Home
ಟೆಕ್ ನೌಕರಿ

ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಸೇರಿಸಿ ಸೆಂಡ್ ಮಾಡಲು ಅವಕಾಶ ನೀಡುವ ಜಿಮೇಲ್

By Gizbot Bureau

2019 ನೇ ಇಸವಿ ಅಂತ್ಯಗೊಳ್ಳುವ ಮುನ್ನ ಜಿಮೇಲ್ ಮತ್ತೊಂದು ದೊಡ್ಡ ಅಪ್ ಡೇಟ್ ಪಡೆಯುವುದಕ್ಕೆ ಸಜ್ಜಾಗುತ್ತಿದೆ.ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಅಟ್ಯಾಚ್ ಮಾಡಿ ಇತರರು ಓದುವುದಕ್ಕೆ ಅವಕಾಶ ನೀಡುವಂತಹ ಫೀಚರ್ ವೊಂದನ್ನು ಬಿಡುಗಡೆಗೊಳಿಸುವುದಕ್ಕೆ ಸರ್ಚ್ ದೈತ್ಯ ಜಿಮೇಲ್ ಸಜ್ಜಾಗುತ್ತಿದೆ.

ಆಫ್ ಲೈನ್

ಈ ಮೊದಲು ಬಳಕೆದಾರರು ಆಫ್ ಲೈನ್ ನಲ್ಲಿ ಇಮೇಲ್ ನ್ನು ಡೌನ್ ಲೋಡ್ ಮಾಡಬೇಕಿತ್ತು ಮತ್ತು ಇತರರಿಗೆ ಕಳುಹಿಸುವುದಕ್ಕೆ ಅಟ್ಯಾಚ್ ಮಾಡಬೇಕಿತ್ತು. ಇದೀಗ ಜಿಮೇಲ್ ಡೌನ್ ಲೋಡ್ ಮಾಡುವ ಹಂತವನ್ನು ಅಳಿಸಿ ಹಾಕುತ್ತಿದೆ ಮತ್ತು ಇಮೇಲ್ ನ್ನು ಅಟ್ಯಾಚ್ ಮೆಂಟ್ ಆಗಿ ಹಂಚಿಕೊಳ್ಳುವುದನ್ನು ಸರಳಗೊಳಿಸಿದೆ.

ಇಮೇಲ್

"ಇಮೇಲ್ ನ್ನು ಫಾರ್ವರ್ಡ್ ಮಾಡುವುದಕ್ಕಿಂತ ಅಟ್ಯಾಚ್ ಮಾಡಿ ಕಳುಹಿಸುವ ಸಂದರ್ಬದಲ್ಲಿ ಹೆಚ್ಚು ಅಗತ್ಯವಿದೆ ಎಂಬ ಬಗ್ಗೆ ನಾವು ಕೇಳಿದ್ದೇವೆ. ಒಂದೇ ವಿಚಾರಕ್ಕೆ ಸಂಬಂಧಪಟ್ಟ ಹಲವು ಇಮೇಲ್ ಗಳನ್ನು ಒಂದೇ ಇಮೇಲ್ ನಲ್ಲಿ ಅಟ್ಯಾಚ್ ಮಾಡಿ ಕಳುಹಿಸುವ ಸಂದರ್ಬದ ಬಗ್ಗೆ ನಾವು ಕೇಳಿದ್ದೇವೆ. ಈಗ ಪರಿಚಯಿಸಲಾಗುತ್ತಿರುವ ಹೊಸ ವೈಶಿಷ್ಟ್ಯತೆಯ ಅನುಸಾರ ನೀವು ಈ ಕೆಲಸವನ್ನು ಸುಲಭದಲ್ಲಿ ಮಾಡಬಹುದು. ಇಮೇಲ್ ಅಟ್ಯಾಚ್ ಮೆಂಟಿನ ಇಮೇಲ್ ನ್ನು ಕಳುಹಿಸುವಾಗ ಅದಕ್ಕೆ ಸಂಬಂಧಪಟ್ಟ ಸಮ್ಮರಿಯನ್ನು ಬರೆಯುವುದಕ್ಕೂ ಕೂಡ ಅವಕಾಶವಿರುತ್ತದೆ. ಮತ್ತು ಈ ರೀತಿಯ ಅಟ್ಯಾಚ್ ಮೆಂಟ್ ಇಮೇಲ್ ಗಳನ್ನು ಸಿಂಗಲ್ ಇಮೇಲ್ ನಲ್ಲಿ ರಿಸೀವ್ ಮಾಡಿರುವ ವ್ಯಕ್ತಿಯು ತಮ್ಮ ಇಮೇಲ್ ನ್ನು ನೇರವಾಗಿ ತೆರೆಯುವುದಕ್ಕೆ ಸಾಧ್ಯವಾಗುತ್ತದೆ." ಎಂದು ಜಿ ಸ್ಯೂಟ್ ಬ್ಲಾಗ್ ಪೋಸ್ಟ್ ನಲ್ಲಿ ಹೇಳಲಾಗಿದೆ.

ಬಳಕೆದಾರರು ಒಂದೇ ಮೇಲ್ ನಲ್ಲಿ ಮಲ್ಟಿಪಲ್ ಇಮೇಲ್ ನ್ನು ಅಟ್ಯಾಚ್ ಮಾಡುವುದು ಹೇಗೆ ಎಂಬುದಕ್ಕೆ ಎರಡು ಮಾರ್ಗಗಳಿವೆ.

ಮೊದಲನೆ ವಿಧಾನ:

ಮೊದಲನೆ ವಿಧಾನ:

ಹಂತ 1: ಜಿಮೇಲ್ ಇನ್ ಬಾಕ್ಸ್ ನಲ್ಲಿ ಹೊಸ ಮೇಲ್ ನ್ನು ಕ್ರಿಯೇಟ್ ಮಾಡಿ

ಹಂತ 2: ಮಲ್ಟಿಪಲ್ ಇಮೇಲ್ ಗಳನ್ನು ಪ್ರತಿ ಇಮೇಲಿನ ಪಕ್ಕದಲ್ಲಿರುವ ಬಾಕ್ಸ್ ನ್ನು ಕ್ಲಿಕ್ಕಿಸುವ ಮೂಲಕ ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 3: ಇಮೇಲ್ ಕಂಪೋಸ್ ಬಾಕ್ಸ್ ನಲ್ಲಿ ಡ್ರ್ಯಾಗ್ ಮತ್ತು ಡ್ರಾಪ್ ಮಾಡಿ.

ಹಂತ 4:ರೆಗ್ಯುಲರ್ ಅಟ್ಯಾಚ್ ಮೆಂಟ್ ಗಳಂತೆಯೇ ಈ ಇಮೇಲ್ ಗಳು ಕೂಡ ಸೇರಿಸಲ್ಪಡುತ್ತದೆ.

ಎರಡನೇ ವಿಧಾನ:

ಎರಡನೇ ವಿಧಾನ:

ಹಂತ 1:ಜಿಮೇಲ್ ಇನ್ ಬಾಕ್ಸ್ ನಲ್ಲಿ ನೀವು ಇತರರಿಗೆ ಕಳುಹಿಸಬೇಕು ಎಂದುಕೊಳ್ಳುವ ಇಮೇಲ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಿ.

ಹಂತ 2: ಒಮ್ಮೆ ಸೆಲೆಕ್ಟ್ ಆದ ನಂತರ ಮೇಲ್ಬಾಗದಲ್ಲಿರುವ ಮೆನುವಿನ ಓವರ್ ಫ್ಲೋ(ಮೂರು ಚುಕ್ಕಿಗಳು)ವನ್ನು ಕ್ಲಿಕ್ಕಿಸಿ.

