ಇದೊಂದು ಟ್ರಿಕ್ಸ್ ಬಳಸಿ ನಿಮ್ಮ ಫೋನ್ ವೇಗ ಹೆಚ್ಚಿಸಿ ಮತ್ತು ಬ್ಯಾಟರಿ ಉಳಿಸಿ!
ಕಡಿಮೆ RAM ಮತ್ತು ಮೆಮೊರಿ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರ ಬಹುದೊಡ್ಡ ತೊಂದರೆ ಎಂದರೆ ಅವರ ಫೋನ್ ಯಾವಾಗಲೂ ಸ್ಲೋ ಆಗುವುದು. ಇದಕ್ಕೆ ಹಲವಾರು ಕಾರಣಗಳಿದ್ದರೂ ಸಹ ನಾವು ಮಾಡುವ ತಪ್ಪುಗಳಿಂದಾಗಿಯೇ ಆಂಡ್ರಾಯ್ಡ್ ಫೋನ್ ಸ್ಲೋ ಆಗಿರುತ್ತದೆ. ಉದಾಹರಣೆ ಎಂದರೆ, ನಿಮ್ಮ ಫೋನಿನಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ಷಮತೆ ಮತ್ತು ಗ್ರಾಫಿಕ್ ತೀವ್ರವಾದ ಮೊಬೈಲ್ ಆಪ್‌ಗಳನ್ನು ಡೌನ್‌ಲೋಡ್ ಮಾಡಿದಾಗ ಪೋನ್ ಬಹುಬೇಗ ಸ್ಲೋ ಆಗುತ್ತದೆ.
ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ ಹೆಚ್ಚು RAM ಮತ್ತು ಆಂತರಿಕ ಮೆಮೊರಿ ಸಾಮರ್ಥ್ಯದ ಸ್ಮಾರ್ಟ್‌ಫೋನ್ ಖರೀದಿಸಿದರೆ ಇಂತಹ ತೊಂದರೆ ಆಗುವುದು ಬಹುತೇಕ ಕಡಿಮೆ ಎನ್ನಬಹುದು. ಆದರೆ, 10-15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳು ಖಂಡಿತವಾಗಿಯೂ ಇಂತಹ ಸಮಸ್ಯೆಯನ್ನು ಎದುರಿಸುತ್ತಿವೆ. ಈ ಸಮಸ್ಯೆ ಆಂಡ್ರಾಯ್ಡ್ ಫೋನನ್ನು ನಿಧಾನಗೊಳಿಸುವುದು ಮಾತ್ರವಲ್ಲದೇ, ಅದರ ಬ್ಯಾಟರಿ ಸಾಮರ್ಥ್ಯವನ್ನು ಕೂಡ ಕಡಿಮೆಗೊಳಿಸುವುದನ್ನು ನಾವು ನೋಡಬಹುದು.

ಹಾಗಾಗಿ, ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹೆಚ್ಚು ಮೆಮೊರಿ ಮತ್ತು ಬ್ಯಾಟರಿಯನ್ನು ತಿನ್ನುತ್ತಿರುವ ಅಪ್ಲಿಕೇಷನ್‌ಗಳನ್ನು ನೀವು ಅನ್‌ಇನ್‌ಸ್ಟಾಲ್ ಮಾಡಬೇಕು. ಹೀಗೆ ಮಾಡಿದರೆ ನಿಮ್ಮ ಆಂಡ್ರಾಯ್ಡ್ ಫೋನನ್ನು ವೇಗಗೊಳಿಸಬಹುದು ಮತ್ತು ಫೋನಿನ ಬ್ಯಾಟರಿಯನ್ನು ಸಾಕಷ್ಟು ಉಳಿಸಬಹುದು. ಹಾಗಾದರೆ, ನಿಮ್ಮ ಫೋನಿನಲ್ಲಿ ಮೆಮೊರಿ ಮತ್ತು ಬ್ಯಾಟರಿಯನ್ನು ತಿನ್ನುತ್ತಿರುವ ಅಪ್ಲಿಕೇಷನ್ ಯಾವುವು ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸ್ಟೆಪ್ 1
ಮೊದಲಿಗೆ ನಿಮ್ಮ ಫೋನಲ್ಲಿ ಸೆಟ್ಟಿಂಗ್ಗಳಿಗೆ ಹೋಗಿ. ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಶೇಖರಣಾ / ಮೆಮೊರಿ ಅನ್ನು ಟ್ಯಾಪ್ ಮಾಡಿ.

ಸ್ಟೆಪ್ 2
ಸ್ಟೋರೇಜ್ ಆಯ್ಕೆಯನ್ನು ಕ್ಲಿಕ್ ಮಾಡಿದಾಗ ಫೋನಿನಲ್ಲಿ ಗರಿಷ್ಠ ಸ್ಟೋರೇಜ್ ಅನ್ನು ಯಾವುದು ಬಳಸುತ್ತದೆ ಎಂಬುದು ತೋರಿಸುತ್ತದೆ.

ಸ್ಟೆಪ್ 3
ಈ ಪಟ್ಟಿಯು ನಿಮ್ಮ ಫೋನಿನ ಇಂಟರ್ನಲ್ ಸ್ಟೋರೇಜ್ ಬಳಕೆಯನ್ನು ಮಾತ್ರ ತೋರಿಸುತ್ತದೆ.

ಸ್ಟೆಪ್ 4
ಅಲ್ಲಿ ನೀಡಿರುವ 'ಮೆಮೊರಿ' ಅನ್ನು ಟ್ಯಾಪ್ ಮಾಡಿ ಮತ್ತು ನಂತರ ಅಪ್ಲಿಕೇಶನ್ಗಳು ಬಳಸಿದ ಮೆಮೊರಿಯಲ್ಲಿರುವುದನ್ನು ನೋಡಿ.

ಸ್ಟೆಪ್ 5
ಈ ಪಟ್ಟಿಯು ನಾಲ್ಕು ಮಧ್ಯಂತರಗಳಲ್ಲಿ 'ಅಪ್ಲಿಕೇಶನ್ ಬಳಕೆ' ನಿಮಗೆ ಕಾಣಿಸುತ್ತದೆ.

ಸ್ಟೆಪ್ 6
ಇಲ್ಲಿ 3, 6, 12 ಗಂಟೆಗಳ ಮತ್ತು 1 ದಿನ ಈ ಮಾಹಿತಿಯೊಂದಿಗೆ RAM ನ (%) ಪ್ರಮಾಣವನ್ನು ನೀವು ತಿಳಿಯಬಹುದು

ಸ್ಟೆಪ್ 7
ಈ ಮಾಹಿತಿಯ ಆಧಾರದ ಮೇಲೆ ನೀವು ಅಪ್ಲಿಕೇಶನನ್ನು ಅನ್‌ಇನ್‌ಸ್ಟಾಲ್ ಮಾಡಬಹುದು.

ಸ್ಟೆಪ್ 8
ಹೀಗೆ ಇಂಟರ್ನಲ್ ಸ್ಟೋರೇಜ್ ಬಹುತೇಕ ಖಾಲಿಯಿರುವಂತೆ ಖಚಿತಪಡಿಸಿಕೊಳ್ಳಿ.


Click it and Unblock the Notifications








