Home
ಫೀಚರ್ ಸ್ಟೋರೀಸ್

ಶಾಕಿಂಗ್ ನ್ಯೂಸ್: ಆಧಾರ್ ಕಾರ್ಡ್ ಸೇಫ್ ಅಲ್ಲ, ಯಾಕೆ ಗೊತ್ತಾ..?

ಸುಮಾರು 135 ಮಿಲಿಯನ್ ಆಧಾರ್ ಕಾರ್ಡ್ ಮಾಹಿತಿಯೂ ಸೋರಿಕೆಯಾಗಿದೆ ಎಂದು ತಿಳಿಸಿದ್ದು, ಅದುವೇ ಸರಕಾರಿ ವೆಬ್ ಸೈಟುಗಳಿಂದಲೇ ಈ ಮಾಹಿತಿಯೂ ಲೀಕ್ ಆಗಿದೆ ಎಂದು ವರದಿಯಾಗಿದೆ.

By Srinidhi

ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಧಾರ್ ಬಳಕೆಯನ್ನು ಕಡ್ಡಾಯ ಮಾಡುತ್ತಿರುವ ಸಂದರ್ಭದಲ್ಲಿ ಸಿಐಎಸ್ ಸಂಸ್ಥೆಯೂ ಆಘಾತಕಾರಿ ಮಾಹಿತಿಯೊಂದನ್ನು ಹೊರ ಹಾಕಿದ್ದು, ಸುಮಾರು 135 ಮಿಲಿಯನ್ ಆಧಾರ್ ಕಾರ್ಡ್ ಮಾಹಿತಿಯೂ ಸೋರಿಕೆಯಾಗಿದೆ ಎಂದು ತಿಳಿಸಿದ್ದು, ಅದುವೇ ಸರಕಾರಿ ವೆಬ್ ಸೈಟುಗಳಿಂದಲೇ ಈ ಮಾಹಿತಿಯೂ ಲೀಕ್ ಆಗಿದೆ ಎಂದು ವರದಿ ಮಾಡಿದೆ.

ಶಾಕಿಂಗ್ ನ್ಯೂಸ್: ಆಧಾರ್ ಕಾರ್ಡ್ ಸೇಫ್ ಅಲ್ಲ, ಯಾಕೆ ಗೊತ್ತಾ..?

ಸರ್ಕಾರಿ ಸ್ವಾಮ್ಯದ ನಾಲ್ಕು ವೆಬ್ ಸೈಟ್‌ಗಳು ಸುಮಾರು 130 ರಿಂದ 135 ಮಿಲಿಯನ್ ಆಧಾರ್ ಕಾರ್ಡ್‌ಗಳ ಸಂಪೂರ್ಣ ಮಾಹಿತಿಯನ್ನು ಹೊರ ಹಾಕಿವೆ ಎಂದು ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ (ಸಿಐಎಸ್) ತಿಳಿಸಿದ್ದು, ಈ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಸೇಫ್ ಅಲ್ಲ ಎನ್ನುವ ಮಾತು ಕೇಳಿ ಬಂದಿದೆ.

ಸುಮಾರು 100 ಮಿಲಿಯನ್ ಆಕೌಂಟ್ ನಂಬರ್ ಲೀಕ್:

ಸುಮಾರು 100 ಮಿಲಿಯನ್ ಆಕೌಂಟ್ ನಂಬರ್ ಲೀಕ್:

135 ಮಿಲಿಯನ್ ಆಧಾರ್ ಕಾರ್ಡ್ ಮಾಹಿತಿಯೂ ಸೋರಿಕೆಯಾದ ಹಿನ್ನಲೆಯಲ್ಲಿ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿದ್ದ ಸುಮಾರು ಸುಮಾರು 100 ಮಿಲಿಯನ್ ಬ್ಯಾಂಕ್ ಆಕೌಂಟ್ ನಂಬರ್‌ಗಳ ಮಾಹಿತಿಯೂ ಲೀಕ್ ಆಗಿದೆ ಎಂದು ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ (ಸಿಐಎಸ್) ವರದಿಯಲ್ಲಿ ಉಲ್ಲೇಖಿಸಿದೆ.

ಸರ್ಕಾರಿ ಸ್ವಾಮ್ಯದ ನಾಲ್ಕು ವೆಬ್ ಸೈಟ್‌ಗಳು:

ಸರ್ಕಾರಿ ಸ್ವಾಮ್ಯದ ನಾಲ್ಕು ವೆಬ್ ಸೈಟ್‌ಗಳು:

135 ಮಿಲಿಯನ್ ಆಧಾರ್ ಕಾರ್ಡ್ ಮಾಹಿತಿ ಲೀಕ್ ಆಗಲು ಪ್ರಮುಖ ಕಾರಣ ಸರ್ಕಾರಿ ಸ್ವಾಮ್ಯದ ನಾಲ್ಕು ವೆಬ್ ಸೈಟ್‌ಗಳು. ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದ ವೆಬ್‌ಸೈಟ್, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವೈಬ್‌ಸೈಟ್ ಮತ್ತು ಆಂದ್ರ ಪ್ರದೇಶ ರಾಜ್ಯ ಸರಕಾರದ ಎರಡು ವೆಬ್‌ಸೈಟ್‌ಗಳು ಆಧಾರ್ ಕಾರ್ಡ್ ಮಾಹಿತಿ ಸೋರಿಕೆ ಮಾಡಿವೆ ಎನ್ನಲಾಗಿದೆ.

