Subscribe to Gizbot

ಕಳೆದು ಹೋದ ವಾಟ್ಸಾಪ್ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ?

Written By:

ವಾಟ್ಸಾಪ್ ಆಗಿರಲಿ ಫೇಸ್‎ಬುಕ್ ಆಗಿರಲಿ ನಾವು ನಡೆಸುವ ಸಂವಾದಗಳು ಇದರಲ್ಲಿ ಅತಿ ಮುಖ್ಯವಾಗಿ ದಾಖಲೆಯಾಗಿರುತ್ತದೆ. ಇದನ್ನು ಕಳೆದುಕೊಂಡಲ್ಲಿ ನಮಗಾಗುವ ದುಃಖ ಹೇಳತೀರದ್ದಾಗಿರುತ್ತದೆ. ಆದರೆ ದುರಾದೃಷ್ಟವಶಾತ್ ಈ ದಾಖಲೆಗಳು ನಷ್ಟವಾದಲ್ಲಿ ಡಿಲೀಟ್ ಆದಲ್ಲಿ ಇವುಗಳನ್ನು ಮರುಪಡೆದುಕೊಳ್ಳಲು ಕೆಲವು ವಿಧಾನಗಳಿವೆ ಅದು ಹೇಗೆ ಎಂಬುದನ್ನು ನೋಡೋಣ.

ಕಳೆದು ಹೋದ ವಾಟ್ಸಾಪ್ ಡೇಟಾವನ್ನು ಪಡೆದುಕೊಳ್ಳುವುದು ಹೇಗೆ?

ಐಫೋನ್‎ನಲ್ಲಿ ನಷ್ಟವಾದ ಚಾಟ್‎ಗಳನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ಹಂತ: 1
ಸ್ಟೆಲ್ಲಾರ್ ಫೋನಿಕ್ಸ್ ಡೇಟಾ ರಿಕವರಿ ಉಚಿತ ಆವೃತ್ತಿಯನ್ನು ಐಫೋನ್‎ಗಾಗಿ ಡೌನ್‎ಲೋಡ್ ಮಾಡಿ

ಹಂತ:2
ಒಮ್ಮೆ ಡೌನ್‎ಲೋಡ್ ಮಾಡಿಕೊಂಡ ನಂತರ, ನಿಮ್ಮ ಕಂಪ್ಯೂಟರ್‎ನಲ್ಲಿ ಇನ್‫‎ಸ್ಟಾಲ್ ಮಾಡಿ

ಹಂತ:3
ಈ ಸಾಫ್ಟ್‭ವೇರ್‎ಗೆ ಇನ್‎ಸ್ಟಾಲೇಶನ್ ಪ್ರಕ್ರಿಯೆ ಹೆಚ್ಚು ಸರಳವಾಗಿದೆ. ಡೌನ್‎ಲೋಡ್ ಮಾಡಿದ ಎಕ್ಸ್ ಫೈಲ್ ಅನ್ನು ತೆರೆಯಿರಿ, ಸೂಚನೆಗಳನ್ನು ಪಾಲಿಸಿ ಮತ್ತು ಫಿನ್ನಿಶ್ ಅನ್ನು ಕೊನೆಯಲ್ಲಿ ಕ್ಲಿಕ್ ಮಾಡಿ

WhatsApp Tips !! ವಾಟ್ಸ್ಆಪ್ ಇದ್ದರೇ ಸಾಕು, ಏನೆನೋ ಮಾಡಬಹುದು...!!!

ಹಂತ: 4
ಐಫೋನ್‎ಗಾಗಿ ಸ್ಟೆಲ್ಲರ್ ಡೇಟಾ ರಿಕವರಿ ಐಕಾನ್ ಅನ್ನು ಡೆಸ್ಕ್‎ಟಾಪ್‎ನಲ್ಲಿ ಡಬಲ್ ಕ್ಲಿಕ್ ಮಾಡಿ

ಹಂತ: 5
ರಿಜಿಸ್ಟ್ರೇಶನ್ ಕೀಯನ್ನು ಬಳಸಿಕೊಂಡು ಉತ್ಪನ್ನವನ್ನು ಆನ್‎ಲೈನ್‎ನಲ್ಲಿ ರಿಜಿಸ್ಟರ್ ಮಾಡಿ

ಹಂತ: 6
ಇದು ಒಮ್ಮೆ ರಿಜಿಸ್ಟರ್ ಆದ ನಂತರ, ನಿಮ್ಮ ಐಫೋನ್/ಐಪ್ಯಾಡ್ ಅನ್ನು ಸಂಪರ್ಕಪಡಿಸಿ ಮತ್ತು ಐಫೋನ್‎ನಿಂದ ರಿಕವರಿ ಕ್ಲಿಕ್ ಮಾಡಿ.

ಹಂತ: 7
ಪ್ರೊಗ್ರಾಮ್ ಅನ್ನು ಒಮ್ಮೆ ನೀವು ಇನಿಶಿಯಲ್ ಮಾಡಿಕೊಂಡ ನಂತರ ಕಳೆದು ಹೋದ ಡೇಟಾವನ್ನು ಇದು ನಿಮಗೆ ಹಿಂತಿರುಗಿಸುತ್ತದೆ. ವಾಟ್ಸಾಪ್ ಅನ್ನು ಎಡಭಾಗದ ಸೈಡ್ ಬಾರ್‎ನಿಂದ ಕ್ಲಿಕ್ ಮಾಡಿ ಮತ್ತು ವಾಟ್ಸಾಪ್ ಡೇಟಾವನ್ನು ಪೂರ್ವವೀಕ್ಷಣೆ ಮಾಡಿ.

ಹಂತ: 8
ಕಳೆದು ಹೋದ/ಡಿಲೀಟ್ ಡೇಟಾವನ್ನು ಮಾತ್ರ ಪಡೆದುಕೊಳ್ಳಲು 'ಓನ್ಲೀ ಶೊ ಡಿಲೀಟೆಡ್' ಆಯ್ಕೆಮಾಡಿ

ಹಂತ:9
ಈಗ ನಿಮಗೆ ಬೇಕಾದ ಲೊಕೇಶನ್ ಆಯ್ಕೆಮಾಡಿಕೊಂಡು, ಸೇವ್ ಕ್ಲಿಕ್ ಮಾಡಿ

ಹಂತ: 10
ಡಿಲೀಟ್ ಆಗಿರುವ ಡೇಟಾ ನಿಮಗೆ ಮರಳಿ ದೊರೆಯುತ್ತದೆ.

 

English summary
If you are an iOS user, you can download this Stellar Phoenix data recovery app to recover the lost data without any complications. Further, you can also retrieve data without jailbreaking your device as well.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot