WhatsApp: ವಾಟ್ಸಾಪ್ ಬಳಕೆದಾರರೇ ಈ ಕ್ರಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು
ಸ್ಮಾರ್ಟ್‌ಫೋನ್ ಬಳಕೆದಾರರು ಅತಿ ಹೆಚ್ಚು ಬಳಸುವ ಅಪ್ಲಿಕೇಶನ್‌ಗಳಲ್ಲಿ ವಾಟ್ಸಾಪ್ ಕೂಡ ಒಂದಾಗಿದೆ. ವಾಟ್ಸಾಪ್ ಪ್ರಮುಖ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಎನಿಸಿಕೊಂಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಮೂಲಕ ಕಿರುಕುಳ ನೀಡುವ, ವಾಟ್ಸಾಪ್ ಸಂದೇಶಗಳ ಮೂಲಕ ಬೆದರಿಕೆ ಹಾಕುವ ಘಟನೆಗಳು ಕೂಡ ವರದಿಯಾಗುತ್ತಿವೆ.
ಹೌದು, ವಾಟ್ಸಾಪ್(WhatsApp)ನಲ್ಲಿ ಬೆದರಿಕೆ ಸಂದೇಶಗಳನ್ನು ಹಾಕುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಂತ ನೀವು ಹೆದರಬೇಕಾದ ಅವಶ್ಯಕತೆಯಿಲ್ಲ, ವಾಟ್ಸಾಪ್ ತನ್ನ ಬಳಕೆದಾರರ ಸುರಕ್ಷತೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ನೀವು ವಾಟ್ಸಾಪ್‌ನಲ್ಲಿ ರಿಪೋರ್ಟ್ ಮಾಡಬೇಕಾಗುತ್ತದೆ. ಹಾಗಾದ್ರೆ ವಾಟ್ಸಾಪ್ ನಲ್ಲಿ ಬೆದರಿಕೆ ಹಾಕುವ ಚಾಟ್‌ಗಳನ್ನು ರಿಪೋರ್ಟ್ ಮಾಡುವುದು ಹೇಗೆ ಅಥವಾ ನೀವು ವಾಟ್ಸಾಪ್ ಚಾಟ್‌ಗಳನ್ನು ಯಾವಾಗ ಬ್ಲಾಕ್ ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಯಾವುದಾದರೂ ಅಪರಿಚಿತ ಸಂದೇಶ, ಇಲ್ಲವೆ ಕಂಟ್ಯಾಕ್ಟ್‌ನಲ್ಲಿ ಇಲ್ಲದ ಸಂಖ್ಯೆಯಿಂದ ಸಂದೇಶ ಬಂದರೆ ಬ್ಲಾಕ್ ಮಾಡಿ ಬಿಡುತ್ತೇವೆ. ಅಲ್ಲದೆ ಯಾವುದಾದರೂ ಸ್ಪ್ಯಾಮ್ ಸಂದೇಶ ಬಂದಾಗಲೂ ಸಹ ಬ್ಲಾಕ್ ಮಾಡುವುದಕ್ಕೆ ಮುಂದಾಗುತ್ತಿವೆ. ಇದರಿಂದ ಅಂತಹ ಸಂಖ್ಯೆಯಿಂದ ನಿಮಗೆ ಮರಳಿ ಸಂದೇಶ ಬರುವುದಕ್ಕೆ ಅವಕಾಶವಿರುವುದಿಲ್ಲ. ಆದರೆ ಇಂತಹ ಸಂಖ್ಯೆಗಳ ವಿರುದ್ದ ವಾಟ್ಸಾಪ್ ಕ್ರಮ ತೆಗೆದುಕೊಳ್ಳಬೇಕಾದರೆ ನೀವು ಆ ಸಂಖ್ಯೆಯನ್ನು ಬ್ಲಾಕ್ ಮಾಡುವ ಮೊದಲು ರಿಪೋರ್ಟ್ ಮಾಡಬೇಕಾಗುತ್ತದೆ.
ವಾಟ್ಸಾಪ್‌ನಲ್ಲಿ ಕಂಟ್ಯಾಕ್ಟ್ ಅನ್ನು ಯಾವಾಗ ಬ್ಲಾಕ್ ಮಾಡಬೇಕು?
ಅನಗತ್ಯ ಸಂದೇಶಗಳು ಬಂದಾಗ, ಕಿರುಕುಳ ನೀಡುವ ಸಂದೇಶಗಳನ್ನು ಸ್ವೀಕರಿಸಿದಾಗ ಬ್ಲಾಕ್ ಮಾಡುವುದು ಸಾಮಾನ್ಯವಾಗಿದೆ. ಸ್ಪ್ಯಾಮಿಂಗ್ ಅಥವಾ ಅನುಮಾನಾಸ್ಪದ ನಡವಳಿಕೆಯನ್ನು ಅನುಭವ ನೀಡುವ ಯಾವುದೇ ಸಂದೇಶ ಬಂದರೂ ಅದನ್ನು ಬ್ಲಾಕ್ ಮಾಡವುದು ಸೂಕ್ತ.

ವಾಟ್ಸಾಪ್ ಕಂಟ್ಯಾಕ್ಟ್ ಬ್ಲಾಕ್ ಮಾಡುವುದು ಹೇಗೆ?
ವೈಯಕ್ತಿಕ ಚಾಟ್ ನಲ್ಲಿ ಕಂಟ್ಯಾಕ್ಟ್‌ಗಳನ್ನು ಬ್ಲಾಕ್ ಮಾಡುವುದಕ್ಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
* ಅನಗತ್ಯ ಸಂಪರ್ಕದಿಂದ ಸಂದೇಶದ ಚಾಟ್ ತೆರೆಯಿರಿ
* ಚಾಟ್ ಮಾಹಿತಿ ಐಕಾನ್ ಮೇಲೆ ಟ್ಯಾಪ್ ಮಾಡಿ
* ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಬ್ಲಾಕ್ (Block) ಮೇಲೆ ಟ್ಯಾಪ್ ಮಾಡಿ
* Block ಅನ್ನು ಮತ್ತೊಮ್ಮೆ ಟ್ಯಾಪ್ ಮಾಡುವ ಮೂಲಕ ಕಂಟ್ಯಾಕ್ಟ್ ಅನ್ನು ಬ್ಲಾಕ್ ಮಾಡಬಹುದು
ವಾಟ್ಸಾಪ್ ಬ್ಲಾಕ್ ಮಾಡುವ ವಿಧಾನ-2
* WhatsApp ಅಪ್ಲಿಕೇಶನ್ ತೆರೆಯಿರಿ
* ಇದೀಗ ಚಾಟ್ಸ್ ಟ್ಯಾಬ್‌ಗೆ ಹೋಗಿ
* ಅನಗತ್ಯ ಸಂಪರ್ಕದ ಚಾಟ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡಿ
* ಮೋರ್ ಆಯ್ಕೆಯ ಮೇಲೆ ಟ್ಯಾಪ್ ಮಾಡಿ ಮತ್ತು ಬ್ಲಾಕ್ ಆಯ್ಕೆಮಾಡಿ
* "ಬ್ಲಾಕ್" ಅನ್ನು ಮತ್ತೊಮ್ಮೆ ಟ್ಯಾಪ್ ಮಾಡುವ ಮೂಲಕ ಬ್ಲಾಕ್ ಅನ್ನು ಧೃಡಿಕರಿಸಿ

ವಾಟ್ಸಾಪ್‌ನಲ್ಲಿ ರಿಪೋರ್ಟ್ ಮಾಡುವುದು ಹೇಗೆ?
ವಾಟ್ಸಾಪ್‌ನಲ್ಲಿ ಬೆದರಿಕೆಗಳು, ನಿಂದನೆ ಅಥವಾ ಸ್ಪ್ಯಾಮ್ ಸಂದೇಶಗಳು ಹೆಚ್ಚಾಗಿ ಬರುತ್ತಿದ್ದರೆ ಅಂತಹ ಕಂಟ್ಯಾಕ್ಟ್‌ಗಳನ್ನು ರಿಪೋರ್ಟ್ ಮಾಡಬಹುದು. ನೀವು ರಿಪೋರ್ಟ್ ಮಾಡಿದ ಕಂಟ್ಯಾಕ್ಟ್‌ಗಳನ್ನು ವಾಟ್ಸಾಪ್ ಪರಿಶೀಲನೆ ಮಾಡಿ ಸೂಕ್ತ ಕ್ರಮವನ್ನು ಕೂಡ ತೆಗೆದುಕೊಳ್ಳಲಿದೆ.
ವಾಟ್ಸಾಪ್ ಕಂಟ್ಯಾಕ್ಟ್‌ಗಳನ್ನು ರಿಪೋರ್ಟ್ ಮಾಡುವುದು ಹೇಗೆ?
* ಮೊದಲು ನೀವು ರಿಪೋರ್ಟ್ ಮಾಡಬೇಕಾದ ಕಂಟ್ಯಾಕ್ಟ್ ಚಾಟ್ ತೆರೆಯಿರಿ
* ಅವರ ಹೆಸರು ಅಥವಾ ಚಾಟ್ ಮಾಹಿತಿ ಐಕಾನ್ ಮೇಲೆ ಟ್ಯಾಪ್ ಮಾಡಿ
* ಇದೀಗ ಕೆಳಗೆ ಸ್ಕ್ರಾಲ್ ಮಾಡಿ ಮತ್ತು "ರಿಪೋರ್ಟ್" ಟ್ಯಾಪ್ ಮಾಡಿ.
* ರಿಪೋರ್ಟ್ ಮಾಡುವುದಕ್ಕೆ ಕಾರಣವನ್ನು ಆಯ್ಕೆ ಮಾಡಿ ಮತ್ತು "ರಿಪೋರ್ಟ್" ಟ್ಯಾಪ್ ಮಾಡಿ


Click it and Unblock the Notifications








