Home
ಟೆಕ್ ನೌಕರಿ

ತಹಶೀಲ್ದಾರ ಕಚೇರಿಯಲ್ಲಿ ಕ್ಯೂ ಯಾಕ್‌ ನಿಲ್ತೀರಿ..! ಮೊಬೈಲ್‌ನಲ್ಲಿಯೇ ಪಹಣಿ ಪಡೆಯಿರಿ..!

ಹಿಂದೆಲ್ಲಾ ಹೊಲದ ಪಹಣಿ ಬೇಕೆಂದರೆ ತಹಸೀಲ್‌ ಅಥವಾ ನಾಡ ಕಚೇರಿಗೆ ಹೋಗಿ ಸರತಿಯಲ್ಲಿ ನಿಂತು ತೆಗೆದುಕೊಂಡು ಬರಬೇಕಾಗಿತ್ತು. ಈಗಲೂ ಸಹ ಮಾಹಿತಿಯ ಕೊರತೆಯಿಂದ ಈ ಪದ್ಧತಿ ಮುಂದುವರೆಯುತ್ತಿದೆ. ಆದ್ದರಿಂದ, ನೀವು ಯಾವುದೇ ಕಚೇರಿಗೆ ಹೋಗದೆ ಪಹಣಿಯನ್ನು ನೇರವಾಗಿ ಪಡೆಯುವ ಮಾಹಿತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ.

ಹೌದು, ಇಂಟರ್‌ನೆಟ್‌ನಿಂದ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ತರ ಬದಲಾವಣೆಗಳಾಗುತ್ತಿವೆ. ಈ ಬದಲಾವಣೆಗೆ ಕೃಷಿ ಕ್ಷೇತ್ರವೂ ಹೊರತಾಗಿಲ್ಲ. ಹೌದು, ನಾವೀಗ ಟಿಜಿಟಲ್ ಯುಗದಲ್ಲಿದ್ದು, ಕೃಷಿ ಕ್ಷೇತ್ರಕ್ಕೆ ಹೀಗಾಗಲೇ ತಂತ್ರಜ್ಞಾನ ಎಂಟ್ರೀ ಕೊಟ್ಟಿದೆ. ಆದ್ದರಿಂದ, ಸರ್ಕಾರ ಕೂಡ ಕೃಷಿಯನ್ನು ಡಿಜಿಟಲ್‌ ಮಾಡಿದೆ. ಭೂಮಿ ದಾಖಲೆಗಳನ್ನು ಡಿಜಿಟಲೀಕರಣ ಮಾಡಿದ್ದು, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಪಹಣಿಯನ್ನು ತೆಗೆದುಕೊಳ್ಳುವ ಅವಕಾಶವನ್ನು ನೀಡಿದೆ.

ತಹಶೀಲ್ದಾರ ಕಚೇರಿಯಲ್ಲಿ ಕ್ಯೂ ಯಾಕ್‌ ನಿಲ್ತೀರಿ..ಮೊಬೈಲ್‌ನಲ್ಲಿಯೇ ಪಹಣಿ ಪಡೆಯಿರಿ!

ಈ ಸೇವೆಯನ್ನು ಭಾರತದಲ್ಲಿ ಮೊದಲು ಪ್ರಾರಂಭಿಸಿದ ಹೆಮ್ಮೆ ಕರ್ನಾಟಕಕ್ಕೆ ದೊರೆಯುತ್ತದೆ. ನಮ್ಮ ಜಮೀನು ಯಾರ ಹೆಸರಿನಲ್ಲಿ? ಎಲ್ಲಿದೆ ? ಎಷ್ಟಿದೆ? ಎಂದು ತಿಳಿಯುವುದು ಅವಶ್ಯಕ. ಆದರೆ, ತಿಳಿದುಕೊಳ್ಳುವುದು ಹೀಗೆನು ಕಷ್ಟವಲ್ಲ. ಕರ್ನಾಟಕ ಸರ್ಕಾರದ ಭೂಮಿ ವೆಬ್‌ಸೈಟ್‌ಗೆ ಭೇಟಿ ನೀಡಿದರೆ, ನೀವು ಮೊಬೈಲ್‌ನಲ್ಲಿಯೇ ಪಹಣಿಯನ್ನು ನೋಡಬಹುದು ಮತ್ತು ಪಡೆಯುಬಹುದು. ಆಗಿದ್ದರೆ, ಪಹಣಿಯನ್ನು ಪಡೆಯುವುದು ಹೇಗೆ ಎಂಬುದನ್ನು ಮುಂದಿನ ಹಂತಗಳಲ್ಲಿ ನೋಡಿ.

