Just In
- 16 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 18 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 18 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 20 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- News
Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು
- Sports
ಆರ್ಸಿಬಿ ತನ್ನ ಆಟಗಾರರನ್ನು ನಂಬಲ್ಲ ಎಂದ ಕ್ರಿಸ್ ಗೇಲ್: ತಿರುಗಿಬಿದ್ದ ಅಭಿಮಾನಿಗಳು ಕೊಟ್ಟ ಉತ್ತರವೇನು?
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- Movies
Breaking: ಕನ್ನಡ ಚಲನಚಿತ್ರರಂಗದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಸೈಬರ್ ವಂಚನೆ' ನಡೆದರೆ ಕ್ಷಣದಲ್ಲೇ ದೂರು ಸಲ್ಲಿಸುವ ಕ್ರಮ ನಿಮಗೆ ಗೊತ್ತಾ?
ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಬಹುಮಾನದ ಹೆರಿನಲ್ಲಿ ದೋಖಾ, ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ-ಫೋಟೊ ಅಪ್‌ಲೋಡ್, ಅವಹೇಳನಕಾರಿ ಬರಹ, ಹ್ಯಾಕಿಂಗ್ ಹೀಗೆ ಸೈಬರ್ ಕ್ರೈಂಗಳಿಗೆ ಸಂಬಂಧಿಸಿದ ದೂರುಗಳನ್ನು ಇದೀಗ ಆನ್‌ಲೈನಿನಲ್ಲೇ ಸಲ್ಲಿಸಬಹುದು ಎಂದು ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರಿಗೆ ಹೆಚ್ಚಿನ ಕಿರಿಕಿರಿ ತಪ್ಪಿಸುವ ಉದ್ದೇಶದಿಂದ ಸೈಬರ್ ವಂಚನೆ ಬಗ್ಗೆ ಆನ್‌ಲೈನ್‌ನಲ್ಲೇ ದೂರು ನೀಡುವ ಅವಕಾಶವನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಮಾಡಿಕೊಟ್ಟಿದೆ.
ಹೌದು, ಇತ್ತೀಚಿಗೆ ಸೈಬಲ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿತ್ತು, ಅದನ್ನು ನಿರ್ವಹಿಸುವ ಠಾಣೆಗಳೂ ಸಹ ಕಡಿಮೆ ಇದೆ. ಇನ್ನು ಸಾಮಾನ್ಯ ಪೊಲೀಸ್ ಠಾಣೆಗಳಲ್ಲಿ ಅಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುವ ಸಮಸ್ಯೆಗಳು ಎದುರಾಗುತ್ತಿದ್ದರಿಂದ ಸೈಬರ್ ಕ್ರೈಂಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿರಲಿಲ್ಲ. ಇದರಿಂದಾಗಿಯೇ ಎಷ್ಟೋ ದೂರುಗಳು ಸ್ವೀಕೃತವಾಗದೆಯೇ ಉಳಿದಿದ್ದರೆ, ಸೈಬರ್ ಕ್ರೈಂ ಬಲೆಗೆ ಬಿದ್ದ ಕೆಲವರು ಪೊಲೀಸರಿಗೆ ದೂರು ನೀಡುವುದೇ ಹೆಚ್ಚು ಕಿರಿಕಿರಿ ಎಂದು ಸುಮ್ಮನಾಗಿಬಿಡುತ್ತಿದ್ದರು.

ಹಾಗಾಗಿ, ಅಪರಾಧ ಕೃತ್ಯಗಳ ಸಂಬಂಧ ಆನ್‌ಲೈನ್‌ನಲ್ಲಿ ದೂರು ಸ್ವೀಕಾರಕ್ಕೆ ಅಮೆರಿಕ ಮಾದರಿ ಅನುಸರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರದ ಸಹಕಾರದಲ್ಲಿ ಎಲ್ಲಾ ತನಿಖಾ ಸಂಸ್ಥೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶವಿದ್ದು, ದೇಶದಲ್ಲಿ ಯಾವುದೇ ಮೂಲೆಯಲ್ಲಾದರೂ ವಂಚಕರು ಬಲೆಗೆ ಬಿದ್ದು ನೊಂದವರು ತಕ್ಷಣವೇ ದೂರು ಸಲ್ಲಿಸಬಹುದು. ಹಾಗಾದರೆ, ಆನ್‌ಲೈನಿನ ಸೈಬರ್ ಕ್ರೈಂಗಳಿಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಆನ್‌ಲೈನಿನ ಸೈಬರ್ ಕ್ರೈಂ ದೂರು
ವಂಚಕರು ಬಲೆಗೆ ಬಿದ್ದು ನೊಂದವರು ತಕ್ಷಣವೇ ದೂರು ಸಲ್ಲಿಸುವಂತಾಗಲು ಸರ್ಕಾರ ಸೈಬರ್ ಅಪರಾಧಗಳಿಗೆ ಸೈಕಾರ್ಡ್ (cycord.gov.in) ಎಂಬ ಜಾಲತಾಣವನ್ನು ತೆರೆದಿದೆ. ಮಿನಿಸ್ಟ್ರಿ ಆಫ್ ಹೋಮ್ ಅಫೇರ್ಸ್ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ತಾಣವನ್ನು ಎಲ್ಲಾ ಸೈಬರ್ ಅಪರಾಧ/ ಘಟನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತೆರೆಯಲಾಗಿದೆ.

ಸೂಕ್ತವಾಗಿ ಪ್ರತಿಕ್ರಿಯಿಸಲು ತಾಣ!
ಸೈಬರ್ ಘಟನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಇಲ್ಲಿ ಲಾ ಎನ್ಫೋರ್ಸ್ಮೆಂಟ್ ಏಜೆನ್ಸಿಗಳು ಸಹಕರಿಸುತ್ತವೆ. ಈ ವೇದಿಕೆಯ ಮೂಲಕ, ಸರ್ಕಾರಿ ಏಜೆನ್ಸಿಗಳಿಂದ ಸೈಬರ್ ಭದ್ರತೆ, ಪ್ರಮುಖ ತಂತ್ರಜ್ಞಾನ ಸಂಸ್ಥೆಗಳು, ಆರ್ & ಡಿ ಸಂಸ್ಥೆಗಳು, ದೇಶಾದ್ಯಂತದ ಉದ್ಯಮ ಆಧಾರಿತ ಮತ್ತು ವೈಯಕ್ತಿಕ ತಜ್ಞರು ಸೈಬರ್ ಘಟನೆಗೆ ಸೂಕ್ತವಾಗಿ ಪ್ರತಿಕ್ರಿಯಿಸುತ್ತಾರೆ.

ದೂರು ಸಲ್ಲಿಸುವುದು ಹೇಗೆ?
ಎಟಿಎಂ, ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ ಮತ್ತು ಬಹುಮಾನದ ಹೆರಿನಲ್ಲಿ ದೋಖಾ ಹೀಗೇ ಯಾವುದೇ ರೀತಿಯಲ್ಲಿ ನಡೆದರೆ ಸೈಕಾರ್ಡ್ (cycord.gov.in) ಜಾಲತಾಣವನ್ನು ತೆರೆಯಿರಿ. ಆ ವೆಬ್ ಪುಟ ತೆರೆದ ನಂತರ ಅದರ ಮೇಲ್ಭಾಗದಲ್ಲಿ ಕಾಣಿಸುವ 'ಇನ್‌ಸಿಡೆಂಟ್ ರಿಪೋರ್ಟ್ (ಘಟನೆ ವರದಿ)' ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಆಗಿರುವ ವಂಚನೆ ಬಗ್ಗೆ ದೂರು ಸಲ್ಲಿಸಬಹುದು.

ದೂರು ಸಲ್ಲಿಕೆ ವಿಧಾನ!
'ಇನ್‌ಸಿಡೆಂಟ್ ರಿಪೋರ್ಟ್ (ಘಟನೆ ವರದಿ)' ಕ್ಲಿಕ್ ಮಾಡಿದ ನಂತರ ಮತ್ತೊಂದು ವರದಿ ಮಾಡುವ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್ ಎಲ್ಲವನ್ನು ನಮೂದಿಸಲು ಆಯ್ಕೆಗಳಿರುತ್ತವೆ. ಅವುಗಳೆಲ್ಲವನ್ನೂ ನೀಡಿ ನೀವು ಯಾವ ರೀತಿಯಲ್ಲಿ ವಂಚನೆಗೆ ಒಳಗಾಗಿದ್ದೀರಾ ಎಂಬುದನ್ನು ವಿವರವಾಗಿ ತಿಳಿಸಿ ಸಬ್‌ಮಿಟ್ ಮಾಡುವ ಆಯ್ಕೆ ಇರುತ್ತದೆ.

ಎಫ್ಐಆರ್ ಅಲ್ಲ ಎಂದು ಗಮನಿಸಿ
ಈ ಪೋರ್ಟಲ್‌ನಲ್ಲಿ ಸೈಬರ್ಅಪರಾಧ / ಘಟನೆಯ ವರದಿ ಮಾಡುವಿಕೆಯು ಔಪಚಾರಿಕ ದೂರು ಅಥವಾ ಎಫ್ಐಆರ್ ಅಲ್ಲ ಎಂದು ಸಾರ್ವಜನಿಕರು ಗಮನಿಸಬೇಕು. ಆದಾಗ್ಯೂ, ನಿಮ್ಮ ವಿವರಗಳನ್ನು ಬಹಿರಂಗಪಡಿಸದೆ ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ಇಲ್ಲಿ ವರದಿ ಮಾಡಲಾದ ಘಟನೆಗಳು ಹಂಚಿಕೊಳ್ಳಬಹುದು ಎಂದು ಸೈಕಾರ್ಡ್ ಜಾಲತಾಣದಲ್ಲಿ ಹೇಳಲಾಗಿದೆ.

ನೀವು ಏಕೆ ವರದಿ ಮಾಡಲೇಬೇಕು?
ಘಟನೆಯೊಂದನ್ನು ವರದಿ ಮಾಡುವ ಮೂಲಕ, ಸೈಬರ್ ಅಪರಾಧ ತನಿಖೆ, ಸೈಬರ್ ಭಯೋತ್ಪಾದನೆ ಮತ್ತು ಸೈಬರ್ ಬೆದರಿಕೆಗಳ ಕುರಿತು ಲಾ ಎನ್ಫೋರ್ಸ್ಮೆಂಟ್ ಏಜೆನ್ಸಿಗಳಿಗೆ ನೀವು ಸಹಾಯ ಮಾಡುತ್ತೀರಾ. ನೀವು ವರದಿ ಮಾಡಲ್ಪಟ್ಟ ಡೇಟಾವನ್ನು ಸಂಗ್ರಹಿಸಿ ಇತ್ತೀಚಿನ ಸೈಬರ್ ಕ್ರೈಮ್ಸ್ ಮತ್ತು ವಂಚನೆಗಳ ವಿಧಾನಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.

ಸೈಕಾರ್ಡ್ ತಾಣದ ವೈಶಿಷ್ಟ್ಯಗಳು!
ಲೀಡ್ಸ್, ಟಿಎಸ್ ಒಟಿಟಿಗಳು, ಹಣಕಾಸು ಸಂಸ್ಥೆಗಳು ಇತ್ಯಾದಿಗಳ ನೋಡಾಲ್ ಅಧಿಕಾರಿಗಳ ಕೈಪಿಡಿ, ಸಹಾಯ, ಪ್ರಶ್ನೆಗಳು ಮತ್ತು ಘಟನೆ ಹಂಚಿಕೆ. ಸೈಬರ್ ಭದ್ರತಾ ಪರಿಕರಗಳು ಹಂಚಿಕೆ. ಮತ್ತು ಸೈಬರ್ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಘಟನೆಗಳು ಮತ್ತು ಸುದ್ದಿಗಳು ಹಾಗೂ ಎಕ್ಸ್‌ಫೋರ್ಸ್ ಬೆದರಿಕೆ ಗುಪ್ತಚರ ಫೀಡ್ ಜ್ಞಾನ ಹಂಚಿಕೆಗಾಗಿ ಚರ್ಚಾ ವೇದಿಕೆಯನ್ನು ಕಲ್ಪಿಸಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470