ವಿಂಡೋಸ್ 10 ನಲ್ಲಿ ಆಫ್‌ಲೈನ್ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ರ್ಮಾದಲ್ಲಿ ಪ್ರಯಾಣಿಸಬೇಕಾದರೂ ಗೂಗಲ್‌ ಮ್ಯಾಪ್‌ ಉಪಯುಕ್ತವಾಗಿದೆ. ಇನ್ನು ಗೂಗಲ್‌ ಮ್ಯಾಪ್‌ ಬಳಸಲು ಇಂಟರ್‌ನೆಟ್‌ ಅಗತ್ಯ. ಆದರೆ ಇಂಟರ್‌ನೆಟ್‌ ಇಲ್ಲದೆ ಆಪ್‌ಲೈನ್‌ನಲ್ಲಿಯೂ ಸಹ ಗೂಗಲ್‌ ಮ್ಯಾಪ್‌ ಅನ್ನು ಬಳಸಬಹುದಾಗಿದೆ. ನೀವು ಈಗಾಗಲೇ ಸ್ಮಾರ್ಟ್‌ಫೋನ್‌ನಲ್ಲಿ ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುವುದು ಹೇಗೆ ಅನ್ನೊದು ತಿಳಿದಿದೆ. ಆದರೆ ನಿಮ್ಮ ವಿಂಡೋಸ್ 10 ಪಿಸಿಯಲ್ಲಿ ಸಹ ಆಫ್‌ಲೈನ್ ಮ್ಯಾಪ್‌ಗಳನ್ನು ಸಹ ಡೌನ್‌ಲೋಡ್ ಮಾಡಬಹುದಾಗಿದೆ.

ಗೂಗಲ್ ಮ್ಯಾಪ್

ಹೌದು, ಗೂಗಲ್ ಮ್ಯಾಪ್‌ಗಳನ್ನ ಆಪ್‌ಲೈನ್‌ನಲ್ಲಿ ಬಳಸುವುದನ್ನ ಸ್ಮಾರ್ಟ್‌ಫೋನ್‌ ಮಾತ್ರವಲ್ಲ ನಿಮ್ಮ ವಿಂಡೋಸ್ 10 ಕಂಪ್ಯೂಟರ್ ಕೂಡ ಅನುಮತಿಸುತ್ತದೆ. ವಿಂಡೋಸ್‌ 10 ಕಂಪ್ಯೂಟರ್‌ನಲ್ಲಿ ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡಲು ಅವಕಾಶವಿದ್ದು, ಇಂಟರ್ನೆಟ್ ಸಂಪರ್ಕ ವಿಲ್ಲದ ಸ್ಥಳಗಳಿಗೆ ನೀವು ಪ್ರಯಾಣಿಸುತ್ತಿದ್ದರೆ ಇದು ಉಪಯುಕ್ತವಾಗಿರುತ್ತದೆ. ಹಾಗಾದ್ರೆ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ಮ್ಯಾಪ್‌ಗಳನ್ನ ಆಫ್‌ಲೈನ್ ಮೋಡ್‌ನಲ್ಲಿ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇಂಟರ್ನೆಟ್

ನೀವು ಸೀಮಿತ ಮೊಬೈಲ್ ಡೇಟಾದಲ್ಲಿದ್ದರೆ ಅಥವಾ ನೀವು ಇಂಟರ್ನೆಟ್ ಅನ್ನು ಬಳಸುವುದಕ್ಕೆ ಅವಕಾಶವಿಲ್ಲ ಜಾಗದಲ್ಲಿ ನೀವು ಡೌನ್‌ಲೋಡ್‌ ಮಾಡಿರುವ ಆಫ್‌ಲೈನ್ ಮ್ಯಾಪ್‌ಗಳು ಸಹಾಯಕವಾಗಲಿದೆ. ನೀವು ಆಪಲೈನ್‌ ಮ್ಯಾಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಅಗತ್ಯವಿದ್ದಾಗ ನೀವು ಅವುಗಳನ್ನು ಪ್ರವೇಶಿಸಬಹುದಾಗಿದೆ. ಇದರಿಂದ ಮ್ಯಾಪ್‌ನಲ್ಲಿ ಆಫ್‌ಲೈನ್‌ನಲ್ಲಿರುವ ಸ್ಥಳಗಳನ್ನು ಹುಡುಕಲು ಸಹಾಯಕವಾಗಲಿದೆ. ಇದನ್ನು ನೀವು ವಿಂಡೋಸ್‌ 10 ಕಂಪ್ಯೂಟರ್‌ನಲ್ಲಿಯು ಸಹ ಮಾಡಬಹುದಾಗಿದೆ. ಅದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