ಹಂತ -1

ಹಂತ -1

ಮೊದಲು ನೀವು ನಿಮ್ಮ ಮೊಬೈಲ್‌ನ ಇಂಟರ್‌ನೆಟ್‌ ಬ್ರೌಸರ್‌ನಲ್ಲಿ https://landrecords.karnataka.gov.in ಲಿಂಕ್‌ ತೆರೆಯಿರಿ. ಅಥವಾ ಕರ್ನಾಟಕ ಸರ್ಕಾರದ ಭೂಮಿ ವೆಬ್‌ಸೈಟ್‌ನ್ನು ಬ್ರೌಸರ್‌ನಲ್ಲಿ ಒಪನ್‌ ಮಾಡಿ.

ಹಂತ -2

ಹಂತ -2

ನಂತರ ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ "View RTC and MR" ಆಯ್ಕೆಯನ್ನು ಕ್ಲಿಕ್‌ ಮಾಡಿ.

ಹಂತ -3

ಹಂತ -3

"View RTC and MR" ಆಯ್ಕೆ ಕ್ಲಿಕ್‌ ಮಾಡಿದ ನಂತರ ಮೇಲೆ ತೋರಿಸಿರುವ ವಿಂಡೋ ತೆರದುಕೊಳ್ಳುತ್ತದೆ. ಅಲ್ಲಿ ಭೂಮಿಯ ಸಂಪೂರ್ಣ ಮಾಹಿತಿಯನ್ನು ತುಂಬಿ.

ಹಂತ -4

ಹಂತ -4

ಸಂಪೂರ್ಣ ಮಾಹಿತಿ ಎಂದರೆ, ನಿಮ್ಮ ಭೂಮಿಯಿರುವ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೇ ನಂಬರ್ ಮತ್ತೀತರ ಮಾಹಿತಿಗಳನ್ನು ಭರ್ತಿ ಮಾಡಿ.

ಹಂತ -5

ಹಂತ -5

ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ "Fetch Details" ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ-6

ಹಂತ-6

"Fetch Details" ಆಯ್ಕೆ ಕ್ಲಿಕ್ ಮಾಡಿದ ಮೇಲೆ ನೀವು ನಮೂದಿಸಿದ ಭೂಮಿಯ ಮಾಹಿತಿಯನ್ನಾಧರಿಸಿ ಆ ಸರ್ವೇ ನಂಬರ್‌ನಲ್ಲಿರುವ ಭೂಮಿಯ ವಿವರಗಳು ನಿಮಗೆ ಕಾಣುತ್ತವೆ.

ಹಂತ-7

ಹಂತ-7

ಭೂಮಿಯ ವಿವರಗಳು ಕಂಡ ನಂತರ "View" ಆಯ್ಕೆಯನ್ನು ಕ್ಲಿಕ್ ಮಾಡಿ.

ಹಂತ- 8

ಹಂತ- 8

"View" ಆಯ್ಕೆ ಕ್ಲಿಕ್ ಮಾಡಿದ ನಂತರ ಬೇರೊಂದು ಪುಟದಲ್ಲಿ ನಿಮ್ಮ ಪಹಣಿ ಕಾಣುತ್ತದೆ. ನೀವು ಅಲ್ಲಿ ಕಾಣುವ ಪಹಣಿಯನ್ನು ಸೇವ್‌ ಮಾಡಿಕೊಂಡು ಪ್ರಿಂಟ್‌ ತೆಗೆಸಿಕೊಳ್ಳಬಹುದು.

Best Mobiles in India

English summary
why you go to taluk office for land record..? Now you can take RTC on mobile. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+