Home
ಟೆಕ್ ನೌಕರಿ

ಒಂದು ರೂಪಾಯಿಗೆ ಶಿಯೋಮಿ 'ರೆಡ್ಮಿ ನೋಟ್ 7 ಪ್ರೊ' ಫೋನ್ ಗೆಲ್ಲುವುದು ಹೇಗೆ?

ದೇಶದಲ್ಲೇ ಅತಿಹೆಚ್ಚು ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟಮಾಡುತ್ತಿರುವ ಶಿಯೋಮಿ ಇಂದಿನಿಂದ ಎಂಐ ಫ್ಯಾನ್ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸಿದೆ. ಪ್ರತಿಭಾರಿಯಂತೆ ಈ ಬಾರಿ ಕೂಡ ಶಿಯೋಮಿ ಒಂದು ರೂಪಾಯಿಯ ಫ್ಲ್ಯಾಶ್ ಸೇಲ್ ಕೊಡುಗೆಯನ್ನು ನೀಡಿದ್ದು, ಈ ಫ್ಲಾಶ್‌ಸೇಲ್‌ನಲ್ಲಿ ಒಂದು ರೂಪಾಯಿಗೆ ರೆಡ್ಮಿ ನೋಟ್ 7 ಪ್ರೊ, ಪೋಕೋ ಎಫ್1, ಎಂಐ ಸೌಂಡ್ ಬಾರ್, ಎಂಐ ಎಲ್ಇಡಿ ಟಿವಿ 4ಎ ಪ್ರೋ (32ಇಂಚು), ಹೋಮ್ ಸೆಕ್ಯುರಿಟಿ ಕ್ಯಾಮರಾ ಮತ್ತು ಎಂಐ ಸ್ಪೋರ್ಟ್ಸ್ ಬ್ಲೂಟೂತ್ ಇಯರ್ ಫೋನ್ ಗಳನ್ನು ಖರೀದಿಸುವ ಅವಕಾಶವಿದೆ.

2019ರ ಮೊದಲ ಎಂಐ ಫ್ಯಾನ್ ಫೆಸ್ಟಿವಲ್ ಸೇಲ್ ಇಂದಿನಿಂದಲೇ ಆರಂಭವವಾಗಿದ್ದು, (ಏಪ್ರಿಲ್ 4)ಈ ಫೆಸ್ಟಿವಲ್ ಸೇಲ್‌ನಲ್ಲಿ ಒಂದು ರೂಪಾಯಿ ಸೇಲ್ ಇಂದಿನಿಂದ ಮೂರು ದಿನಗಳ ವರೆಗೆ ಲಭ್ಯವಿದೆ. ಏಪ್ರಿಲ್ 4 ರಿಂದ ಶನಿವಾರದವರೆಗೆ ಅಂದರೆ ಏಪ್ರಿಲ್ 6ರ ವರೆಗೆ ಈ ಫೆಸ್ಟಿವಲ್ ನಡೆಯಲಿರುವ ಮೂರು ದಿನಗಳಂದು ನಿಖರವಾಗಿ ಮಧ್ಯಾಹ್ನ 2 ಗಂಟೆಗೆ ಒಂದು ರೂಪಾಯಿಗೆ ನೀವು ಕೂಡ ರೆಡ್ಮಿ ನೋಟ್ 7 ಪ್ರೊ, ಪೋಕೋ ಎಫ್1 ಸೇರಿದಂತೆ ಈ ಆಫರ್‌ನಲ್ಲಿ ಲಭ್ಯವಿರುವ ಎಲ್ಲಾ ಡಿವೈಸ್‌ಗಳನ್ನು ಖರೀದಿಸಬಹುದು.

ಒಂದು ರೂಪಾಯಿಗೆ ಶಿಯೋಮಿ 'ರೆಡ್ಮಿ ನೋಟ್ 7 ಪ್ರೊ' ಫೋನ್ ಗೆಲ್ಲುವುದು ಹೇಗೆ?

