Just In
Don't Miss
- News
ಭಾರತ-ಪಾಕಿಸ್ತಾನದಂತೆ ನಾನು ಸಿದ್ದರಾಮಯ್ಯ ಶತ್ರುಗಳಲ್ಲ: ಎಚ್ ವಿಶ್ವನಾಥ್
- Automobiles
ರೈತರ ಬೆಳೆ ರಕ್ಷಣೆಗಾಗಿ ಉಪಗ್ರಹ ತಯಾರಿಸಲು ಮುಂದಾದ ಯುವಕರು
- Sports
ಅಂಡರ್ಟೇಕರ್ vs ಬ್ರಾಕ್ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ
- Finance
ಚಿನ್ನದ ಮೇಲೆ ಹೂಡಿಕೆ ಮಾಡಲು ಬೊಂಬಾಟ್ ಐಡಿಯಾಗಳು
- Education
IAF ನೇಮಕಾತಿ: ದ್ವಿತೀಯ ಪಿಯುಸಿ ಪಾಸ್ ?... ತಿಂಗಳಿಗೆ 33,000/-ರೂ ವೇತನ ಪಡೆಯುವ ಅವಕಾಶ
- Lifestyle
ಮೇಕಪ್ ಹಚ್ಚಿದಾಗ ಎಂದಿಗೂ ಈ ಕೆಲಸಗಳನ್ನು ಮಾಡಲೇಬೇಡಿ
- Movies
ಕೆಜಿಎಫ್ ಚಾಪ್ಟರ್ 2 ಫಸ್ಟ್ ಲುಕ್ ಬಗ್ಗೆ ಸಂಜಯ್ ದತ್ ಹೇಳಿದ್ದೇನು?
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಯೂಟ್ಯೂಬ್ ಹಿಸ್ಟರಿ ಆಟೋ ಡಿಲೀಟ್ ಮಾಡೋದು ಹೇಗೆ..? ಇಲ್ಲಿದೆ ಸಿಂಪಲ್ ಟಿಪ್ಸ್..!
ತನ್ನ ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿಡಲು ಹಲವು ಪ್ರಯತ್ನಗಳನ್ನು ಸರ್ಚ್ ಇಂಜಿನ್ ದೈತ್ಯ ಗೂಗಲ್ ಮುಂದುವರಿಸಿದೆ. ಈ ಪ್ರಯತ್ನದ ಭಾಗವಾಗಿ ಯೂಟ್ಯೂಬ್‌ನಲ್ಲಿ ಹೊಸ ಫೀಚರ್ ಒಂದನ್ನು ಬಳಕೆದಾರರಿಗೆ ಪರಿಚಯಿಸಿದೆ. ಹೌದು, ಗೂಗಲ್‌ನ ಹೊಸ ಫೀಚರ್ ಬಳಕೆದಾರರಿಗೆ ತಮ್ಮ ಯೂಟ್ಯೂಬ್ ಇತಿಹಾಸವನ್ನು ಸ್ವಯಂಚಾಲಿತವಾಗಿ ಅಳಿಸಲು ಅನುವು ಮಾಡಿಕೊಡುತ್ತದೆ.

ಗೂಗಲ್ ಈ ಹಿಂದೆ ಲೊಕೆಷನ್ ಹಿಸ್ಟರಿ ಮತ್ತು ವೆಬ್ ಹಾಗೂ ಆಪ್ ಚಟುವಟಿಕೆಗಳಲಿಗೆ ಈ ಫೀಚರ್‌ನ್ನು ಮೇ ತಿಂಗಳಿನಲ್ಲಿ ಸಕ್ರಿಯಗೊಳಿಸಿತ್ತು. ಗೂಗಲ್ ತನ್ನ ಬಳಕೆದಾರರಿಗೆ ತಮ್ಮ ಯೂಟ್ಯೂಬ್ ಡೇಟಾವನ್ನು ಸಂಗ್ರಹಿಸುವ ಸಮಯದಲ್ಲಿ ಮೂರು ಆಯ್ಕೆಗಳನ್ನು ನೀಡುತ್ತಿದ್ದು, ಹೊಸ ಫೀಚರ್ ಬಳಸಲು ಮುಂದಿನ ಹಂತಗಳನ್ನು ಅನುಸರಿಸಿ.

ಸೆಟ್ಟಿಂಗ್ ಒಪನ್ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ಸ್ ಒಪನ್ ಮಾಡಿ, ಗೂಗಲ್‌ಗೆ ಮುಂದುವರೆಯಿರಿ. ನಂತರ ಗೂಗಲ್ ಅಕೌಂಟ್ ಆಯ್ಕೆ ಮೇಲೆ ಟ್ಯಾಪ್ ಮಾಡಿ.

ಡೇಟಾ ಆಯ್ಕೆಗೆ ಹೋಗಿ
ಗೂಗಲ್ ಅಕೌಂಟ್ ಮೇಲೆ ಟ್ಯಾಪ್ ಮಾಡಿದ ನಂತರ ಡೇಟಾ ಹಾಗೂ ವೈಯುಕ್ತೀಕರಣ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಯೂಟ್ಯೂಬ್ ಹಿಸ್ಟರಿ ಆಯ್ಕೆಯನ್ನು ಟ್ಯಾಪ್ ಮಾಡಿ. ನಂತರ ಅಲ್ಲಿರುವ ಮ್ಯಾನೇಜ್ ಆಕ್ಟಿವಿಟಿಯನ್ನು ಆಯ್ಕೆ ಮಾಡಿ.

ವೆಬ್‌ಗೆ ರಿಡೈರೆಕ್ಟ್
ಬಳಿಕ, ವೆಬ್ ಪೇಜ್‌ಗೆ ರಿಡೈರೆಕ್ಟ್ ಮಾಡಿ ಗೂಗಲ್‌ನ ಮೈ ಆಕ್ಟಿವಿಟಿ ಪೇಜ್‌ನ್ನು ಒಪನ್ ಮಾಡುತ್ತದೆ. ಅಲ್ಲಿ, ಮೊದಲೇ ಯೂಟ್ಯೂಬ್ ಹಿಸ್ಟರಿ ಆನ್ ಆಗಿರುತ್ತದೆ. ಇದನ್ನು ಬದಲಾಯಿಸಲು ಚೂಸ್ ಟೂ ಡಿಲೀಟ್ ಆಟೋಮ್ಯಾಟಿಕಲಿ (ಸ್ವಯಂಚಾಲಿತವಾಗಿ ಡಿಲೀಟ್ ಮಾಡಿ) ಆಯ್ಕೆಯನ್ನು ಕ್ಲಿಕ್ ಮಾಡಿ.

ಅವಧಿ ಆಯ್ಕೆ ಮಾಡಿ
ಸ್ವಯಂಚಾಲಿತವಾಗಿ ಡಿಲೀಟ್ ಮಾಡಿ ಆಯ್ಕೆ ಕ್ಲಿಕ್ ಮಾಡಿದ ನಂತರ ನಿಮಗೆ ಮೂರು ಆಯ್ಕೆಗಳು ದೊರೆಯುತ್ತವೆ. ಮ್ಯಾನುವಲ್ ಆಗಿ ಡಿಲೀಟ್ ಮಾಡುವವರೆಗೂ ಇರಲಿ, 18 ತಿಂಗಳವರೆಗೆ ಇರಲಿ ಮತ್ತು ಮೂರು ತಿಂಗಳವರೆಗೆ ಇರಲಿ ಎಂಬ ಆಯ್ಕೆಗಳು ಸಿಗುತ್ತವೆ. ನಿಮಗೆ ಬೇಕಾದ ಆಯ್ಕೆ ಕ್ಲಿಕ್ ಮಾಡಿ. ಇಷ್ಟೇ ಅಲ್ಲದೇ ಆ ಕ್ಷಣವೂ ಕೂಡ ಹಿಸ್ಟರಿ ಡಿಲೀಟ್ ಮಾಡುವ ಆಯ್ಕೆಯನ್ನು ಗೂಗಲ್ ನೀಡುತ್ತಿದೆ.

ವೆಬ್‌ನಲ್ಲಿ ಹೇಗೆ ಅಂತಿರಾ..?
ಮೇಲಿನ ಹಂತಗಳು ಆಪ್‌ನಲ್ಲಿ ಕಾರ್ಯನಿರ್ವಹಿಸಿದರೆ, ವೆಬ್‌ನಲ್ಲಿ ಹಿಸ್ಟರಿ ಡಿಲೀಟ್ ಮಾಡಲು ಹೀಗೆ ಮಾಡಬೇಕು. ಮೊದಲು https://myactivity.google.com/activitycontrols/youtube ಈ ಲಿಂಕ್ ಕ್ಲಿಕ್ ಮಾಡಿ.
ನಂತರ ಕೀಪಿಂಗ್ ಆಕ್ಟಿವಿಟಿ ಅನ್‌ಟಿಲ್ ಯೂ ಡಿಲೀಟ್ ಮ್ಯಾನುವಲಿ ಆಯ್ಕೆಯನ್ನು ಕ್ಲಿಕ್ ಮಾಡಿ. ಅದರಲ್ಲಿ, ಚೂಸ್ ಟೂ ಡಿಲೀಟ್ ಆಟೋಮ್ಯಾಟಿಕಲಿ ಆಯ್ಕೆಯನ್ನ ಟ್ಯಾಪ್ ಮಾಡಿ. ಬಳಿಕ ನಿಮ್ಮ ಆದ್ಯತೆಯನ್ನು ಆಯ್ದುಕೊಂಡು, ನೆಕ್ಸ್ಟ್ ಬಟನ್ ಕ್ಲಿಕ್ ಮಾಡಿ, ನಂತರ ಖಚಿತಪಡಿಸಿದರೆ ನಿಮ್ಮ ಆದ್ಯತೆಗಳು ಸೇವ್ ಆಗುತ್ತವೆ.
-
22,990
-
29,999
-
14,999
-
28,999
-
34,999
-
1,09,894
-
15,999
-
36,591
-
79,999
-
71,990
-
14,999
-
9,999
-
64,900
-
34,999
-
15,999
-
25,999
-
46,669
-
19,999
-
17,999
-
9,999
-
22,160
-
18,200
-
18,270
-
22,300
-
32,990
-
33,530
-
14,030
-
6,990
-
20,340
-
12,790