Home
ಟೆಕ್ ನೌಕರಿ

ಆಂಡ್ರಾಯ್ಡ್ ''ಒರಿಯೋ'' ಒಎಸ್ ಬೆಸ್ಟ್ ಏಕೆ?..ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆ?

ಒರಿಯೋ ಆಪರೇಟಿಂಗ್‌ ಸಿಸ್ಟಂನಲ್ಲಿರೋ ಅಪ್ಲಿಕೇಷನ್‌ಗಳು ಸ್ಮಾರ್ಟ್‌ಫೋನ್ ಫೀಲ್ಡ್‌ಗೆ ಹೊಸ ಆಯಾಮ ಕೊಟ್ಟಿದೆ ಎನ್ನಬಹುದು.!!

By Bhaskar N J

ಗೂಗಲ್‌ನ ಹೊಸ ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಂ ಒರಿಯೋ ಬಿಡುಗಡೆಯಾದ ನಂತರ ಎಲ್ಲೆಲ್ಲಿಯೂ ಸದ್ದು ಮಾಡುತ್ತಿದೆ.! ಯುಟಿಲಿಟಿಗೆ ತಕ್ಕಂತೆ ಆಪರೇಟಿಂಗ್‌ ಸಿಸ್ಟಂಗಳು ಅಪ್‌ಡೇಟ್‌ ಆಗುತ್ತಿದ್ದು, ಒರಿಯೋ ಆಪರೇಟಿಂಗ್‌ ಸಿಸ್ಟಂನಲ್ಲಿರೋ ಅಪ್ಲಿಕೇಷನ್‌ಗಳು ಸ್ಮಾರ್ಟ್‌ಫೋನ್ ಫೀಲ್ಡ್‌ಗೆ ಹೊಸ ಆಯಾಮ ಕೊಟ್ಟಿದೆ ಎನ್ನಬಹುದು.!!

ನೂತನ ಒಎಸ್ ಹಳೇದಕ್ಕಿಂತಲೂ ಫಾಸ್ಟ್‌ ಆಗಿದ್ದು, ಅದನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ಹಲವು ಹೊಸ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.!! ಒರಿಯೋ ಒಎಸ್‌ನಿಂದ ಮೊಬೈಲ್ ಬ್ಯಾಟರಿ ಲೈಫ್ ಸಹ ಸುಧಾರಿಸಲಿದ್ದು, ಇನ್‌ಸ್ಟೆಂಟ್ ಆಪ್‌ ಕಂಪ್ಯಾಟಬಲಿಟಿಯಿಂದಾಗಿ ಬಳಕೆದಾರರು ಬ್ರೌಸರ್ ನೆರವಿನಿಂದ ಹೊಸ ಆಪ್‌ಗಳಿಗೆ ಸುಲಭವಾಗಿ ಟೆಲಿಪೋರ್ಟ್ ಆಗಬಹುದಾಗಿದೆ.!!

ಇನ್ನು ಬೂಟಿಂಗ್‌ ಸ್ಪೀಡ್ ಸಹ ವೇಗವಾಗಲಿದ್ದು, ಎರಡು ಆಪ್‌ಗಳನ್ನು ಒಮ್ಮೆಲೇ ಬಳಸಬಹುದು.!! ಆಟೋಫಿಲ್ ಟೂಲ್ ನಿಂದಾಗಿ ಮೊಬೈಲ್ ಕಾಂಟ್ಯಾಕ್ಟ್ ಡೀಟೇಲ್ಸ್ ಮತ್ತಿತರ ಖಾಸಗಿ ಮಾಹಿತಿಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಹಾಗಾಗಿ, ಒರಿಯೋ ಆಪರೇಟಿಂಗ್‌ ಸಿಸ್ಟಂಗೆ ಬಳಕೆಗೆ ಬಂದನಂತರ ಅಪ್‌ಡೇಟ್ ಆಗುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಬ್ಯಾಕ್‌ಅಪ್‌ ಆಪ್ಷನ್ ಅನ್ನು ಒಮ್ಮೆ ಪರಿಶೀಲಿಸಿ!!

ಬ್ಯಾಕ್‌ಅಪ್‌ ಆಪ್ಷನ್ ಅನ್ನು ಒಮ್ಮೆ ಪರಿಶೀಲಿಸಿ!!