ಇದಕ್ಕಾಗಿ, ನೀವು ಶಿಯೋಮಿ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನಿಡಿ ಲಾಗಿನ್ ಆಗಬೇಕಿದ್ದು, ತದನಂತರ ಮಧ್ಯಾಹ್ನ 2 ಗಂಟೆಗೆ ಶಿಯೋಮಿ ಪ್ರಕಟಿಸಿರುವ ಒಂದು ರೂಪಾಯಿಯ ಫ್ಲ್ಯಾಶ್ ಸೇಲ್ ಪೇಜ್ ಅನ್ನು ತೆರೆದಿಟ್ಟಿರಿ. ಈ ಸೇಲ್ ನಿಖರವಾಗಿ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಕೂಡಲೇ ಆಫರ್‌ನಲ್ಲಿನ ಯಾವುದೇ ಡಿವೈಸ್ ಅನ್ನು ಖರೀದಿಗೆ ಮುಂದಾಗಿ. ನೀವು ಅದೃಷ್ಟವಂತರಾಗಿದ್ದರೆ ನಿಮಗೆ ಆ ಡಿವೈಸ್ ಒಂದು ರೂಪಾಯಿಗೆ ಸಿಗಲಿದೆ. ಕೆಲವೇ ಸೆಂಕೆಡ್‌ನಲ್ಲಿ ಈ ಆಫರ್ ಮುಗಿಯುವುದರಿಂದ ನೀವು ಮೊದಲೇ ಆಫರ್ ಕ್ಲಿಕ್ ಮಾಡಿರಬೇಕು.

ರೆಡ್‌ಮಿ ನೋಟ್ 7 ಪ್ರೊ' ಡಿಸೈನ್

ರೆಡ್‌ಮಿ ನೋಟ್ 7 ಪ್ರೊ' ಡಿಸೈನ್

ಈಗಾಗಲೇ ವಿಶ್ವ ಮಾರುಕಟ್ಟೆಗೆ ಕಾಲಿಟ್ಟಿರುವ ರೆಡ್‌ಮಿ ನೋಟ್ 7 ಮಾದರಿಯಲ್ಲೇ 'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ವಿನ್ಯಾಸವನ್ನು ಹೊಂದಿದೆ ಎಂದು ಹೇಳಬಹುದು. ಹಿಂಬಾಗದಲ್ಲಿ ಡ್ಯುಯಲ್ ಕ್ಯಾಮೆರಾ ಮತ್ತು ಫಿಂಗರ್‌ಪ್ರಿಂಟ್ ಆಯ್ಕೆಯ ಡಿಸೈನ್ ಹೊಂದಿರುವ ಸ್ಮಾರ್ಟ್‌ಪೋನ್ ಎರಡೂ ಭಾಗಗಳಲ್ಲಿ 2.D ಕರ್ವಡ್ ಗ್ಲಾಸ್ ಡಿಸೈನ್ ಹೊಂದಿರುವುದು ವಿಶೇಷ ಎನ್ನಬಹುದು.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.

'ರೆಡ್‌ಮಿ ನೋಟ್ 7 ಪ್ರೊ' ಡಿಸ್‌ಪ್ಲೇ.

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ FHD + ರೆಸಲ್ಯೂಶನ್ ಮತ್ತು 19.5:9ರ ಆಕಾರ ಅನುಪಾತದೊಂದಿಗೆ 6.3-ಇಂಚಿನ LTPS ಎಲ್‌ಸಿಡಿ ಪ್ರದರ್ಶನದೊಂದಿಗೆ ಬಿಡುಗಡೆಯಾಗಿದೆ. ಕಣ್ಣಿನ ಒತ್ತಡವನ್ನು ತಪ್ಪಿಸಲು ಸನ್‌ಲೈಟ್ ಡಿಸ್‌ಪ್ಲೇ ಮತ್ತು ಓದುವಿಕೆ ವಿಶೇಷ ಮೋಡ್ ಅನ್ನು ಹೊಂದಿರುವ ಫೋನ್ ಭಾಗಶಃ ಪೂರ್ಣ ಪ್ರಮಾಣದ ಸ್ಕ್ರೀನ್ ಡಿಸ್‌ಪ್ಲೇಯಂತೆ ಹೊಂದಿದೆ.

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್

'ರೆಡ್‌ಮಿ ನೋಟ್ 7 ಪ್ರೊ' ಪ್ರೊಸೆಸರ್

ಆಕ್ಟಕೋರ್ ಸ್ನಾಪ್‌ಡ್ರಾಗನ್ 675 SoC ಪ್ರೊಸೆಸರ್ ಜೊತೆಗೆ 6GB LPDDR4X RAM ಮತ್ತು 128GB ಆಂತರಿಕ ಮೆಮೊರಿಯನ್ನು 'ರೆಡ್‌ಮಿ ನೋಟ್ 7 ಪ್ರೊ'ನಲ್ಲಿ ನೋಡಬಹುದು. ರೆಡ್‌ಮಿ ಫೋನಿನಲ್ಲಿ ಇದೇ ಮೊದಲ ಬಾರಿಗೆ 128GB ಮೆಮೊರಿಯನ್ನು ತರಲಾಗಿದ್ದು, ಅಡ್ರಿನೋ 612 ಜಿಪಿಯು ಜೊತೆಗೆ MIUI 10 ಟಾಪ್ ಆಂಡ್ರಾಯ್ಡ್ ಪೈನಲ್ಲಿ ಸ್ಮಾರ್ಟ್‌ ಕಾರ್ಯನಿರ್ವಹಣೆ ನೀಡಲಿದೆ.

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ

'ರೆಡ್‌ಮಿ ನೋಟ್ 7 ಪ್ರೊ' ರಿಯರ್ ಕ್ಯಾಮೆರಾ

ರೆಡ್‌ಮಿ ನೋಟ್ 7 ಪ್ರೊನಲ್ಲಿ 48MP ಪ್ರಾಥಮಿಕ ಸಂವೇದಕ ಮತ್ತು 5 MP ಸೆಕೆಂಡರಿ ಸಂವೇದಕಗಳನ್ನು ನೀಡಲಾಗಿದೆ. 48MP ಕ್ಯಾಮರಾವು ಸೋನಿ IMX586 ಸಂವೇದಕವನ್ನು ಬಳಸುತ್ತಿದ್ದು, ಇದು ಸ್ಮಾರ್ಟ್ಫೋನ್ಗಳಿಗಾಗಿ ಅತ್ಯುನ್ನತ ರೆಸಲ್ಯೂಶನ್ ಸಂವೇದಕವಾಗಿದ್ದು ಉತ್ತಮ ಫೋಟೋಗಳಿಗಾಗಿ 4x ಡೈನಾಮಿಕ್ ಶ್ರೇಣಿಯನ್ನು ಬೆಂಬಲಿಸಲಿದೆ.

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!

'ರೆಡ್‌ಮಿ ನೋಟ್ 7 ಪ್ರೊ' ಕ್ಯಾಮೆರಾ ತಂತ್ರಜ್ಞಾನ!

ರೆಡ್‌ಮಿ ನೋಟ್ 7 ಪ್ರೊ ಸಂವೇದಕವು 4 ಪಿಕ್ಸೆಲ್‌ಗಳನ್ನು 1 ಸೂಪರ್ ಪಿಕ್ಸೆಲ್‌ಗೆ ವಿಲೀನಗೊಳಿಸುವ ಮೂಲ ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಚಿತ್ರಗಳನ್ನು ಚಿತ್ರಿಸಲಿದೆ. ಕೃತಕ ಬುದ್ದಿಮತ್ತೆ ಸಹಾಯದಿಂದ ರಾತ್ರಿ ಸಮಯದಲ್ಲೂ ಛಾಯಾಗ್ರಹಣಕ್ಕೆ ಶಕ್ತವಾಗಿದೆ. AI ಪೋರ್ಟ್ರೇಟ್ 2.0 ಹೊಂದಿರುವ ಕ್ಯಾಮೆರಾ ಬೊಕೆ ಚಿತ್ರಗಳು, 4K ವೀಡಿಯೋ ರೆಕಾರ್ಡಿಂಗ್ ಫೀಚರ್ಸ್ ಹೊಂದಿದೆ

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!

