Subscribe to Gizbot

ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ಹಾಗೂ ರಜಿಸ್ಟೀವ್‌ ಟಚ್‌ಸ್ಕ್ರೀನ್‌ನಲ್ಲಿ ಯಾವುದು ಉತ್ತಮ?

Posted By: Staff
ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ಹಾಗೂ ರಜಿಸ್ಟೀವ್‌ ಟಚ್‌ಸ್ಕ್ರೀನ್‌ನಲ್ಲಿ ಯಾವುದು ಉತ್ತಮ?

ಇಂದು ಎಲ್ಲೆಲ್ಲೂ ಟಚ್‌ಸ್ಕ್ರೀನ್‌ನದ್ದೇ ಜಮಾನ, ಎಲ್ಲರೂ ಕೂಡಾ ಟಚ್‌ಸ್ಕ್ರೀನ್‌ ಫೋನ್‌ಗಳ ಬಳಕೆಯನ್ನೇ ಹೆಚ್ಚು ಮೆಚ್ಚಿಕೊಳ್ಳುತಿದ್ದಾರೆ. ಅಂದಹಾಗೆ ಮೊದಲೆಲ್ಲಾ ಒಂದೇ ಮಾದರಿಯ ಟಚ್‌ಸ್ಕ್ರೀನ್‌ ಫೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದವು, ಆದರೆ ಇಂದು ಟಚ್‌ಸ್ಕ್ರೀನ್‌ನಲ್ಲಿಯೂ ಕೂಡಾ ಎರಡು ಬಗೆಯ ಮಾದರಿಗಳು ಬಂದುಬಿಟ್ಟಿವೆ. ಅವುಗಳೆದಂದರೆ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ಹಾಗೂ ರಜಿಸ್ಟೀವ್‌ ಟಚ್‌ಸ್ಕ್ರೀನ್‌, ಅದಂಹಾಗೆ ಕೆಲವರಿಗೆ ಈ ಎರಡೂ ಟಚ್‌ಸ್ಕ್ರೀನ್‌ ಮಾದರಿಗಳ ನಡುವಿನ ವೆತ್ಯಾಸ ಏನೆಂಬುದು ತಿಳಿದಿರುತ್ತದೆ. ಆದರೆ ಹಲವರಿಗೆ ಈ ಕುರಿತು ಏನೂ ತಿಳಿದಿರುವುದಿಲ್ಲ ಹಾಗಾಗಿ ಗಿಜ್ಬಾಟ್‌ ಓದುಗರಿಗಾಗಿ ಇಂದು ಈ ಎರಡು ಮಾದರಿಯ ಟಚ್‌ ಸ್ಕ್ರೀನ್‌ಗಳ ನಡುವುನ ವೆತ್ಯಾಸ ವಿವರಿಸಲಾಗಿದೆ ಒಮ್ಮೆ ಓದಿ ನೋಡಿ.

ರಜಿಸ್ಟೀವ್‌ ಟಚ್‌ಸ್ಕ್ರೀನ್‌ ಆರಂಭಿಕವಾಗಿ ಬಂದಂತಹ ಟಚ್‌ಸ್ಕ್ರೀನ್‌ ಫೋನ್‌ಗಳಲ್ಲಿ ಬಳಸಲಾದ ತಂತ್ರಜ್ಞಾನವಾಗಿದೆ. ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ಗೆ ಹೋಲಿಸಿದರೆ ರಜಿಸ್ಟೀವ್‌ ಕೊಂಚ ಹಳೆಯ ತಂತ್ರಜ್ಞಾನ ಎಂದೇ ಹೇಳಬಹದಾಗಿದೆ. ರಜಿಸ್ಟೀವ್‌ ಟಚ್‌ಸ್ಕ್ರೀನ್‌ನಲ್ಲಿ ಹಲವು ಲೇಯರ್‌ಗಳನ್ನು ನೀಡಲಾಗಿರುತ್ತದೆ, ಈ ಮೂಲಕ ನೀವೂ ರಜಿಸ್ಟೀವ್‌ ಸ್ಕ್ರೀನ್‌ ಟಚ್‌ ಮಾಡಿದಾಗ ಅದು ಕೆಳಗಿನ ಲೇಯರ್‌ ಮೇಲೆ ಒತ್ತಡ ಹೇರುತ್ತದೆ ನಂತರ ಅದು ಮತ್ತೊಂದು ಲೇಯರ್‌ ಮೇಲೆ ಒತ್ತಡ ನೀಡುತ್ತದೆ, ಈ ರೀತಿ ಒಂದರ ನಂತರ ಒಂದು ಲೇಯರ್‌ನ ಮೇಲೆ ಟಚ್‌ನ ಪ್ರಭಾವ ಟ್ರಾನ್ಸಫರ್‌ ಆಗುವ ಮೂಲಕ ರಜಿಸ್ಟೀವ್‌ ಟಚ್‌ಸ್ಕ್ರೀನ್‌ ಕಾರ್ಯನಿರ್ವಹಿಸುತ್ತದೆ.

ರಜಿಸ್ಟೀವ್‌ ಟಚ್‌ಸ್ಕ್ರೀನ್‌ಗೆ ಹೋಲಿಸಿದರೆ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ನ ಕಾರ್ಯನಿರ್ವಹಣೆ ವಿಭಿನ್ನವಾಗಿದೆ. ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ನಲ್ಲಿ ಮಲ್ಟಿ ಲೇಯರ್‌ ಬದಲಾಗಿ ಇಲೆಕ್ಟ್ರೋಡ್‌ಗಳು ಕಾರ್ಯನಿರ್ವಹಿಸುತ್ತವೆ. ಇವುಗಳು ಸ್ಕ್ರೀನ್‌ಮೇಲಿನ ಸೆನ್ಸರ್‌ಗಳನ್ನು ಸೆಳೆದುಕೊಂಡು ಕಾರ್ಯನಿರವಹಿಸುತ್ತವೆ. ನೀವು ಸ್ಕ್ರೀನ್‌ನ ಮೇಲೆ ನಿಮ್ಮ ಬೆರಳನ್ನು ಇಡುತ್ತಿದ್ದಂತೆಯೇ ಅಲ್ಲಿನ ಎಲೆಕ್ಟ್ರೋಡ್‌ಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತವೆ. ಈ ಮೂಲಕ ಬಳಕೆದಾರರಿಗೆ ಉತ್ತಮ ಟಚ್‌ಸ್ಕ್ರೀನ್‌ ಅನುಭವ ದೊರೆಯುತ್ತದೆ.

ಒಟ್ಟಾರೆ ರಜಿಸ್ಟೀವ್‌ ಟಚ್‌ಸ್ಕ್ರೀನ್‌ಗೆ ಹೋಲಿಸಿದರೆ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ಬಳಕೆದಾರರಿಗೆ ಉತ್ತಮ ಟಚ್‌ ಫೀಲ್‌ ನೀಡುವಂತದ್ದಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot