ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ನ್ನು ರಿಕವರ್ ಮಾಡುವುದು ಹೇಗೆ?

By Gizbot Bureau
|

ನೀವು ಯಾವತ್ತಾದರೂ ನಿಮ್ಮ ವಾಟ್ಸ್ ಆಪ್ ಮೆಸೇಜ್ ನ್ನು ಅಚಾನಕ್ ಆಗಿ ಡಿಲೀಟ್ ಮಾಡಿಕೊಂಡು ಬಿಟ್ಟಿದ್ದೀರಾ? ಪುನಃ ಆ ಮೆಸೇಜ್ ಗಳು ಬೇಕು ಎಂದು ಬಯಸಿದ್ದೀರಾ? ಆದರೆ ಡಿಲೀಟ್ ಮಾಡಿರುವ ಮೆಸೇಜ್ ನ್ನು ಪುನಃ ಪಡೆಯುವುದು ಹೇಗೆ ಎಂಬ ಬಗ್ಗೆ ನಿಮಗೆ ತಿಳಿದಿಲ್ಲವೇ? ಚಿಂತಿಸಬೇಡಿ. ನಾವಿಲ್ಲಿ ನಿಮಗೆ ಆ ವಿಧಾನವನ್ನೇ ಹೇಳಿಕೊಡುತ್ತಿದ್ದೇವೆ.

ಐಕ್ಲೌಡ್ ಅಥವಾ ಗೂಗಲ್ ಡ್ರೈವ್ ಬ್ಯಾಕ್ ಅಪ್

ಐಕ್ಲೌಡ್ ಅಥವಾ ಗೂಗಲ್ ಡ್ರೈವ್ ಬ್ಯಾಕ್ ಅಪ್ ಮೂಲಕ ಹೇಗೆ ನೀವು ವಾಟ್ಸ್ ಆಪ್ ನಲ್ಲಿ ಡಿಲೀಟ್ ಮಾಡಿರುವ ಮೆಸೇಜ್ ನ್ನು ಪುನಃ ಪಡೆದುಕೊಳ್ಳಬಹುದು ಎಂಬ ಬಗ್ಗೆ ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ಈ ಹಂತಗಳನ್ನು ಅನುಸರಿಸುವ ಮುನ್ನ ನೀವು ವಾಟ್ಸ್ ಆಪ್ ನಲ್ಲಿ ಬ್ಯಾಕ್ ಅಪ್ ಆಯ್ಕೆಯು ಆನ್ ಆಗಿದ್ದಲ್ಲಿ ಮಾತ್ರವೇ ಈ ರೀಸ್ಟೋರ್ ವಿಧಾನವನ್ನು ಅನುಸರಿಸಿದರೆ ನಿಮ್ಮ ವಾಟ್ಸ್ ಆಪ್ ಚಾಟ್ ಗಳು ಪುನಃ ಲಭ್ಯವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.ಒಂದು ವೇಳೆ ನೀವು ನಿಮ್ಮ ಚಾಟ್ ನ್ನು ಯಾವತ್ತೂ ಕೂಡ ಬ್ಯಾಕ್ ಅಪ್ ತೆಗೆದಿಟ್ಟುಕೊಳ್ಳದೇ ಇದ್ದಲ್ಲಿ ನೀವು ಯಾವುದೇ ಕಾರಣಕ್ಕೂ ನಿಮ್ಮ ವಾಟ್ಸ್ ಆಪ್ ಚಾಟ್ ಗಳನ್ನು ಅಥವಾ ಮೆಸೇಜ್ ಗಳನ್ನು ಡಿಲೀಟ್ ಮಾಡಿದ ನಂತರ ರಿಕವರ್ ಮಾಡಿ ಮರಳಿ ಪಡೆಯುವುದಕ್ಕೆ ಸಾಧ್ಯವಿಲ್ಲ.