'ರೆಡ್‌ಮಿ ನೋಟ್ 7 ಪ್ರೊ' ಸೆಲ್ಫೀ ಕ್ಯಾಮೆರಾ!

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನಿನಲ್ಲಿ 13 ಎಂಪಿ ಎಐ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಎಐ ಭಾವಚಿತ್ರ ಸೆಲ್ಫಿ, ಸ್ಟುಡಿಯೋ ಲೈಟಿಂಗ್ ಸೆಲ್ಫಿ, ಎಐ ಫೇಸ್ ಅನ್ಲಾಕ್, ಎಐ ಬ್ಯೂಟಿಗಳೊಂದಿಗೆ 13 ಎಂಪಿ ಎಐ ಸೆಲ್ಫ್ ಕ್ಯಾಮರಾ ಅದ್ಬುತವಾಗಿದೆ. ನಿರ್ದಿಷ್ಟ ಆಪ್ಟಿಮೈಸೇಶನ್ಗಳೊಂದಿಗೆ AI ದೃಶ್ಯ ಪತ್ತೆಹಚ್ಚುವಿಕೆ ತಂತ್ರಜ್ಞಾನ ಹೊಂದಿರುವುದು ಇದರ ವಿಶೇಷತೆ.

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಬ್ಯಾಟರಿ

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಪೋನಿನಲ್ಲಿ ಎರಡು ದಿನಗಳ ಬ್ಯಾಟರಿ ಬಾಳಿಕೆ ಬರುವಂತಹ 4000mAh ಸಾಮರ್ಥ್ಯದ ಬಿಗ್ ಬ್ಯಾಟರಿಯನ್ನು ನೀಡಲಾಗಿದೆ. ಇದು ವೇಗವಾಗಿ ಚಾರ್ಜಿಂಗ್ ಆಗಲು ಕ್ವಾಲ್ಕಾಮ್ ಕ್ವಿಕ್ ಚಾರ್ಜ್ 4.0 ಅನ್ನು ಬೆಂಬಲಿಸುತ್ತದೆ ಎಂದು ಶಿಯೋಮಿ ತಿಳಿಸಿದೆ. ಶಿಯೋಮಿ ರೆಡ್‌ಮಿ ನೋಟ್ 6 ನಲ್ಲಿ ಕ್ವಿಕ್ ಚಾರ್ಜ್ 3.0 ತಂದಿದನ್ನು ನಾವಿಲ್ಲಿ ನೋಡಬಹುದು.

'ರೆಡ್‌ಮಿ ನೋಟ್ 7 ಪ್ರೊ' ಬೆಲೆಗಳು

'ರೆಡ್‌ಮಿ ನೋಟ್ 7 ಪ್ರೊ' ಬೆಲೆಗಳು

'ರೆಡ್‌ಮಿ ನೋಟ್ 7 ಪ್ರೊ' ಸ್ಮಾರ್ಟ್‌ಫೋನ್ ಎರಡು ವೆರಿಯಂಟ್‌ಗಳಲ್ಲಿ ಮೊಬೈಲ್ ಮಾರುಕಟ್ಟೆಗೆ ಲಾಂಚ್ ಆಗಿದ್ದು, 4GB RAM ಮತ್ತು 64GB ಆಂತರಿಕ ಮೆಮೊರಿಯನ್ನು ಹೊಂದಿರುವ 'ರೆಡ್‌ಮಿ ನೋಟ್ 7 ಪ್ರೊ' ಫೋನಿನ ಬೆಲೆ 13,999 ರೂ.ಗಳಾಗಿವೆ. ಹಾಗೆಯೇ, 6GB RAM ಮತ್ತು 128GB ಆಂತರಿಕ ಮೆಮೊರಿಯ ನೋಟ್ 7 ಪ್ರೊ ಫೋನ್ ಬೆಲೆ 16,999 ರೂ.ಗಳಾಗಿವೆ.

Best Mobiles in India

English summary
How to Buy Successfully in Xiaomi ₹1 Diwali Flash Sale 2019. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+