ವೈರ್‌ಲೆಸ್ ಹೆಡ್‌ಫೋನ್ ಖರೀದಿಸುವುದು ಉತ್ತಮವೇ?

|

ಹೊಸದಾಗಿ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಹೆಡ್‍ ಫೋನ್ ಜಾಕ್‍ ಇಲ್ಲದಿರುವುದು ಸಾಮಾನ್ಯವಾಗಿದೆ. ಮೊಬೈಲ್ ತಯಾರಕರು ಸ್ಮಾರ್ಟ್‌ಫೋನ್‍ ಅನ್ನು ಆದಷ್ಟೂ ತೆಳುವಾಗಿಸುವ ಕಾರಣದಿಂದ ಹೆಡ್‌ಫೋನ್‌ ಜಾಕ್‌ಗೆ ವಿದಾಯ ಹೇಳಿದ್ದಾರೆ. ಹಾಗಾಗಿ, ಈಗೇನಿದ್ದರೂ ವಯರ್ ಲೆಸ್ ಹೆಡ್ ಫೋನ್‌ಗಳ ಜಮಾನ ಎಂದು ಹೇಳಬಹುದು. ಆದರೆ, ವೈರ್‌ಲೆಸ್ ಹೆಡ್‌ಫೋನ್ ಖರೀದಿಸುವುದು ಉತ್ತಮವೇ?, ಖರೀದಿಸಿದರೆ ಯಾವ ವೈರ್‌ಲೆಸ್ ಹೆಡ್‌ಫೋನ್ ಖರೀದಿಸಬೇಕು ಎಂಬ ಪ್ರಶ್ನೆಗಳು ಈಗ ಹಲವರಲ್ಲಿ ಮೂಡುತ್ತಿದೆ.

ವೈರ್‌ಲೆಸ್ ಹೆಡ್‌ಫೋನ್ ಖರೀದಿಸುವುದು ಉತ್ತಮವೇ?

ಇದಕ್ಕೆ ಉತ್ತರ ಎಂದರೆ, ವಯರ್ ಇರುವ ಹೆಡ್‌ಫೋನ್ ಗಳಿಗಿಂತ ವಯರ್ ಲೆಸ್‌ ಹೆಡ್‌ಫೋನ್‌ಗಳೇ ಹೆಚ್ಚು ಅನುಕೂಲಕರ ಎನ್ನಬಹುದು. ನೀವು ಓಡುತ್ತಿರುವಾಗ, ಜಿಮ್‍ ನಲ್ಲಿ ಕಸರತ್ತು ಮಾಡುತ್ತಿರುವಾಗ, ಸುಮ್ಮನೆ ನಡೆದು ಹೋಗುತ್ತಿರುವಾಗ ಸಂಗೀತ ಆಲಿಸಲು ವಯರ್ ಇರುವ ಹೆಡ್‌ಫೋನ್ ಗಳಿಗಿಂತ ವಯರ್ ಲೆಸ್‌ ಹೆಡ್‌ಫೋನ್‌ಗಳೇ ಹೆಚ್ಚು ಅನುಕೂಲಕರ. ವಯರ್ ಲೆಸ್‌ ಹೆಡ್‌ಫೋನಿನಲ್ಲಿ ಕಿರಿಕಿರಿ ಇಲ್ಲದೆ ಸಂಗೀತ ಆಲಿಸಬಹುದು ಮತ್ತು ಇದು ಯಾವುದೇ ಧರಿಸು ಕಿರಿಕಿರಿಯನ್ನು ಉಂಟುಮಾಡುವುದಿಲ್ಲ ಎಂಬುದು ಸಹ ಇಲ್ಲಿ ಮುಖ್ಯವಾಗುತ್ತದೆ.

ಕೆಲ ವರ್ಷಗಳ ಹಿಂದೆ ಬರುತ್ತಿದ್ದ ವಯರ್ ಲೆಸ್‌ ಹೆಡ್‌ಫೋನ್‌ಗಳಲ್ಲಿ ಧ್ವನಿ ಸರಿಯಾಗಿ ಕೇಳಿಸುವುದಿಲ್ಲ ಎಂಬ ದೂರುಗಳು ಸಾಮಾನ್ಯವಾಗಿತ್ತು. ಇದಕ್ಕೆ ಕಾರಣವೂ ಇತ್ತು. ಹಿಂದೆ ಬ್ಲೂಟೂತ್‌ನ ಸಹಾಯದಿಂದ ಕೆಲಸ ಮಾಡುತ್ತಿದ್ದ ಈ ವಯರ್ ಲೆಸ್ ಹೆಡ್ ಫೋನ್ಗಳಲ್ಲಿ 'ಶಾರ್ಟ್ ರೇಂಜ' ತಂತ್ರಜ್ಞಾನ ಬಳಕೆಯಾಗುತ್ತಿತ್ತು. ಡಿವೈಸ್‌ಗೂ ಹೆಡ್‌ಫೋನ್‌ಗೂ ಇರುವ ಅಂತರ ಹೆಚ್ಚಾದರೆ ಹೆಡ್‌ ಫೋನಿನಲ್ಲಿ ಧ್ವನಿ ಸರಿಯಾಗಿ ಕೇಳಿಸುತ್ತಿರಲಿಲ್ಲ. ಆದರೆ, ಈಗ ವೈರ್‌ಲೆಸ್ ಹೆಡ್‌ಫೋನ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ ಎಂದು ಹೇಳಬಹುದು.

ವೈರ್‌ಲೆಸ್ ಹೆಡ್‌ಫೋನ್ ಖರೀದಿಸುವುದು ಉತ್ತಮವೇ?

ಹಾಗಾಗಿ, ಈಗ ಮಾರುಕಟ್ಟೆಗೆ ಅತ್ಯುತ್ತಮ ಹೆಡ್‌ಫೋನ್‌ಗಳನ್ನು ನೀವು ಖರೀದಿಸಬಹುದು. ಅವುಗಳಲ್ಲಿ ಬ್ಲೂಟೂತ್ 5.0 ವರ್ಷನ್‌ ಮೇಲ್ಪಟ್ಟ ಸಾಧನಗಳು ಹೆಚ್ಚು ವೇಗವಾಗಿ ಮತ್ತು ಸ್ಪಷ್ಟವಾಗಿ ಧ್ವನಿ ಸಂಕೇತಗಳನ್ನು ಡಿವೈಸ್ ನಿಂದ ಹೆಡ್‌ಫೋನ್‌ಗೆ ರವಾನಿಸುತ್ತದೆ. ಹೊಸ ಐಫೋನ್ ಹಾಗೂ ಆಂಡ್ರಾಯ್ಡ್ ಫೋನ್‌ಗಳಿಗೆ ಹೊಂದಿಕೆಯಾಗುವ ಹೆಡ್‌ಫೋನ್ ಗಳಲ್ಲಿ ಈ ತಂತ್ರಜ್ಞಾನ ಈಗ ಬಳಕೆಯಾಗುತ್ತಿದೆ. ಹಾಗಾಗಿ, ಉತ್ತಮ ಗುಣಮಟ್ಟದ ಧ್ವನಿ ಕೇಳಲು ಈ ಬ್ಲೂಟೂತ್ 5.0 ವರ್ಷನ್ನಿನ ಮೇಲ್ಪಟ್ಟ ವಯರ್‌ಲೆಸ್ ಹೆಡ್‌ಫೋನ್‌ಗಳು ಹೆಚ್ಚು ಸಹಾಯಕವಾಗಬಲ್ಲವು.

ಈ ಹಾಸ್ಯ ಸನ್ನಿವೇಶಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಂತೆ!ಈ ಹಾಸ್ಯ ಸನ್ನಿವೇಶಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಂತೆ!

ಆದರೆ, ಇದಕ್ಕಾಗಿ ನೀವು ಸ್ವಲ್ಪ ಹೆಚ್ಚು ಹಣ ತೆರಬೇಕಾಗುತ್ತದೆ. ಉತ್ತಮ ಹೆಡ್ ಫೋನ್ ಗಳ ಬೆಲೆಯೂ ಹೆಚ್ಚಾಗಿಯೇ ಇರುತ್ತದೆ. ಹೊಸ ತಂತ್ರಜ್ಞಾನದಿಂದ ತಯಾರಾಗಿರುವ ಹೆಡ್‌ಫೋನ್‌ಗಳು ಉತ್ತಮ ಧ್ವನಿ ವಾಹಕಗಳಾಗಿವೆ. ವ್ಯಾಯಾಮ ಮಾಡುತ್ತಾ, ಓಡುತ್ತಾ, ಸೈಕಲ್ ಓಡಿಸುತ್ತಾ ಸಂಗೀತ ಕೇಳುವವರಿಗೆ ಇವು ಹೆಚ್ಚು ಆಪ್ತವಾಗುತ್ತವೆ. ಹೆಚ್ಚು ಹಣ ಕೊಟ್ಟು ಖರೀದಿ ಮಾಡಿದ್ದಕ್ಕೂ ಸಾರ್ಥಕ ಎಂಬಂತಿವೆ. ಹಾಗಾದರೆ, ತಡವೇಕೆ?, ಬ್ಲೂಟೂತ್ 5.0 ವರ್ಷನ್ ಮೇಲ್ಪಟ್ಟ ವೈರ್‌ ಲೆಸ್‌ ಹೆಡ್‌ಫೋನ್ ಖರೀದಿ ಮಾಡಿ ಮತ್ತು ಉತ್ತಮ ಗುಣಮಟ್ಟದ ಧ್ವನಿ ಆಲಿಸಿ.

Best Mobiles in India

English summary
ಹೊಸದಾಗಿ ಬರುತ್ತಿರುವ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ಹೆಡ್‍ ಫೋನ್ ಜಾಕ್‍ ಇಲ್ಲದಿರುವುದು ಸಾಮಾನ್ಯ. | Wireless Bluetooth Headphones Yay or Nay?. If you're looking to go full wireless, we also have a round-up of the best true wireless headphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X