ಇನ್ಸ್ಟಾಲ್

ಈ ಹಂತಗಳನ್ನು ಅನುಸರಿಸುವಾಗ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾಗಿರುವ ಇನ್ನೊಂದು ಪ್ರಮುಖ ಅಂಶವೇನೆಂದರೆ ಇದರಲ್ಲಿ ನೀವು ವಾಟ್ಸ್ ಆಪ್ ನ್ನು ಅನ್ ಇನ್ಸ್ಟಾಲ್ ಮಾಡಿ ಪುನಃ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಅನ್ ಇನ್ಸ್ಟಾಲ್ ಮತ್ತು ಪುನಃ ಇನ್ಸ್ಟಾಲೇಷನ್ ಮಾಡಬೇಕಿರುವ ಈ ಸಂದರ್ಬದಲ್ಲಿ ಯಾರಾದರೂ ನಿಮಗೆ ವಾಟ್ಸ್ ಆಪ್ ಮೆಸೇಜ್ ಮಾಡಿದ್ದಲ್ಲಿ ಅದನ್ನು ನೀವು ರಿಸೀವ್ ಮಾಡದೇ ಇರುವ ಸಾಧ್ಯತೆ ಇರುತ್ತದೆ. ಕೆಲವು ನಿಮ್ಮದೇ ರಿಸ್ಕ್ ನ್ನು ನೀವು ತೆಗೆದುಕೊಳ್ಳಬೇಕಾಗುತ್ತದೆ.

ಚಾಟ್ ಬ್ಯಾಕ್ ಅಪ್ ನ್ನು ವಾಟ್ಸ್ ಆಪ್ ನಲ್ಲಿ ಆನ್ ಮಾಡುವುದಕ್ಕಾಗಿ ಮೊದಲಿಗೆ ಈ ಹಂತಗಳನ್ನು ಅನುಸರಿಸಿ.

ವಾಟ್ಸ್ ಆಪ್ ನ್ನು ತೆರೆಯಿರಿ>ಸೆಟ್ಟಿಂಗ್ಸ್ ಗೆ ತೆರಳಿ> ಚಾಟ್ಸ್ ಗೆ ತೆರಳಿ> ಚಾಟ್ ಬ್ಯಾಕ್ ಅಪ್ ನ್ನು ಟ್ಯಾಪ್ ಮಾಡಿ. ಇಲ್ಲಿ ನೀವು ಚಾಟ್ ಫ್ರೀಕ್ವೆನ್ಸಿಯನ್ನು ಸೆಟ್ ಮಾಡಬಹುದು. ಯಾವಾಗಲೂ ಬೇಡ, ಪ್ರತಿದಿನ, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಅಥವಾ ಮ್ಯಾನುವಲ್ ಬ್ಯಾಕ್ ಅಪ್ ಮಾಡುವುದಕ್ಕೂ ಅವಕಾಶವಿರುತ್ತದೆ.ಒಂದು ವೇಳೆ ನಿಮ್ಮ ಬಳಿ ಆಂಡ್ರಾಯ್ಡ್ ಫೋನ್ ಇದ್ದಲ್ಲಿ ಹೆಚ್ಚುವರಿಯಾಗಿ ನೀವು ಗೂಗಲ್ ಅಕೌಂಟ್ ನಲ್ಲಿ ಸ್ಟೋರ್ ಮಾಡಿಟ್ಟುಕೊಳ್ಳುವುದಕ್ಕೂ ಕೂಡ ಅವಕಾಶವಿರುತ್ತದೆ.

ವಾಟ್ಸ್ ಆಪ್

ಒಂದು ವೇಳೆ ನೀವು ಐಫೋನ್ ಬಳಕೆದಾರರಾಗಿದ್ದಲ್ಲಿ ವಾಟ್ಸ್ ಆಪ್ ನಲ್ಲಿ ಸೆಟ್ಟಿಂಗ್ಸ್ ಗೆ ತೆರಳಿ > ಚಾಟ್ಸ್> ಚಾಟ್ ಬ್ಯಾಕ್ ಅಪ್ ಗೆ ತೆರಳಿ. ಇಲ್ಲಿ ನೀವು ಆಟೋ ಬ್ಯಾಕ್ ಅಪ್ ಫ್ರೀಕ್ವೆನ್ಸಿಯನ್ನು ಕೂಡ ಸೆಲೆಕ್ಟ್ ಮಾಡಬಹುದು ಅಥವಾ ಬ್ಯಾಕ್ ಅಪ್ ನೌ ನ್ನು ಮ್ಯಾನುವಲಿ ಮಾಡಿ ಐಕ್ಲೌಡ್ ಗೆ ಬ್ಯಾಕ್ ಅಪ್ ಆಗುವಂತೆ ಮಾಡಬಹುದು.

ವಾಟ್ಸ್ ಆಪ್ ನಲ್ಲಿ ಡಿಲೀಟ್ ಆಗಿರುವ ಚಾಟ್ ನ್ನು ರೀಸ್ಟೋರ್ ಮಾಡುವುದು ಹೇಗೆ?

ಬೇರೆಬೇರೆ ವಿಧಾನಗಳಿಂದ ವಾಟ್ಸ್ ಆಪ್ ಮೆಸೇಜ್ ಗಳನ್ನು ರೀಸ್ಟೋರ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕ್ಲೌಡ್ ಬ್ಯಾಕ್ ಅಪ್ ಬಳಸಿ ಡಿಲೀಟ್ ಆಗಿರುವ ವಾಟ್ಸ್ ಆಪ್ ಚಾಟ್ ಗಳನ್ನು ರೀಸ್ಟೋರ್ ಮಾಡುವುದು:

ಕ್ಲೌಡ್ ಬ್ಯಾಕ್ ಅಪ್ ಬಳಸಿ ಡಿಲೀಟ್ ಆಗಿರುವ ವಾಟ್ಸ್ ಆಪ್ ಚಾಟ್ ಗಳನ್ನು ರೀಸ್ಟೋರ್ ಮಾಡುವುದು:

ಅಚಾನಕ್ ಆಗಿ ನೀವು ಚಾಟ್ ನ್ನು ಡಿಲೀಟ್ ಮಾಡಿದರೆ ಕ್ಲೌಡ್ ಬ್ಯಾಕ್ ಅಪ್ ನಲ್ಲಿ ನಿಮ್ಮ ಮೆಸೇಜ್ ಗಳಿರುವ ಸಾಧ್ಯತೆಗಳಿರುತ್ತದೆ. ಗೂಗಲ್ ಡ್ರೈವ್ ಅಥವಾ ಐಕ್ಲೌಡ್ ಬ್ಯಾಕ್ ಅಪ್ ಮಧ್ಯರಾತ್ರಿ ನಡೆಯುತ್ತದೆ. ಒಂದು ವೇಳೆ ನೀವು ಹಗಲಿನಲ್ಲಿ ಅಚಾನಕ್ ಆಗಿ ಯಾವುದೇ ಮೆಸೇಜ್ ಡಿಲೀಟ್ ಮಾಡಿಕೊಂಡಿದ್ದಲ್ಲಿ ಕ್ಲೌಡ್ ಬ್ಯಾಕ್ ಅಪ್ ನಲ್ಲಿ ಚಾಟ್ ಗಳು ಇರುವ ಸಾಧ್ಯತೆ ಇದೆ. ಹಾಗಾಗಿ ನೀವು ರಿಸ್ಟೋರ್ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

1. ನಿಮ್ಮ ಐಫೋನ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಿಂದ ವಾಟ್ಸ್ ಆಪ್ ನ್ನು ಅನ್ ಇನ್ಸ್ಟಾಲ್ ಮಾಡಿ.

2. ವಾಟ್ಸ್ ಆಪ್ ನ್ನು ರಿಇನ್ಸ್ಟಾಲ್ ಮಾಡಿ ಮತ್ತು ನಿಮ್ಮ ಫೋನ್ ನಂಬರ್ ನಿಂದ ಸೆಟ್ ಅಪ್ ಮಾಡಿ.

3. ಆಪ್ ಒಮ್ಮೆ ಸೆಟ್ ಅಪ್ ಆದ ನಂತರ ಕ್ಲೌಡ್ ಬ್ಯಾಕ್ ಅಪ್ ನಿಂದ ಮೆಸೇಜ್ ಗಳನ್ನು ರೀಸ್ಟೋರ್ ಮಾಡುವುದಕ್ಕೆ ಪ್ರಾಮ್ಟ್ ಬರುತ್ತದೆ. ಈ ಬ್ಯಾಕ್ ಅಪ್ ಆಂಡ್ರಾಯ್ಡ್ ನಲ್ಲಿ ಗೂಗಲ್ ಡ್ರೈವ್ ನಿಂದ ಮತ್ತು ಐಓಎಸ್ ನಲ್ಲಿ ಐಕ್ಲೌಡ್ ನಿಂದ ಆಗುತ್ತದೆ. ರೀಸ್ಟೋರ್ ನ್ನು ಟ್ಯಾಪ್ ಮಾಡಿ.

4. ನೀವು ಅಚಾನಕ್ ಆಗಿ ಡಿಲೀಟ್ ಮಾಡಿರುವ ಮೆಸೇಜ್ ಗಳು ಈ ಮೂಲಕ ಪುನಃ ಲಭ್ಯವಾಗುತ್ತದೆ. ಆದರೆ ಇತ್ತೀಚೆಗಷ್ಟೇ ಕ್ಲೌಡ್ ಬ್ಯಾಕ್ ಅಪ್ ಮಾಡಿದ್ದರೆ ಮತ್ತು ಡಿಲೀಟ್ ಮಾಡಿದ್ದಲ್ಲಿ, ರಿಕವರ್ ಮಾಡುವುದಕ್ಕೆ ಯಾವುದೇ ಆಯ್ಕೆಗಳಿಲ್ಲ.

ಆಂಡ್ರಾಯ್ಡ್ ನ ಲೋಕಲ್ ಬ್ಯಾಕ್ ಅಪ್ ಬಳಸಿ ಡಿಲೀಟ್ ಆಗಿರುವ ವಾಟ್ಸ್ ಆಪ್ ಚಾಟ್ ಗಳನ್ನು ರಿಸ್ಟೋರ್ ಮಾಡುವುದು:

ಆಂಡ್ರಾಯ್ಡ್ ನ ಲೋಕಲ್ ಬ್ಯಾಕ್ ಅಪ್ ಬಳಸಿ ಡಿಲೀಟ್ ಆಗಿರುವ ವಾಟ್ಸ್ ಆಪ್ ಚಾಟ್ ಗಳನ್ನು ರಿಸ್ಟೋರ್ ಮಾಡುವುದು:

ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ಗಳನ್ನು ಪುನಃ ಪಡೆಯುವುದಕ್ಕೆ ಇರುವ ಮತ್ತೊಂದು ವಿಧಾನವೆಂದರೆ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಲೋಕಲ್ ಬ್ಯಾಕ್ ಅಪ್ ಮೂಲಕ ಪಡೆದುಕೊಳ್ಳಬಹುದು. ಆದರೆ ಈ ವಿಧಾನ ಐಓಎಸ್ ನಲ್ಲಿ ಕೆಲಸ ಮಾಡುವುದಿಲ್ಲ.ಒಂದು ವೇಳೆ ನಿಮ್ಮ ಗೂಗಲ್ ಡ್ರೈವ್ ಬ್ಯಾಕ್ ಅಪ್ ಡಿಲೀಟ್ ಆಗಿರುವ ಮೆಸೇಜ್ ಗಳನ್ನು ತಿದ್ದಿ ಬರೆದಿದ್ದಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

1. ನಿಮ್ಮ ಫೋನಿನ ಫೈಲ್ ಮ್ಯಾನೇಜರ್ ಗೆ ತೆರಳಿ(ಆಪ್ ನ್ನು ನೀವು ಕಾಣದೇ ಇದ್ದಲ್ಲಿ ಗೂಗಲ್ ಫೈಲ್ ಆಪ್ ನ್ನು ಡೌನ್ ಲೋಡ್ ಮಾಡಿ). ಇದೀಗ ವಾಟ್ಸ್ ಆಪ್ ಫೋಲ್ಡರ್ ಗೆ ತೆರಳಿ > ಡಾಟಾಬೇಸ್. ಡಾಟಾಬೇಸ್ ಫೋಲ್ಡರ್ ಎಲ್ಲಾ ವಾಟ್ಸ್ ಆಪ್ ಬ್ಯಾಕ್ ಅಪ್ ಫೈಲ್ ಗಳನ್ನು ಹೊಂದಿರುತ್ತದೆ. ಇದು ಸ್ಥಳೀಯವಾಗಿ ನಿಮ್ಮ ಫೋನಿನಲ್ಲಿ ಸೇವ್ ಆಗಿರುತ್ತದೆ.

2. msgstore.db.crypt12 ಫೈಲ್ ನ್ನು ಸೆಲೆಕ್ಟ್ ಮಾಡಿ ಮತ್ತು ಅದನ್ನು msgstore_BACKUP.db.crypt12 ಎಂದು ರೀನೇಮ್ ಮಾಡಿ. ಇದು ಅತ್ಯಂತ ಇತ್ತೀಚೆಗಿನ ಬ್ಯಾಕ್ ಅಪ್ ಫೈಲ್ ಆಗಿರುತ್ತದೆ ಮತ್ತು ರಿನೇಮ್ ಮಾಡುವ ಮೂಲಕ ಓವರ್ ರೈಟ್ ಆಗುವುದನ್ನು ತಡೆಯಬಹುದು.

