Subscribe to Gizbot

'ವಾಟ್ಸ್‌ಆಪ್' ಮೂಲಕ ಹಣ ಸೆಂಡ್ ಮಾಡುವುದು ಹೇಗೆ ಗೊತ್ತಾ?..ಇಂಟರ್‌ನೆಟ್ ಇಲ್ಲದೆಯೂ!!

Written By:

ಗ್ರಾಹಕರು ಹಣ ವರ್ಗಾವಣೆ, ಪಾವತಿ ನಡೆಸಬಹುದಾದ ವಾಟ್ಸ್‌ಆಪ್ ಪೇ ಸೌಲಭ್ಯವನ್ನು ಫೆಬ್ರವರಿ ತಿಂಗಳ ಅಂತ್ಯದ ವೇಳೆಗೆ ವಾಟ್ಸ್‌ಅಪ್ ನಲ್ಲಿ ಅಳವಡಿಸಲಾಗುತ್ತದೆ.! ಯುಪಿಐ ಇಂಟಿಗ್ರೇಶನ್‌ಗೆ ಇದಾಗಲೇ ಕೇಂದ್ರ ಸರ್ಕಾರದಿಂದ ವಾಟ್ಸ್ಅಪ್ ಅನುಮತಿ ಪಡೆದಿದ್ದು, ದೇಶದಲ್ಲಿನ ಬೃಹತ್ ಬ್ಯಾಂಕ್‌ಗಳೊಡನೆ ವಾಟ್ಸ್ ಅಪ್ ಇದಾಗಲೇ ಪೇಮೆಂಟ್ ಆಯ್ಕೆ ಸಂಬಂಧ ಮಾತುಕತೆಯನ್ನು ಮುಗಿಸಿದೆ.!!

'ವಾಟ್ಸ್‌ಆಪ್' ಮೂಲಕ ಹಣ ಸೆಂಡ್ ಮಾಡುವುದು ಹೇಗೆ ಗೊತ್ತಾ?..ಇಂಟರ್‌ನೆಟ್ ಇಲ್ಲದೆಯೂ!
How to save WhatsApp Status other than taking screenshots!! Kannada

ಶೀಘ್ರವಾಗಿ ಬೆಳವಣಿಗೆ ಕಾಣುತ್ತಿರುವ ಡಿಜಿಟಲ್ ಪಾವತಿ ಕ್ಷೇತ್ರಕ್ಕೆ ವಾಟ್ಸ್‌ಅಪ್ ಪ್ರವೇಶಿಸುವುದರಿಂದ ದೊಡ್ಡ ಮಟ್ಟದ ಕ್ರಾಂತಿಯೇ ಆಗಲಿದೆ ಎಂದು ಅಂದಾಜಿಸಲಾಗಿದ್ದು, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಷನ್ ಹಣ ಕಳಿಸುವ ಹಾಗೂ ಸ್ವೀಕರಿಸುವವರನ್ನು ಸಂಸ್ಥೆಯು ಬ್ಯಾಂಕ್ ಎಂಡ್ ನಿಂದ ಗುರುತಿಸಲಿದೆ.!! ಹಾಗಾದರೆ, ವಾಟ್ಸ್‌ಆಪ್ ಪೇ ಸೌಲಭ್ಯ ಹೇಗಿರಲಿದೆ? ವಾಟ್ಸ್ಆಪ್‌ನಿಂದ ಹಣವನ್ನು ಹೇಗೆ ಸೆಂಡ್ ಮಾಡುವುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
(ಯುಪಿಐ) ಆಧಾರಿತ ಪಾವತಿ!!

(ಯುಪಿಐ) ಆಧಾರಿತ ಪಾವತಿ!!

ಜನಪ್ರಿಯ ಮೆಸೇಜಿಂಗ್ ಅಪ್ ವಾಟ್ಸ್ಆಪ್ ಏಕೀಕೃತ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಪಾವತಿಯನ್ನು ಅಳವಡಿಸಿಕೊಂಡಿದೆ. ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್‌ಗಳೊಂದಿಗೆ ವಾಟ್ಸ್‌ಆಪ್ ಸಹಭಾಗಿತ್ವವನ್ನು ಹೊಂದಿದೆ.!!

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ!!

ನೆಟ್‌ವರ್ಕ್ ಇಲ್ಲದೆಯೂ ಸಂಪರ್ಕ!!

'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಮೂಲಕ ಸಮೀಪದ ಮೊಬೈಲ್‌ ಫೋನ್‌ ಜತೆಗೆ ಸಂಪರ್ಕ ಸಾಧಿಸಿ ಸುಲಭವಾಗಿ ಹಣ ವರ್ಗಾವಣೆ ಮಾಡಬಹುದಾಗಿದೆ.! ಮೈಕ್ರೋಫೋನ್ ಮತ್ತು ಸ್ಪೀಕರ್‌ ಮುಖಾಂತರ ಅಲ್ಟ್ರಾಸೌಂಡ್ ಕಿರಣಗಳನ್ನು ಬಳಸಿ ಹತ್ತಿರದ ಫೋನ್‌ ಜತೆಯೂ ಆಪ್ ಸಂಪರ್ಕ ಸಾಧಿಸಲಿದೆ ಎಂದು ಹೇಳಲಾಗಿದೆ..!!

ಪೇಮೆಂಟ್ ಮಾಡುವುದು ಹೇಗೆ?

ಪೇಮೆಂಟ್ ಮಾಡುವುದು ಹೇಗೆ?

ವಾಟ್ಸ್‌ಆಪ್ ನೀಡಿರುವ ಮಾಹಿತಿಯಂತೆ ನೀವು ವಾಟ್ಸ್ಆಪ್ ಬಳಕೆ ಮಾಡುತ್ತಿರುವ ಮೊಬೈಲ್‌ ಸಂಖ್ಯೆಯು ನಿಮ್ಮ ಬ್ಯಾಂಕ್‌ ಖಾತೆಯೊಂದಿಗೆ ಸಂಪರ್ಕಿಸಿರಬೇಕು.!! ವಾಟ್ಸ್ಆಪ್‌ನಲ್ಲಿ ಪೇಮೆಂಟ್‌ಗಾಗಿಯೇ ಹೆಚ್ಚುವರಿ ಆಯ್ಕೆಯನ್ನು (ರೂಪಾಯಿ ಚಿಹ್ನೆ ಎನ್ನಲಾಗಿದೆ) ನೀಡಲಾಗಿದ್ದು, ಎಲ್ಲಿ ಯುಪಿಐ ಐಡಿ ನೀಡಿ ಹಣ ವಿನಿಮಯ ಮಾಡಬಹುದು.!!

ಕನ್ನಡದಲ್ಲಿಯೂ ಪೇಮೆಂಟ್ ಸೇವೆ!!

ಕನ್ನಡದಲ್ಲಿಯೂ ಪೇಮೆಂಟ್ ಸೇವೆ!!

Tez ಆಪ್‌ನಂತೆ 'ವಾಟ್ಸ್ಆಪ್' ಪೇಮೆಂಟ್ ಪ್ಲಾಟ್‌ಫಾರ್ಮ್ ಕೂಡ ಕನ್ನಡ, ಇಂಗ್ಲಿಷ್‌, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ, ತೆಲುಗು ಹಾಗೂ ತಮಿಳು ಸೇರಿ ಎಂಟು ಭಾಷೆಗಳಲ್ಲಿ ಬರುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ, ವಾಟ್ಸ್ಆಪ್ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಈವರೆಗೂ ನೀಡಿಲ್ಲ.!!

ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್!!

ಬೀಟಾಹಂತದಲ್ಲಿ 'ವಾಟ್ಸ್ಆಪ್' ಪೇಮೆಂಟ್!!

'ವಾಟ್ಸ್ಆಪ್ ಪೇ' ಪ್ಲಾಟ್‌ಫಾರ್ಮ್ ಈಗಾಗಲೇ ಬೀಟಾ (ಪರೀಕ್ಷೆ) ಹಂತದಲ್ಲಿದೆ. ಪೇಮೆಂಟ್ ಸೇವೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಆಧರಿಸಿ ಫೆಬ್ರವರಿ ಅಂತ್ಯದ ವೇಳೆಗೆ ಪೇಮೆಂಟ್ ಸೇವೆಯನ್ನು ಗ್ರಾಹಕರಿಗೆ ಪರಿಚಯಿಸಲು ತೀರ್ಮಾನಿಸಿರುವುದಾಗಿ ವಾಟ್ಸ್ಆಪ್ ಪ್ರಕಟಣೆಯಲ್ಲಿ ಹೇಳಲಾಗಿದೆ.!!

ಓದಿರಿ:ಫೋಟೋಗ್ರಫಿಯ ದಿಕ್ಕನ್ನೇ ಬದಲಿಸಲಿದೆಯಂತೆ 8,990 ರೂ.‘ಕ್ಯಾಮನ್ ಐ' ಸ್ಮಾರ್ಟ್‌ಪೋನ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
WhatsApp is preparing to introduce payments to its messaging app, making it the latest service to let users transfer money to one another with a text.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot