WhatsApp: ವಾಟ್ಸಾಪ್ ಚಾನಲ್ ಕ್ರಿಯೆಟ್ ಮಾಡುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ!
ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರ ಅನುಕೂಲಕ್ಕಾಗಿ ಅನೇಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಜೊತೆಗೆ ಪ್ರತಿನಿತ್ಯವೂ ಒಂದಲ್ಲ ಒಂದು ಹೊಸ ಮಾದರಿಯ ಫೀಚರ್ಸ್‌ಗಳನ್ನು ಅಭಿವೃದ್ಧಿಪಡಿಸುತ್ತಾ ಬಂದಿದೆ. ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಇನ್‌ಸ್ಟಾಗ್ರಾಮ್ ಮಾದರಿಯ ವಾಟ್ಸಾಪ್ ಚಾನಲ್‌ಗಳನ್ನು ಪರಿಚಯಿಸಿದೆ.
ಹೌದು, ಕಳೆದ ಎರಡು ದಿನಗಳಿಂದ ವಾಟ್ಸಾಪ್‌ನಲ್ಲಿ ಚಾನಲ್ ಎಂಬ ಹೊಸ ಫೀಚರ್ಸ್ ಕಾಣಿಸುತ್ತಿದೆ. ಇದರ ಉಪಯೋಗವೇನು? ಇದರ ಬಳಕೆ ಹೇಗೆ ಅನ್ನೊದನ್ನ ತಿಳಿಯದೆ ಕೆಲವರು ಕನ್ಫೂಸ್ ಕೂಡ ಆಗಿದ್ದಾರೆ. ಹಾಗಾದ್ರೆ ವಾಟ್ಸಾಪ್ ಚಾನಲ್ ಫೀಚರ್ಸ್ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಲಭ್ಯವಿರುವ ಚಾನಲ್ ಮಾದರಿಯ ಫೀಚರ್ಸ್‌ಗಳನ್ನು ವಾಟ್ಸಾಪ್‌ನಲ್ಲಿ ಕೂಡ ಪ್ರಾರಂಭಿಸಲಾಗಿದೆ. ಇದರಿಂದ ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿಯೇ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ನಿರ್ಣಾಯಕ ಅಪ್ಡೇಟ್‌ಗಳನ್ನು ಸ್ವೀಕರಿಸಲು ಅವಕಾಶವನ್ನು ನೀಡಲಿದೆ. ಅಂದರೆ ನಿಮ್ಮ ವಾಟ್ಸಾಪ್ ಚಾನಲ್ ಮೂಲಕ ನೇರವಾದ, ವಿಶ್ವಾಸಾರ್ಹ ಮತ್ತು ಖಾಸಗಿ ಅಪ್ಡೇಟ್‌ಗಳನ್ನು ಪಡೆದುಕೊಳ್ಳುವುದಕ್ಕೆ ಅವಕಾಶ ಸಿಗಲಿದೆ.
ವಾಟ್ಸಾಪ್ ಚಾನಲ್ ಎಂದರೇನು ಗೊತ್ತಾ?
ವಾಟ್ಸಾಪ್ ಚಾನೆಲ್‌ಗಳು ಏಕಮುಖ ಪ್ರಸಾರ ಡಿವೈಸ್ ಆಗಿ ಕಾರ್ಯನಿರ್ವಹಿಸಲಿವೆ. ಚಾನಲ್ ಅಡ್ಮಿನ್‌ಗಳ ಪಠ್ಯ ಸಂದೇಶಗಳು, ಫೋಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ರವಾನಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ತಮ್ಮ ಆಸಕ್ತಿಯನ್ನು ಕೆರಳಿಸುವ ಚಾನಲ್‌ಗಳನ್ನು ಹುಡುಕುವಲ್ಲಿ ಬಳಕೆದಾರರಿಗೆ ಸಹಾಯ ಮಾಡಲು ಹೊಸ ಡೈರೆಕ್ಟರಿಯನ್ನು ರಚಿಸುವ ಪ್ರಕ್ರಿಯೆ ಕೂಡ ನಡೆಯುತ್ತಿದೆ.
ಈ ಡೈರೆಕ್ಟರಿಯಲ್ಲಿ, ಬಳಕೆದಾರರು ತಮ್ಮ ಹವ್ಯಾಸಗಳು, ಕ್ರೀಡಾ ತಂಡಗಳಿಗೆ ಸಂಬಂಧಿಸಿದ ಚಾನಲ್‌ಗಳನ್ನು ಕಾಣಬಹುದಾಗಿದೆ. ಇದಲ್ಲದೆ, ಚಾಟ್‌ಗಳು, ಇಮೇಲ್‌ಗಳು ಅಥವಾ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಇನ್ವೈಟ್ ಲಿಂಕ್‌ಗಳನ್ನು ಅನುಸರಿಸುವ ಮೂಲಕ ಬಳಕೆದಾರರು ವಾಟ್ಸಾಪ್ ಚಾನಲ್‌ಗಳಿಗೆ ಸೇರುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ.
