾಗಿದೆ?

ಮಾನವನ ಕಾಡುವ ವೈರಸ್‌ಗಳಿಗೂ ಕಂಪ್ಯೂಟರ್‌ ವೈರಸ್‌ಗಳಿಗೂ ಸಂಬಂಧವೇ ಇಲ್ಲ. ಕಂಪ್ಯೂಟರ್ ವೃರಸ್‌ಗಳು ಎಂದರೆ ಹ್ಯಾಕರ್‌ಗಳು ಅಭಿವೃಧಿಪಡಿಸಿರುವ ಕುತಂತ್ರ ಅಪ್ಲಿಕೇಷನ್‌ಗಳು ಅಷ್ಟೇ.!! ಕೆಲವು ತಂತ್ರಜ್ಞರ ಪ್ರಕಾರ ಹೆಸರಾಂತ ಕಂಪೆನಿಗಳೇ ಇಂತರ ವೈರಸ್‌ ಅಪ್ಲಿಕೇಷನ್‌ಗಳನ್ನು ಅಭಿವೃಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರಂತೆ.!!

ವೈರಸ್ ಇದೆ ಎಂದು ಹೇಗೆ ಕಂಡುಹಿಡಿಯುವುದು?

ವೈರಸ್ ಇದೆ ಎಂದು ಹೇಗೆ ಕಂಡುಹಿಡಿಯುವುದು?

ಸಿಸ್ಟಂನಲ್ಲಿ ವೈರಸ್‌ ಸೇರಿಕೊಂಡಿರುವುದನ್ನು ಕೆಲವು ಗುಣಲಕ್ಷಣಗಳ ಮೂಲಕ ಪತ್ತೆ ಮಾಡಬಹುದು. ಕಂಪ್ಯೂಟರ್‌ ನಿಧಾನವಾದರೆ, ಕಂಪ್ಯೂಟರ್‌ ಅಪ್ಲಿಕೇಷನ್‌ಗಳು ಕ್ರ್ಯಾಶ್ ಆಗುತ್ತಿದ್ದರೆ ನಿಮ್ಮ ಕಂಪ್ಯೂಟರ್‌ನಲ್ಲಿ ವೈರಸ್‌ ಸೇರಿಕೊಂಡಿದೆ ಎಂದು ಅರ್ಥ. ಕೆಲವೊಮ್ಮೆ ವೈರಸ್‌ನಿಂದಾಗಿ ನಿಮ್ಮ ಕಂಪ್ಯೂಟರ್ ಯಾವಾಗಲೂ ಶಟ್‌ಡೌನ್ ಆಗುತ್ತಿರುತ್ತದೆ!!

ವೈರಸ್ ಸೇರಿದೆ ಎಂದಾಗ ತಕ್ಷಣ ಏನು ಮಾಡಬೇಕು?

ವೈರಸ್ ಸೇರಿದೆ ಎಂದಾಗ ತಕ್ಷಣ ಏನು ಮಾಡಬೇಕು?

ವೈರಸ್‌ ಕಂಪ್ಯೂಟರ್‌ ಅನ್ನು ಪ್ರವೇಶಿಸಿದೆ ಎಂಬ ಅನುಮಾನ ಬಂದ ಕೂಡಲೇ ಮೊದಲು ಕಂಪ್ಯೂಟರ್‌ ಅಂತರ್ಜಾಲ ಸಂಪರ್ಕ ತಪ್ಪಿಸಿ. ಇದರಿಂದ ಹ್ಯಾಕರ್‌ಗಳು, ಇಂಟರ್‌ನೆಟ್‌ ಮೂಲಕ ಕಂಪ್ಯೂಟರ್‌ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲಾ.!!

ವೈರಸ್ ಅನ್ನು ನಾವೆ ಡಿಲೀಟ್ ಮಾಡಲು ಸಾಧ್ಯವೇ?

ವೈರಸ್ ಅನ್ನು ನಾವೆ ಡಿಲೀಟ್ ಮಾಡಲು ಸಾಧ್ಯವೇ?

ಹೌದು, ಕಂಪ್ಯೂಟರ್‌ಗೆ ಸೇರಿಕೊಂಡಿರುವ ವೈರಸ್ ಅನ್ನು ನಾವೆ ಡಿಲೀಟ್ ಮಾಡಲು ಸಾಧ್ಯವಿದೆ.!! ಆದರೆ, ಅದಕ್ಕಾಗಿ ನಾವು ಎಕ್ಸ್‌ಟರ್‌ನಲ್‌ ಡಿವೈಸ್‌ನಲ್ಲಿ ಆಂಟಿವೈರಸ್ ಸಾಫ್ಟ್‌ವೇರ್ ಹೊಂದಿರಬೇಕು. ಆಂಟಿವೈರಸ್ ಸಾಫ್ಟ್‌ವೇರ್ ಹೊಂದಿದ್ದರೆ ವೈರಸ್‌ ಹೇಗೆ ಡಿಲೀಟ್ ಮಾಡಬಹುದು ಎಂದು ಮುಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ತಂತ್ರಜ್ಞಾನದ ಹೆಚ್ಚು ಮಾಹಿತಿಗೆ ನಮ್ಮ ಫೆಸ್‌ಬುಕ್ ಪೇಜ್ ಲೈಕ್ ಮಾಡಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Computer programming (often shortened to programming) is a process that leads from an original formulation of a computing problem to executable computer programs.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot