ಇಂತಹ ತಪ್ಪು ಮಾಡುದ್ರೆ 'ಮೊಬೈಲ್ ಫೋನ್' ಬ್ಲಾಸ್ಟ್ ಆಗುತ್ತೆ ಅಂತ ಎಷ್ಟು ಸಲ ಹೇಳೋದು!
ಪ್ರತಿದಿನ ಸ್ಮಾರ್ಟ್‌ಫೋನ್‌ಗಳು ಬ್ಲಾಸ್ಟ್ ಆಗುತ್ತಿರುವ ಸುದ್ದಿಗಳನ್ನು ಕೇಳಿ ಸ್ಮಾರ್ಟ್‌ಫೋನ್‌ಗಳನ್ನು ಜೋಬಿನಲ್ಲಿ ಇಟ್ಟುಕೊಳ್ಳವುದೇ ಬಹುದೊಡ್ಡ ಹೆದರಿಕೆಯಾಗಿದೆ. ಯಾವ ಕ್ಷಣದಲ್ಲಿ ನನ್ನ ಮೊಬೈಲ್ ಕೂಡ ಬ್ಲಾಸ್ಟ್ ಆಗಿಬಿಡುತ್ತದೆಯೂ, ನನ್ನ ಫೊನ್ ಬ್ಲಾಸ್ಟ್ ಆದರೆ ಏನು ಕಥೆ? ಬ್ಲಾಸ್ಟ್ ಆಗದಂತೆ ಹೇಗೆ ತಡೆಯುವುದು? ಎಂಬ ಭಯ ಎಲ್ಲರಲ್ಲಿಯೂ ಮೂಡುತ್ತಿವೆ.!
ಮೊನ್ನೆ ಮೊನ್ನೆಯಷ್ಟೇ ಮಲೇಶಿಯಾದಲ್ಲಿ ನಡೆದ ಮೊಬೈಲ್ ಪೋನ್ ಬ್ಲಾಸ್ಟ್ ಆದ ಘಟನೆಯಂತೂ ಎಲ್ಲರಿಗೂ ಹೆದರಿಯನ್ನು ಹುಟ್ಟಿಸುತ್ತಿದೆ. ಮಲಗಿದ್ದ ವೇಳೆ ಮೊಬೈಲ್ ಅನ್ನು ಚಾರ್ಜ್‌ಗೆ ಹಾಕಿ ಹಾಗೆಯೇ ಬಿಟ್ಟಿದ್ದ ಪ್ರಖ್ಯಾತ ಕಂಪೆನಿಯ ಸಿಇಒ ಓರ್ವರು ಮೊಬೈಲ್ ಬ್ಲಾಸ್ಟ್‌ನಿಂದ ಸಾವಿಗೀಡಾಗಿದ್ದಕ್ಕೆ ಮೊಬೈಲ್ ಬ್ಯಾಟರಿ ಬ್ಲಾಸ್ಟ್ ಆಗುವ ಸಮಸ್ಯೆ ವಿಶ್ವದಲ್ಲಿ ದೊಡ್ಡದಾಗಿ ಕಾಣಿಸುತ್ತಿದೆ.

ಹಾಗಾಗಿ, ಇಂದಿನ ಲೇಖನದಲ್ಲಿ ಯಾವುದೇ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗುವ ಮುನ್ನ ಅದರ ಲಕ್ಷಣಗಳು ಯಾವುವು? ಮತ್ತು ನಾವು ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗದಂತೆ ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ತಿಳಿಸಿಕೊಳ್ಳೋಣ. ಹಾಗಾದರೆ, ಫೋನ್ ಬ್ಲಾಸ್ಟ್ ಆಗುವಾಗ ಆಗಬಹುದಾದ ಲಕ್ಷಣಗಳೇನು ಮತ್ತು ಅದಕ್ಕೆ ಪರಿಹಾರವೇನು ಎಂಬುದನ್ನು ಮುಂದೆ ತಿಳಿಯಿರಿ.

ಬ್ಯಾಟರಿ ದಪ್ಪವಾಗಿದ್ದರೆ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚು.!
ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಬಿಸಿಯಾಗುತ್ತಿದ್ದರೆ, ಅಥವಾ ನಿಮ್ಮ ಫೋನ್ ಹಿಂಬಾಗದಲ್ಲಿ ಬ್ಯಾಟರಿ ಊದಿಕೊಂಡತೆ ಕಾಣಿಸಿದರೆ ಅಂತಹ ಬ್ಯಾಟರಿಯನ್ನು ಕೂಡಲೇ ಬದಲಾಯಿಸಿಬಿಡಿ. ಏಕೆಂದರೆ, ಬ್ಯಾಟರಿ ಒಳಗಿನ ಸೆಲ್ಟ್ ತೀರ್ವತೆಯಿಂದ ಅದು ಯಾವಾಗ ಬೇಕಾದರು ಸ್ಪೋಟಗೊಳ್ಳಬಹುದು.!!

ಬೇರೆ ಚಾರ್ಜರ್ ಬಳಕೆ ಮಾಡಬೇಡಿ.!
ಫೋನ್‌ನಲ್ಲಿ ನೀಡಿರುವ ಚಾರ್ಜರ್ ಬಿಟ್ಟು ಇತರೆ ಚಾರ್ಜರ್ ಬಳಕೆ ಮಾಡಿದರೆ ಸ್ಮಾರ್ಟ್‌ಪೋನ್‌ಗಳು ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು.ಒಂದು ಫೋನ್‌ಗೂ ಮತ್ತು ಇನ್ನೊಂದು ಫೋನ್‌ಚಾರ್ಜಿಂಗ್ ಸ್ಟ್ರೆಂತ್ ಬದಲಾಗಿರುತ್ತದೆ. ಹೆಚ್ಚು ಚಾರ್ಜ್ ಪ್ರವಹಿಸುವ ಚಾರ್ಜರ್‌ನಿಂದ ಫೋನ್ ಸ್ಪೋಟಗೊಳ್ಳುತ್ತದೆ.!

ಮೊಬೈಲ್ ಕವರ್ ಬಳಕೆ ಬೇಡ!
ಮೊಬೈಲ್ ಕಂಪೆನಿಗಳು ಸ್ಮಾರ್ಟ್‌ಫೋನ್ ತಯಾರಿಸುವಾಗ ಫೋನ್ ವಿನ್ಯಾಸದಂತೆ ಬ್ಯಾಟರಿಯನ್ನು ವಿನ್ಯಾಸ ಮಾಡಿರುತ್ತವೆ. ಆದರೆ, ಮೊಬೈಲ್ ಕವರ್‌ಗಳಿಂದಾಗಿ ಫೋನ್ ಬ್ಯಾರಿಗಳ ಮೇಲೆ ಹೆಚ್ಚು ಒತ್ತಡ ಬಿದ್ದು ಬ್ಯಾಟರಿ ಸ್ಪೋಟವಾಗುತ್ತದೆ ಎಂದು ಒಂದು ರಿಸರ್ಚ್ ಹೇಳಿದೆ. ಹಾಗಾಗಿ, ಇದು ಕೂಡ ನಿಮ್ಮ ಗಮನದಲ್ಲಿರಲಿ.!

ಅತೀ ಹೆಚ್ಚು ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ
ಅತೀ ಹೆಚ್ಚು ಘಂಟೆಗಳ ಕಾಲ ಮೊಬೈಲ್ ನ್ನು ಚಾರ್ಜ್ ಗೆ ಹಾಕಿಡುವ ಅಭ್ಯಾಸ ಬಿಟ್ಟುಬಿಡಿ. ಇದು ಸ್ಮಾರ್ಟ್ ಫೋನ್ ಅತೀ ಹೆಚ್ಚು ಬಿಸಿಯಾಗುವಂತೆ ಮಾಡುತ್ತದೆ. ನಿಮ್ಮ ಫೋನ್ ಶೇಕಡಾ 90ರಷ್ಟು ಚಾರ್ಜ್ ಆದ ಕೂಡಲೇ ಅನ್ ಪ್ಲಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೂಡ ನಿಮ್ಮ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿರುತ್ತದೆ.

ನೇರ ಸೂರ್ಯನ ಕಿರಣಗಳಿಗೆ ಮೊಬೈಲ್ ಒಡ್ಡಬೇಡಿ
ನೇರವಾಗಿ ಸೂರ್ಯನ ಕಿರಣಗಳು ಬೀಳುವ ಜಾಗದಲ್ಲಿ ಫೋನನ್ನು ಇಟ್ಟು, ಚಾರ್ಜ್ ಮಾಡಬೇಡಿ. ಅಥವಾ ಬಿಸಿಯಾಗಿರುವ ಜಾಗಗಳು ಉದಾಹರಣೆಗೆ ಕಾರಿನ ಡ್ಯಾಶ್ ಬೋರ್ಡ್ ( ಬೆಳಗಿನ ಹೊತ್ತಿನಲ್ಲಿ) ಬಳಿ ಇಟ್ಟು ಹೆಚ್ಚು ಘಂಟೆಗಳ ಕಾಲ ಮೊಬೈಲ್ ಚಾರ್ಜ್ ಮಾಡಬೇಡಿ. ಫೋನ್ ಸಹಿಸಿಕೊಳ್ಳುವುದು ಕೇವಲ 0 ಯಿಂದ 45 ಡಿಗ್ರಿ ಸೆಂಟಿಗ್ರೇಡ್ ನ ತಾಪವನ್ನು ಮಾತ್ರ.

ವಾತಾವರಣ ತಂಪಾಗಿರಬೇಕೆ?
ಹೆಚ್ಚು ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಖ್ಯಾತವಾದ ಲೀಥಿಯಂ ಆಯನ್ ಬ್ಯಾಟರಿಗಳನ್ನು ಬಳಕೆ ಮಾಡಿರುತ್ತಾರೆ. ಈ ಲೀಥಿಯಂ ಆಯನ್ ಬ್ಯಾಟರಿಯನ್ನು ತುಂಬಾ ತಂಪಾದ ವಾತಾವರಣದಲ್ಲಿ ಚಾರ್ಜ್ ಮಾಡಬಾರದು ಎಂದು ಹೇಳಲಾಗುತ್ತದೆ. ಆದರೆ, ಕಂಪೆನಿ ಹೇಳಿದಂತೆ ಈ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದೆ.!