3. ಇದರಲ್ಲಿ ನೀವು ಹಲವು ಫೈಲ್ ಗಳನ್ನು ನೋಡಬಹುದು. msgstore-YYYY-MM-DD.1.db.crypt12. ಈ ಫಾರ್ಮೇಟ್ ನಲ್ಲಿ ಫೈಲ್ ಗಳು ಲಭ್ಯವಿರುತ್ತದೆ. ಇವು ನಿಮ್ಮ ಹಳೆಯ ವಾಟ್ಸ್ ಆಪ್ ಬ್ಯಾಕ್ ಅಪ್ ಗಳು. ನೀವು ಇತ್ತೀಚೆಗಿನ ಫೈಲ್ ನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಅದನ್ನು msgstore.db.crypt12. ರಿನೇಮ್ ಮಾಡಿಕೊಳ್ಳಿ.

4. ಈ ಹಂತವು ಸ್ವಲ್ಪ ಟ್ರಿಕ್ಕಿಯಾಗಿದೆ. ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಗೂಗಲ್ ಡ್ರೈವ್ ನ್ನು ತೆರೆಯಿರಿ. ಹ್ಯಾಮ್ ಬರ್ಗರ್ ಐಕಾನ್ ನ್ನು ಟ್ಯಾಪ್ ಮಾಡಿ. (ಮೂರು ಲಂಬವಾಗಿರುವ ಲೈನ್ ಗಳು) > ಬ್ಯಾಕ್ ಅಪ್ಸ್. ಇದೀಗ ವಾಟ್ಸ್ ಆಪ್ ಬ್ಯಾಕ್ ಅಪ್ ನ್ನು ಅಲ್ಲಿಂದ ಡಿಲೀಟ್ ಮಾಡಿ. ಇದು ನಿಮಗೆ ಸ್ಥಳೀಯ ಬ್ಯಾಕ್ ಅಪ್ ನ್ನು ನಿಮ್ಮ ಫೋನಿನಲ್ಲಿ ಒತ್ತಾಯಪೂರ್ಣವಾಗಿ ರಿಸ್ಟೋರ್ ಮಾಡುವುದಕ್ಕೆ ಹೇಳುತ್ತದೆ.

5. ಇದೀಗ ವಾಟ್ಸ್ ಆಪ್ ನ್ನು ಅನ್ ಇನ್ಸ್ಟಾಲ್ ಮಾಡಿ ಮತ್ತು ರೀಇನ್ಸ್ಟಾಲ್ ಮಾಡಿ.ಒಮ್ಮೆ ಮುಗಿದ ನಂತರ ಸೆಟ್ ಅಪ್ ಮಾಡಿ. ಲೋಕಲ್ ಬ್ಯಾಕ್ ಅಪ್ ನ್ನು ರೀಸ್ಟೋರ್ ಮಾಡುವುದಕ್ಕೆ ಪ್ರಾಮ್ಟ್ ಬರುತ್ತದೆ. ಕ್ಲೌಡ್ ನಲ್ಲಿ ಬ್ಯಾಕ್ ಅಪ್ ಇಲ್ಲದೇ ಇದ್ದರೂ ಕೂಡ ಈ ಆಯ್ಕೆ ಲಭ್ಯವಾಗುತ್ತದೆ.

6. ರಿಸ್ಟೋರ್ ನ್ನು ಟ್ಯಾಪ್ ಮಾಡಿ.ನೀವು ಡಿಲೀಟ್ ಮಾಡಿರುವ ಚಾಟ್ ಗಳು ಪುನಃ ಲಭ್ಯವಾಗುತ್ತದೆ.

ಅಂದರೆ ನಿಮ್ಗೆ ನಿಮ್ಮ ಡಿಲೀಟ್ ಆಗಿರುವ ವಾಟ್ಸ್ ಆಪ್ ಮೆಸೇಜ್ ಗಳನ್ನು ರೀಸ್ಟೋರ್ ಮಾಡಿಕೊಳ್ಳುವುದಕ್ಕೆ ಎರಡು ವಿಧಾನಗಳಿವೆ. ಆದರೆ ಎರಡೂ ವಿಧಾನವನ್ನು ಬಳಸುವುದಕ್ಕೆ ನಿಮ್ಮ ಚಾಟ್ ಬ್ಯಾಕ್ ಆಪ್ ಆಯ್ಕೆ ಆನ್ ಆಗಿದ್ದಲ್ಲಿ ಮಾತ್ರವೇ ಸಾಧ್ಯ ಎಂಬುದು ಮಾತ್ರ ನಿಮಗೆ ನೆನಪಿರಲಿ.

Most Read Articles
Best Mobiles in India

Read more about:
English summary
You Can Recover Deleted WhatsApp Messages Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X