ಬೇರೆಯವರಿಗೆ ನಿಮ್ಮ ವಾಟ್ಸಾಪ್‌ ಪ್ರೊಫೈಲ್‌ ಕಾಣದಂತೆ ಮಾಡುವುದು ಹೇಗೆ?

|

ಮೆಟಾ ಒಡೆತನದ ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ ಹಲವು ವಿಶೇಷ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರ ನೆಚ್ಚಿನ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇನ್ನು ವಾಟ್ಸಾಪ್‌ ಒಳಗೊಂಡಿರುವ ಅನೇಕ ಫೀಚರ್ಸ್‌ಗಳ ಬಗ್ಗೆ ಬಳಕೆದಾರರಿಗೆ ತಿಳಿದಿರುವುದೇ ಇಲ್ಲ. ಹೊಸ ಅಪ್ಡೇಟ್‌ನಲ್ಲಿ ಬಂದು ಸೇರುವ ಅನೇಕ ಫೀಚರ್ಸ್‌ಗಳು ನಿಮ್ಮ ವಾಟ್ಸಾಪ್‌ ಅನುಭವವನ್ನು ಇನ್ನಷ್ಟು ಉತ್ತಮಪಡಿಸುತ್ತವೆ. ಇಂತಹ ಫೀಚರ್ಸ್‌ಗಳಲ್ಲಿ ನಿಮ್ಮ ಪ್ರೊಫೈಲ್‌ ಪಿಕ್‌ ಅನ್ನು ಹೈಡ್‌ ಮಾಡುವ ಫೀಚರ್ಸ್‌ ಕೂಡ ಸೇರಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಬಳಕೆದಾರರಿಗೆ ತಮ್ಮ ಪ್ರೊಫೈಲ್‌ ಪಿಕ್‌ ಅನ್ನು ಹೈಡ್‌ ಮಾಡಲು ಅನುಮತಿಸುತ್ತದೆ. ಸಾಮಾನ್ಯವಾಗಿ ನಿಮ್ಮ ವಾಟ್ಸಾಪ್‌ ಖಾತೆಗೆ ಅಪರಿಚಿತ ಸಂಖ್ಯೆಯಿಂದ ಸಂದೇಶಗಳು ಬರಬಹುದು. ಇಂತಹ ಅಪರಿಚಿತ ವ್ಯಕ್ತಿಗಳಿಗೆ ನಿಮ್ಮ ವೈಯುಕ್ತಿಕ ಮಾಹಿತಿ ಕಾಣುವಂತೆ ಮಾಡುವುದು ಸರಿಯಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಪ್ರೊಫೈಲ್‌ ಪಿಕ್‌ ತಮ್ಮ ಸಂಪರ್ಕಗಳನ್ನು ಹೊರತುಪಡಿಸಿ ಬೇರೆಯವರಿಗೆ ಕಾಣದಂತೆ ಹೈಡ್‌ ಮಾಡುತ್ತಾರೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್‌ ಪಿಕ್‌ ಬೇರೆಯವರಿಗೆ ಕಾಣದಂತೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ರೈವೆಸಿ

ವಾಟ್ಸಾಪ್‌ನಲ್ಲಿ ಪ್ರೈವೆಸಿ ಫೀಚರ್ಸ್‌ಗಳು ಸಾಕಷ್ಟು ಉಪಯುಕ್ತವಾಗಿವೆ. ಇದರಿಂದ ನಿಮ್ಮ ಪ್ರೈವೆಸಿಗೆ ದಕ್ಕೆ ಬಾರದಂತೆ ಎಚ್ಚರವಹಿಸಲು ಸಾದ್ಯವಾಗಲಿದೆ. ವಾಟ್ಸಾಪ್‌ ಒಳಗೊಂಡಿರುವ ಗೌಪ್ಯತೆ ಫೀಚರ್ಸ್‌ಗಳಲ್ಲಿ ಲಾಸ್ಟ್‌ಸೀನ್‌ ಹೈಡ್‌ ಮಾಡುವುದು, ಸ್ಟೇಟಸ್‌ ಹೈಡ್‌ ಮಾಡುವುದು, ಪ್ರೊಫೈಲ್‌ ಪಿಕ್‌ ಮರೆಮಾಡುವುದು ಕೂಡ ಸೇರಿದೆ. ಬಳಕೆದಾರರು ತಮ್ಮ ವಿವರಗಳನ್ನು ಸಂಪರ್ಕಗಳಿಂದ ಮರೆಮಾಡಲು ಸಹ ಆಯ್ಕೆ ಮಾಡಬಹುದು. ಸಂಪರ್ಕಗಳು ಮತ್ತು ಅಪರಿಚಿತ ಬಳಕೆದಾರರು ಸೇರಿದಂತೆ ಎಲ್ಲರಿಂದ ಎಲ್ಲವನ್ನೂ ಮರೆಮಾಡಲು ನಿಮಗೆ ಅನುಮತಿಸುವ ಮೂರನೇ ಆಯ್ಕೆಯೂ ಕೂಡ ವಾಟ್ಸಾಪ್‌ನಲ್ಲಿ ಲಭ್ಯವಿದೆ.

ವಾಟ್ಸಾಪ್‌

ವಾಟ್ಸಾಪ್‌ ಪ್ರಸ್ತುತ, ಆಯ್ದ ಸಂಪರ್ಕಗಳಿಂದ ಪ್ರೊಫೈಲ್ ಚಿತ್ರಗಳು ಅಥವಾ ಯಾವುದೇ ಇತರ ಮಾಹಿತಿಯನ್ನು ಹೈಡ್‌ಮಾಡಲು ಯಾವುದೇ ವಿಶೇಷ ಫೀಚರ್ಸ್‌ ಹೊಂದಿಲ್ಲ. ಆದರೆ ಈ ವರ್ಷ ಹೊಸ ಫೀಚರ್ಸ್‌ ಮೂಲಕ ಅದನ್ನು ಕೂಡ ಸೇರಿಸುವ ನಿರೀಕ್ಷೆಯಿದೆ. ಈ ಫೀಚರ್ಸ್‌ಗಳನ್ನು ಈಗಾಗಲೇ ಆಂಡ್ರಾಯ್ಡ್ ಬೀಟಾ ಅಪ್ಡೇಟ್‌ಗಳಲ್ಲಿ ಗುರುತಿಸಲಾಗಿದೆ. ಪ್ರೊಫೈಲ್ ಚಿತ್ರಗಳಿಗಾಗಿ "ನನ್ನ ಸಂಪರ್ಕಗಳನ್ನು ಹೊರತುಪಡಿಸಿ" ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿರುವುದಾಗಿ ವಾಟ್ಸಾಪ್‌ ಈಗಾಗಲೇ ವರದಿ ಮಾಡಿದೆ.

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಕೆಲವರಿಗೆ ಕಾಣಿಸದಂತೆ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ನಿಮ್ಮ ಪ್ರೊಫೈಲ್ ಚಿತ್ರ ಕೆಲವರಿಗೆ ಕಾಣಿಸದಂತೆ ಮಾಡುವುದು ಹೇಗೆ?

ಹಂತ:1 ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ ಮೂರು-ಚುಕ್ಕೆಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:3 ಸೆಟ್ಟಿಂಗ್‌ಗಳಲ್ಲಿ ಮತ್ತೊಮ್ಮೆ ಟ್ಯಾಪ್ ಮಾಡಿ ಮತ್ತು ನಂತರ ಖಾತೆ ವಿಭಾಗ > ಗೌಪ್ಯತೆಗೆ ಹೋಗಿ.
ಹಂತ:4 ಗೌಪ್ಯತೆ ವಿಭಾಗದಲ್ಲಿ, ನೀವು ಪ್ರೊಫೈಲ್ ಫೋಟೋ ಆಯ್ಕೆಯನ್ನು ಕಾಣಬಹುದು.
ಹಂತ:5 ಇದರಲ್ಲಿ ನಿಮ್ಮ ಪ್ರೊಫೈಲ್‌ ಪಿಕ್‌ ಮೇಲೆ ಟ್ಯಾಪ್ ಮಾಡಿ.
ಹಂತ:6 ಇದೀಗ ನೀವು ಎಲ್ಲರೂ, ನನ್ನ ಸಂಪರ್ಕಗಳು ಮತ್ತು ಯಾರೂ ಸೇರಿದಂತೆ ಮೂರು ಆಯ್ಕೆಗಳನ್ನು ಕಾಣುತ್ತೀರಿ.
ಹಂತ:7 ಪಟ್ಟಿ ಮಾಡದ ಸಂಪರ್ಕಗಳು ನಿಮ್ಮ ಪ್ರೊಫೈಲ್ ಫೋಟೋವನ್ನು ನೋಡಲು ನೀವು ಬಯಸದಿದ್ದರೆ "ನನ್ನ ಸಂಪರ್ಕಗಳು" ಆಯ್ಕೆಯನ್ನು ಆಯ್ಕೆ ಮಾಡಬಹುದು.

ಇದರ ಮೂಲಕ ನಿಮ್ಮ ಸಂಪರ್ಕದಲ್ಲಿ ಇರದ ವ್ಯಕ್ತಿಗಳಿಗೆ ನಿಮ್ಮ ಪ್ರೊಫೈಲ್‌ ಪಿಕ್‌ ಕಾಣದಂತೆ ಮಾಡಬಹುದು.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ವರ್ಷನ್‌ನಲ್ಲಿ ಹೊಸ ಡ್ರಾಯಿಂಗ್‌ ಟೂಲ್‌ ಪರಿಚಯಿಸಲು ಮುಂದಾಗಿದೆ. ಇದರಿಂದ ಹೊಸ ಮಾದರಿಯ ಪೆನ್ಸಿಲ್‌ ಟೂಲ್‌ ಲಭ್ಯವಾಗಲಿದೆ. ಈ ಟೂಲ್‌ ಮೂಲಕ ಚಿತ್ರಗಳು ಮತ್ತು ವೀಡಿಯೊಗಳನ್ನು ಸೆಳೆಯಲು ವಾಟ್ಸಾಪ್‌ ಪ್ಲಾನ್‌ ರೂಪಿಸಿದೆ ಎಂದು ಹೇಳಲಾಗುತ್ತದೆ. ವಾಟ್ಸಾಪ್‌ ಸದ್ಯ ಒಂದು ಮಾದರಿಯ ಪೆನ್ಸಿಲ್ ಅನ್ನು ಹೊಂದಿದೆ. ಆದರೆ ಮುಂದಿನ ದಿನಗಳಲ್ಲಿ ಎರಡು ಮಾದರಿಯ ಹೊಸ ಪೆನ್ಸಿಲ್‌ಗಳನ್ನು ಪಡೆದುಕೊಳ್ಳಲಿದೆ. ಇದರಲ್ಲಿ ಒಂದು ತೆಳವಾದ ಪೆನ್ಸಿಲ್‌ ಆಗಿದ್ದರೆ, ಮತ್ತೊಂದು ದಪ್ಪಬೆಯ ಗಾತ್ರವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಬ್ಲರ್ ಇಮೇಜ್ ಟೂಲ್‌ನಲ್ಲಿ ಕೂಡ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದರಿಂದ ನಿಮಗೆ ಬೇಕಾದ ಬೆಳಕಿನ ವಿನ್ಯಾಸದಲ್ಲಿ ನೋಡಲು ಸಾಧ್ಯವಾಗಲಿದೆ. ಸದ್ಯ ಈ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ 2.22.3.5 ಅಪ್‌ಡೇಟ್‌ನಲ್ಲಿ ಬೀಟಾ ವರ್ಷನ್‌ನಲ್ಲಿ ಕಾಣಬಹುದಾಗಿದೆ. ಆದರೆ ಡೀಫಾಲ್ಟ್ ಆಗಿ ನಿಷ್ಕ್ರಿಯಗೊಳಿಸಲಾಗಿದೆ. ಈ ಎಲ್ಲಾ ಫೀಚರ್ಸ್‌ಗಳು ಇನ್ನು ಅಭಿವೃದ್ದಿ ಹಂತದಲ್ಲಿರುವುದರಿಂದ ವಾಟ್ಸಾಪ್‌ ಬೀಟಾ ಪರೀಕ್ಷಕರಿಗೆ ಲಬ್ಯವಾಗುವುದಕ್ಕೆ ಇನ್ನು ಕೆಲವು ಸಮಯ ಬೇಕಾಗಬಹುದು ಎಂದು ವರದಿಯಾಗಿದೆ.

Best Mobiles in India

English summary
WhatsApp even has some privacy features and one of them lets you limit the visibility of your profile picture.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X