ಅಧಿಕೃತ ಕೇಂದ್ರಗಳಲ್ಲಿ ಮಾತ್ರ ಫೋನ್ ಸರಿಪಡಿಸಿಕೊಳ್ಳಿ
ಇದನ್ನು ಕೂಡ ನೀವು ಪಾಲಿಸಲೇಬೇಕು. ಅಧಿಕೃತ ಕೇಂದ್ರಗಳಲ್ಲಿ ಮಾತ್ರ ನಿಮ್ಮ ಸ್ಮಾರ್ಟ್ ಫೋನ್ ಗಳನ್ನು ರಿಪೇರಿ ಮಾಡಿಸಿಕೊಳ್ಳಿ. ಅಷ್ಟೇ ಅಲ್ಲ ಸ್ಮಾರ್ಟ್ ಫೋನಿನ ಸರ್ಕ್ಯೂಟ್ ಗಳು ಮತ್ತು ಯಾವುದೇ ಭಾಗಗಳು ಎಫೆಕ್ಟ್ ಗೆ ಒಳಗಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ತಯಾರಿಕಾ ಕಂಪೆನಿಗಳ ಬ್ಯಾಟರಿಗಳನ್ನೇ ಖರೀದಿಸಿ
ಚಾರ್ಜರ್ ಗಳ ಹಾಗೆ, ಒರಿಜಿನಲ್ ಬ್ಯಾಟರಿಗಳನ್ನು ಬಳಕೆ ಮಾಡುವುದು ಕೂಡ ತುಂಬಾ ಮಹತ್ವದದ್ದು. ಒಂದು ವೇಳೆ ನಿಮ್ಮ ಸ್ಮಾರ್ಟ್ ಫೋನಿನ ಬ್ಯಾಟರಿಗಳನ್ನು ಬದಲಿಸುವ ಅಗತ್ಯತೆ ಬಂದರೆ, ಒರಿಜಿನಲ್ ಬ್ಯಾಟರಿಯನ್ನೇ ಖರೀದಿಸುತ್ತಿದ್ದೀರಾ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಪವರ್ ಸ್ಟ್ರಿಪ್ ಗಳನ್ನು ಬಳಸಿ ಚಾರ್ಜ್ ಮಾಡಬೇಡಿ
ಜಾಗರೂಕತೆ ಮಾರ್ಗಗಳಲ್ಲಿ ಪ್ರಮುಖವಾದ ವಿಚಾರವೆಂದರೆ ಪವರ್ ಸ್ಟ್ರಿಪ್ ಗಳನ್ನು ಬಳಸಿ ಅಥವಾ ಎಕ್ಸ್ ಟೆಷನ್ ಕಾರ್ಡ್ ಗಳನ್ನುಬಳಸಿ ಮೊಬೈಲ್ ಚಾರ್ಜ್ ಮಾಡಬೇಡಿ.ಯಾವುದೇ ಡಿವೈಸ್ ಆಗಿರಲಿ, ಅದರಲ್ಲಿರುವ ಯಾವುದೇ ಒಂದು ಕಾರ್ಡ್ ಎಫೆಕ್ಟ್ ಗೆ ಒಳಗಾದರೂ, ನಿಮ್ಮ ಸ್ಮಾರ್ಟ್ ಫೋನ್ ಗೂ ಡ್ಯಾಮೇಜ್ ತಂದೊಡ್ಡುತ್ತದೆ.

ಸಮತ್ತಟ್ಟಾದ ಜಾಗದಲ್ಲಿ ಚಾರ್ಜ್ ಮಾಡಿ
ನಮ್ಮಲ್ಲಿ ಹಲವರು ಈ ತಪ್ಪನ್ನು ಮಾಡುತ್ತೇವೆ. ದಿಂಬಿನ ಮೇಲೆ ಸ್ಮಾರ್ಟ್ ಫೋನ್ ಇಟ್ಟು ಚಾರ್ಜ್ ಮಾಡುತ್ತೇವೆ. ಇದನ್ನು ಕೂಡ ನೀವು ಅವಾಯ್ಡ್ ಮಾಡಬೇಕು. ಹೀಗೆ ಸಮತ್ತಟ್ಟಾದ ಜಾಗದಲ್ಲಿ ಸ್ಮಾರ್ಟ್ ಫೋನ್ ಇಡದೇ ಇದ್ದರೆ ಮೊಬೈಲ್ ಫೋನ್ ಬಿಸಿಯಾಗುವ ಸಾಧ್ಯತೆಗಳು ಹೆಚ್ಚಿರುತ್ತೆ.

ನಿಮ್ಮ ಮೊಬೈಲ್ ಮೇಲೆ ಒತ್ತಡ ಹೇರಬೇಡಿ
ಮತ್ತೊಂದು ಪ್ರಮುಖ ವಿಚಾರ ಅಂದರೆ ಮೊಬೈಲ್ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಬ್ಯಾಗ್ ನಲ್ಲಿ ಕೆಳಗೆ ಮೊಬೈಲ್ ಇಟ್ಟುಕೊಂಡು ಅದರ ಮೇಲೆ ಭಾರವಾದ ವಸ್ತುಗಳನ್ನು ಇಟ್ಟುಕೊಂಡು ಬಿಡಬೇಡಿ. ಹೀಗೆ ಒತ್ತಡ ಹೇರುವುದರಿಂದಲೂ ಸಹ ನಿಮ್ಮ ಸ್ಮಾರ್ಟ್‌ಫೋನ್ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಿವೆ ವರದಿಗಳು.


Click it and Unblock the Notifications