ಸರಕಾರಿ ಸೇವೆಗೆ ಆಧಾರ್ ಲಿಂಕ್ ಮಾಡುವ ಸಂದರ್ಭದಲ್ಲಿ ಸೋರಿಕೆ:

ಸರಕಾರಿ ಸೇವೆಗೆ ಆಧಾರ್ ಲಿಂಕ್ ಮಾಡುವ ಸಂದರ್ಭದಲ್ಲಿ ಸೋರಿಕೆ:

ಸರಕಾರಿ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ ಮಾಡಿ, ಅವುಗಳ ಸಂಖ್ಯೆಯನ್ನು ಲಿಂಕ್ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮಾಹಿತಿಗಳು ಲೀಕ್ ಆಗಿದೆ ಎಂದು ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿ (ಸಿಐಎಸ್) ವರದಿ ಮಾಡಿದೆ.

ವೈಯಕ್ತಿಕ ಮಾಹಿತಿಗಳ ಸೋರಿಕೆ:

ವೈಯಕ್ತಿಕ ಮಾಹಿತಿಗಳ ಸೋರಿಕೆ:

ಆಧಾರ್ ಕಾರ್ಡ್ ಪಡೆಯುವ ಸಂದರ್ಭದಲ್ಲಿ ನೀಡಿದ್ದ ಪ್ರತಿಯೊಂದು ಮಾಹಿತಿಯೂ ಸದ್ಯ ಲೀಕ್ ಆಗಿದ್ದು, ದೇಶದಲ್ಲಿ ಆಧಾರ್ ಕಾರ್ಡ್ ಹೊಂದಿರುವ ಎಲ್ಲರ ಮಾಹಿತಿಯೂ ಸದ್ಯ ಸೋರಿಕೆಯಾಗಿರುವ ಸಾಧ್ಯತೆ ಇದೆ. ನಿಮ್ಮ ಪೋಟೋ, ವಿಳಾಸ, ಬೆರಳಚ್ಚು ಹೀಗೆ ಅನೇಕ ಮಾಹಿತಿಗಳು ಅನ್ಯರ ಪಾಲಾಗುವ ಸಾಧ್ಯತೆ ಇದೆ.

ದುರ್ಬಳಕೆಯ ಸಾಧ್ಯತೆ:

ದುರ್ಬಳಕೆಯ ಸಾಧ್ಯತೆ:

135 ಮಿಲಿಯನ್ ಆಧಾರ್ ಕಾರ್ಡ್ ಮಾಹಿತಿ ಲೀಕ್ ಆಗಿದ್ದು, ಇದು ದುರ್ಬಳಕೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಕಾರಣ ಬ್ಯಾಂಕ್ ಆಕೌಂಟ್, ವಿಳಾಸ, ಫೋಟೊ ಹಾಗೂ ಬೆರಳಚ್ಚು ಬಳಸಿಕೊಂಡು ವಂಚನೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ದತ್ತಾಂಶ ಸಂಗ್ರಹಕ್ಕೆ ಭದ್ರತೆ, ನಿಯಂತ್ರಣವಿಲ್ಲ:

ದತ್ತಾಂಶ ಸಂಗ್ರಹಕ್ಕೆ ಭದ್ರತೆ, ನಿಯಂತ್ರಣವಿಲ್ಲ:

ವಿಶಿಷ್ಟ ಗುರುತಿನ ಪ್ರಾಧಿಕಾರ ಸಂಗ್ರಹಿಸುತ್ತಿರುವ ಆಧಾರ್ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಭದ್ರವಾಗಿಡಲು ಹೆಚ್ಚಿನ ಗಮನ ನೀಡದೆ ಇರುವುದು ಈ ಸೋರಿಕೆಗೆ ಕಾರಣವಾಗಿದೆ. ಇಡೀ ದೇಶದ ಜನರ ಮಾಹಿತಿ ಅಲ್ಲಿ ಭದ್ರವಾಗಿಲ್ಲ ಎನ್ನುವುದು ಇದರಿಂದ ತಿಳಿಯಲಿದೆ. ಅಲ್ಲದೇ ಅವುಗಳನ್ನು ಬಳಕೆ ಮಾಡಿಕೊಳ್ಳಲು ಯಾವುದೇ ನಿಯಂತ್ರಣ ನೀಡದೆ ಇರುವುದು ಇದಕ್ಕೆ ಕಾರಣ ಇರಬಹುದು ಎನ್ನಲಾಗಿದೆ.

Best Mobiles in India

English summary
Aadhaar numbers and personal information of as many as 135 million Indians could have been leaked from four government portals. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+