ನಿಮ್ಮದೇ ವಾಟ್ಸ್‌ಆಪ್ ಸ್ಟಿಕ್ಕರ್ ಸೃಷ್ಟಿಸಿ..! ಸೆಂಡ್ ಮಾಡಿ, ಖುಷಿ ಪಡಿ..!
ವಾಟ್ಸ್‌ಆಪ್‌ನಲ್ಲಿ ಸ್ಟಿಕ್ಕರ್ ಫೀಚರ್ ಬಂದಿರುವುದು ನಿಮಗೆಲ್ಲಾ ಗೊತ್ತೆ ಇದೆ. ಆ ಸ್ಟಿಕ್ಕರ್‌ಗಳೆಲ್ಲಾ ನಿಮಗೆ ಒಂಥರಾ ಖುಷಿ ನೀಡಬಹುದು. ಆ ಖುಷಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ನಿಮ್ಮದೇ ಆದ ಸ್ಟಿಕ್ಕರ್‌ಗಳನ್ನು ರಚಿಸಿ ನಿಮ್ಮ ಸ್ನೇಹಿತರಿಗೆ ಕಳುಹಿಸುವ ಆಯ್ಕೆ ಲಭ್ಯವಿದೆ. ವಿವಿಧ ಮುಖಭಾವಗಳೊಂದಿಗೆ ನಿಮ್ಮದೇ ಫೋಟೋ ಅಥವಾ ನಿಮ್ಮ ಸ್ನೇಹಿತರ ಫೋಟೋವನ್ನು ಸ್ಟಿಕ್ಕರ್ ಮಾಡಿ ಕಳುಹಿಸಬಹುದು.

ಇತ್ತೀಚೆಗೆ ತಾನೇ ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಾಂಟ್ ಮೆಸೇಜಿಂಗ್ ಆಪ್ ವಾಟ್ಸ್‌ಆಪ್ ತನ್ನ ಬಳಕೆದಾರರಿಗೆ ಸ್ಟಿಕ್ಕರ್ ಫೀಚರ್‌ನ್ನು ಪರಿಚಯಿಸಿತ್ತು. ಬಳಕೆದಾರರಿಗೆ ಭಾವನೆಗಳನ್ನು ವ್ಯಕ್ತಪಡಿಸಲು ಎಮೋಜಿ ಮತ್ತು GIF ಜತೆ ಇನ್ನೊಂದು ಆಯ್ಕೆಯನ್ನು ವಾಟ್ಸ್‌ಆಪ್ ನೀಡಿತ್ತು. ಈ ಫೀಚರ್ ಆಂಡ್ರಾಯ್ಡ್ ಮತ್ತು ಆಪಲ್ iOS ಬಳಕೆದಾರರಿಗೆ ಲಭ್ಯವಿದೆ. ಸದ್ಯಕ್ಕೆ ವಾಟ್ಸ್‌ಆಪ್‌ನಲ್ಲಿ ಸೀಮಿತವಾದ ಸ್ಟಿಕ್ಕರ್ ಪ್ಯಾಕ್‌ಗಳು ಇವೆ. ಅದಕ್ಕಾಗಿಯೇ ಆ ಮಿತಿಯನ್ನು ತೆಗೆದುಹಾಕಲು ನಿಮ್ಮದೇ ಸ್ಟಿಕ್ಕರ್ ರಚಿಸಿ, ಸ್ನೇಹಿತರಿಗೆ ಕಳುಹಿಸಿ ಹೇಗೆ ಅಂತಿರಾ..? ಮುಂದೆ ನೋಡಿ.

ವಾಟ್ಸ್‌ಆಪ್ ಅಪ್‌ಡೇಟ್ ಮಾಡಿ
ಮೊದಲು ನಿಮ್ಮ ವಾಟ್ಸ್‌ಆಪ್ ಅಪ್‌ಡೇಟ್ ಆಗಿದೆಯಾ ಎಂಬುದನ್ನು ಪರಿಶೀಲಿಸಿ. ನಿಮ್ಮ ವಾಟ್ಸ್‌ಆಪ್ 2.18 ಆವೃತ್ತಿ ಅಥವಾ ಅದಕ್ಕಿಂತ ಮೇಲಿನ ಆವೃತ್ತಿಯಾಗಿದ್ದರೆ ಮಾತ್ರ ನಿಮಗೆ ವಾಟ್ಸ್‌ಆಪ್ ಅಪಡೇಟ್ ಆಗಿ ನಿಮಗೆ ಸ್ಟಿಕ್ಕರ್ ಕಳುಹಿಸುವ ಆಯ್ಕೆ ಸಿಗುತ್ತದೆ.

ಬ್ಯಾಕ್‌ಗ್ರೌಂಡ್ ರಿಮೂವ್ ಮಾಡಿ
ನಿಮಗೆ ಇಷ್ಟವಾದ ಭಂಗಿಯಲ್ಲಿ, ಮುಖಭಾವದಲ್ಲಿ ನಿಮ್ಮ ಫೋಟೋ ತೆಗೆದುಕೊಳ್ಳಿ. ನಂತರ ಆ ಫೋಟೋದ ಬ್ಯಾಕ್‌ಗ್ರೌಂಡ್‌ನ್ನು ಅಳಿಸಿ, PNG ಫೈಲ್ ಫಾರ್ಮ್ಯಾಟ್‌ನಲ್ಲಿ ಚಿತ್ರವನ್ನು ಸೇವ್ ಮಾಡಿ.

PNGಗೆ ಬದಲಾಯಿಸುವುದು ಹೇಗೆ..?
ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಯಾವುದೇ ಥರ್ಡ್ ಪಾರ್ಟಿ ಬ್ಯಾಕ್‌ಗ್ರೌಂಡ್ ಎರೇಸರ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ. ನಂತರ ನಿಮಗೆ ಸ್ಟಿಕ್ಕರ್ ಮಾಡಬೇಕು ಎನ್ನುವ ಫೋಟೋವನ್ನು ತೆಗೆದುಕೊಂಡು ಆಟೋ. ಮ್ಯಾಜಿಕ್ ಅಥವಾ ಮ್ಯಾನ್ಯುವಲ್ ಟೂಲ್‌ನಲ್ಲಿ ಬ್ಯಾಕ್‌ಗ್ರೌಂಡ್ ಅಳಿಸಿ, ಸ್ಟಿಕ್ಕರ್ ತರ ಕಾಣುವಂತೆ ಕ್ರಾಪ್ ಮಾಡಿ PNG ಫಾರ್ಮ್ಯಾಟ್‌ನಲ್ಲಿ ಸೇವ್ ಮಾಡಿ.

ಏಕೆ PNG..?
ವಾಟ್ಸ್‌ಆಪ್ ಸದ್ಯಕ್ಕೆ ಸ್ಟಿಕ್ಕರ್ ಫೀಚರ್‌ನಲ್ಲಿ ಕೇವಲ PNG ಚಿತ್ರಗಳನ್ನು ಮಾತ್ರ ಸ್ಟಿಕ್ಕರ್ ಆಗಿ ತೆಗೆದುಕೊಳ್ಳುತ್ತಿದೆ. ಬೇರೆ ಫಾರ್ಮ್ಯಾಟ್‌ನ ಫೋಟೋಗಳು ನಿಮ್ಮ ಸಾಮಾನ್ಯ ಚಿತ್ರಗಳಂತೆ ಕಳುಹಿಸಬಹುದಾಗಿದೆ.