ವಾಟ್ಸಾಪ್ ಚಾನಲ್‌ಗಳನ್ನು ಕ್ರಿಯೆಟ್ ಮಾಡುವುದು ಹೇಗೆ?
* ಮೊದಲಿಗೆ ವಾಟ್ಸಾಪ್ ವೆಬ್ ಅನ್ನು ತೆರೆಯಿರಿ
* ಇದರಲ್ಲಿ ಚಾನಲ್‌ಗಳ ಐಕಾನ್ ಕ್ಲಿಕ್ ಮಾಡುವ ಮೂಲಕ ಚಾನಲ್‌ಗಳಿಗೆ ಹೋಗಿ
* ಇದೀಗ + ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಚಾನಲ್ ಕ್ರಿಯೆಟ್ ಮಾಡಲು ಹೋಗಿ
* ಇದರಲ್ಲಿ ಕಂಟಿನ್ಯೂ ಕ್ಲಿಕ್ ಮಾಡಿ
* ನಂತರ ಸ್ಕ್ರೀನ್ ಮೇಲೆ ಕಾಣುವ ಪ್ರಾಂಪ್ಟ್‌ಗಳ ಮೂಲಕ ಮುಂದುವರಿಯಿರಿ.
* ಇದೀಗ ನಿಮ್ಮ ಚಾನಲ್ಗೆ ಒಂದು ಹೆಸರನ್ನು ನೀಡಿರಿ
* ನಂತರ ನಿಮ್ಮ ಚಾನಲ್ ಅನ್ನು ಕಸ್ಟಮೈಸ್ ಮಾಡಿ, ಅಂದರೆ ಚಾನಲ್ ಬಗ್ಗೆ ವಿವರಣೆ ಮತ್ತು ಐಕಾನ್ ಅನ್ನು ಸೇರಿಸುವ ಮೂಲಕ ನಿಮ್ಮ ಚಾನಲ್ ಅನ್ನು ಕಸ್ಟಮೈಸ್ ಮಾಡಬಹುದು
* ಇದೀಗ ಚಾನಲ್ ವಿವರಣೆಯನ್ನು ಸೇರಿಸಿ
* ಚಾನಲ್ ಐಕಾನ್ ಸೇರಿಸಿ
* ಇದೀಗ ಚಾನಲ್ ಕ್ರಿಯೆಟ್ ಕ್ಲಿಕ್ ಮಾಡಿದರೆ ನಿಮ್ಮ ಚಾನಲ್ ಕ್ರಿಯೆಟ್ ಆಗಿರಲಿದೆ.
ಇದಲ್ಲದೆ ವಾಟ್ಸಾಪ್ ಪ್ಲಾಟ್‌ಫಾರ್ಮ್ ಇತ್ತೀಚಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಲ್ಲಿ ಚಾಟ್ ಲಾಕ್, ಎಡಿಟ್ ಬಟನ್, ಹೆಚ್‌ಡಿ ಫೋಟೋಗಳು, ಸ್ಕ್ರೀನ್ ಶೇರಿಂಗ್ ಹಾಗೂ ಇತರೆ ಕೆಲವು ಆಯ್ಕೆಗಳು ಬಹಳ ಪ್ರಮುಖವಾಗಿವೆ. ಈ ಫೀಚರ್ಸ್‌ಗಳಲ್ಲಿ ವಾಟ್ಸಾಪ್‌ನ ಎಡಿಟ್ ಮೆಸೆಜ್ ಫೀಚರ್ ಅತ್ಯಾಕರ್ಷಕವಾಗಿದೆ. ಇದು ನೀವು ಕಳುಹಿಸಿದ ಮೆಸೆಜ್ ಅನ್ನು ಎಡಿಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಇದರಿಂದ ನೀವು ತಪ್ಪಾದ ಸಂದೇಶ ಕಳುಹಿಸಿದರೂ ಕೂಡ ಅದನ್ನು ಕೂಡಲೇ ಸರಿಪಡಿಸುವುದಕ್ಕೆ ಸಾಧ್ಯವಾಗಲಿದೆ. ನೀವು ವಾಟ್ಸಾಪ್‌ನಲ್ಲಿ ಮೆಸೆಜ್ ಕಳುಹಿಸಿದ ಮೊದಲ 15 ನಿಮಿಷದಲ್ಲಿ ಮಾತ್ರ ಬಳಕೆದಾರರಿಗೆ ಮೆಸೆಜ್ ಎಡಿಟ್ ಮಾಡಲು ಅವಕಾಶ ಇರುತ್ತದೆ.


Click it and Unblock the Notifications








