ಆನಿಮೇಟೆಡ್‌ ಸ್ಟಿಕ್ಕರ್‌ಗಳನ್ನ Whatsappನಲ್ಲಿ ಬಳಸೋದು ಹೇಗೆ ಗೊತ್ತಾ?

|

ವಿಶ್ವದ ಜನಪ್ರಿಯ ಇನ್ಸಟಂಟ್‌ ಮೆಸೇಜಿಂಗ್‌ ಆಪ್‌ ವಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇತ್ತೀಚಿಗಷ್ಟೇ ತನ್‌ ವೆಬ್‌ನಲ್ಲಿ ಡಾರ್ಕ್ ಮೋಡ್, ಕ್ಯೂಆರ್ ಕೋಡ್‌ಗ ಮೂಲಕ ಕಂಟ್ಯಾಕ್ಟ್‌ ಸೇವ್‌ ಫೀಚರ್ಸ್‌ ಅನ್ನು ಪರಿಚಯಿಸಿದ್ದ ವಾಟ್ಸಾಪ್‌ ಇದೀಗ ತನ್ನ ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈ ಫೀಚರ್ಸ್‌ ಇದೀಗ ಜಾಗತಿಕವಾಗಿ ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿದೆ.

ವಾಟ್ಸಾಪ್‌

ಹೌದು, ಈ ಹಿಂದಿನ ಲೇಖನದಲ್ಲಿ ತಿಳಿಸಿದಂತೆ ವಾಟ್ಸಾಪ್‌ ತನ್ನ ಆಂಡ್ರಾಯ್ಡ್ ಮತ್ತು ಐಒಎಸ್‌ ಬಳಕೆದಾರರಿಗೆ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನ ಪರಿಚಯಿಸಿದೆ. ಸದ್ಯ ವಾಟ್ಸಾಪ್ ಈಗಾಗಲೇ ಅಪ್ಲಿಕೇಶನ್‌ನಲ್ಲಿ ಸ್ಟಿಕ್ಕರ್‌ಗಳನ್ನು ಬೆಂಬಲಿಸುತ್ತಿದೆ. ಇದೀಗ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಸಹ ಬೆಂಬಲಿಸಲಿದೆ. ಇನ್ನು ಈ ಆನಿಮೇಟೆಡ್‌ ಸ್ಟಿಕ್ಕರ್‌ಗಳು GIF ಗಳಂತೆಯೆ ಲಬ್ಯವಿರಲಿದೆ. ಸದ್ಯ ಈ ಹೊಸ ಆನಿಮೇಟೆಡ್ ಸ್ಟಿಕ್ಕರ್‌ಗಳು ವಾಟ್ಸಾಪ್‌ನ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಿರಲಿದೆ ಹಾಗಾದ್ರೆ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ವಾಟ್ಸಾಪ್

ಇನ್ನು ಈ ವಾಟ್ಸಾಪ್ ಆನಿಮೇಟೆಡ್ ಸ್ಟಿಕ್ಕರ್‌ಗಳು ಸ್ಟಿಕ್ಕರ್ ಪ್ಯಾಕ್‌ಗಳಲ್ಲಿ ಲಭ್ಯವಿರಲಿದೆ. ಅಲ್ಲದೆ ಈಗಾಗಲೇ ವಾಟ್ಸಾಪ್ ನಲ್ಲಿ ಲಭ್ಯವಿರುವ ಸ್ಟಿಕ್ಕರ್‌ಗಳನ್ನು ಸಂಗ್ರಹಿಸುವ ಸ್ಥಳದಲ್ಲಿಯೇ ಆನಿಮೇಟೆಡ್‌ ಸ್ಟಿಕ್ಕರ್‌ಗಳನ್ನು ಸಹ ಕಾಣಬಹುದಾಗಿದೆ. ಇನ್ನು ಈ ಮಾದರಿಯ ಸ್ಟಿಕ್ಕರ್‌ಗಳನ್ನ ನಿಮ್ಮ ವಾಟ್ಸಾಪ್‌ನಲ್ಲಿ ಬಳಸಲು ನಿಮ್ಮ ವಾಟ್ಸಾಪ್ ಅನ್ನು Google Play Store ಮತ್ತು App Store ನಿಂದ ಇತ್ತೀಚಿನ ಆವೃತ್ತಿಗೆ ಆಪ್ಡೇಟ್‌ ಮಾಡಬೇಕು. ನಂತರ, ಆನಿಮೇಟೆಡ್‌ ಸ್ಟಿಕ್ಕರ್‌ಗಳನ್ನ ಬಳಸಲು ಈ ಕೆಳಗಿನ ಹಂತಗಳನ್ನ ಅನುಸರಿಸಬೇಕು.

ವಾಟ್ಸಾಪ್‌

ಹಂತ:1 ವಾಟ್ಸಾಪ್‌ನಲ್ಲಿ ಚಾಟ್ ತೆರೆಯಿರಿ ಮತ್ತು ಎಮೋಜಿ ಬಟನ್ ಟ್ಯಾಪ್ ಮಾಡಿ.
ಹಂತ:2 ಸ್ಟಿಕ್ಕರ್‌ಗಳ ಆಯ್ಕೆಯನ್ನು ಆರಿಸಿ ಮತ್ತು ‘+' ಐಕಾನ್ ಕ್ಲಿಕ್ ಮಾಡಿ.
ಹಂತ:3 ಇಲ್ಲಿ, ಡೌನ್‌ಲೋಡ್ ಮಾಡಲು ಲಭ್ಯವಿರುವ ಸ್ಟಿಕ್ಕರ್ ಪ್ಯಾಕ್‌ಗಳ ಪಟ್ಟಿಯನ್ನು ನೀವು ಕಾಣಬಹುದು.
ಹಂತ:4 ಅನಿಮೇಟೆಡ್ ಸ್ಟಿಕ್ಕರ್‌ಗಳ ಮೇಲೆ ಪ್ಲೇ ಬಟನ್ ಇರುವುದರಿಂದ ಅದನ್ನು ಗುರುತಿಸುವುದು ಸುಲಭವಾಗಲಿದೆ.
ಹಂತ:5 ಅನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಲು ಡೌನ್ ಬಾಣದ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:6 ಒಮ್ಮೆ ಅದನ್ನು ಡೌನ್‌ಲೋಡ್ ಮಾಡಿದ ನಂತರ ಅವು ಸ್ಟಿಕ್ಕರ್ ಟ್ಯಾಬ್‌ನಲ್ಲಿ ಗೋಚರಿಸುವುದನ್ನು ನೀವು ನೋಡುತ್ತೀರಿ.

ವಾಟ್ಸಾಪ್‌

ಪ್ರಸ್ತುತ ವಾಟ್ಸಾಪ್‌ನಲ್ಲಿ ಚುಮ್ಮಿ ಚುಮ್ ಚುಮ್ಸ್, ರಿಕೊ ಸ್ವೀಟ್ ಲೈಫ್, ಪ್ಲೇಫುಲ್ ಪಿಯೋಮರು, ಬ್ರೈಟ್ ಡೇಸ್, ಮತ್ತು ಮೂಡಿ ಫುಡೀಸ್‌ನಂತಹ ಒಂದೆರಡು ಆನಿಮೇಟೆಡ್ ಸ್ಟಿಕ್ಕರ್ ಪ್ಯಾಕ್‌ಗಳಿವೆ. ನಿಮಗೆ ಬೇಕಾದಾಗ ನೀವು ಯಾವಾಗಲೂ ಈ ಸ್ಟಿಕ್ಕರ್ ಪ್ಯಾಕ್‌ಗಳನ್ನು ವಾಟ್ಸಾಪ್‌ನಲ್ಲಿ ಅಳಿಸಬಹುದಾಗಿದೆ. ಸದ್ಯ ವಾಟ್ಸಾಪ್‌ನಲ್ಲಿ, ನೀವು ಕಳುಹಿಸಿದಾಗ ಅನಿಮೇಟೆಡ್ ಸ್ಟಿಕ್ಕರ್‌ಗಳು ಒಮ್ಮೆ ಪ್ಲೇ ಆಗುತ್ತವೆ. ಬಳಕೆದಾರರು ಚಾಟ್ ಅನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡಿದರೆ, ಆನಿಮೇಟೆಡ್ ಸ್ಟಿಕ್ಕರ್‌ಗಳು ಪ್ಲೇ ಆಗುತ್ತವೆ. ಟೆಲಿಗ್ರಾಮ್‌ನಂತಲ್ಲದೆ, ಆನಿಮೇಟೆಡ್ ಸ್ಟಿಕ್ಕರ್‌ಗಳು ವಾಟ್ಸಾಪ್‌ನಲ್ಲಿ ಲೂಪ್‌ನಲ್ಲಿ ಪ್ಲೇ ಆಗುವುದಿಲ್ಲ ಎಂದು ಹೇಳಲಾಗಿದೆ.

Best Mobiles in India

English summary
WhatsApp recently introduced new features like dark mode on the web, QR codes and more. Among these, animated sticker packs are now available to all WhatsApp users globally.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X