Subscribe to Gizbot

ವನ್ನಾಕ್ರೈ ಎಫೆಕ್ಟ್..ಈ 2 ದಿನ ಇಂಟರ್‌ನೆಟ್ ಬಳಕೆ ಮಾಡಲೇಬೇಡಿ!! ಏಕೆ ಗೊತ್ತಾ?

Written By:

ಪ್ರಪಂಚದ ಬಹುದೊಡ್ಡ ಸೈಬರ್ ದಾಳಿಯ ಬಗ್ಗೆ 150 ದೇಶಗಳಿಂದ ವರದಿಗಳು ಬಂದಿವೆ ಎನ್ನಲಾಗಿದ್ದು, ಇಂಹದೇ ಮತ್ತೊಂದು ದಾಳಿ ನಡೆಯುವ ಅಪಾಯವಿದೆ ಎಂದು ಐರೋಪ್ಯ ಒಕ್ಕೂಟದ ಭದ್ರತಾ ಸಂಸ್ಥೆ ಯೂರೊಪೋಲ್‌ನ ನಿರ್ದೇಶಕ ರಾಬ್ ವೇನ್‌ರೈಟ್ ಎಚ್ಚರಿಕೆ ನೀಡಿದ್ದಾರೆ.!!

ಹೌದು, ನೋಂದಣಿ ಆಗದ ಡೊಮೈನ್‌ ಹೆಸರನ್ನು ಬಳಸಿ ಈ ಸೈಬರ್ ದಾಳಿ ನಡೆಸಿದ್ದು, ವಾರಾಂತ್ಯದ ನಂತರ ಈ ದಾಳಿ ಇನ್ನಷ್ಟು ಹೆಚ್ಚುವ ಸಂಭವಿವಿದೆ ಎನ್ನಲಾಗಿದೆ.!! ಸರ್ಕಾರಿ, ಖಾಸಗಿ ಕಂಪೆನಿಗಳ ಸಿಬ್ಬಂದಿ ಸೋಮವಾರ ತಮ್ಮ ಕಂಪ್ಯೂಟರ್‌ಗಳನ್ನು ಬಳಕೆ ಮಾಡಿದ ನಂತರ ಈ ದಾಳಿಯ ಪರಿಣಾಮ ಇನ್ನು ಹೆಚ್ಚಲಿದೆ ಎಂದು ಹೇಳಲಾಗಿದೆ.!!

ಹಾಗಾಗಿ, ಸೈಬರ್‌ ದಾಳಿಗೆ ತುತ್ತಾಗದಂತೆ ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇದ್ದು, ಯಾವ ಯಾವ ಕ್ರಮಗಳಿಂದ ಸೈಬರ್ ದಾಳಿಗೆ ತುತ್ತಾಗದೇ ಇರಬಹುದು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಂತರ್ಜಾಲ ಬಳಕೆ ಬೇಡ!!

ಅಂತರ್ಜಾಲ ಬಳಕೆ ಬೇಡ!!

ಪ್ರಪಂಚದ ಬಹುದೊಡ್ಡ ದಾಳಿ ಇದಾಗಿದ್ದು, ಸೈಬರ್‌ ದಾಳಿ ನಿಯಂತ್ರಣಕ್ಕೆ ಬರುವವರೆಗೂ ಕಂಪ್ಯೂಟರ್‌ಗಳಲ್ಲಿ ಅಂತರ್ಜಾಲ ಬಳಕೆ ಮಾಡಬೇಡಿ. ಅಂತರ್ಜಾಲ ಬಳಕೆ ಇದ್ದರೆ ಮಾತ್ರ ಸೈಬರ್‌ಗಳು ನಿಮ್ಮ ಕಂಪ್ಯೂಟರ್ ಪ್ರವೇಶಿಸಬಹುದು.!!

ಮಾಹಿತಿಯನ್ನು ಬೇರೆಡೆ ಶೇಖರಿಸಿ.!!

ಮಾಹಿತಿಯನ್ನು ಬೇರೆಡೆ ಶೇಖರಿಸಿ.!!

ಹೌದು, ಇದೋಂದು ಬಹುದೊಡ್ಡ ಹ್ಯಾಕ್ ಜಾಲವಾಗಿದ್ದು, ಅಕಸ್ಮಾತ್ ನಿಮ್ಮ ಕಂಪ್ಯೂಡರ್ ಅನ್ನು ಸಹ ಪ್ರವೇಶಿಸುವ ಸಾಧ್ಯತೆ ಇದೆ. ಹಾಗಾಗಿ, ನಿಮ್ಮ ಕಂಪ್ಯೂಟರ್ ಫೈಲ್ ಮತ್ತು ಇತರ ಎಲ್ಲಾ ಮಾಹಿತಿಗಳನ್ನು ಬೇರೆಡೆ ಶೇಖರಿಸುವ ಕೆಲಸ ಮಾಡಿ ಇದರಿಂದ ನಿಮ್ಮ ಕಂಪ್ಯೂಟರ್ ಹ್ಯಾಕ್ ಆದರೂ ನಿಮಗೆ ತೊಂದರೆ ಉಂಟಾಗುವುದಿಲ್ಲ.!!

ಗೊತ್ತಿಲ್ಲದ ಲಿಂಕ್‌ಗಳ ಮೇಲೆ ಕ್ಲಿಕ್ಕಿಸಬೇಡಿ

ಗೊತ್ತಿಲ್ಲದ ಲಿಂಕ್‌ಗಳ ಮೇಲೆ ಕ್ಲಿಕ್ಕಿಸಬೇಡಿ

ಇ-ಮೇಲ್‌ಗಳಲ್ಲಿ ಹಲವಾರು ನಿಮಗೆ ತಿಳಿಯದ ಲಿಂಕ್‌ಗಳಿರುತ್ತವೆ. ಅಂತಹ ಜಾಲತಾಣ ವಿಳಾಸದ ಮೇಲೆ ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಿ ತೆರೆಯಬೇಡಿ. ಇದರಿಂದಲೇ ಕಂಪ್ಯೂಟರ್‌ಗೆ ವೈರಸ್ ಮಾಲ್‌ವೇರ್‌ಗಳು ದಾಳಿಮಾಡುವುದು.!!

ವಿಂಡೋಸ್ ಎಕ್ಸ್‌ಪಿ ಪರಿಷ್ಕೃತ ಆವೃತ್ತಿ ಬಳಸಿ.!!

ವಿಂಡೋಸ್ ಎಕ್ಸ್‌ಪಿ ಪರಿಷ್ಕೃತ ಆವೃತ್ತಿ ಬಳಸಿ.!!

ನಿಮ್ಮ ಕಂಪ್ಯೂಟರ್ ವಿಂಡೋಸ್ 7 ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದರೆ, ವಿಂಡೋಸ್ ಒಎಸ್ ಅನ್ನು ಮೇಲ್ದರ್ಜಿಗೇರಿಸಿ. ವಿಂಡೋಸ್ ಎಕ್ಸ್‌ಪಿ ಪರಿಷ್ಕೃತ ಆವೃತ್ತಿ ಬಳಸಿದರೆ ಈ ಸೈಬರ್ ಅಟ್ಯಾಕ್‌ನಿಂದ ನೀವು ಬಚಾವಾಗಬಹುದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
The WannaCry ransomware first struck on Friday. to know more visit to kannada.gizbot.com. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot