ಯುಎಸ್‌ಬಿ ಡಿಬಗ್ಗಿಂಗ್ ಎಂದರೆ ಗೊತ್ತಾ..? ಗೊತ್ತಿದ್ರೂ ಎನೇಬಲ್ ಮಾಡೋದು ಹೇಗೆ?

By GizBot Bureau
|

ಆಂಡ್ರಾಯ್ಡ್ಸ್ ಯುಎಸ್ ಬಿ ಡಿಬಗ್ಗಿಂಗ್ ಎಂಬ ಹೆಸರು ನಿಮಗೆ ಸ್ವಲ್ಪ ಆಶ್ಚರ್ಯ ಮತ್ತು ಸಾಮಾನ್ಯರಿಗೆ ಇಂದೆಂತ ವಿಚಿತ್ರ ಎಂದೆನಿಸಬಹುದು. ಹಾಗಂತ ಇದು ನೀವಂದುಕೊಳ್ಳುವಷ್ಟು ಕಷ್ಟವಾದುದ್ದೋ ಅಥವಾ ಸಮಸ್ಯೆ ಉಂಟುಮಾಡುವುದೋ ಅಲ್ಲವೇ ಅಲ್ಲ. ಯುಎಸ್ ಬಿ ಡಿಬಗ್ಗಿಂಗ್ ಎಂದರೆ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಿಗೆ ಮಾಹಿತಿಗಳನ್ನು ಕಂಪ್ಯೂಟರ್ ಗೆ ಟ್ರಾನ್ಸ್ಫರ್ ಮಾಡುವುದಕ್ಕೆ ಇರುವ ಒಂದು ಮಾರ್ಗವಷ್ಟೇ.

ಯುಎಸ್‌ಬಿ ಡಿಬಗ್ಗಿಂಗ್ ಎಂದರೆ ಗೊತ್ತಾ..? ಗೊತ್ತಿದ್ರೂ ಎನೇಬಲ್ ಮಾಡೋದು ಹೇಗೆ?

ಇದೊಂದು ಸರಳವಾದ ವಿಧಾನವಾಗಿದ್ದು ಆಂಡ್ರಾಯ್ಡ್ ಡಿವೈಸ್ ಗಳನ್ನು ರೂಟ್ ಮಾಡುವುದಕ್ಕೆ ಇದು ನೆರವಾಗುತ್ತದೆ, ADB ಕಮಾಂಡ್ ಗಳನ್ನು ಕೊಡುವುದಕ್ಕೆ, ಬ್ರಿಕ್ ಆಗಿರುವ ಫೋನ್ ಗಳನ್ನು ಫಿಕ್ಸ್ ಮಾಡುವುದಕ್ಕೆ ಹೀಗೆ ಹಲವು ಕೆಲಸಗಳಿಗೆ ಯುಎಸ್ ಬಿ ಡಿಬಗ್ಗಿಂಗ್ ನೆರವಿಗೆ ಬರುತ್ತದೆ. ಈ ಲೇಖನದಲ್ಲಿ ನಾವು ಅದನ್ನೇ ನಿಮಗೆ ವಿವರಿಸುತ್ತಿದ್ದೇವೆ ಮತ್ತು ಹೇಗೆ ಯುಎಸ್ ಬಿ ಡಿಬಗ್ಗಿಂಗ್ ಮಾಡುವುದು ಎಂಬ ಬಗ್ಗೆ ಹಂತಹಂತವಾಗಿ ವಿವರಣೆಯನ್ನು ನೀಡಿದ್ದೇವೆ.

ಯುಎಸ್ ಬಿ ಡಿಬಗ್ಗಿಂಗ್ ಎಂದರೇನು?

ಯುಎಸ್ ಬಿ ಡಿಬಗ್ಗಿಂಗ್ ಎಂದರೇನು?

ಹೆಸರೇ ಸೂಚಿಸುವಂತೆ, ಯುಎಸ್ ಬಿ ಡಿಬಗ್ಗಿಂಗ್ ಎಂದರೆ ಯುಎಸ್ ಬಿ ಮೂಲಕ ಬಗ್ಸ್ ಗಳನ್ನು ಟ್ರಾಕ್ ಮಾಡುವಿಕೆ. ಸಾಮಾನ್ಯವಾಗಿ, ಆಂಡ್ರಾಯ್ಡ್ ಆಪ್ ಡೆವಲಪರ್ ಗಳು ಈ ಪ್ರೊಸೆಸ್ ನ್ನು ತಮ್ಮ ಸಾಫ್ಟ್ ವೇರ್ ನ್ನು ಟೆಸ್ಟ್ ಮಾಡಲು ಬಳಸುತ್ತಾರೆ ಮತ್ತು ಕಂಪ್ಯೂಟರ್ ನ ಆಂಡ್ರಾಯ್ಡ್ ಸ್ಟುಡಿಯೋ ಡೆವಲಪ್ ಮೆಂಟ್ ಕಿಟ್ ಬಳಸಿ ಆ ಸಮಸ್ಯೆಯನ್ನು ಹುಡುಕಾಡುತ್ತಾರೆ. ಈಗೆಲ್ಲ ಡೆವಲಪರ್ಸ್ ಮತ್ತು ಆಂಡ್ರಾಯ್ಡ್ ಬಳಕೆದಾರರು ಎಲ್ಲರೂ ಇದನ್ನು ಬಳಸುತ್ತಿದ್ದಾರೆ.ಕಸ್ಟಮ್ ರಿಕವರಿ ಇನ್ಸ್ಟಲೇಷನ್, ಡಿವೈಸ್ ರೂಟ್ ಮಾಡುವುದು ಮತ್ತು ಹೊಸ ROM ನ್ನು ಇನ್ಸ್ಟಾಲ್ ಮಾಡುವುದು ಹೀಗೆ ಅನೇತ ಕೆಲಸಗಳಿಗೆ ಬಳಸಲಾಗುತ್ತಿದೆ.

ಯುಎಸ್ ಬಿ ಡಿಬಗ್ಗಿಂಗ್ ಅನೇ ಬಲ್ ಮಾಡುವುದು ಹೇಗೆ?

ಯುಎಸ್ ಬಿ ಡಿಬಗ್ಗಿಂಗ್ ಅನೇ ಬಲ್ ಮಾಡುವುದು ಹೇಗೆ?

ಯುಎಸ್ ಬಿ ಡಿಬಗ್ಗಿಂಗ್ ಅನೇಬಲ್ ಮಾಡುವುದಕ್ಕೆ ಆಂಡ್ರಾಯ್ಡ್ ನಲ್ಲಿ ನೀವು ಮೊದಲು ಮೆನುವಿನಲ್ಲಿರುವ 'Developer options'(ಒಂದು ವೇಳೆ ಈ ಮೊದನೇ ನೀವಿದನ್ನು ಮಾಡಿಲ್ಲದೇ ಇದ್ದಲ್ಲಿ) ಅನ್ನು ಅನೇಬಲ್ ಮಾಡಬೇಕು (if you haven't already). ಈ ಕೆಳಗೆ ಅದರ ಹಂತಗಳನ್ನು ವಿವರಿಸಲಾಗಿದೆ.

•ಡಿವೈಸ್ ನ ಸೆಟ್ಟಿಂಗ್ಸ್ ಮೆನುವನ್ನು ತೆರೆಯಿರಿ.
•About phone ಗೆ ಸ್ಕ್ರಾಲ್ ಡೌನ್ ಮಾಡಿ.
•Build number ನ್ನು ಸುಮಾರು 7 ಬಾರಿ ಟ್ಯಾಪ್ ಮಾಡಿ. ನಿಮಗೆ "Developer options are activated" ಅನ್ನೋ ಮೆಸೇಜ್ ಬರುವವರೆಗೆ ಟ್ಯಾಪ್ ಮಾಡಬೇಕು.
•ಬ್ಯಾಕ್ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ನೀವು Developer optionsನ್ನು ಸೆಟ್ಟಿಂಗ್ಸ್ ಪೇಜ್ ನ ಕೆಳಭಾಗದಲ್ಲಿ ಗಮನಿಸಬಹುದು.
•ಅದನ್ನು ಟ್ಯಾಪ್ ಮಾಡಿ ಮತ್ತು USB debugging ಆಯ್ಕೆ ಸಿಗುವವರೆಗೆ ಸ್ಕ್ರೋಲ್ ಡೈನ್ ಮಾಡಿ. ಅದನ್ನು ಪ್ರೆಸ್ ಮಾಡಿ ಮತ್ತು Ok ಒತ್ತಿ ಅದನ್ನು ಅನೇಬಲ್ ಮಾಡಿ.

ಒಂದು ವೇಳೆ ನೀವು ಆಂಡ್ರಾಯ್ಡ್ 2.3 ಅಥವಾ ಅದಕ್ಕಿಂದ ಮುಂಚಿನದ್ದರಲ್ಲಿ ನಿಮ್ಮ ಡಿವೈಸ್ ರನ್ ಆಗುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

ಒಂದು ವೇಳೆ ನೀವು ಆಂಡ್ರಾಯ್ಡ್ 2.3 ಅಥವಾ ಅದಕ್ಕಿಂದ ಮುಂಚಿನದ್ದರಲ್ಲಿ ನಿಮ್ಮ ಡಿವೈಸ್ ರನ್ ಆಗುತ್ತಿದ್ದರೆ ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.

•ಸೆಟ್ಟಿಂಗ್ಸ್ ತೆರೆಯಿರಿ

•Applications ನ್ನು ಟ್ಯಾಪ್ ಮಾಡಿ (ಕೆಲವೊಮ್ಮೆ Apps ಅಥವಾ App Manager ಎಂದು ಕೂಡ ಕರೆಯಲಾಗುತ್ತದೆ.)

•Developer options ಸಿಗುವವರೆಗೆ ಸ್ಕ್ರೋಲ್ ಡೌನ್ ಮಾಡಿ.

•ಅದನ್ನು ಟ್ಯಾಪ್ ಮಾಡಿ ಮತ್ತು USB debuggingಅನೇಬಲ್ ಮಾಡಿ.

ಈ ಸೆಟ್ಟಿಂಗ್ಸ್ ಮಾಡುವುದರಿಂದ ಪ್ರಯೋಜನವೇನು?

ಈ ಸೆಟ್ಟಿಂಗ್ಸ್ ಮಾಡುವುದರಿಂದ ಪ್ರಯೋಜನವೇನು?

ಮೇಲಿನ ಹಂತಗಳನ್ನು ಪೂರೈಸಿದರೆ ನೀವು ಎಲ್ಲವನ್ನು ಸೆಟ್ ಮಾಡಿದಂತಾಗುತ್ತದೆ. ಯುಎಸ್ ಬಿ ಡಿಬಗ್ಗಿಂಗ್ ಆಕ್ಟಿವೇಟ್ ಆಗಿರುತ್ತದೆ, ಈಗ ನೀವು custom ROMs ನ್ನು ನಿಮ್ಮ ಆಂಡ್ರಾಯ್ಡ್ ಡಿವೈಸ್ ನಲ್ಲಿ ಇನ್ಸ್ಟಾಲ್ ಮಾಡಲು ಸಾಧ್ಯವಾಗುತ್ತದೆ ಅಥವಾ ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನ್ ನ ಸ್ಕ್ರೀನ್ ಒಡೆದು ಹೋಗಿದ್ದರೆ ರಿಮೂಟ್ ನಲ್ಲಿ ಸ್ಮಾರ್ಟ್ ಫೋನ್ ನ್ನು ಆಪರೇಟ್ ಮಾಡಲು ಕೂಡ ಸಾಧ್ಯವಾಗುತ್ತದೆ.

Best Mobiles in India

English summary
What is USB debugging and how do I enable it? To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X