ವಾಟ್ಸ್‌ಆಪ್ ಡಾಟಾವನ್ನು ಶೀಘ್ರ ಬ್ಯಾಕ್‌ಅಪ್ ಮಾಡಿ..! ಏಕೆ ಮತ್ತು ಹೇಗೆ ಅಂತಿರಾ..?

By GizBot Bureau
|

ಫೇಸ್ ಬುಕ್ ಮಾಲೀಕತ್ವದ ವಾಟ್ಸ್ ಆಪ್ ಇತ್ತೀಚೆಗೆ ಹಲವಾರು ಅಪ್ ಡೇಟ್ ಗಳನ್ನು ಮಾಡುತ್ತಲೇ ಇದೆ ಮತ್ತು ಆ ಮೂಲಕ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡುವ ಉದ್ದೇಶ ಮತ್ತು ಭದ್ರತೆಯ ಉದ್ದೇಶವನ್ನು ವಾಟ್ಸ್ ಆಪ್ ಹೊಂದಿದೆ.

ವಾಟ್ಸ್ ಆಪ್ ನಲ್ಲಿ ನಿಮ್ಮ ಮೆಸೇಜ್ ಗಳು, ವೀಡಿಯೋಗಳು ಮತ್ತು ಫೋಟೋಗಳು ಅಷ್ಟೇ ಯಾಕೆ ಇತರೆ ಡಾಟಾಗಳು ದೀರ್ಘಾವಧಿಯವರೆಗೆ ಸೇವ್ ಆಗಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇತ್ತೀಚೆಗೆ ವಾಟ್ಸ್ ಆಪ್ ನೀಡಿರುವ ಮಾಹಿತಿಯ ಪ್ರಕಾರ ವಾಟ್ಸ್ ಆಪ್ ನಿಮ್ಮ ಡಾಟಾಗಳನ್ನು ಸೇವ್ ಮಾಡಿ ಇಡುವುದಕ್ಕೆ ಹೊಸ ಮಾರ್ಗವನ್ನು ಸೂಚಿಸಲಿದೆ.

ವಾಟ್ಸ್‌ಆಪ್ ಡಾಟಾವನ್ನು ಶೀಘ್ರ ಬ್ಯಾಕ್‌ಅಪ್ ಮಾಡಿ..! ಏಕೆ ಮತ್ತು ಹೇಗೆ ಅಂತಿರಾ..?

ಹೌದು ಡಿವೈಸ್ ನಲ್ಲಿ ಮೆಸೇಜ್ ಗಳು ಸ್ಟೋರ್ ಆಗಿ ಇರುವ ಬದಲಾಗಿ ಗೂಗಲ್ ಡ್ರೈವ್ ನಲ್ಲಿ ನಿಮಗೆ ಅಗತ್ಯವಿರುವ ಮೆಸೇಜ್ ಗಳನ್ನು ಸೇವ್ ಮಾಡಿ ಇಡುವುದಕ್ಕೆ ವಾಟ್ಸ್ ಆಪ್ ಸಲಹೆ ನೀಡುತ್ತಿದೆ.

ಹಾಗಂತ ಗೂಗಲ್ ಡ್ರೈವ್ ನ ಸ್ಟೋರೇಜ್ ಜಾಗವನ್ನು ಇದು ಲೆಕ್ಕ ಹಾಕುವುದಿಲ್ಲ. ನಿಮ್ಮ ಎಲ್ಲಾ ಮೆಸೇಜ್ ಗಳು, ಫೋಟೋಗಳು, ವೀಡಿಯೋಗಳು ಪ್ರತಿಯೊಂದು ಕೂಡ ಗೂಗಲ್ ಡ್ರೈವ್ ನಲ್ಲಿ ಸೇವ್ ಆಗುತ್ತದೆ. ಅದಕ್ಕಾಗಿ ಯಾರಿಗೂ ಕೂಡ ಲಿಮಿಟ್ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಈ ಹೊಸ ಅಪ್ ಡೇಟ್ ನಿಂದಾಗಿ ಕೇವಲ ನಿಮ್ಮ ಫೋನಿನ ಸ್ಟೋರೇಜ್ ಜಾಗದ ಉಳಿತಾಯ ಮಾತ್ರವಲ್ಲ ಬದಲಾಗಿ ಗೂಗಲ್ ಡ್ರೈವ್ ಗೂ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತಿದೆ.ನವೆಂಬರ್ 12, 2018 ರಿಂದ ಗೂಗಲ್ ಡ್ರೈವ್ ಸ್ಟೋರೇಜ್ ಕೋಟಾ ಆರಂಭವಾಗಲಿದೆ ಎಂದು ವಾಟ್ಸ್ ಆಪ್ ತಿಳಿಸಿದೆ.

ಒಂದು ವರ್ಷಕ್ಕೂ ಹಳೆಯದಾಗಿರುವ ಡಾಟಾವನ್ನು ಗೂಗಲ್ ಡ್ರೈವ್ ನಲ್ಲಿ ಬಳಕೆದಾರರು ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದೇ ಇದ್ದಲ್ಲಿ ಅದನ್ನು ತೆಗೆದುಹಾಕಲಾಗುತ್ತದೆ. ಅಷ್ಟೇ ಅಲ್ಲ, ಯಾವುದೇ ವಾಟ್ಸ್ ಆಪ್ ಬ್ಯಾಕ್ ಅಪ್ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ಅಪ್ ಡೇಟ್ ಆಗದೇ ಇದ್ದಲ್ಲಿ ಸ್ವಯಂಚಾಲಿತವಾಗಿ ಅಂತಹ ಡಾಟಾವನ್ನು ಗೂಗಲ್ ಡ್ರೈವ್ ನಿಂದ ಡಿಲೀಟ್ ಮಾಡಲಾಗುತ್ತದೆ ಎಂದು ವಾಟ್ಸ್ ಆಪ್ ಸಂಸ್ಥೆ ತಿಳಿಸಿದೆ.

ವಾಟ್ಸ್ ಆಪ್ ಡಾಟಾ ಯಾಕೆ ಸೇವ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ?

ನಮ್ಮ ಸೋಷಿಯಲ್ ಮೀಡಿಯಾದಲ್ಲಿರುವ ಡಾಟಾಗಳು ನಮಗೆ ತಿಳಿಯದಂತೆ ಮಾಯವಾಗಿ ಬಿಡುವುದಿದೆಯಲ್ಲ ಅದಕ್ಕಿಂತ ದೊಡ್ಡ ನಷ್ಟ ಮತ್ತೊಂದಿಲ್ಲ ಎಂದು ನೀವು ಭಾವಿಸುವುದೇ ಆದಲ್ಲಿ, ನವೆಂಬರ್ 12,2018 ರ ಒಳಗೆ ನಿಮ್ಮೆಲ್ಲಾ ವಾಟ್ಸ್ ಆಪ್ ಡಾಟಾವನ್ನು ಮ್ಯಾನುವಲ್ ಆಗಿ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಬೇಕಾಗುತ್ತದೆ. ಚಾಟ್ಸ್ ಮತ್ತು ಮೀಡಿಯಾಗಳನ್ನು ಗೂಗಲ್ ಡ್ರೈವ್ ನಲ್ಲಿ ಬ್ಯಾಕ್ ಅಪ್ ತೆಗೆದಿಡಬಹುದು.ಗೂಗಲ್ ಡ್ರೈವ್ ಮೂಲಕ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳಲು ವೈಫೈ ಬಳಕೆ ಮಾಡುವಂತೆ ವಾಟ್ಸ್ ಆಪ್ ಸಂಸ್ಥೆ ಸಲಹೆ ನೀಡಿದೆ. ಯಾಕೆಂದರೆ ಮೊಬೈಲ್ ಡಾಟಾ ಬಳಕೆಯಿಂದ ಇದು ಹೆಚ್ಚು ಡಾಟಾ ಬಳಕೆ ಮಾಡಿ ನಿಮಗೆ ಹೆಚ್ಚುವರಿ ಚಾರ್ಜ್ ಬೀಳುವಂತೆ ಮಾಡಿ ಬಿಡಬಹುದು.

ವಾಟ್ಸ್‌ಆಪ್ ಡಾಟಾವನ್ನು ಶೀಘ್ರ ಬ್ಯಾಕ್‌ಅಪ್ ಮಾಡಿ..! ಏಕೆ ಮತ್ತು ಹೇಗೆ ಅಂತಿರಾ..?

ಇದೇ ಸಮಯದಲ್ಲಿ ಗೂಗಲ್ ತನ್ನೆಲ್ಲಾ ಬಳಕೆದಾರರಿಗೆ ಇಮೇಲ್ ಕಳುಹಿಸಿದ್ದು, ಗೂಗಲ್ ಮತ್ತು ವಾಟ್ಸ್ ಆಪ್ ನಡುವೆ ನಡೆದ ಒಂದು ಒಪ್ಪಂದದ ಕಾರಣದಿಂದಾಗಿ ವಾಟ್ಸ್ ಆಪ್ ನ ಡಾಟಾ ಬ್ಯಾಕ್ ಅಪ್ ಗೂಗಲ್ ಡ್ರೈವ್ ನ ಸ್ಟೋರೇಜ್ ಜಾಗವನ್ನು ಎಷ್ಟು ತೆಗದುಕೊಳ್ಳುತ್ತದೆ ಎಂಬುದರ ಚಿಂತೆಯನ್ನು ಗ್ರಾಹಕರು ಮಾಡಬೇಕಾಗಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಆದರೆ ಯಾವುದೇ ವಾಟ್ಸ್ ಆಪ್ ಡಾಟಾ ಒಂದು ವರ್ಷದಿಂದ ಬ್ಯಾಕ್ ಅಪ್ ಆಗಿಲ್ಲದೇ ಇದ್ದಲ್ಲಿ ಅದು ಸ್ವಯಂಚಾಲಿತವಾಗಿ ಡಿಲೀಟ್ ಆಗುತ್ತದೆ ಎಂಬುದನ್ನು ಗ್ರಾಹಕರು ಗಮನಿಸಬೇಕಾಗುತ್ತದೆ.

ಡಾಟಾ ಬ್ಯಾಕ್ ಅಪ್ ತೆಗೆದುಕೊಳ್ಳುವುದು ಹೇಗೆ?

ಡಾಟಾ ಬ್ಯಾಕ್ ಅಪ್ ತೆಗೆದುಕೊಳ್ಳಲು ಮೊದಲು ವೈಫೈ ಸ್ವಿಚ್ ಆನ್ ಮಾಡಿ. ವಾಟ್ಸ್ ಆಪ್ ಗೆ ತೆರಳಿ ಮತ್ತು ಮೆನುಗೆ ಹೋಗಿ. ಸೆಟ್ಟಿಂಗ್ಸ್ ನ್ನು ತೆರೆಯಿರಿ. ಚಾಟ್ಸ್ ಓಪನ್ ಮಾಡಿ ಮತ್ತು ಚಾಟ್ ಬ್ಯಾಕ್ ಅಪ್ ನ್ನು ಕ್ಲಿಕ್ಕಿಸಿ.ಒಂದು ವೇಳೆ ನೀವು ಫೋನ್ ನಲ್ಲಿರುವುದನ್ನೆಲ್ಲಾ ಬ್ಯಾಕ್ ಅಪ್ ತೆಗೆದುಕೊಳ್ಳುವಂತೆ ನೀವು ಆಯ್ಕೆ ಮಾಡಿದರೆ ಆಗ ಪ್ರತಿಯೊಂದು ಕೂಡ ಗೂಗಲ್ ಡ್ರೈವ್ ಗೆ ಬ್ಯಾಕ್ ಅಪ್ ಆಗುತ್ತದೆ.

ಒಟ್ಟಿನಲ್ಲಿ ನಿಮ್ಮ ಡಾಟಾಗಳು ಸುರಕ್ಷಿತವಾಗಿರಬೇಕು ಎಂದರೆ ಗೂಗಲ್ ಡ್ರೈವ್ ಮೂಲಕ ವಾಟ್ಸ್ ಆಪ್ ಚಾಟ್ ಗಳನ್ನು ಸೇವ್ ಮಾಡಿ ಇಟ್ಟುಕೊಳ್ಳುವುದಕ್ಕೆ ತನ್ನ ಬಳಕೆದಾರರಿಗೆ ವಾಟ್ಸ್ ಆಪ್ ಸಂಸ್ಥೆ ಸಲಹೆ ನೀಡುತ್ತಿದೆ.

Best Mobiles in India

English summary
WhatsApp will soon delete your old videos, messages – Here is how to save them. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X