ಗೂಗಲ್ ಕ್ರೋಮ್‌ನಲ್ಲಿ ಅಧಿಸೂಚನೆಗಳನ್ನು ನಿಲ್ಲಿಸುವುದು ಹೇಗೆ?

By Shwetha
|

ಆಧುನಿಕ ಬ್ರೌಸರ್‌ಗಳಲ್ಲಿ ಡೆಸ್ಕ್‌ಟಾಪ್ ಅಧಿಸೂಚನೆಗಳು ಅತ್ಯುತ್ತಮ ಫೀಚರ್ ಆಗಿ ಹೊರಹೊಮ್ಮಿದೆ. ಇಮೇಲ್‌ಗಳ ಪೂರ್ವ ವೀಕ್ಷಣೆ, ಫೂಟ್‌ಬಾಲ್ ಸ್ಕೋರ್‌ಗಳು ಮತ್ತು ತ್ವರಿತ ಸಂದೇಶಗಳು ಮತ್ತು ನೀವು ಮಾಡುತ್ತಿರುವ ಕಾರ್ಯದ ತ್ವರಿತ ನೋಟ ನವೀಕರಣಗಳನ್ನು ಪಡೆದುಕೊಳ್ಳಲು ಇವುಗಳು ಸಹಾಯ ಮಾಡುತ್ತವೆ.

ಗೂಗಲ್ ಕ್ರೋಮ್‌ನಲ್ಲಿ ಅಧಿಸೂಚನೆಗಳನ್ನು ನಿಲ್ಲಿಸುವುದು ಹೇಗೆ?

ಇದು ಸ್ಪ್ಯಾಮ್ ಮತ್ತು ಜಾಹೀರಾತುಗಳ ವಿಷಯದಲ್ಲಿ ಕೆಲವೊಮ್ಮೆ ಬಳಕೆದಾರರಿಗೆ ತೊಂದರೆಯನ್ನು ಉಂಟುಮಾಡುವುದು ಸಹಜವಾಗಿದೆ. ಹಾಗಿದ್ದರೆ ಗೂಗಲ್ ಕ್ರೋಮ್ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

1. ಮೊದಲಿಗೆ ಗೂಗಲ್ ಕ್ರೋಮ್ ಸೆಟ್ಟಿಂಗ್‌ಗಳ ಪುಟವನ್ನು ತೆರೆಯಿರಿ. ಬಲಭಾಗದಲ್ಲಿ ಹಮ್‌ಬರ್ಗರ್ ಐಕಾನ್ ಅನ್ನು ಕ್ಲಿಕ್ ಮಾಡಿ
2. ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಶೋ ಅಡ್ವಾನ್ಸ್‌ಡ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ
3.ಪ್ರೈವಸಿ ಅಡಿಯಲ್ಲಿ, ಕಂಟೆಂಟ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ
4.ನೋಟಿಫಿಕೇಶನ್ಸ್‌ಗೆ ಸ್ಕ್ರಾಲ್ ಡೌನ್ ಮಾಡಿ.
5. ಡು ನಾಟ್ ಎಲೌ ಎನಿ ಸೈಟ್ ಟು ಶೋ ಡೆಸ್ಕ್‌ಟಾಪ್ ನೋಟಿಫಿಕೇಶನ್ಸ್ ಆಯ್ಕೆಮಾಡಿ.
6. ನೋಟಿಫಿಕೇಶನ್‌ಗಳನ್ನು ತೋರಿಸಲು ಕೆಲವು ವೆಬ್‌ಸೈಟ್‌ಗಳನ್ನು ಅನುಮತಿಸಿದಲ್ಲಿ ಆಸ್ಕ್ ವೆನ್ ಎ ಸೈಟ್ ವಾಂಟ್ಸ್ ಟು ಶೋ ಡೆಸ್ಕ್‌ಟಾಪ್ ನೋಟಿಫಿಕೇಶನ್ಸ್ ಅನ್ನು ನೀವು ಕ್ಲಿಕ್ ಮಾಡಬಹುದು.
7. ಕ್ಲಿಕ್ ಮ್ಯಾನೇಜ್ ಎಕ್ಸೆಪ್ಶನ್ಸ್ ಅಧಿಸೂಚನೆಗಳಿಗೆ ನೀವು ಅನುಮತಿಯನ್ನು ನೀಡಿರುವ ಸೈಟ್ ಪಟ್ಟಿಯನ್ನು ನೀವಿಲ್ಲಿ ವೀಕ್ಷಿಸಬಹುದು. ಈ ಸೈಟ್‌ಗಳು ಅಧಿಸೂಚನೆಗಳನ್ನು ಕಳುಹಿಸುವುದನ್ನು ನಿಲ್ಲಿಸಲು ಯಾವುದೇ ಯುಆರ್‌ಎಲ್‌ಗಳ ಬಲಭಾಗದಲ್ಲಿ ಎಕ್ಸ್ ಅನ್ನು ಕ್ಲಿಕ್ ಮಾಡಿ.

