ಹೆಚ್ಚಿನ ವಾಟ್ಸ್ಆಪ್ ಬಳಕೆದಾರರು ತಿಳಿಯದ ಎರಡು ಬೆಸ್ಟ್ ಟಿಕ್ಸ್!

|

ವಾಟ್ಸ್ಆಪ್ ಬಳಸುವ ಅನೇಕರಿಗೆ ಕೆಲವು ಬಾರಿ ಕಾಡುವ ಸಮಸ್ಯೆಗಳು ಎಂದರೆ ಹೆಚ್ಚು ಗುಣಮಟ್ಟದ ಪೋಟೊಗಳನ್ನು( High resolution) ರವಾನಿಸುವುದು ಹಾಗೂ ಹೆಚ್ಚು ಫೈಲ್‌ಗಳು ಒಮ್ಮೆಲೇ ಕಳುಹಿಸಬಹುದಾದ ಆಯ್ಕೆ ತಿಳಿಯದೇ ಇರುವುದು. ಏಕೆಂದರೆ, ಮೊಬೈಲ್ ಫೋನ್‌ನಲ್ಲಿ ಕ್ಲಿಕ್ಕಿಸಿದ ಫೋಟೊ ಅಲ್ಲದೆ, ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿದ ಗುಣಮಟ್ಟದ ಫೋಟೊಗಳನ್ನು ವಾಟ್ಸ್‌ಆಪ್‌ನಲ್ಲಿ ಕಳುಹಿಸುವಾಗ ಅವುಗಳು compress ಆಗಿ ಗುಣಮಟ್ಟ ಕಳೆದುಕೊಳ್ಳುತ್ತವೆ.

ಬಿಡಿಬಿಡಿಯಾಗಿ ಕಳುಹಿಸುತ್ತಾರೆ.

ಇನ್ನು ಒಂದಕ್ಕಿಂತ ಹೆಚ್ಚು ಫೈಲ್‌ಗಳನ್ನು ಒಂದೇ ಫೊಲ್ಡರ್ ಮೂಲಕ ಕಳುಹಿಸುವ ಆಯ್ಕೆಯಿದ್ದರೂ ಸಹ ಅದು ತಿಳಿಯದೇ ಹತ್ತಾರು ಚಿತ್ರ ಅಥವಾ ವಿಡಿಯೋಗಳನ್ನು ಬಿಡಿಬಿಡಿಯಾಗಿ ಕಳುಹಿಸುತ್ತಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಈ ಎರಡು ಸಮಸ್ಯೆಗಳಿಗೆ ಪರಿಹಾರವನ್ನು ನಾವು ಕಂಡುಕೊಳ್ಳೋಣ. ವಾಟ್ಸ್ಆಪ್‌ನಲ್ಲಿ High resolution ಫೋಟೊ ಕಳಿಸುವುದು ಸುಲಭವಾಗಿದ್ದು, compress ಆಗಿ ಗುಣಮಟ್ಟ ಕಳೆದುಕೊಳ್ಳದಂತೆ High resolution ಫೋಟೊಗಳನ್ನು ಕಳುಹಿಸಲು ಹೀಗೆ ಮಾಡಿ.

.jpg ಫೈಲ್‌ ಅನ್ನು .doc ಎಂದು ಬದಲಿಸಿ.

ನೀವು ಕಳುಹಿಸುವ ಫೋಟೊಗಳು ಬಹುತೇಕ .jpg extension ಹೊಂದಿರುತ್ತವೆ. ಹಾಗಾಗಿ, ನೀವು ಕಳುಹಿಸುವ ಫೋಟೊಗಳ ಫೈಲ್ ನೇಮ್ ಬದಲಿಸಿ. ಈ .jpg ಫೈಲ್‌ ಅನ್ನು .doc ಎಂದು ಬದಲಿಸಿ. ಉದಾಹರಣೆಗೆ ಫೈಲ್‌ ನೇಮ್ cat.jpg ಎಂದು ಇದ್ದರೆ cat.doc ಎಂದು ಬದಲಿಸಿ send ಮಾಡಿ. ಈ ಫೈಲ್ ರಿಸೀವ್ ಮಾಡುವವರು ಫೈಲ್‌ ನೇಮ್ .jpg ಎಂದು ಬದಲಿಸುವಂತೆ ಹೇಳಿ. ಇದರಿಂದ ಯಾವುದೇ ಪೋಟೊ compress ಆಗಿ ಗುಣಮಟ್ಟ ಕಳೆದುಕೊಳ್ಳದಂತೆ High resolution ಫೋಟೊ ಆಗಿ ಸೆಂಡ್ ಆಗಲಿವೆ.

ಫೈಲ್ ಮ್ಯಾನೇಜರ್

ಹಾಗೆಯೇ, ಒಂದಕ್ಕಿಂತ ಹೆಚ್ಚು ಫೈಲ್‌ಗಳನ್ನು ಕಳಿಸುವಾಗ Zip File ಮಾಡಿ ಕಳುಹಿಸಿ. ಫೈಲ್ ಮ್ಯಾನೇಜರ್ ಅಥವಾ ನಿಮ್ಮ ಮೊಬೈಲ್‌ನಲ್ಲಿ My Files ಎಂಬ ಫೋಲ್ಡರ್ ಕ್ಲಿಕ್ ಮಾಡಿ, ಅಲ್ಲಿ ಒಂದಕ್ಕಿಂತ ಹೆಚ್ಚು ಫೈಲ್‌ಗಳನ್ನು ಆಯ್ಕೆ ಮಾಡಿ. ಬಲಭಾಗದಲ್ಲಿ ಮೇಲೆ More ಎಂಬ ಆಪ್ಶನ್ ಕ್ಲಿಕ್ ಮಾಡಿದಾಗ ಅಲ್ಲಿ Move, copy, Compress, Details ಎಂಬ ಆಪ್ಶನ್ ಕಾಣಿಸುತ್ತದೆ. create zip File -ಆಪ್ಶನ್‌ನಲ್ಲಿ zip fileಗೆ ಹೆಸರು ಕೊಡಿ. Compress ಎಂಬ ಆಯ್ಕೆಯನ್ನು ಒತ್ತಿದ ಕೂಡಲೇ zip ಫೈಲ್ ಕ್ರಿಯೇಟ್ ಆಗುತ್ತದೆ.

ಶೇರ್ ಮಾಡಿ

zip ಫೈಲ್ ಕ್ರಿಯೇಟ್ ಆದನಂತರ zip File ನ್ನು ಆಯ್ಕೆ ಮಾಡಿ share ಕ್ಲಿಕ್ ಮಾಡಿದ ಕೂಡಲೇ ಯಾರಿಗೆ, ಯಾವ ರೀತಿ ಶೇರ್ ಮಾಡಬೇಕೆಂಬ ಆಪ್ಶನ್‌ಗಳು ಕಾಣಿಸುತ್ತವೆ.ನೀವು Zip File ಕಳುಹಿಸಲು ಬಯಸುವ ವ್ಯಕ್ತಿಗಳಿಗೆ ವಾಟ್ಸ್‌ಆಪ್ ಅಥವಾ ಇಮೇಲ್ ಮೂಲಕವೂ ಇದನ್ನು ಕಳುಹಿಸಬಹುದು. ಹೀಗೆ ನೀವು ಬಹುತೇಕ ವಾಟ್ಸ್ಆಪ್ ಬಳಕೆದಾರರು ತಿಳಿಯದ ಎರಡು ಟ್ರಿಕ್ಸ್ ಬಳಸಿಕೊಂಡು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಇನ್ನು ಇದರಿಂದ ನಿಮಗೆ ಮಾತ್ರ ಸಹಾಯವಾದರೆ ಸಾಕಾ?. ಶೇರ್ ಮಾಡಿ ಇತರರಿಗೂ ಸಹಾಯ ಮಾಡಿ.

Best Mobiles in India

English summary
Learn how to sent Images/Photos or Video file in Original High quality Without Losing quality On WhatsApp. to know more visit to kannada.gizbxot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X