ವಿಂಡೋಸ್ 10 ನಲ್ಲಿ ಆಫ್‌ಲೈನ್ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ವಿಂಡೋಸ್ 10 ನಲ್ಲಿ ಆಫ್‌ಲೈನ್ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 ವಿಂಡೋಸ್ ಕೀ ಕ್ಲಿಕ್‌ ಮಾಡಿ ಮತ್ತು ಸ್ಟಾರ್ಟ್‌ ಮೆನುವಿನ ಎಡಭಾಗದಲ್ಲಿರುವ ಸೆಟ್ಟಿಂಗ್ಸ್ ಗೇರ್ ಐಕಾನ್ ಕ್ಲಿಕ್ ಮಾಡಿ. ವಿಂಡೋಸ್ ಸೆಟ್ಟಿಂಗ್‌ಗ್ಸ್‌ ತೆರೆಯಲು ನೀವು ಕೀಬೋರ್ಡ್ ಶಾರ್ಟ್‌ಕಟ್ ವಿಂಡೋಸ್ + ಐ ಅನ್ನು ಸಹ ಒತ್ತಿ.

ಹಂತ:2 ಅಪ್ಲಿಕೇಶನ್‌ ಲೀಸ್ಟ್‌ ಮೇಲೆ ಕ್ಲಿಕ್ ಮಾಡಿ.

ಹಂತ:3 ಎಡಭಾಗದಲ್ಲಿ, ನಿಮ್ಮ ವಿಂಡೋಸ್ 10 ಪಿಸಿಯಲ್ಲಿ ಆಫ್‌ಲೈನ್ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡಲು ಆಫ್‌ಲೈನ್ ಮ್ಯಾಪ್‌ಗಳನ್ನು ಕ್ಲಿಕ್ ಮಾಡಿ.

ಹಂತ:4 ಈಗ, ಬಲಭಾಗದಲ್ಲಿ, ಮ್ಯಾಪ್‌ಗಳ ಅಡಿಯಲ್ಲಿ ಮ್ಯಾಪ್‌ ಆಯ್ಕೆಯನ್ನು ಡೌನ್‌ಲೋಡ್ ಮಾಡಿ, ಮ್ಯಾಪ್‌ಗಳನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.

ಹಂತ:5 ನೀವು ಆಫ್‌ಲೈನ್ ಮ್ಯಾಪ್‌ಗಳನ್ನು ಪಡೆಯಲು ಬಯಸುವ ಖಂಡ ಮತ್ತು ದೇಶವನ್ನು ಆರಿಸಿ. ನೀವು ದೇಶವನ್ನು ಆರಿಸಿದ ನಂತರ, ಪ್ರದೇಶವನ್ನು ಆರಿಸಿ ಅಥವಾ ಎಲ್ಲಾ ಪ್ರದೇಶಗಳಿಗೆ ಮ್ಯಾಪ್‌ಗಳನ್ನು ಡೌನ್‌ಲೋಡ್ ಮಾಡಲು ಎಲ್ಲಾ ಪ್ರದೇಶಗಳನ್ನು ಆಯ್ಕೆ ಮಾಡಿ.

ಆಪ್‌ಲೈನ್‌

ಇದೀಗ ನೀವು ಆಯ್ಕೆ ಮಾಡಿದ ಆಪ್‌ಲೈನ್‌ ಮ್ಯಾಪ್‌ಗಳನ್ನು ಡೌನ್‌ಲೋಡ್‌ ಮಾಡಬಹುದಾಗಿದೆ. ಈ ಎಲ್ಲಾ ಮ್ಯಾಪ್‌ಗಳು ನಿಮ್ಮ ವಿಂಡೋಸ್‌ಗೆ ಸೇರಿಸಲಾಗುತ್ತದೆ ಮತ್ತು ನೀವು ಈಗ ಅವುಗಳನ್ನು ಆಫ್‌ಲೈನ್‌ನಲ್ಲಿ ಬಳಸಬಹುದು, ಅಲ್ಲದೆ ಡೈರೆಕ್ಷನ್‌ ಹುಡುಕಲು ನಿಮಗೆ ಇಂಟರ್ನೆಟ್ ಸಂಪರ್ಕ ಅಥವಾ ವೈ-ಫೈ ಅಗತ್ಯವಿಲ್ಲ. ಒಂದು ವೇಳೆ ನೀವು ಇ ಮ್ಯಾಪ್‌ಗಳನ್ನು ಡಿಲಿಟ್‌ ಮಾಡಲು ಬಯಸಿದರೆ, ಡೌನ್‌ಲೋಡ್ ಮಾಡಿದ ಪ್ರದೇಶಗಳ ಮೇಲೆ ಕ್ಲಿಕ್ ಮಾಡಿ ಮತ್ತು ಡಿಲೀಟ್‌ ಆಯ್ಕೆಮಾಡಿ.

Best Mobiles in India

Read more about:
English summary
The maps will be added to the Windows and you can now use them offline, you don’t need an internet connection or Wi-Fi to search for directions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X