ಹಂತ 3: ‘Forward as attachment' ಆಯ್ಕೆಯನ್ನು ಕ್ಲಿಕ್ಕಿಸಿ

ಬ್ಲಾಗ್

ಒಂದು ವೇಳೆ ನೀವು ಇಮೇಲ್ ಗಳನ್ನು ರಿಪ್ಲೇ ಇಮೇಲ್ ನಲ್ಲಿ ಅಟ್ಯಾಚ್ ಮಾಡುವುದಕ್ಕೆ ಬಯಸಿದ್ದೇ ಆದಲ್ಲಿ ಸರಳವಾಗಿ ಸಣ್ಣದಾಗಿರುವ ‘Pop out reply' ನ್ನು ರಿಪ್ಲೇ ಇಮೇಲ್ ನಲ್ಲಿ ಕ್ಲಿಕ್ ಮಾಡಿದರೆ ಆಯ್ತು. ಈ ಬಾಕ್ಸ್ ಬಲಭಾಗದ ಕಾರ್ನರ್ ನಲ್ಲಿರುತ್ತದೆ. ಇದನ್ನು ಕ್ಲಿಕ್ಕಿಸುವುದರಿಂದಾಗಿ ಸ್ವತಂತ್ರ ಬಾಕ್ಸ್ ಆಗಿ ತೆರೆಯುತ್ತದೆ ಮತ್ತು ಅದಕ್ಕೆ ನೀವು ಇಮೇಲ್ ಗಳನ್ನು ಡ್ರ್ಯಾಗ್ ಎಂಡ್ ಡ್ರಾಪ್ ಮಾಡಬಹುದು.

ಬ್ಲಾಗ್ ಪೋಸ್ಟ್ ನಲ್ಲಿ ಹೇಳಲಾಗಿರುವ ಪ್ರಕಾರ ಇಮೇಲ್ ಗಳು ಅಟ್ಯಾಚ್ ಆದಾಗ ಅವುಗಳು .eml ಫೈಲ್ ಗಳಾಗಿ ಬದಲಾಗುತ್ತದೆ. ಬಳಕೆದಾರರು ತಮಗೆ ಇಷ್ಟ ಬಂದಷ್ಟು ಇಮೇಲ್ ಗಳನ್ನು ಅಟ್ಯಾಚ್ ಮಾಡುವುದಕ್ಕೆ ಅವಕಾಶವಿರುತ್ತದೆ. ಸದ್ಯಕ್ಕೆ ಯಾವುದೇ ಲಿಮಿಟ್ ಇರುವುದಿಲ್ಲ. ಅಟ್ಯಾಚ್ ಮಾಡಲಾಗಿರುವ ಇಮೇಲ್ ನ್ನು ಕ್ಲಿಕ್ ಮಾಡಿದಾಗ ಅದು ಹೊಸ ವಿಂಡೋದಲ್ಲಿ ತೆರೆಯಲ್ಪಡುತ್ತದೆ. ಈ ಫೀಚರ್ ಡೀಫಾಲ್ಟ್ ಆಗಿ ಸ್ವಿಚ್ ಆನ್ ಆಗುತ್ತದೆ.

ಗೂಗಲ್

ಗೂಗಲ್ ಹೇಳುವ ಪ್ರಕಾರ ಜಿಮೇಲಿನ ಈ ಫೀಚರ್ ಡಿಸೆಂಬರ್ 9,2019 ರಿಂದ ಎಲ್ಲರಿಗೂ ಲಭ್ಯವಾಗಿದೆ. ಮೇಲ್ಬಾಗದ ಮೆನುವಿನಲ್ಲಿರುವ ಓವರ್ ಫ್ಲೋ(ಮೂರು ಚುಕ್ಕಿಗಳು) ಕ್ಲಿಕ್ಕಿಸುವ ಮೂಲಕ ಈ ಫೀಚರ್ ಲಭ್ಯವಿದೆಯಾ ಇಲ್ವಾ ಎಂಬುದನ್ನು ಪರೀಕ್ಷಿಸಬಹುದು ಮತ್ತು ‘Forward as attachment' ಆಯ್ಕೆಯನ್ನೂ ಚೆಕ್ ಮಾಡಬಹುದು.

ಒಟ್ಟಿನಲ್ಲಿ ಇದೀಗ ಒಂದೇ ಟಾಪಿಕ್ ಗೆ ಸಂಬಂಧಪಟ್ಟ ಹಲವು ಇಮೇಲ್ ಗಳನ್ನು ಒಂದೊಂದೇ ಸಪರೇಟ್ ಆಗಿ ಫಾರ್ವರ್ಡ್ ಮಾಡುವ ಅಗತ್ಯವಿಲ್ಲ.ಎಲ್ಲಾ ಇಮೇಲ್ ಗಳನ್ನು ಒಂದರಲ್ಲೇ ಸೇರಿಸಿ ಕಳುಹಿಸುವುದಕ್ಕೆ ಜಿಮೇಲ್ ಅವಕಾಶ ಮಾಡಿಕೊಡುತ್ತಿದೆ.

Best Mobiles in India

English summary
You Can Now Send Multiple Email Attachments On Gmail
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+