Subscribe to Gizbot

ಬ್ಯಾಟರಿ ತೆಗೆಯಲಾರದ ಸ್ಮಾರ್ಟ್‌ಫೋನ್‌ ನೀರಿಗೆ ಬಿದ್ದರೆ ರಕ್ಷಣೆ ಸಾಧ್ಯವೇ? ಇಲ್ಲಿದೆ ಉತ್ತರ!!

Written By:

ಅಕಸ್ಮಾತ್ ಆಗಿ ಸ್ಮಾರ್ಟ್‌ಫೋನ್ ನೀರಿಗೆ ಬಿದ್ದಿರುತ್ತದೆ. ಹಾಗಂತ ನೀರಿಗೆ ಬಿದ್ದ ತಕ್ಷಣ ಸ್ಮಾರ್ಟ್‌ಫೋನ್‌ ಹಾಳಾಗಿದೆ ಎಂದು ಅರ್ಥವಲ್ಲ. ನಾವು ಸ್ಮಾರ್ಟ್‌ಫೋನ್‌ ನೀರಿಗೆ ಬಿದ್ದ ತಕ್ಷಣವೇ ಬ್ಯಾಟರಿ ತೆರೆದು ಮುನ್ನೆಚರಿಕೆ ತೆಗೆದುಕೊಂಡರೆ ಸ್ಮಾರ್ಟ್‌ಫೋನ್ ಹಾಳಾಗುವುದನ್ನು ತಪ್ಪಿಸಬಹುದು ಎಂಬ ಒಂದು ಲೇಖನ ಕನ್ನಡ ಗಿಜ್‌ಬಾಟ್‌ನಲ್ಲಿ ಪ್ರಕಟಿಸಿದ್ದೆವು.!!

ಆದರೆ, ಬ್ಯಾಟರಿ ತೆರೆಯಲಾರದ ಸ್ಮಾರ್ಟ್‌ಫೋನ್ ನೀರಿಗೆ ಬಿದ್ದರೆ ಸ್ಮಾರ್ಟ್‌ಫೊನ್ ರಕ್ಷಣೆ ಹೇಗೆ ಎಂಬ ನಮ್ಮ ಗಿಜ್ಹ್‌ಬಾಟ್ ಓದುಗರೊಬ್ಬರ ಅತ್ಯುತ್ತಮ ಪ್ರಶ್ನೆಗೆ ಯಾವುದೇ ಸ್ಮಾರ್ಟ್‌ಫೋನ್ ಕಂಪೆನಿಯು ಸಹ ಸರಿಯಾದ ಉತ್ತರವನ್ನು ಒದಗಿಸಿಲ್ಲ.!! ಆದರೂ, ನಾವು ಹುಡುಕಿದಕ್ಕೆ ಸಾಮಾನ್ಯ ಎನಿಸುವಷ್ಟು ಉತ್ತರ ನಮಗೆ ದೊರೆತಿದೆ.!!

ಹಾಗಾದರೆ ನೀರಿಗೆ ಬಿದ್ದ ಬ್ಯಾಟರಿ ತೆಗೆಯಲಾರದ ಸ್ಮಾರ್ಟ್‌ಫೋನ್‌ ರಕ್ಷಣೆ ಸಾಧ್ಯವೇ? ಸಾಧ್ಯವಾದರೂ ಕೂಡ ಹೇಗೆ? ಎಂಬೆಲ್ಲಾ ಪ್ರಶ್ನೆಗಳಿಗೆ ಕೆಲವು ಉತ್ತರಗಳನ್ನು ನಾವು ನಿಮಗೆ ನೀಡಲು ಪ್ರಯತ್ನಿಸುತ್ತೇವೆ.! ಅವುಗಳನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಕ್ಷಣದಲ್ಲಿ ಮಾತ್ರ ಬಚಾವಾಗಬಹುದು.!!

ತಕ್ಷಣದಲ್ಲಿ ಮಾತ್ರ ಬಚಾವಾಗಬಹುದು.!!

ಬ್ಯಾಟರಿ ತೆಗೆಯಲಾರದ ಸ್ಮಾರ್ಟ್‌ಫೋನ್‌ ನೀರಿನಲ್ಲಿ ಬಿದ್ದರೆ ತಕ್ಷಣದಲ್ಲಿ ಮಾತ್ರ ಬಚಾವಾಗಬಹುದು. ಹೆಚ್ಚು ಕಾಲ ನೀರಿನಲ್ಲಿಯೇ ಸ್ಮಾರ್ಟ್‌ಫೋನ್ ಇದ್ದರೆ ಖಂಡಿತವಾಗಿ ನೀವು ಹೊಸ ಸ್ಮಾರ್ಟ್‌ಫೋನ್ ಖರೀದಿಸುವುದೇ ಉತ್ತಮ.! ಏಕೆಂದರೆ ನೀರಿಗೆ ಬಿದ್ದ ಕೆಲವು ನಿಮಿಷ/ಗಂಟೆಗಳಲ್ಲಿ ಡಿವೈಸ್ ಶಾರ್ಟ್ ಆಗಿಬಿಡುವ ಸಂಭವ ಹೆಚ್ಚು.!!

ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಮಾಡಿ.!!

ಸ್ಮಾರ್ಟ್‌ಫೋನ್ ಸ್ವಿಚ್ ಆಫ್ ಮಾಡಿ.!!

ಬ್ಯಾಟರಿ ತೆಗೆಯಲಾರದ ಸ್ಮಾರ್ಟ್‌ಫೋನ್‌ ನೀರಿನಲ್ಲಿ ಬಿದ್ದರೆ ಪವರ್ ಬಟನ್ ಅನ್ನು ಐದರಿಂದ ಆರು ಸೆಕೆಂಡ್‌ಗಳ ಕಾಲ ಅದುಮಿ ಹಿಡಿದು ಸ್ವಿಚ್ ಆಫ್ ಮಾಡಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್ ಸಾಫ್ಟ್ವೇರ್ ಕಾರ್ಯಾಚರಣೆ ನಿಲ್ಲುತ್ತದೆ. ಹೆಚ್ಚು ಹೊತ್ತು ಪವರ್ ಬಟನ್ ಒತ್ತಿದರೆ ಮತ್ತೆ ಸ್ಮಾರ್ಟ್‌ಫೋನ್ ಆನ್ ಆಗಿಬಿಡುತ್ತದೆ.ಸ್ವಲ್ಪ ಹುಷಾರು!!

ಅಕ್ಕಿಯೊಳಗೆ ನಿಮ್ಮ ಸ್ಮಾರ್ಟ್‌ಫೋನ್ ಇಡಿ.!!

ಅಕ್ಕಿಯೊಳಗೆ ನಿಮ್ಮ ಸ್ಮಾರ್ಟ್‌ಫೋನ್ ಇಡಿ.!!

ಸ್ಮಾರ್ಟ್‌ಪೊನ್ ನೀರಿಗೆ ಬಿದ್ದ ನಂತರ ಹೆಚ್ಚು ಶಾಖವನ್ನು ಬಿಡುಗಡೆ ಮಾಡುವ ಅಕ್ಕಿಯೊಳಗೆ ನಿಮ್ಮ ಸ್ಮಾರ್ಟ್‌ಫೋನ್ ಇಡಿ. ನಿರಂತರ 48 ಗಂಟೆಗಳ ಕಾಲ ಅಕ್ಕಿಯೊಳಗೆ ಇಟ್ಟು ನಂತರ ನಿಮ್ಮ ಸ್ಮಾರ್ಟ್‌ಫೋನ್ ಬಳಕೆ ಮಾಡಬಹುದು. ಶಾರ್ಟ್ ತೊಂದರೆಗೆ ಒಳಗಾಗಿದ್ದರೆ ರಿಪೇರಿಗೆ ಹೋಗಬೇಕಾಗುತ್ತದೆ.!!

ಇನ್ಯೂರೆನ್ಸ್ ಮಾಡಿಸಿಕೊಳ್ಳಿ.!!

ಇನ್ಯೂರೆನ್ಸ್ ಮಾಡಿಸಿಕೊಳ್ಳಿ.!!

ಎಲ್ಲದಕ್ಕಿಂತ ಹೆಚ್ಚಾಗಿ ಬ್ಯಾಟರಿ ತೆಗೆಯಲಾರದ ಸ್ಮಾರ್ಟ್‌ಫೋನ್‌ ನೀರಿನಲ್ಲಿ ಬಿಳುವುದು ಬಿಡುವುದು ಬೇರೆ ಮಾತು. ನೀವು ಮೊದಲು ಸ್ಮಾರ್ಟ್‌ಫೋನ್‌ಗೆ ಕಂಪೆನಿಯಿಂದಲೇ ಇನ್ಸೂರೆನ್ಸ್ ಮಾಡಿಸಿ. ಏಕೆಂದರೆ ಬಹುತೇಕ ಸಮಯದಲ್ಲಿ ನೀರಿಗೆ ಬಿದ್ದ ಸ್ಮಾರ್ಟ್‌ಫೋನ್ ಹಾಳಾಗಿರುವ ಉದಾಹರಣೆಯೇ ಹೆಚ್ಚು.!!

ಓದಿರಿ:ಒಂದು ಕಡೆ ಕಚ್ಚಿರುವ ರೀತಿಯಲ್ಲಿ ಆಪಲ್ ಲೋಗೊ ತಯಾರಾಗಿದ್ದು ಏಕೆ? ಇಲ್ಲಿದೆ ಉತ್ತರ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Don’t worry, there is still hope for the device to work.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot