Home
ಟೆಕ್ ನೌಕರಿ

T20 World Cup: ಕ್ರಿಕೆಟ್ ಪ್ರಿಯರಿಗೆ ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿದ ವಾಟ್ಸಪ್: ಡೌನ್‌ಲೋಡ್ ಮತ್ತು ಶೇರ್ ಮಾಡುವುದು ಹೇಗೆ?

ವಿಶ್ವದೆಲ್ಲೆಡೆ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಕ್ರೇಜ್‌ ಶುರುವಾಗಿದೆ. ಇದೇ ಸಂದರ್ಭದಲ್ಲಿ ಕ್ರಿಕೆಟ್ ಪ್ರಿಯರಿಗಾಗಿ ವಾಟ್ಸಪ್‌ ಗುಡ್‌ ನ್ಯೂಸ್‌ ಒಂದನ್ನು ನೀಡಿದೆ. ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಪ್ ಆಗಾಗ್ಗೆ ತನ್ನ ಬಳಕೆದಾರರಿಗೆ ಹೊಸ ಹೊಸ ಅಪ್ಡೇಟ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದೀಗ, ಕ್ರಿಕೆಟ್‌ ಅಭಿಮಾನಿಗಳನ್ನು ಸೆಳೆಯಲು ಮೆಟಾ ಕಂಪನಿಯು ವಾಟ್ಸಪ್‌ನಲ್ಲಿ (WhatsApp) ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಿದೆ. ವಾಟ್ಸಪ್ ತನ್ನ ಅಧಿಕೃತ ಚಾನೆಲ್‌ನಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದೆ. ಏನಿದು ಹೊಸ ಸ್ಟಿಕ್ಕರ್‌ಗಳು? ಇದನ್ನು ಡೌನ್‌ಲೋಡ್‌ ಮಾಡುವುದು ಮತ್ತು ಶೇರ್‌ ಮಾಡುವುದು ಹೇಗೆ? ಎಂಬುವುದನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ಹೌದು, ಒಂದೆಡೆ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣವನ್ನು ನಿರ್ಮಿಸಿದೆ. ಮತ್ತೊಂದೆಡೆ, ಮೆಟಾ ಕಂಪೆನಿಯ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ ಕ್ರಿಕೆಟ್ ಹಬ್ಬವನ್ನು ಸ್ಮರಣೀಯವಾಗಿಸಲು 'ವರ್ಲ್ಡ್ ಆಫ್ ಕ್ರಿಕೆಟ್' ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ಬಿಡುಗಡೆ ಮಾಡಿದೆ. ಈ ಬಗ್ಗೆ ವಾಟ್ಸಪ್ ತನ್ನ ಅಧಿಕೃತ ಚಾನೆಲ್‌ನಲ್ಲಿ ಮಾಹಿತಿ ಪ್ರಕಟಿಸಿದೆ. ಇದಕ್ಕೆ 'ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್' (World Of Cricket) ಎಂದು ಹೆಸರನ್ನು ಇಡಲಾಗಿದೆ.

T20 World Cup: ಕ್ರಿಕೆಟ್ ಪ್ರಿಯರಿಗೆ ಹೊಸ ಸ್ಟಿಕ್ಕರ್‌ ಪರಿಚಯಿಸಿದ ವಾಟ್ಸಪ್

ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್

ಈ ಬಗ್ಗೆ ಮಾಹಿತಿ ನೀಡಿರುವ ವಾಟ್ಸಪ್, ಕ್ರಿಕೆಟ್ ಅಭಿಮಾನಿಗಳಿಗಾಗಿ ಈ ಐಸಿಸಿ ಟಿ20 ವಿಶ್ವಕಪ್ ಪಂದ್ಯವನ್ನು ಮತ್ತಷ್ಟು ಆನಂದಿಸಲು 'ವರ್ಲ್ಡ್ ಆಫ್ ಕ್ರಿಕೆಟ್' ಎಂಬ ಹೊಸ ಸ್ಟಿಕ್ಕರ್‌ಗಳನ್ನು ಪರಿಚಯಿಸಲಾಗಿದೆ. ಇದಕ್ಕೆ 'ಸ್ಟಿಕ್ಕರ್ ಡ್ರಾಪ್: ವರ್ಲ್ಡ್ ಆಫ್ ಕ್ರಿಕೆಟ್' ಎಂದು ಹೆಸರಿಸಲಾಗಿದೆ. ಟಿ20 ವಿಶ್ವಕಪ್ 2024 ಆರಂಭವಾಗಿದೆ. ಈ ಸಮಯದಲ್ಲಿ ನೀವು ನಿಮ್ಮ ಗ್ರೂಪ್ ಚಾಟ್‌ಗಳನ್ನು ಹೆಚ್ಚು ಎಂಜಾಯ್ ಮಾಡಲು ಅನುಕೂಲವಾಗುವಂತೆ ಸ್ಟಿಕ್ಕರ್ ಪ್ಯಾಕ್ ಅನ್ನು ತಂದಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದೆ.

ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಪ್ಯಾಕ್ ಅನ್ನು ಬಕ್ ಎಂಬ ಕಂಪನಿ ತಯಾರಿಸಿದ್ದು, ಇದು ಒಟ್ಟು 16 ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಬಳಕೆದಾರರು ಕ್ರಿಕೆಟ್ ಪಂದ್ಯದ ವಿಭಿನ್ನ ಕ್ಷಾಂಗಳು, ಆಚರಣೆಗಳ ಅನಿಮೇಟೆಡ್ ಸ್ಟಿಕ್ಕರ್‌ಗಳನ್ನು ನಿಮ್ಮ ಚಾಟ್‌ಗಳಲ್ಲಿ ಶೇರ್ ಮಾಡಬಹುದು. ಹಾಗಿದ್ರೆ, ಈ ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡುವುದು ಹೇಗೆ? ಎಂಬ ಕುತೂಹಲ ನಿಮ್ಮಲ್ಲಿದೆಯೇ? ಅದಕ್ಕೆ ಈ ಸರಳ ವಿಧಾನಗಳನ್ನು ಬಳಸಿ.

ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡುವುದು ಹೇಗೆ?

  • ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ಅಪ್ಲಿಕೇಶನ್ ತೆರೆಯಿರಿ.
  • ವಾಟ್ಸಪ್‌ನಲ್ಲಿ ಯಾವುದೇ ಚಾಟ್ ಅಥವಾ ಗ್ರೂಪ್ ಚಾಟ್‌ಗೆ ಹೋಗಿ.
  • ಪಠ್ಯ ಪೆಟ್ಟಿಗೆಯನ್ನು ಟ್ಯಾಪ್ ಮಾಡಿ ಮತ್ತು ಎಮೋಜಿ ಐಕಾನ್ ಆಯ್ಕೆಮಾಡಿ.
  • ಇದರಲ್ಲಿ ಸ್ಟಿಕ್ಕರ್‌ಗಳ ಆಯ್ಕೆಗೆ ಹೋಗಿ '+' ಐಕಾನ್ ಅನ್ನು ಟ್ಯಾಪ್ ಮಾಡಿ.
  • ಇದರಲ್ಲಿ 'ವರ್ಲ್ಡ್ ಆಫ್ ಕ್ರಿಕೆಟ್' ಎಂದು ಸರ್ಚ್ ಮಾಡಿ ಮತ್ತು ಡೌನ್‌ಲೋಡ್ ಮಾಡಿ.

ಸ್ನೇಹಿತರಿಗೆ ಈ ಸ್ಟಿಕ್ಕರ್‌ಗಳನ್ನು ಶೇರ್‌ ಮಾಡುವುದು ಹೇಗೆ?

ನೀವು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಕ್ರಿಕೆಟ್ ಸ್ಟಿಕ್ಕರ್‌ಗಳನ್ನು ಹಂಚಿಕೊಳ್ಳಬಹುದು. ಇದಕ್ಕಾಗಿ ಈ ಸುಲಭ ಟ್ರಿಕ್ಸ್ ಬಳಸಿ.

  • ಮೊದಲು ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ಓಪನ್ ಮಾಡಿ
  • ಬಳಿಕ ವಾಟ್ಸಪ್‌ನಲ್ಲಿ ಯಾವುದೇ ಚಾಟ್ ವಿಂಡೋಗೆ ಹೋಗಿ
  • ಸ್ಟಿಕ್ಕರ್‌ಗಳ ವಿಭಾಗವನ್ನು ಪ್ರವೇಶಿಸಿ ಮತ್ತು ಮೇಲ್ಭಾಗದಲ್ಲಿ ವರ್ಲ್ಡ್ ಆಫ್ ಕ್ರಿಕೆಟ್ ಸ್ಟಿಕ್ಕರ್ ಟ್ಯಾಬ್‌ಗಾಗಿ ನೋಡಿ
  • ನಿಮ್ಮ ಆಪ್ತರಿಗೆ ಕಳುಹಿಸಲು ನಿಮಗಿಷ್ಟವಾದ ಸ್ಟಿಕರ್ ಮೇಲೆ ಟ್ಯಾಪ್ ಮಾಡಿ. ಅಷ್ಟೇ.