ಗೂಗಲ್ ಕ್ರೋಮ್‌ನಲ್ಲಿ ಅಧಿಸೂಚನೆಗಳನ್ನು ನಿಲ್ಲಿಸುವುದು ಹೇಗೆ?

ವಿಂಡೋಸ್ 7 ಮತ್ತು 8
1. ವಿಂಡೋಸ್ ಕೀ + ಡಿ ಯನ್ನು ಸ್ಪರ್ಶಿಸಿ ಅಥವಾ ಡೆಸ್ಕ್‌ಟಾಪ್‌ಗೆ ಹೋಗಿ
2. ಪರದೆಯ ಕೆಳ ಬಲಭಾಗದಲ್ಲಿರುವ ಅಧಿಸೂಚನೆಗಳ ಪಟ್ಟಿಯಲ್ಲಿರುವ ಬೆಲ್ ಆಕಾರದ ಕ್ರೋಮ್ ಅಧಿಸೂಚನೆಗಳ ಐಕಾನ್ ಮೇಲೆ ಎಡ ಕ್ಲಿಕ್ ಮಾಡಿ
3.ಗೇರ್ ಐಕಾನ್ ಕ್ಲಿಕ್ ಮಾಡಿ
4.ನಿಮಗೆ ಅಧಿಸೂಚನೆಗಳು ಬೇಡದೇ ಇರುವ ಅಪ್ಲಿಕೇಶನ್‌ಗಳು ಅಥವಾ ವಿಸ್ತರಣೆಗಳನ್ನು ಅನ್‌ಚೆಕ್ ಮಾಡಿ

ಗೂಗಲ್ ಕ್ರೋಮ್‌ನಲ್ಲಿ ಅಧಿಸೂಚನೆಗಳನ್ನು ನಿಲ್ಲಿಸುವುದು ಹೇಗೆ?

ಮ್ಯಾಕ್
1. ಸಿಸ್ಟಮ್ ಮೆನು ಬಾರ್‌ನಲ್ಲಿ, ಬೆಲ್ ಐಕಾನ್ ಕ್ಲಿಕ್ ಮಾಡಿ
2. ಗೇರ್ ಐಕಾನ್ ಕ್ಲಿಕ್ ಮಾಡಿ
3. ನಿಮಗೆ ಅಧಿಸೂಚನೆಗಳು ಬೇಡದೇ ಇರುವ ಅಪ್ಲಿಕೇಶನ್‌ಗಳು ಅಥವಾ ವಿಸ್ತರಣೆಗಳನ್ನು ಅನ್‌ಚೆಕ್ ಮಾಡಿ

Best Mobiles in India

English summary
This article tells about YOU ARE HERE:Gadgets HomeAppsApps Features How to Disable Notifications in Google Chrome.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X