ನಿಮ್ಮ ಮೊಬೈಲ್‌ ಗೂಗಲ್ ಒರಿಯೋ ಆಪರೇಟಿಂಗ್‌ ಸಿಸ್ಟಂಗೆ ಅಪ್‌ಡೇಟ್‌ ಆಗುವಂತಿದ್ದರೆ . ಅಪ್‌ಡೇಟ್ ಮಾಡಿಕೊಳ್ಳುವ ಮುನ್ನ ಮೊಬೈಲ್ ಬ್ಯಾಕ್‌ಅಪ್‌ ಆಪ್ಷನ್ ಅನ್ನು ಒಮ್ಮೆ ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ ಮಾಹಿತಿಗಳು ಅಳಿಸಿಹೋಗುವ ಸಂಭವ ಹೆಚ್ಚಿರುತ್ತದೆ.!!

ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್.!!

ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್.!!

ಒರಿಯೋ ಆಪರೇಟಿಂಗ್‌ ಸಿಸ್ಟಂ ಅಪ್‌ಡೇಟ್ ಮಾಡಿಕೊಳ್ಳಲು ನಿಮ್ಮ ಸ್ಮಾರ್ಟ್‌ಫೋನ್ ಸೆಟ್ಟಿಂಗ್ಸ್ ತೆರೆಯಿರಿ, ನಂತರ ಕೊನೆಯ ಆಯ್ಕೆ ಎಬೌಟ್‌ ಫೋನ್‌ ಎನ್ನುವ ಐಕಾನ್‌ ಮೇಲೆ ಕ್ಲಿಕ್‌ ಮಾಡಿ ಅದರಲ್ಲಿರುವ ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್ ಸೆಲೆಕ್ಟ್ ಮಾಡಿಕೊಳ್ಳಿ.

ಅಪ್‌ಡೇಟ್‌ ಆಪ್ಷನ್‌ ಆಯ್ಕೆ ಮಾಡಿ.!!

ಅಪ್‌ಡೇಟ್‌ ಆಪ್ಷನ್‌ ಆಯ್ಕೆ ಮಾಡಿ.!!

ಡಿವೈಸ್ ಇನ್‌ಫರ್ಮೇಷನ್ ಸ್ಕ್ರೀನ್ ಸೆಲೆಕ್ಟ್ ಮಾಡಿದ ನಂತರ ಸಿಸ್ಟಂ ಅಪ್‌ಡೇಟ್‌ ಆಪ್ಷನ್‌ ಆಯ್ಕೆ ಮಾಡಿಕೊಳ್ಳಿ. ನಂತರ ಚೆಕ್‌ನೌ ಐಕಾನ್‌ ಮೇಲೆ ಕ್ಲಿಕ್‌ ಮಾಡಿ. ರಿಸ್ಟಾರ್ಟ್‌ ಮತ್ತು ಇನ್‌ಸ್ಟಾಲ್‌ ಬಟನ್‌ ಒತ್ತಿರಿ.!!

ನಿಮ್ಮ ಫೋನ್ ಅಪ್‌ಡೇಟ್ ಆಗುತ್ತದೆ.!!

ನಿಮ್ಮ ಫೋನ್ ಅಪ್‌ಡೇಟ್ ಆಗುತ್ತದೆ.!!

ರಿಸ್ಟಾರ್ಟ್ ಮತ್ತು ಇನ್‌ಸ್ಟಾಲ್ ಬಟನ್ ಒತ್ತಿದ ನಂತರ ನಿಮ್ಮ ಫೋನ್ ಅಪ್‌ಡೇಟ್ ಆಗಲು ಪ್ರಾರಂಭಿಸುತ್ತದೆ.!! ಕೆಲವು ನಿಮಿಷ ಅಥವಾ ಗಂಟೆಗಳಲ್ಲಿ ನಿಮ್ಮ ಫೋನ್ ನೂತನ ಆಂಡ್ರಾಯ್ಡ್ ಆಪರೇಟಿಂಗ್‌ ಸಿಸ್ಟಂ ಒರಿಯೋಗೆ ಅಪ್‌ಡೇಟ್ ಆಗುತ್ತದೆ.!!

Best Mobiles in India

English summary
One of the highlights of this release are updates to how Android handles notifications.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+