WhatsApp ಸ್ಟೇಟಸ್ ಅಪ್ಡೇಟ್‌ಗಾಗಿ ಹೊಸ ಲೇಔಟ್

ಮೆಟಾ ಕಂಪೆನಿಯು ವಾಟ್ಸಪ್‌ನಲ್ಲಿ ಸ್ಟೇಟಸ್ ಅಪ್ಡೇಟ್‌ಗಾಗಿ ಹೊಸ ಲೇಔಟ್ ವಿನ್ಯಾಸವನ್ನು ಪರೀಕ್ಷಿಸುತ್ತಿದೆ. ಪರೀಕ್ಷಿಸದ ಹೊಸ ವಿನ್ಯಾಸವು ಸ್ಟೇಟಸ್ ಅಪ್ಡೇಟ್ ಪುಟಕ್ಕೆ ಬದಲಾವಣೆಗಳನ್ನು ತರುತ್ತದೆ. ಹೊಸ ವಿನ್ಯಾಸವು ಬಳಕೆದಾರರಿಗೆ ಪ್ರತಿಮೆಗಳನ್ನು ತೆರೆಯದೆ ಪೂರ್ವವೀಕ್ಷಣೆ ಮಾಡಲು ಅನುಮತಿಸುತ್ತದೆ. ಇದು ಭವಿಷ್ಯದಲ್ಲಿ ಐಒಎಸ್ (iOS) ಮತ್ತು ಆಂಡ್ರಾಯ್ಡ್ (Android) ಬಳಕೆದಾರರಿಗೆ ಹೊರತರುವ ನಿರೀಕ್ಷೆಯಿದೆ. ಫೀಚರ್ ಟ್ರ್ಯಾಕರ್ WABetaInfo ಪ್ರಕಾರ ಆಂಡ್ರಾಯ್ಡ್ 2.24.12.20ಗಾಗಿ ವಾಟ್ಸಪ್ ಬೀಟಾದೊಂದಿಗೆ WhatsApp Status ಅಪ್ಡೇಟ್ ಜೊತೆಗೆ ಹೊಸ ವಿನ್ಯಾಸವನ್ನು ರೂಪಿಸಲಾಗುತ್ತಿದೆ.

WhatsApp Status ಅಪ್ಡೇಟ್ ಕುರಿತಂತೆ ಫೀಚರ್ ಟ್ರ್ಯಾಕರ್ WABetaInfo ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ ಹಿಂದಿನ ಸಣ್ಣ ವೃತ್ತಾಕಾರದ ವಿಂಡೋವನ್ನು ಬದಲಿಸಿ ಸ್ಟೇಟಸ್ ಅಪ್ಡೇಟ್‌ಗಳಿಗಾಗಿ ಹೊಸ ದೊಡ್ಡ ಥಂಬ್ ನೇಲ್ ಪರಿಚಯಿಸಲಾಗಿದೆ. ಈ ಥಂಬ್ ನೇಲ್‌ನಿಂದ ಸ್ಟೇಟಸ್ ಅಪ್ಡೇಟ್ ಅನ್ನು ತೆರೆಯದೆಯೇ ಬಳಕೆದಾರರು ಈಗ ಪೂರ್ವವೀಕ್ಷಣೆ ಮಾಡಲು ಸಾಧ್ಯವಾಗುತ್ತದೆ. ಥಂಬ್ ನೇಲ್ ಅನ್ನು ಇನ್ನೂ ಸರ್ಚ್ ಪಟ್ಟಿಯ ಕೆಳಗೆ ಸ್ಕ್ರೀನ್ ಮೇಲ್ಭಾಗದಲ್ಲಿ ಇರಿಸಲಾಗಿದೆ ಎಂದು ಫೀಚರ್ ಟ್ರ್ಯಾಕರ್ ಹೇಳಿದೆ.

Best Mobiles in India

English summary
WhatsApp launches new 'T20 World Cup 2024' stickers. The World of Cricket pack features 16 animated stickers representing different cricket match situations and expressions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+