ಮೂರು ಅಥವಾ ಹೆಚ್ಚಿನ ಸ್ಟಿಕ್ಕರ್ ರೆಡಿ ಮಾಡಿ
ನೀವು ನಿಮ್ಮದೇ ಆದ ಸ್ಟಿಕ್ಕರ್ ಪ್ಯಾಕ್ ಸೃಷ್ಟಿಸಬೇಕೆಂದರೆ ಕನಿಷ್ಟ 3 ಫೋಟೋಗಳನ್ನು PNG ಮಾಡಬೇಕು. ಏಕೆಂದರೆ ಸ್ಟಿಕ್ಕರ್ ಪ್ಯಾಕ್‌ನಲ್ಲಿ ಮೂರಕ್ಕಿಂತ ಕಡಿಮೆ ಫೋಟೋಗಳಿದ್ದರೆ ವಾಟ್ಸ್‌ಆಪ್ ಅನುಮೋದಿಸುವುದಿಲ್ಲ.

ಸ್ಟಿಕ್ಕರ್ ಆಪ್ ಡೌನ್‌ಲೋಡ್ ಮಾಡಿ
ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ Personal Stickers for Whatsapp ಎಂಬ ಥರ್ಡ್ ಪಾರ್ಟಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಆ ಆಪ್ ನೀವು ಸೃಷ್ಟಿಸಿರುವ PNG ಫಾರ್ಮ್ಯಾಟ್‌ನ ಫೋಟೋಗಳನ್ನು ಸ್ವಯಂ ಆಗಿ ಹುಡುಕಿ ಆಪ್‌ಗೆ ತೆಗೆದುಕೊಳ್ಳುತ್ತದೆ.

ಆಪ್‌ನಲ್ಲಿ ಆಡ್ ಮಾಡಿ
Personal Stickers for Whatsapp ಆಪ್ ನೀವು ಸೃಷ್ಟಿಸಿರುವ ಫೋಟೋಗಳನ್ನು ಸ್ವಯಂಚಾಲಿತವಾಗಿ ತೋರಿಸುತ್ತದೆ. ನಂತರ ಪಕ್ಕ ಇರುವ ಆಡ್ ಬಟನ್ ಕ್ಲಿಕ್ ಮಾಡಿದರೆ, ಸ್ಟಿಕ್ಕರ್‌ಗಳನ್ನು ವಾಟ್ಸ್‌ಆಪ್‌ಗೆ ಸೇರಿಸುವ ಆಯ್ಕೆಯನ್ನು ನೀಡುತ್ತದೆ. ಮತ್ತೊಮ್ಮೆ ಆಡ್ ಬಟನ್ ಕ್ಲಿಕ್ ಮಾಡಿ.

ಚಾಟ್ ವಿಂಡೋ ಒಪನ್ ಮಾಡಿ
ನಿಮ್ಮದೇ ಆದ ಸ್ಟಿಕ್ಕರ್‌ಗಳನ್ನು ರಚಿಸಿದ ಮೇಲೆ ವಾಟ್ಸ್‌ಆಪ್ ಚಾಟ್ ವಿಂಡೋ ಒಪನ್ ಮಾಡಿ. ನಂತರ ಸ್ಮೈಲಿ ಐಕಾನ್ ಕ್ಲಿಕ್ ಮಾಡಿ. ಆಮೇಲೆ GIF ಆಯ್ಕೆ ನಂತರ ಇರುವ ಸ್ಟಿಕ್ಕರ್ ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮ ಸ್ನೇಹಿತರಿಗೆ ಹಂಚಿ
ಸ್ಟಿಕ್ಕರ್ ಆಯ್ಕೆ ಕ್ಲಿಕ್ ಮಾಡಿದ ನಂತರ ನಿಮಗೆ ನಿಮ್ಮದೇ ಆದ ಸ್ಟಿಕ್ಕರ್‌ಗಳು ಕಾಣುತ್ತವೆ. ಈಗ ಆ ಸ್ಟಿಕ್ಕರ್‌ಗಳನ್ನು ನಿಮ್ಮ ಪ್ರೀತಿ ಪಾತ್ರರಿಗೆ, ಸ್ನೇಹಿತರಿಗೆ ಸೆಂಡ್ ಮಾಡಿ, ಮತ್ತೊಂದು ರೀತಿಯ ಅನುಭವ ನೀಡಿ.


Click it and Unblock the Notifications








